ಪುಣೆ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿ ರಾಜೇಶ್ ಅಗವಾನೆ (42) ಬಂಧಿತ. ಈತ ವಡಗಾಂವ ನಿಂಬಾಳ್ಕರ್ ನಿವಾಸಿಯಾಗಿದ್ದು, ಸದ್ಯ ಮುಂಬಯಿಯ ಧಾರಾವಿ ಪ್ರದೇಶದಲ್ಲಿ ವಾಸವಾಗಿದ್ದಾನೆ. ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಈತನ ಪತ್ನಿ ಪುಣೆಯಲ್ಲಿ ನೆಲೆಸಿದ್ದು ಆಗಾಗ ಅಲ್ಲಿಗೆ ಹೋಗುತ್ತಿದ್ದ. ಸೋಮವಾರ ಸಂಜೆ ಕುಡಿದ ಮತ್ತಿನಲ್ಲಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ, ತನಗೆ ಎದೆನೋವು ಶುರುವಾಗಿದ್ದು …
Read More »Yearly Archives: 2023
ದಲಗಾ- ದತ್ತವಾಡ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಚುನಾವಣೆ ಸಿಬ್ಬಂದಿ 50 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ: ಸದಲಗಾ- ದತ್ತವಾಡ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಚುನಾವಣೆ ಸಿಬ್ಬಂದಿ 50 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೊಸ್ಟ್ ನಿರ್ಮಾಣ ಮಾಡಲಾಗಿದ್ದು, ದಿನದ 24 ಗಂಟೆಯೂ ಅಲ್ಲಿ ಪೊಲೀಸರು ಮತ್ತು ಚುನಾವಣಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ತಪಾಸಣೆ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ 50 ಲಕ್ಷ ರೂ. ಪತ್ತೆಯಾಗಿದ್ದು, ವಶಪಡಿಸಿಕೊಂಡು ತನಿಖೆ ನಡೆಸಲಾಗಿದೆ.
Read More »ಲಿಂಗಾಯತ ಸಮಾಜದ ಭೂಮಿ ದುರ್ಬಳಕೆಯಾಗಿರುವ ಶಂಕೆ
ಬೆಳಗಾವಿ : ಲಿಂಗಾಯತ ಸಮಾಜದ ಭೂಮಿಯ ಅಭಿವೃದ್ಧಿ ಮಾಡುವ ಕುರಿತು ಅನುದಾನ ದುರ್ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು ವಿವಿಧ ಲಿಂಗಾಯತ ಸಮುದಾಯದ ಸಂಘಟನೆಗಳು ಸೋಮವಾರ ಬೆಳಗಾವಿ ಮಹಾಪಾಲಿಕೆಯ ಆಯುಕ್ತರ ಜೊತೆಗೆ ಚರ್ಚೆ ನಡೆಸಿದರು. ಲಿಂಗಾಯತ ಮುಖಂಡ ರಾಜಕುಮಾರ ಟೋಪಣ್ಣವರ ಮಾತನಾಡಿ, ಲಿಂಗಾಯತ ರುದ್ರಭೂಮಿಗೆ ಬಿಡುಗಡೆಯಾದ ಅನುದಾನವನ್ನು ಲಿಂಗಾಯತ ಸಮಾಜದ ರುದ್ರಭೂಮಿಗೆ ಅಭಿವೃದ್ಧಿ ಪಡಿಸಿ ಬೇರೆ ಕಡೆ ಅನುದಾನವನ್ನು ಬಳಕೆ ಮಾಡಬೇಡಿ ಮಾಡಬೇಡಿ ಎಂದರು. 2022 ರಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಿರುವುದಾಗಿ …
Read More »ನೀರಿನ ಸಮಸ್ಯೆ ಉದ್ಬವಿಸದಂತೆ ಮುನ್ನೆಚ್ಚರಿಕೆ ವಹಿಸಿ
ಬೆಳಗಾವಿ (ಚನ್ನಮ್ಮ ಕಿತ್ತೂರು) : ಈ ಬಾರಿ ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಲೂಕಿನ ಯಾವುದೇ ಗ್ರಾಮದಲ್ಲಿಯೂ ನೀರಿನ ಸಮಸ್ಯೆ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು. ಲೋಪದೋಷಗಳು ಕಂಡುಬಂದರೆ ಸಂಬಂಧಪಟ್ಟು ಪಂಚಾಯಿತಿಯ ಅಧಿಕಾರಿಗಳನ್ನು ಹೊಣೆಯನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಸೂಚನೆ ನೀಡಿದರು. ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ‘ಶುದ್ಧ ಕುಡಿಯುವ ನೀರು ಪೂರೈಕೆಯ ಟಾಸ್ಕ್ …
Read More »ಯಳ್ಳೂರ ಗ್ರಾಮದಲ್ಲಿ ಕುಸ್ತಿಪಂದ್ಯಾವಳಿ
ಬೆಳಗಾವಿ: ಶ್ರೀ ಕಲ್ಮೇಶ್ವರ ದೇವರು, ಶ್ರೀಚಾಂಗಳೇಶ್ವರಿ ದೇವಿ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಕುಸ್ತಿ ಮೈದಾನದಲ್ಲಿ ಏ.13ರಂದು ಮಧ್ಯಾಹ್ನ 2 ಗಂಟೆಗೆ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಕುಸ್ತಿಪಟುಗಳಿಗೆ ‘ಲೋಕಮಾನ್ಯ ಕೇಸರಿ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಕುಸ್ತಿಯ ಪಂದ್ಯಾವಳಿಯ ವಿಶೇಷತೆ ಎಂದರೇ, ಅಂತಾರಾಷ್ಟ್ರೀಯ ಕುಸ್ತಿಪಟು ಪೈಲವಾನ್ ಹುಸೇನ್ ಇರಾನ್ ಜತೆ ಭಾರತ ಕೇಸರಿ ಪೈಲವಾನ ಸುಮೀತ್ ಮಲೀಕ್ …
Read More »ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ದೇವರ ಹಿಪ್ಪರಗಿಯ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಗ್ರಾಮದ ಅಭಿವೃದ್ಧಿ ವಿಚಾರವಾಗಿ ಸಿಟ್ಟಾಗಿದ್ದ ಕೆಲ ಗ್ರಾಮಸ್ಥರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಶಾಸಕರನ್ನು ಊರಲ್ಲಿ ಸಿಸಿ ರಸ್ತೆಗಳಾಗಿಲ್ಲ, ಚರಂಡಿ ವ್ಯವಸ್ಥೆ ಸರಿ ಇಲ್ಲ, ಅಭಿವೃದ್ಧಿಗೆ ಬಂದಿದ್ದ ಹಣ ಏನ್ ಮಾಡಿದ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು ಆ ಸಂದರ್ಭ ಶಾಸಕರ ಬೆಂಬಲಿಗರ ಜತೆ ಕೆಲ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ.ಗ್ರಾಮದಲ್ಲಿ ಅಭಿವೃದ್ಧಿ …
Read More »ಅಧಿಕಾರ ಕೊಟ್ಟರೆ ಗೋವು ತಿನ್ನುವವರು ಜಾಸ್ತಿಯಾಗುತ್ತಾರೆ: ಪ್ರತಾಪ ಸಿಂಹ
ಮೈಸೂರು: ಹಾಲು ಕೊಡುವ ಹಸುವನ್ನು ಕಡಿಯುವವರ ಪರ ಇರುವುದು ಸಿದ್ದರಾಮಯ್ಯ. ಅವರಿಗೆ ಅಧಿಕಾರ ಕೊಟ್ಟರೆ ಗೋವು ತಿನ್ನುವವರು ಜಾಸ್ತಿಯಾಗುತ್ತಾರೆ. ಸಿದ್ದರಾಮಯ್ಯ ಅವರು ಗೋ ಹತ್ಯೆ ಮಾಡುವವರ ಪರ ಇದ್ದಾರೆ ಎಂಬುದು ಎಲ್ಲರಿಗೆ ಗೊತ್ತಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಬಗ್ಗೆ ನಿಜವಾದ ಕಾಳಜಿ ಬಿಜೆಪಿಗಿದೆ. ಕಾಂಗ್ರೆಸ್, ಜೆಡಿಎಸ್ ನಿಂದ ನಾವು ಪಾಠ ಕಲಿಯಬೇಕಾಗಿಲ್ಲ. ನಂದಿನಿ ಹಾಲಿಗೆ ಪ್ರೋತ್ಸಾಹ ಧನ ಕೊಟ್ಟವರು ಯಡಿಯೂರಪ್ಪ. …
Read More »ತೇರದಾಳದಲ್ಲಿ ಉಮಾಶ್ರೀ ಅವರಿಗೆ ನೀಡಲು ನೇಕಾರ ಮುಖಂಡರ ಒತ್ತಾಯ
ಮಹಾಲಿಂಗಪುರ : ಈಗಾಗಲೇ ಚುನಾವಣ ದಿನಾಂಕ ಘೋಷಣೆಯಾಗಿದ್ದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯು ಜೋರಾಗಿ ನೆಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ವತಿಯಿಂದ ಅನೇಕರು ಅರ್ಜಿ ಸಲಿಸಿದ್ದು, ಮಾಜಿ ಸಚಿವೆ ಉಮಾಶ್ರೀ ಮತ್ತೊಂದು ಬಾರಿ ತೇರದಾಳದಿಂದ ಸ್ಪರ್ಧಿಸಬೇಕು. ಅವರಿಗೆ ಟಿಕೆಟ್ ನೀಡಬೇಕೆಂದು ತೇರದಾಳ ಮತಕ್ಷೇತ್ರದ ನೇಕಾರ ಸಮಾಜದ ಮುಖಂಡರು ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಎಐಸಿಸಿ ಮತ್ತು ಕೆಪಿಸಿಸಿ ಮುಖಂಡರುಗಳಿಗೆ ಒತ್ತಾಯಿಸಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ …
Read More »ಕಣಬರ್ಗಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬೆದರಿಕೆ
ಕನಿಷ್ಠ ನಾಗರಿಕ ಸೌಲಭ್ಯಗಳನ್ನು ಒದಗಿಸದಿರುವುದನ್ನು ವಿರೋಧಿಸಿ ಕಣಬರ್ಗಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ. ಬೆಳಗಾವಿಯ ಕಣಬರ್ಗಿಯಲ್ಲಿರುವ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ನೈರ್ಮಲ್ಯ, ಬೀದಿದೀಪ, ಸಮರ್ಪಕ ನೀರು ಪೂರೈಕೆ ಹಾಗೂ ಉತ್ತಮ ರಸ್ತೆಗಾಗಿ ಕಳೆದ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಮಹಾನಗರಸಭೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕೊನೆಯ ಅಸ್ತ್ರವಾಗಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕರಿಸುವ …
Read More »ಅಕ್ರಮವಾಗಿ ಗಾಂಜಾ ಮಾರಾಟರೂ.35,500/- ಮೌಲ್ಯದ 474 ಗ್ರಾಂ ಗಾಂಜಾ ವಶ.
ಗಣೇಶಪುರ ಜ್ಯೋತಿ ನಗರ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಂತೆ . ನಚಿಕೇತ ಎಸ್ ಜನಗೌಡ, ಪಿಐ ಕ್ಯಾಂಪ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ಆರೋಪಿತರಾದ 1) ನದೀಮ್ ಅಲ್ಲಾವುದ್ದಿನ್ ನದಾಫ್ (23) ಸಾ: ಜಯನಗರ ಮಚ್ಚೆ ಬೆಳಗಾವಿ, 2) ಮನೀಶ ಮಾರುತಿ ಹುಂದ್ರೆ (23) ಸಾ: ಕಶ್ವರ ನಗರ ಹಿಂಡಲಗಾ ಬೆಳಗಾವಿ. ಇವರನ್ನು ವಶಕ್ಕೆ ಪಡೆದು, ವಿಚಾರಣಿ ಕೈಕೊಂಡು, …
Read More »