ಬೆಳಗಾವಿ- ಬೆಳಗಾವಿ ಕೆಎಲ್‌ಇ ಶ್ರೀ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶಾರೀರ ರಚನಾಶಾಸ್ತç ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಮಹಾಂತೇಶ ರಾಮಣ್ಣವರ ಅವರ ಆಯುರ್ವೆದ ವೈದ್ಯಕೀಯ ಬೋಧನಾ ಸೇವೆಯನ್ನು ಪರಿಗಣಿಸಿ ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಬೆಳಗಾವಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮತ್ತು ರಿಸರ್ಚ (ಸ್ವಾಯತ್ತ ವಿಶ್ವವಿದ್ಯಾಲಯ) ವತಿಯಿಂದ ಸೆ.೫ ರಂದು ಬೆಳಗಾವಿ ಕೆಎಲ್‌ಇ ಜೆಎನ್‌ಎಂಸಿಯ ಡಾ.ಎಚ್.ಬಿ.ರಾಜಶೇಖರ ಸಭಾಗೃಹದಲ್ಲಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ …
Read More »Yearly Archives: 2023
30 ಶಾಲೆಗಳಿಗೆ ಲ್ಯಾಪಟಾಪ್ ಹಾಗೂ ಕಲರ್ ಪ್ರಿಂಟಗಳನ್ನು ವಿತರಿಸಿದರ ಶಾಸಕ ಗಣೇಶ ಹುಕ್ಕೇರಿ
ಶಿಕ್ಷಣ ಸಚಿವರನ್ನು ಚಿಕ್ಕೋಡಿಗೆ ಕರೆಯಿಸಿ ಶಿಕ್ಷಣ ಇಲಾಖೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಚಿಕ್ಕೋಡಿ ಪಟ್ಟಣದ ಪರಟಿನಾಗಲಿಂಗೇಶ್ವರ ಸಭಾಭವನದಲ್ಲಿ ಆಯೋಜಿಸಿದ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತಾ ತಂದೆ ತಾಯಿಯವರ ನಂತರ ಶಿಕ್ಷಕರೇ ಗುರುಗಳು,ಶಿಕ್ಷಕರನ್ನು ದೇವರಂತೆ ಕಾಣಬೇಕು.ಶಿಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಯಶಸ್ಸು ಕಂಡಿತ ಎಂದರು. ಜಿಲ್ಲೆಯ ಎಲ್ಲ ಸಮಸ್ಯೆಗಳನ್ನು ನಾನು ಹಾಗೂ ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿಯವರು ಬಗೆಹರಿಸುತ್ತೇವೆ.ಮುಂದಿನ …
Read More »ಎರಡು ವಿಧಾನಸಭಾ ಮತಕ್ಷೇತ್ರಗಳಲ್ಲಿ ಹೆಸರು: ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿಗೆ ದೆಹಲಿ ಕೋರ್ಟ್ ಸಮನ್ಸ್
ನವದೆಹಲಿ: ಎರಡು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ ಕಾನೂನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಸಮನ್ಸ್ ನೀಡಿದೆ. ಮೆಟ್ರೋಪಾಲಿಟನ್ ನ್ಯಾಯಾಧೀಶ ಅರ್ಜಿಂದರ್ ಕೌರ್ ಕೇಜ್ರಿವಾಲ್ ಪತ್ನಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ಸುನಿತಾ ಅವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯ (ಆರ್‌ಪಿ) ಕಾನೂನು ಉಲ್ಲಂಘಿಸಿರುವ ಆರೋಪ …
Read More »ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುತ್ತಿದೆ.
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೇಸ್ಗಳ ಸಂಖ್ಯೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 6,806 ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 3,454 ಕೇಸ್ಗಳು ಬೆಂಗಳೂರಿನಲ್ಲೇ ಇವೆ. ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಆತಂಕ ಮೂಡಿಸಿದೆ. 2022ರಲ್ಲಿ ಇದೇ ವೇಳೆಗೆ ರಾಜ್ಯದಲ್ಲಿ 5,500 ಪ್ರಕರಣಗಳು ಪತ್ತೆಯಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ 1,058 ಪ್ರಕರಣಗಳು ವರದಿಯಾಗಿದ್ದವು. 2021ರ ಸೆಪ್ಟೆಂಬರ್ ಅಂತ್ಯಕ್ಕೆ ನಗರದಲ್ಲಿ 520 ಪ್ರಕರಣಗಳು ದಾಖಲಾಗಿದ್ದವು. ರಾಜ್ಯದಲ್ಲಿ ಉಂಟಾಗುತ್ತಿರುವ ಹಮಾಮಾನ ಬದಲಾವಣೆಯಿಂದಾಗಿ …
Read More »ರಸ್ತೆ ಅಪಘಾತದಲ್ಲಿ ಸಾವಿನಲ್ಲೂ ಒಂದಾದ ಅಣ್ಣ ತಂಗಿ
ಬೆಳಗಾವಿ : ಕಾರು ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಮೇಲಿದ್ದ ಅಣ್ಣ-ತಂಗಿ ಸಾವನ್ನಪ್ಪಿರುವ ಘಟನೆ ಮಲಿಕವಾಡ-ನಣದಿವಾಡಿ ರಸ್ತೆಯಲ್ಲಿ ನಡೆದಿದೆ. ಪ್ರಶಾಂತ ನಾಗರಾಜ ತುಳಸಿಕಟ್ಟಿ(21) ಮತ್ತು ಪ್ರಿಯಾಂಕ ನಾಗರಾಜ ತುಳಸಿಕಟ್ಟಿ (19) ಸಾವಿನಲ್ಲೂ ಒಂದಾದ ಅಣ್ಣ-ತಂಗಿ ಎಂದು ತಿಳಿದು ಬಂದಿದೆ. ಮೂಲತಃ ಸದಲಗಾ ಪಟ್ಟಣದ ನಿವಾಸಿಗಳಾಗಿದ್ದು, ಮಂಗಳವಾರ ಮಧ್ಯಾಹ್ನ ಚಿಕ್ಕೋಡಿಯ ಪರಟಿನಾಗಲಿಂಗೇಶ್ವರ ದೇವಸ್ಥಾನಕ್ಕೆ ಎಂದು ದ್ವಿಚಕ್ರ ವಾಹನ ಮೇಲೆ ಹೋಗುತ್ತಿರುವ ಸಂದರ್ಭದಲ್ಲಿ ಕಾರ ಡಿಕ್ಕಿ ಹೊಡೆದಿದೆ. ಪರಿಣಾಮ …
Read More »ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆ ಮೇಲ್ದರ್ಜೆಗೇರಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ : ಶಿಕ್ಷಣ, ಅರಣ್ಯ, ಪರಿಸರ ಮತ್ತು ಕ್ರೀಡೆಯಲ್ಲಿ ಟಾಪ್ ಇದ್ದರೆ ದೇಶವೂ ಟಾಪ್ ಇರುತ್ತದೆ. ಆದರೆ, ಇವುಗಳನ್ನು ಬಹಳ ಕಡಿಮೆ ಸ್ಥರದಲ್ಲಿ ಇಟ್ಟಿದ್ದೇವೆ. ಹಾಗಾಗಿ ಈ ನಾಲ್ಕು ಕ್ಷೇತ್ರಗಳಲ್ಲಿ ಭಾರತ ಅಗ್ರಸ್ಥಾನಕ್ಕೆ ಏರುವ ಅವಶ್ಯಕತೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶೈಕ್ಷಣಿಕ …
Read More »ವನ್ಯಜೀವಿ ಮಾನವ ಸಂಘರ್ಷ ತಡೆಗೆ 500 ಕೋಟಿ ರೂ. ಅನುದಾನಕ್ಕೆ ಮನವಿ; ಸಚಿವ ಖಂಡ್ರೆ
ಬೆಂಗಳೂರು: ಕಳೆದ 15 ದಿನಗಳ ಅಂತರದಲ್ಲಿ ಮಾನವ ವನ್ಯಜೀವಿ ಸಂಘರ್ಷದಲ್ಲಿ 11 ಜನರು ಸಾವಿಗೀಡಾಗಿದ್ದು, ಅಮೂಲ್ಯ ಜೀವ ಹಾನಿ ತಪ್ಪಿಸಲು ಅಗತ್ಯ ಮತ್ತು ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳಿಗೆ 500 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ …
Read More »ಕರೀಷ್ಮಾ ಕಪೂರ್ ಜೊತೆ ನ್ಯೂಯಾರ್ಕ್ ಸುತ್ತಾಡಿದ ರಣ್ಬೀರ್ - ಆಲಿಯಾ ಜೋಡಿ
ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ದಂಪತಿ ನಟಿ ಕರೀಷ್ಮಾ ಕಪೂರ್ ಜೊತೆ ನ್ಯೂಯಾರ್ಕ್ನಲ್ಲಿ ಸುತ್ತಾಡಿರುವ ಫೋಟೋಗಳು ವೈರಲ್ ಆಗುತ್ತಿದೆ. ಬಾಲಿವುಡ್ ಸುಂದರ ಜೋಡಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡ ಸೆಲೆಬ್ರಿಟಿ ಕಪಲ್ ರಜಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಇವರಿಬ್ಬರು ತಮ್ಮ ಪ್ರವಾಸದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಆದರೂ ತಾರಾ ಜೋಡಿಯ ಅಮೆರಿಕದ ಟ್ರಿಪ್ನ ಪೋಟೋಗಳು ಮತ್ತು …
Read More »ದಿ. ಜಯಶ್ರೀ ಚಂದ್ರಶೇಖರ ಕೊಣ್ಣೂರ ಇವರ ಸ್ಮರಣಾರ್ಥ ನೂತನ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಉದ್ಘಾಟನೆ ಸಮಾರಂಭ
ಗೋಕಾಕ : ಖಾತ್ಯ ಉದ್ಯಮಿ ಚಂದ್ರಶೇಖರ ಕೊಣ್ಣೂರು ಅವರ ಧರ್ಮಪತ್ನಿ ಅವರ ದಿ. ಜಯಶ್ರೀ ಚಂದ್ರಶೇಖರ ಕೊಣ್ಣೂರು ಅವರ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಿರುವ ನೂತನ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಉದ್ಘಾಟನೆ ಸಮಾರಂಭ ನೆರವೇರಿತು. ಮರಡಿ ಶಿವಾಪುರದ ಹೊರವಲಯದಲ್ಲಿ ನಿರ್ಮಿಸಿರುವ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಉದ್ಘಾಟನೆಯನ್ನು ಮಠಾಧೀಶರು ಹಾಗೂ ಗಣ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿರುವ ಸುಕ್ಷೇತ್ರ ಇಂಚಲ ಮಠದ ಪರಮಪೂಜ್ಯ ಶ್ರೀ ಡಾ ಶಿವಾನಂದ …
Read More »ಕೌಜಲಗಿಯ ಕಳ್ಳಿಗುದ್ದಿ ಕ್ರಾಸ್-ಕೆವ್ಹಿಜೆ ಬ್ಯಾಂಕ್‍ವರೆಗಿನ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ರಸ್ತೆಯ ಅಕ್ಕ-ಪಕ್ಕದ ಸಾರ್ವಜನಿಕರ ಆಶಯದಂತೆ ಕೌಜಲಗಿ-ಕಳ್ಳಿಗುದ್ದಿ ಕ್ರಾಸದಿಂದ ಕೆವ್ಹಿಜಿ ಬ್ಯಾಂಕ್‍ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಶೀಘ್ರದಲ್ಲಿಯೇ ಈ ರಸ್ತೆ ಕಾಮಗಾರಿಯು ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸೋಮವಾರದಂದು ಗೋಕಾಕ ತಾಲೂಕಿನ ಕೌಜಲಗಿಯಲ್ಲಿ 1.80 ಕೋಟಿ ರೂ. ವೆಚ್ಚದ ಬಾದಾಮಿ-ಗೊಡಚಿ-ಗೋಕಾಕ ಫಾಲ್ಸ್ ರಾ.ಹೆ-134 ರ ಸರಪಳಿ 87.065 ರಿಂದ 87.59 ಕಿ.ಮೀ ವರೆಗಿನ ಕೌಜಲಗಿ ಗ್ರಾಮ ವ್ಯಾಪ್ತಿಯ ಕಳ್ಳಿಗುದ್ದಿ ಕ್ರಾಸದಿಂದ ಕೆವ್ಹಿಜಿ …
Read More »