ಮೈಸೂರು : “ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ನಮ್ಮ ಪಕ್ಷದ ವರ್ಚಸ್ಸು ಮತ್ತು ಸಿದ್ಧಾಂತವನ್ನು ಒಪ್ಪಿ ಬಿಜೆಪಿ, ಜೆಡಿಎಸ್ ನಾಯಕರುಗಳು ಅವರಾಗಿಯೇ ಬರುತ್ತೇವೆ ಎನ್ನುತ್ತಿದ್ದಾರೆ. ಹಾಗೆ ಬರುವವರಿಗೆ ನಮ್ಮ ಸ್ವಾಗತ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಇಂದು ಆಗಮಿಸಿದ ಡಿ.ಕೆ.ಶಿವಕುಮಾರ್, ಮೈಸೂರಿನ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದರು. “ನಾವಾಗಿಯೇ ಯಾರನ್ನೂ ಕರೆತರುವ ಪ್ರಯತ್ನ ಮಾಡುತ್ತಿಲ್ಲ. …
Read More »Yearly Archives: 2023
ಅನ್ನಭಾಗ್ಯ ಯೋಜನೆ .. ಡಿಬಿಟಿ ಮೂಲಕ ಆಗಸ್ಟ್ ತಿಂಗಳ ಹಣ ಪಾವತಿ
ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಆಗಸ್ಟ್ ತಿಂಗಳ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಪಡಿತರದಾರರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ. ರಾಜ್ಯ ಸರ್ಕಾರವು ಜುಲೈ ತಿಂಗಳಿನಿಂದ ರಾಜ್ಯದ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಹೊಂದಿರುವ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ವಿತರಿಸುವುದಾಗಿ ಘೋಷಿಸಿತ್ತು. ಈ ಅಕ್ಕಿಯ ಅಗತ್ಯವನ್ನು FCI (ಫುಡ್ ಕಾರ್ಪೋರೇಷನ್)ನಿಂದ ದೇಶೀಯ ಮುಕ್ತ ಮಾರುಕಟ್ಟೆಯಲ್ಲಿ (OMSS(D) ಅಕ್ಕಿಯನ್ನು …
Read More »ಮಹಾತ್ಮ ಗಾಂಧಿ ಪ್ರತಿಮೆ ಹಾನಿಗೊಳಿಸಿದ ಇಬ್ಬರು ಕಿಡಿಗೇಡಿಗಳ ಬಂಧನ: ಎಸ್ಪಿ ಮಿಥುನ್ ಕುಮಾರ್
ಶಿವಮೊಗ್ಗ : ಆಗಸ್ಟ್ 21 ರಂದು ಭದ್ರಾವತಿ ತಾಲೂಕು ಹೊಳೆಹೊನ್ನೂರು ಪಟ್ಟಣದ ಗಾಂಧಿ ವೃತ್ತದಲ್ಲಿನ ಮಹಾತ್ಮ ಗಾಂಧಿ ಮೂರ್ತಿಯನ್ನು ಧ್ವಂಸಗೊಳಿಸಿದ ಇಬ್ಬರು ಆರೋಪಿಗಳನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಮಾಧ್ಯಮಗೋಷ್ಟಿ ನಡೆಸಿ, ಬಂಧಿತ ಆರೋಪಿಗಳ ಕುರಿತು ಮಾಹಿತಿ ನೀಡಿದರು. ಆಗಸ್ಟ್ 21ರ ಬೆಳಗಿನ ಜಾವ ಕಿಡಿಗೇಡಿಗಳಿಬ್ಬರು ಬೈಕ್ನಲ್ಲಿ ಬಂದು ಗಾಂಧಿ ಪ್ರತಿಮೆಯನ್ನು ಧ್ವಂಸ ಮಾಡಿದ್ದರು. …
Read More »ಬಿಜೆಪಿ ತ್ಯಜಿಸುವ ಕುರಿತು ಸುದ್ದಿಗಳಿಗೆ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗು ಶಿವಮಾರ್ ಹೆಬ್ಬಾರ್ ಸ್ಪಷ್ಟನೆ
ಬೆಂಗಳೂರು : “ನಾನು ಪಕ್ಷ ಬಿಡುವುದೂ ಇಲ್ಲ, ಲೋಕಸಭೆ ಚುನಾವಣೆಗೂ ಸ್ಪರ್ಧಿಸುವುದಿಲ್ಲ” ಎಂದು ಮಾಜಿ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಶೇ.100ರಷ್ಟು ಕಾಂಗ್ರೆಸ್ಗೆ ಹೋಗಲ್ಲ. ನನ್ನ ಮಗನೂ ರಾಜಕೀಯಕ್ಕೆ ಬರಲ್ಲ. ಒಂದು ವೇಳೆ ಹಾಗೆ ಮಾಡಿದರೆ ಆ ದಿನವೇ ಬಂದು ನನ್ನನ್ನು ಕೇಳಿ” ಎಂದರು. “ಕೆಲವರು ಶಾಸಕ ಮುನಿರತ್ನ ಅವರ ಕ್ಷೇತ್ರದಿಂದ ಕಾಂಗ್ರೆಸ್ಗೆ ಹೋಗಿದ್ದಾರೆ. ಇನ್ನು ಕೆಲವರು ಕೆ.ಆರ್.ಪುರಂನಿಂದಲೂ ಹೋಗಿದ್ದಾರೆ. …
Read More »KSRTC: ಕೆಂಪು ಬಣ್ಣದ ಬಸ್ಗಳಿಗೆ ಹೈಟೆಕ್ ಸ್ಪರ್ಶ
ಬೆಂಗಳೂರು : ಇನ್ಮುಂದೆ ಕೆಎಸ್ಆರ್ಟಿಸಿಯ ಕೆಂಪು ಬಣ್ಣದ ಬಸ್ಗಳಲ್ಲಿ ಪ್ರಯಾಸದ ಪ್ರಯಾಣಕ್ಕೆ ಗುಡ್ ಬೈ ಹೇಳಿ ಆರಾಮದಾಯಕ ಅನುಭವದ ಪ್ರಯಾಣ ಮಾಡಬಹುದಾಗಿದೆ. ಪುಷ್ ಬ್ಯಾಕ್ ಹೊರತುಪಡಿಸಿ ಬಹುತೇಕ ರಾಜಹಂಸ ಬಸ್ ಪ್ರಯಾಣದ ಅನುಭವ ನೀಡುವ ವ್ಯವಸ್ಥೆಯನ್ನು ಸಾಮಾನ್ಯ ಸಾರಿಗೆಯಲ್ಲಿ ನೀಡಲು ಸಂಸ್ಥೆ ಸಿದ್ಧತೆ ಆರಂಭಿಸಿದೆ. ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಂಡ ಪ್ರೋಟೋಟೈಪ್ ಬಸ್ಗಳು ಅಕ್ಟೋಬರ್ ವೇಳೆಗೆ ರಸ್ತೆಗಿಳಿಯಲಿವೆ. ಹತ್ತು ಹಲವು ಪ್ರಯೋಗಗಳ ಮೂಲಕ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅತ್ಯುತ್ತಮ …
Read More »ಕಾಂಗ್ರೆಸ್ ಆಹ್ವಾನ ನಿಜವೆಂದು ಸೋಮಶೇಖರ್ ಒಪ್ಪಿಕೊಂಡಿದ್ದಾರೆ, ಪಕ್ಷ ಬಿಡಲ್ಲ ಅಂತಲೂ ಸ್ಪಷ್ಟಪಡಿಸಿದ್ದಾರೆ: ಆರ್ ಅಶೋಕ್
ಬೆಂಗಳೂರು: ಕಾಂಗ್ರೆಸ್ ಸೇರುವಂತೆ ಹಾಗು ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಆಹ್ವಾನ ಬಂದಿದ್ದು ನಿಜ ಎನ್ನುವುದನ್ನು ಶಾಸಕ ಎಸ್ ಟಿ ಸೋಮಶೇಖರ್ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ಗೆ ಹೋಗಿ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಅವರಿಗೆ ಹೇಳಿದ್ದೇನೆ, ಅವರೂ ಕೂಡ ಪಕ್ಷ ತೊರೆಯುವುದಿಲ್ಲ ಎಂದೇ ಸ್ಪಷ್ಟಪಡಿಸಿದ್ದಾರೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ತಿಳಿಸಿದ್ದಾರೆ. ಆಪರೇಷನ್ ಹಸ್ತ ಪ್ರಯತ್ನಗಳ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲು ಆಗಮಿಸುವಂತೆ ಮಾಜಿ ಡಿಸಿಎಂ ಆರ್ ಅಶೋಕ್ ಸೂಚನೆಯಂತೆ …
Read More »ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ನವದೆಹಲಿ: 69ನೇ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು (ಗುರುವಾರ) ಪ್ರಕಟಿಸಿದೆ. ಕನ್ನಡ ಚಿತ್ರರಂಗದ ರಕ್ಷಿತ್ ಶೆಟ್ಟಿ ಅವರ ‘ಚಾರ್ಲಿ 777’ ಸಿನಿಮಾ ಉತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ‘ಆರ್ಆರ್ಆರ್’ ಸಿನಿಮಾಗೆ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ, ನೃತ್ಯ ನಿರ್ದೇಶನ ಪ್ರಶಸ್ತಿಗಳ ಗೌರವ ಸಿಕ್ಕಿದೆ. ‘ಉಪ್ಪೇನಾ’ ಸಿನಿಮಾವನ್ನು ಅತ್ಯುತ್ತಮ ತೆಲುಗು ಚಲನಚಿತ್ರವಾಗಿ ಘೋಷಿಸಲಾಗಿದೆ. ‘ಹೋಮ್’ ಅತ್ಯುತ್ತಮ ಮಲಯಾಳಂ ಚಿತ್ರ. ‘ಸರ್ದಾರ್ ಉಧಮ್’ ಅತ್ಯುತ್ತಮ ಹಿಂದಿ …
Read More »ವಿಕ್ರಮ್ ಲ್ಯಾಂಡರ್ಗೆ ಬಿಡಿಭಾಗಗಳ ಪೂರೈಕೆ.. ಚಂದ್ರಲೋಕಕ್ಕೂ ಹಬ್ಬಿದ ಬೆಳಗಾವಿ ಕೀರ್ತಿ
ಬೆಳಗಾವಿ: ಚಂದ್ರಯಾನ 3 ಯಶಸ್ಸಿನಲ್ಲಿ ಬೆಳಗಾವಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆಂಡ್ ಟೆಕ್ನಾಲಜಿ ಕಂಪನಿಯು ವಿಕ್ರಮ್ ಲ್ಯಾಂಡರ್ಗೆ ಬಿಡಿಭಾಗಗಳನ್ನು ಪೂರೈಕೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಚಂದ್ರಲೋಕಕ್ಕೂ ಹರಡುವಂತೆ ಮಾಡಿದೆ. ಇಡೀ ವಿಶ್ವವೇ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ಮೈಲಿಗಲ್ಲು ನಿರ್ಮಿಸಿದೆ. ಇನ್ನು ಚಂದ್ರಯಾನ 3 …
Read More »ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಂಡರ್ ಕಾಲಿಟ್ಟಿರುವುದು ಎಲ್ಲೆಡೆ ಸಂಭ್ರಮಾಚರಣೆಗೆ ಕಾರಣವಾಗಿದೆ.
ಬೆಳಗಾವಿ : ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-3 ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿಯುತ್ತಿದಂತೆ ಬೆಳಗಾವಿ ಹಾಗು ಮೈಸೂರಿನಲ್ಲಿ ಜನರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬೆಳಗಾವಿ ಶಿವಬಸವ ನಗರದ ಡಾ. ಶಿವಬಸವ ಸ್ವಾಮೀಜಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಪಾಲ್ಗೊಂಡಿದ್ದರು. ಭಾರತ ಮಾತಾಕಿ ಜೈ ಮತ್ತು ಇಸ್ರೋ ವಿಜ್ಞಾನಿಗಳಿಗೆ ಜಯವಾಗಲಿ ಎಂಬ ಘೋಷಣೆಗಳು ಕೇಳಿಬಂದವು. …
Read More »‘ಪ್ರತಿ ತಿಂಗಳು 35 ಸಾವಿರ ಲಂಚ ಕೊಡಬೇಕಾ?”..ಅಬಕಾರಿ ಇಲಾಖೆಗೆ ಪ್ರಶ್ನೆ ಮಾಡಿ ಬೆವರಿಳಿಸಿದ ಸಂಸದ ಪ್ರಜ್ವಲ್ ರೇವಣ್ಣ
ಹಾಸನ: ಪ್ರತಿ ತಿಂಗಳು ಮದ್ಯದಂಗಡಿ ಮಾಲೀಕರು ಅಬಕಾರಿ ಇಲಾಖೆಗೆ “35 ಸಾವಿರ ಲಂಚ” ಕೊಡಬೇಕಾ ಎಂದು ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಗಂಭೀರವಾಗಿ ಆರೋಪ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಅಕ್ರಮ ಮದ್ಯ ಮತ್ತು ಲಂಚ ಪಡೆಯುತ್ತಿರುವ ಬಗ್ಗೆ ಗಂಭೀರವಾಗಿ ಅಬಕಾರಿ ಇಲಾಖೆ ಮೇಲೆ ಆರೋಪ ಮಾಡಿದ ಪ್ರಜ್ವಲ್ ರೇವಣ್ಣ ‘ಪ್ರತಿ ತಿಂಗಳು 35 ಸಾವಿರ ಲಂಚ ತಗೋತಿರಲ್ಲ, ಅದನ್ನು …
Read More »