ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಫೈನಲ್ ಆಗಿದ್ದು, ನಾಳೆಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 155 ಕ್ಷೇತ್ರಗಳ ಅಭ್ಯರ್ಥಿಗಳ ಲಿಸ್ಟ್ ಫೈನಲ್ ಆಗಿದ್ದು, 66 ಕ್ಷೇತ್ರಗಳಿಗೆ ಒಬ್ಬೊಬ್ಬ ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದು, 89 ಕ್ಷೇತ್ರಗಳಿಗೆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಸ್ಕ್ರೀನಿಂಗ್ ಕಮಿಟಿ ಸಭೆ ಸೂಚಿಸಿದೆ. ಇಬ್ಬರಲ್ಲಿ ಒಬ್ಬರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಬೇಕಿದೆ. ಸ್ಕ್ರೀನಿಂಗ್ ಕಮಿಟಿ ಹೈಕಮಾಂಡ್ …
Read More »Yearly Archives: 2023
ಧಾರವಾಡ-ಬೆಳಗಾವಿ ಪ್ಯಾಸೆಂಜರ್ ಬೋಗಿಯಲ್ಲಿ ಅಪರಿಚಿತ ಹೆಣ್ಣು ಮಗುವಿನ ಮೃತದೇಹ ಪತ್ತೆ
ಬೆಳಗಾವಿ : ಬೆಳಗಾವಿ ರೇಲ್ವೆ ಪೊಲೀಸ್ ಠಾಣೆಯ ಕ್ಲಿನಿಂಗ್ ಯಾರ್ಡ್‌ನಲ್ಲಿ ಧಾರವಾಡ-ಬೆಳಗಾವಿ ಪ್ಯಾಸೆಂಜರ್ ರೇಲ್ವೆ ಗಾಡಿಯ ಗಾಡಿಯ ಎಸ್-೩ ಬೋಗಿಯಲ್ಲಿ ಸಿಟ್ ನಂ ೨೦ರ ಕೆಳಗೆ ಅಪರಿಚಿತ ಹೆಣ್ಣು ಮಗು(೩) ಮೃತಪಟ್ಟಿದ್ದು, ಸದರಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ. ಮೃತ ಮಗುವಿನ ಚಹರೆ ಪಟ್ಟಿಯ ವಿವರ: ಎತ್ತರ ೩ ಅಡಿ, ಕೆಂಪು ಮೈ ಬಣ್ಣ, ತೆಳ್ಳನೆ ಮೈಕಟ್ಟು, ಉದ್ದು ಮುಖ, ನೀಟಾದ ಸಣ್ಣ ಮೂಗು, ಕಪ್ಪು ಕೂದಲು, ಕೊರಳಲ್ಲಿ ಕೇಸರಿ ಬಣ್ಣದ …
Read More »ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಟಿಕೆಟ್ ಆಕಾಂಕ್ಷಿಗಳ ಮಹತ್ವದ ಸಭೆ
ಬೆಳಗಾವಿ: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆಯಿತು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖ ನಾಯಕರು, ಶಾಸಕರು ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿ ಧಾರವಾಡ ಗದಗ ಹಾವೇರಿ ಸೇರಿದಂತೆ 10 ಜಿಲ್ಲೆಗಳ …
Read More »10ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ
ಚಿತ್ರದುರ್ಗ: ಹೊಸದುರ್ಗ ಪಟ್ಟಣದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದು ಬೆಸ್ಕಾಂ ಎಇಇ ತಿರುಪತಿ ನಾಯ್ಕ್ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ವಿದ್ಯುತ್ ಗುತ್ತಿಗೆದಾರ ಕುಮಾರ್ ಬಳಿ 20ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, 10ಸಾವಿರ ರೂ.ಲಂಚ ಸ್ವೀಕಾರ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಸರ್ವೀಸ್ ಕನೆಕ್ಷನ್ ಗಾಗಿ ಎಇಇ ಲಂಚಕ್ಕೆ ಬೇಡಿಯಿಟ್ಟಿದ್ದಾಗಿ ತಿಳಿದು ಬಂದಿದೆ. ಲೋಕಾಯುಕ್ತ ಎಸ್ಪಿ ವಾಸುದೇವ್, ಡಿವೈಎಸ್ಪಿ ಮೃತ್ಯುಂಜಯ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
Read More »ಕೇಂದ್ರ ಸಚಿವೆ ಸ್ಮೃತಿ ಇರಾನಿ ರೋಡ್ ಶೋ
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ನಗರದಲ್ಲಿ ಗುರುವಾರ ಬೃಹತ್ ರೋಡ್ ಶೋ ನಡೆಸಿದರು. ನಗರದ ಮುಳಗುಂದ ನಾಕಾದಿಂದ ಆರಂಭವಾದ ರೋಡ್ ಶೋ ರಾಚೋಟೇಶ್ವರ ದೇವಸ್ಥಾನ ರಸ್ತೆ, ಬಸವೇಶ್ವರ ಸರ್ಕಲ್, ಸ್ಟೇಷನ್ ರಸ್ತೆ, ಮಹೇಂದ್ರಕರ್ ಸರ್ಕಲ್ ಮಾರ್ಗವಾಗಿ ಸಾಗಿತು. ರೋಡ್ ಶೋನಲ್ಲಿ ಸಚಿವರಾದ ಸಿ.ಸಿ. ಪಾಟೀಲ, ಗೋವಿಂದ ಕಾರಜೋಳ, ಸಂಸದ ಶಿವಕುಮಾರ್ ಉದಾಸಿ, ಮುಖಂಡ ಅನಿಲ ಮೆಣಸಿನಕಾಯಿ, ಸೇರಿ ಹಲವಾರು ನಾಯಕರು …
Read More »ಭಾರಿ ಗಾತ್ರದ ಮೂಲಂಗಿ ಬೆಳೆದ ರೈತ; ಒಂದೊಂದು ಮೂಲಂಗಿಗಳು ತಲಾ 5 ಕೆ.ಜಿ!
ಮಹಾರಾಷ್ಟ್ರ: ರೈತರೊಬ್ಬರು ತಮ್ಮ ಹೊಲದಲ್ಲಿ ಮೂಲಂಗಿಯನ್ನು ಬೆಳೆದಿದ್ದಾರೆ. ಈ ರೈತ ಬೆಳೆದಿರುವ ಒಂದೊಂದು ಮೂಲಂಗಿಯೂ ಬರೋಬ್ಬರಿ 5 ಕೆಜಿ ತೂಗುತ್ತಿವೆ. ಇದು ಈಗ ಆ ಪ್ರಾಂತ್ಯದ ಸಾರ್ವಜನಿಕರನ್ನು ಅಚ್ಚರಿಗೀಡು ಮಾಡಿದೆ. ನೀರಿನ ಕೊರತೆಯಿಂದ ನಿತ್ಯ ಬರಗಾಲ ಎದುರಿಸುತ್ತಿದ್ದರೂ ಮಹಾರಾಷ್ಟ್ರದ ಬೀಡು ಜಿಲ್ಲೆಯ ರೈತರು ಆಧುನಿಕ ಪದ್ಧತಿಯನ್ನು ಬಳಸಿಕೊಂಡು ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದ್ದಾರೆ. ಬೀಡ್ ಜಿಲ್ಲೆಯ ಕೂಲೆವಾಡಿ ಗ್ರಾಮದ ನಿವಾಸಿ ಜ್ಞಾನದೇವ ಶೇಷರಾವ್ ನೆಟ್ಗೆ ಈ ದಾಖಲೆ ತೂಕದ ಮೂಲಂಗಿ ಬೆಳೆದ …
Read More »ಕಿಸಾನ್ ಸಮ್ಮಾನದಲ್ಲಿ ಬೆಳಗಾವಿ ಮುಂಚೂಣಿ
ಬೆಳಗಾವಿ :ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನು ರೈತರಿಗೆ ತಲುಪಿಸುವಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. 5 ಲಕ್ಷಕ್ಕೂ ಅಧಿಕ ರೈತರ ಖಾತೆಗೆ 13ನೇ ಕಂತಿನ ಹಣ ಜಮೆ ಮಾಡಲಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ರೈತರಿಗೆ ಕಿಸಾನ್ ಸಮ್ಮಾನ್ ದೊರಕಿಸಿಕೊಟ್ಟ ಜಿಲ್ಲೆಗಳಲ್ಲಿ ಬೆಳಗಾವಿ ಅಗ್ರಸ್ಥಾನ ಪಡೆದಿದೆ. ಗಡಿ ಜಿಲ್ಲೆಯ ಬೆಳಗಾವಿಗೆ ಇತ್ತೀಚೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಒಟ್ಟು 8 …
Read More »ಎದೆಹಾಲು ಕುಡಿಸುವಾಗ ಉಸಿರುಗಟ್ಟಿ ಮಗು ಸಾವು: ಮನನೊಂದು ಹಿರಿ ಮಗನ ಜತೆ ಬಾವಿಗೆ ಹಾರಿದ ತಾಯಿ
ಇಡುಕ್ಕಿ: ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ನವಜಾತ ಶಿಶು ಮರಣ ಹೊಂದಿದರಿಂದ ಮನನೊಂದು ತಾಯಿ ಮತ್ತು ಹಿರಿಯ ಮಗ ಬಾವಿಗೆ ಹಾರಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಇಡುಕ್ಕಿ ಜಿಲ್ಲೆಯ ಉಪ್ಪುಥರಾ ಪಂಚಾಯಿತಿಯ ಕೈಥಪಥಲ ಎಂಬಲ್ಲಿ ನಡೆದಿದೆ. ಮಗು ಮೃತಪಟ್ಟ ಘಟನೆಯಿಂದ ತಾಯಿ ತುಂಬಾ ಮನನೊಂದಿದ್ದಳು ಎಂದು ಆಕೆಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮದ್ವೆ ಮೆರವಣಿಗೆಯಲ್ಲಿ ಪೊಲೀಸ್ ಅಧಿಕಾರಿಯನ್ನು ಎಳ್ಕೊಂಡು ಮುತ್ತಿಟ್ಟ ಯುವಕ! ಮುಂದೇನಾಯ್ತು ನೀವೇ ನೋಡಿ. ಮೃತಳನ್ನು ಲಿಜಿ …
Read More »ತಾಯಿಯನ್ನು ಕೊಂದ ಮಗಳು; ಮೃತದೇಹವನ್ನು 3 ತಿಂಗಳು ಮನೆಯಲ್ಲೇ ಬಚ್ಚಿಟ್ಟಳು!
ಮಹಾರಾಷ್ಟ್ರ: ಕಳೆದ ಡಿಸೆಂಬರ್ನಲ್ಲಿ ಮಹಿಳೆಯೊಬ್ಬಳ ಕೊಲೆಗೆ ಸಂಬಂಧಿಸಿದಂತೆ ಕಲಾಚೌಕಿ ಪೊಲೀಸರು ಆಕೆಯ ಮಗಳನ್ನು ಬಂಧಿಸಿದ್ದಾರೆ. ವೀಣಾ(55) ಮಗಳಿಂದ ಹತ್ಯೆಗೀಡಾದ ಮಹಿಳೆ. ರಿಂಪಲ್ ಜೈನ್(24) ಕೊಲೆ ಆರೋಪಿಯಾಗಿದ್ದು, ತಾಯಿಯನ್ನೇ ಹತ್ಯೆ ಮಾಡಿದ್ದಾಳೆ. ತಾಯಿಯನ್ನು ಹತ್ಯೆ ಮಾಡಿದ ಬಳಿಕ ರಿಂಪಲ್ ಜೈನ್, ಮೃತದೇಹವನ್ನು ಹಲವು ತುಂಡುಗಳನ್ನಾಗಿ ಕತ್ತರಿಸಿ, ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾಳೆ. ಶವ ಕೊಳೆತು ವಾಸನೆ ಬರಬಾರದೆಂದು 200ಕ್ಕೂ ಅಧಿಕ ಸುಗಂಧದ್ರವ್ಯ ಹಾಗೂ ರೂಂ ಪ್ರಶ್ನರ್ಗಳನ್ನು ಬಳಸಿದ್ದಾಳೆ. ತನ್ನ ಕೃತ್ಯದ ಬಗ್ಗೆ ಯಾರಿಗೂ …
Read More »ಚುನಾವಣಾ ವೆಚ್ಚಕ್ಕೆ 210 ಕ್ವಿಂಟಲ್ ಕಡಲೆ ಉಡುಗೊರೆ
ಗಜೇಂದ್ರಗಡ (ಗದಗ ಜಿಲ್ಲೆ): ರೋಣ ಮತಕ್ಷೇತ್ರದ ಶಾಸಕ ಕಳಕಪ್ಪ ಜಿ.ಬಂಡಿ ಅವರ ಚುನಾವಣಾ ವೆಚ್ಚಕ್ಕಾಗಿ ತಾಲ್ಲೂಕಿನ ಹಾಲಕೇರಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು 210 ಕ್ವಿಂಟಲ್ ಕಡಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾಲಕೇರಿ ಗ್ರಾಮದಿಂದ ಐದು ಟ್ರ್ಯಾಕ್ಟರ್‌ಗಳಲ್ಲಿ ತಂದ ಕಡಲೆಯನ್ನು ಪಟ್ಟಣದ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ನೂರಾರು ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ನಡೆದ ಬಿಜೆಪಿಯ ‘ವಿಜಯ ಸಂಕಲ್ಪ ಯಾತ್ರೆ’ ವೇದಿಕೆ ಕಡೆಗೆ ತಂದರು. ಮೆರವಣಿಗೆಗೆ ಡೊಳ್ಳು ಕುಣಿತ, ಸಂಗೀತ ವಾದ್ಯಗಳು …
Read More »