Breaking News

Yearly Archives: 2023

ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಣ್ಣ ಲೋಪವನ್ನೂ ಸಹಿಸಲಾಗದು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಮಹತ್ವದ ಇಲಾಖೆ. ಇಲ್ಲಿ ಸಣ್ಣ ಲೋಪವನ್ನೂ ಸಹಿಸಲು ಸಾಧ್ಯವಿಲ್ಲ. ನಮ್ಮ ನಿರೀಕ್ಷೆ ಮತ್ತು ವೇಗಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು. ಸಚಿವರಾದ ನಂತರ ಮೊದಲ ಬಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ರಾಜ್ಯಕ್ಕೆ ಹಾಗೂ ಸರ್ಕಾರಕ್ಕೆ ಉತ್ತಮ ಹೆಸರು ತರುವ ದಿಸೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಜನರು ಬಹಳ ನಿರೀಕ್ಷೆ ಇಟ್ಟು …

Read More »

ಪತಿಯ ಆಯಸ್ಸು ವೃದ್ಧಿಗಾಗಿ ಕಾರವಾರದಲ್ಲಿ ವಟ ಸಾವಿತ್ರಿ ವ್ರತಾಚರಣೆ

ಭರತಖಂಡದಲ್ಲಿ ಪ್ರಸಿದ್ಧ ಪತಿವ್ರತೆಯರಲ್ಲಿ ಸಾವಿತ್ರಿ ಆದರ್ಶಪ್ರಾಯಳು. ಸತ್ಯವಾನ್​ ಸಾವಿತ್ರಿಯನ್ನು ಸೌಭಾಗ್ಯದ ಪ್ರತೀಕವೆಂದೇ ಪರಿಗಣಿಸಲಾಗುತ್ತದೆ. ಇಂದಿಗೂ ಹೆಚ್ಚಿನ ಮಹಿಳೆಯರು ವಟ ಸಾವಿತ್ರಿ ವ್ರತವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಶನಿವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರು ವಟ ಸಾವಿತ್ರಿ ವ್ರತವನ್ನು ಆಚರಿಸಿದ್ದಾರೆ. ಪತಿಯ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಅವರು ಪ್ರಾರ್ಥಿಸಿದರು. ಜೇಷ್ಠ ಹುಣ್ಣಿಮೆಯ ದಿನ ಕಾರವಾರದಲ್ಲಿ ಸ್ತ್ರೀಯರು ವಟ ಸಾವಿತ್ರಿ ವ್ರತವನ್ನು ಆಚರಿಸಿದರು. ಬೆಳಗ್ಗೆಯಿಂದಲೇ ಕಾರವಾರದ ಸುತ್ತಮುತ್ತಲ ಆಲದ ಮರಗಳ ಸಮೀಪ …

Read More »

ಒಡಿಶಾ ರೈಲು ಅಪಘಾತ ಸಂತ್ರಸ್ತರಿಗೆ ನಿಯಮ ಸರಳೀಕರಿಸಿದ LIC

ಮುಂಬೈ: ಒಡಿಶಾದ ಬಾಲಸೋರ್ ರೈಲು ದುರಂತದ ಸಂತ್ರಸ್ತರಿಗೆ ಕ್ಲೈಮ್ ಪಾವತಿ ಪ್ರಕ್ರಿಯೆಗೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶನಿವಾರ ಹಲವು ನಿಯಮಗಳ ಸಡಿಲಿಕೆಗಳನ್ನು ಪ್ರಕಟಿಸಿದೆ. ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಂತಿ, ಸಂತ್ರಸ್ತರ ಸಂಬಂಧಿಕರಿಗೆ ಕ್ಲೈಮ್ ಪಾವತಿ ಪ್ರಕ್ರಿಯೆಗೆ ಸಡಿಲಿಕೆಗಳನ್ನು ಘೋಷಿಸಿದರು. “ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್‌ಐಸಿ ಸಂತ್ರಸ್ತರಿಗೆ ಬೆಂಬಲ ನೀಡಲು ಬದ್ಧವಾಗಿದೆ ಮತ್ತು ಹಣಕಾಸಿನ ಪರಿಹಾರವನ್ನು ಒದಗಿಸಲು ಕ್ಲೈಮ್ ಪಾವತಿಯನ್ನು …

Read More »

ಹಳೆಯ ದ್ವೇಷಕ್ಕೆ 200 ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು!

ದಾವಣಗೆರೆ: ಇಬ್ಬರು ವ್ಯಕ್ತಿಗಳ ನಡುವೆ ಇದ್ದ ಹಳೆಯ ದ್ವೇಷಕ್ಕೆ ತೋಟದಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು ನಾಶವಾಗಿವೆ. ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಳೆಯ ದ್ವೇಷವನ್ನೇ ಗುರಿಯಾಗಿಸಿಕೊಂಡ ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ನಾಶಗೊಂಡ ಅಡಿಕೆ ತೋಟವು ರೈತ ಹಾಲೇಶಪ್ಪ ಎಂಬವರಿಗೆ ಸೇರಿದ್ದಾಗಿದ್ದು, ಸುಮಾರು 200 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಎರಡು ಎಕರೆ ಅಡಿಕೆ ತೋಟ ಮಾಡಿದ್ದ ಹಾಲೇಶಪ್ಪ ಬೆಳೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಮೂರು …

Read More »

ಹಿಂದಿನ ಸರ್ಕಾರದ ಹಗರಣಗಳ ತನಿಖೆ‌ ಮಾಡಿಸುತ್ತೇವೆ: ಎಂ ಬಿ ಪಾಟೀಲ್

ಕೊಪ್ಪಳ: ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಾಡಿರುವ ಪಿಎಸ್‌ಐ ಹಗರಣ, 40 ಪರ್ಸೆಂಟ್​​ ಹಗರಣ ಹಾಗೂ ಕೊರೊನಾ ಹಗರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್​ ಹೇಳಿದರು.   ಇಂದು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಕೆಲಸ ಮಾಡಿದ್ದೇವೆ. ಆದರೆ, ಇನ್ನು …

Read More »

ಯುವನಿಧಿ ಯೋಜನೆ ಜಾರಿಗೊಳಿಸಿ ಸರ್ಕಾರ ಆದೇಶ : ಷರತ್ತು ಮತ್ತು ನಿಬಂಧನೆಗಳು ಹೀಗಿವೆ..

ಬೆಂಗಳೂರು : ರಾಜ್ಯದ ಪದವೀಧರರು, ಡಿಪ್ಲೋಮಾ ಪಡೆದವರಿಗೆ ನಿರುದ್ಯೋಗ ಭತ್ಯೆ ನೀಡುವ ಕರ್ನಾಟಕ ಯುವ ನಿಧಿ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಯೋಜನೆ ಜಾರಿಗೆ ಅನುಮೋದನೆ ಸಿಕ್ಕಿರುವ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಗೊಳಿಸಿ ಆದೇಶ ಹೊರಡಿಸಿದೆ.‌ ಅದರಂತೆ ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದ ಪದವೀಧರ ಪ್ರತಿ ತಿಂಗಳು ರೂ.3,000, ಡಿಪ್ಲೋಮಾ ಶಿಕ್ಷಣ ಪಡೆದಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1,500 ರಂತೆ ನಿರುದ್ಯೋಗ ಭತ್ಯೆ …

Read More »

ನೀವೇ ಈ ಚುನಾವಣೆ ಮಾಡಿ ನನ್ನನ್ನು ಗೆಲ್ಲಿಸಿದ್ದೀರಿ: ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ

ರಾಮನಗರ: ನಾನು ಇಲ್ಲಿಗೆ ಅಭಿನಂದನೆ ಮಾಡಿಸಿಕೊಳ್ಳುವುದಕ್ಕಿಂತ, ನಿಮಗೆ ಅಭಿನಂದನೆ ತಿಳಿಸಲು ಬಂದಿದ್ದೇನೆ. ನೀವು ಶಕ್ತಿ ತುಂಬಿದ್ದಕ್ಕೆ ಉಪಕಾರ ಸ್ಮರಿಸಿ ನಿಮ್ಮ ಸೇವೆಗೆ ಸಿದ್ಧ ಎಂದು ತಿಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು. ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದ ಕಬ್ಬಾಳು, ಸಾತನೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ 1,23,000 ಮತಗಳ ಅಂತರದ ದಾಖಲೆಯ ಗೆಲುವನ್ನು ನೀವು ನನಗೆ ಕೊಟ್ಟಿದ್ದೀರಿ. ನನ್ನ ಕಟ್ಟಿಹಾಕಲು …

Read More »

KSRTC ನಡಿಬೇಕಲ್ಲ, ಗಂಡಸ್ರು ಟಿಕೆಟ್ ತಕೊಳ್ರಪ್ಪ.: ಡಿಕೆ ಶಿವಕುಮಾರ್

ರಾಮನಗರ: ಇದೇ ತಿಂಗಳು 11ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಿಗಲಿದೆ. ಎಲ್ಲಿಗೆ ಬೇಕಾದರೂ ಹೋಗಿ, ಓಡಾಡಿ. ಆದರೆ ಗಂಡಸರು ಟಿಕೆಟ್ ತಗೆದುಕೊಂಡು ಓಡಾಡಿ. ಕೆಎಸ್‌ಆರ್ ಟಿಸಿ ನಡಿಯಬೇಕಲ್ಲ, ಅದಕ್ಕೆ ಗಂಡಸರು ಟಿಕೆಟ್ ತಕೊಳ್ರಪ್ಪ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.   ಕಬ್ಬಾಳು ಗ್ರಾಮದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗಲಿದೆ. …

Read More »

ಗೃಹ ಜ್ಯೋತಿ ಯೋಜನೆ ಘೋಷಣೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್.! ಜೂ. 1 ರಿಂದಲೇ ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ಗೃಹಜ್ಯೋತಿ ಯೋಜನೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ದರ ಹೆಚ್ಚಳ ಶಾಕ್ ನೀಡಲಾಗಿದೆ. ಜೂನ್ 1 ರಿಂದಲೇ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಪ್ರತಿ ಯೂನಿಟ್ ವಿದ್ಯುತ್ ದರ 70 ಪೈಸೆ ಹೆಚ್ಚಳ ಮಾಡಿ KERC ಆದೇಶ ಹೊರಡಿಸಿದೆ. ಮೇ 12ರಂದು KERC ವಿದ್ಯುತ್ ಪರಿಷ್ಕರಣೆ ಮಾಡಿತ್ತು. ವಿದ್ಯುತ್ ಸರಬರಾಜು ಕಂಪನಿಗಳಿಗೆ ನಷ್ಟದ ಕಾರಣ ನೀಡಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಪರಿಷ್ಕೃತ ವಿದ್ಯುತ್ ದರ ಜೂ. 1 …

Read More »

ಗೋ ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರದ ಬಗ್ಗೆ ಮಾತನಾಡಿದ್ ಸಚಿವ ಕೆ ವೆಂಕಟೇಶ್ ಪ್ರಶ್ನೆ

ಮೈಸೂರು: ಗೋಹತ್ಯೆ ನಿಷೇಧಿಸಿ ಹಿಂದಿನ ಬಿಜೆಪಿ ಸರ್ಕಾರ ಕಾನೂನು ಜಾರಿಗೆ ತಂದಿತ್ತು. ಇದೀಗ ಕಾಂಗ್ರೆಸ್​ ಸರ್ಕಾರ ಈ ಕಾನೂನು ರದ್ದುಗೊಳಿಸುವ ನಿರ್ಧಾರ ಮಾಡಿದೆಯಾ ಎಂಬ ಪ್ರಶ್ನೆ ಉದ್ಬವಿಸಿದೆ. ಏಕೆಂದರೆ, ಈ ಬಾರಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ನ ನಾಯಕರು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾನೂನುಗಳನ್ನು ಪುನರ್​ ಪರಿಶೀಲಿಸುವ ಮಾತುಗಳನ್ನಾಡುತ್ತಿದ್ದಾರೆ. ಇದೀಗ ನೂತನ ಪಶು ಸಂಗೋಪನ ಸಚಿವರು ಸಹ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ. “ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ …

Read More »