ನವದೆಹಲಿ: ಭಾರತ ಇದೇ ಮೊದಲ ಬಾರಿಗೆ ಅಧ್ಯಕ್ಷತೆ ವಹಿಸಿರುವ ಮಹತ್ವದ ಜಿ20 ಶೃಂಗಸಭೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದಿನಿಂದ ಒಂದು ವಾರ ಕಾಲ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಜಿ20 ಮುಗಿದ ಬಳಿಕ ಅವರು ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ. ನಿನ್ನೆ ರಾತ್ರಿಯೇ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಎರಡು ದಿನ ಜಿ 20 ಶೃಂಗಸಭೆ ನಡೆಯಲಿದೆ. …
Read More »Yearly Archives: 2023
Green hydrogen ಎಂದರೇನು?: ಅದನ್ನು ಶುದ್ಧ ಇಂಧನ ಎಂದು ಏಕೆ ಕರೆಯಲಾಗುತ್ತದೆ?
ಬೆಂಗಳೂರು: ಸಾರಿಗೆ ಮತ್ತು ಕೈಗಾರಿಕಾ ಉತ್ಪಾದನೆಯಂತಹ ಹೆಚ್ಚು ಹೊರಸೂಸುವ ವಲಯಗಳಿಂದ ಇಂಗಾಲವನ್ನು ಹೊರತೆಗೆಯಲು ಗ್ರೀನ್ ಹೈಡ್ರೋಜನ್(ಹಸಿರು ಜಲಜನಕ) ಅನ್ನು ಶುದ್ಧ ಇಂಧನ ಪರಿಹಾರವೆಂದು ವಿಶ್ವದಾದ್ಯಂತ ಪ್ರಚಾರ ಮಾಡಲಾಗುತ್ತಿದೆ. ಭಾರತ ನೇತೃತ್ವದ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಈ ವರ್ಷದ ಆರಂಭದಲ್ಲಿ ಗ್ರೀನ್ ಹೈಡ್ರೋಜನ್ ಇನ್ನೋವೇಶನ್ ಸೆಂಟರ್ ಅನ್ನು ಪ್ರಾರಂಭಿಸಿತು. ಇದು ಗ್ರೀನ್ ಹೈಡ್ರೋಜನ್ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವೇ $2.3 ಬಿಲಿಯನ್ ಅನ್ನು ಅನುಮೋದಿಸಿತು. ನವದೆಹಲಿಯಲ್ಲಿ ಈ ವಾರ ನಡೆಯಲಿರುವ …
Read More »ಇಂಡಿಯಾ ಬದಲು ಭಾರತದ ಪ್ರಧಾನಿ ಎಂದು ಉಲ್ಲೇಖ.. ಮೋದಿ ಇಂಡೋನೇಷ್ಯಾ ಭೇಟಿಯ ಅಧಿಕೃತ ಪತ್ರ ಹಂಚಿಕೊಂಡ ಬಿಜೆಪಿ
ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಗೆ ಭೇಟಿ ನೀಡುತ್ತಿದ್ದಾರೆ. ಈ ಅಧಿಕೃತ ಮಾಹಿತಿಯನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಮಾಹಿತಿಯಲ್ಲಿ ಮೋದಿ ಅವರನ್ನು “ಭಾರತದ ಪ್ರಧಾನಿ” ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ಆಗಸ್ಟ್ 22-25 ರಂದು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಸಮಾರಂಭದ ಪತ್ರಗಳಲ್ಲಿ ಮೋದಿ ಅವರನ್ನು ‘ಭಾರತದ ಪ್ರಧಾನ ಮಂತ್ರಿ’ ಎಂದು ಉಲ್ಲೇಖಿಸಲಾಗಿತ್ತು. 20ನೇ ಆಸಿಯಾನ್ಚ-ಭಾರತ ಶೃಂಗಸಭೆ ಮತ್ತು …
Read More »ದಸರಾ ಗಜಪಡೆ ತೂಕ ಪರೀಕ್ಷೆ.. ಕ್ಯಾಪ್ಟನ್ ಅಭಿಮನ್ಯುನೇ ಹೆಚ್ಚು ಬಲಶಾಲಿ
ಮೈಸೂರು: ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಅರಮನೆಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು. ತೂಕದಲ್ಲಿ ಅಂಬಾರಿ ಹೋರುವ ಅಭಿಮನ್ಯು ಹೆಚ್ಚು ಬಲಶಾಲಿಯಾಗಿದ್ದಾನೆ. 2ನೇ ಹಂತದಲ್ಲಿ ಬರುವ ಐದು ಆನೆಗಳ ಜತೆ ಅರ್ಜುನ ಆನೆಯನ್ನು ಸಹ ತೂಕ ಮಾಡಲಾಗುವುದು ಎಂದು ಡಿಸಿಎಫ್ ಸೌರವ್ ಕುಮಾರ್ ಮಾಹಿತಿ ನೀಡಿದರು. ನಿನ್ನೆ (ಮಂಗಳವಾರ) ಅಭಿಮನ್ಯು ನೇತೃತ್ವದ 8 ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಅರಮನೆಗೆ …
Read More »ಹಾಸ್ಟೆಲ್ ಅವ್ಯವಸ್ಥೆ ಹಿನ್ನೆಲೆ ತಾಲೂಕು ವಿಸ್ತರಣಾಧಿಕಾರಿ ಅಮಾನತು: ಡಿಎಂಒ, ವಾರ್ಡನ್ಗೆ ಶೋಕಾಸ್ ನೋಟಿಸ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದ ವಸತಿ, ವಕ್ಪ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ನಿನ್ನೆ (ಮಂಗಳವಾರ) ಹಾಸ್ಟೆಲ್ಗೆ ಭೇಟಿ ನೀಡಿದ್ದರು. ಈ ವೇಳೆ ಹಾಸ್ಟೆಲ್ನಲ್ಲಿರುವ ಅವ್ಯವಸ್ಥೆ ಕಂಡು ಕಿಡಿಕಾರಿದ್ದಾರೆ. ಸ್ಥಳದಲ್ಲೇ ತಾಲೂಕು ವಿಸ್ತರಣಾಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಸಚಿವ ಜಮೀರ್ ಅಹಮದ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಜೊತೆಗೆ ವೆಲೆನ್ಸಿಯಾ ರಸ್ತೆಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ಗೆ ದಿಢೀರ್ ಭೇಟಿ ನೀಡಿದ್ದರು. …
Read More »ಟೀಮ್ ಜರ್ಸಿಯಲ್ಲಿ “ಇಂಡಿಯಾ” ತೆಗೆದು “ಭಾರತ್” ಮಾಡಿ.. ಪಾರ್ಟ್‌ಟೈಮ್ ಎಂಪಿ ಆಗಿರುವುದಕ್ಕಿಂತ ಫುಲ್ಟೈಂ ಕ್ರಿಕೆಟಿಗನಾಗಿರುವೆ: ಸೆಹ್ವಾಗ್
ಹೈದರಾಬಾದ್: ಇಂದು ಟ್ವಿಟರ್ನಲ್ಲಿ ಎರಡು ವಿಷಯ ಟ್ರೆಂಡಿಂಗ್ ಆಗಿದೆ. ಅದು ‘ಇಂಡಿಯಾ’ ವರ್ಸಸ್ ‘ಭಾರತ್’ ಆಗಿದ್ದರೆ, ಮತ್ತೊಂದೆಡೆ ವಿರೇಂದ್ರ ಸೆಹ್ವಾಗ್, ಈ ಚರ್ಚೆ ಮುನ್ನಲೆಗೆ ಬರುವ ಮುನ್ನವೇ ಟೀಂ ಭಾರತ ಎಂದು ಹ್ಯಾಷ್ ಟ್ಯಾಗ್ ಹಾಕಿದ್ದರು. ಈ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ನಡುವೆ ಭಾರತ ಸಂವಿಧಾನದಲ್ಲಿನ ಇಂಡಿಯಾ ಎಂಬ ಪದಕ್ಕೆ ಕೊಕ್ ನೀಡಿ ಭಾರತವನ್ನು ಮಾತ್ರ ಉಳಿಸಿಕೊಳ್ಳುವ ನಿರ್ಧರಿಸಿದೆ ಎನ್ನಲಾಗಿದೆ. ಮುಂಬರುವ ವಿಶೇಷ …
Read More »ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಭಾರತದ ಅತ್ಯಂತ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ.
ಬಣ್ಣದ ಲೋಕವೇ ಹೀಗೆ ಅಲ್ಲವೇ! ನೂರು ಸಿನಿಮಾ ಮಾಡಿದ್ರೂ ಸಿಗದೇ ಇರೋ ಕ್ರೇಜ್, ಸ್ಟಾರ್ ಗಿರಿ ಪಟ್ಟ ಕೆಲವೊಬ್ಬರಿಗೆ ಒಂದೇ ಚಿತ್ರದಲ್ಲಿ ದಕ್ಕಿಬಿಡುತ್ತದೆ. ಇನ್ನು ಕೆಲವರಿಗೆ ಹೀಗಲ್ಲ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿದ್ದು, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಪ್ರತಿ ಬಾರಿಯೂ ಗೆಲ್ಲುತ್ತಾ ಸ್ಟಾರ್ ಹೀರೋಗಳಾಗಿದ್ದಾರೆ. ಡಾ.ರಾಜ್ಕುಮಾರ್, ಎನ್ಟಿಆರ್, ಅಮಿತಾಭ್ ಬಚ್ಚನ್ರಿಂದ ಹಿಡಿದು ರಜನಿಕಾಂತ್, ಶಾರುಖ್ ಖಾನ್, ಯಶ್, ಪ್ರಭಾಸ್ ಹೀಗೆ ಅನೇಕರು ತಮ್ಮ ಕಠಿಣ ಶ್ರಮ, ಛಲದಿಂದ ಸ್ಟಾರ್ …
Read More »ಬ್ಯಾಂಕ್ವೆಟ್ ಹಾಲ್ನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು 2023-24ನೇ ಶೈಕ್ಷಣಿಕ ಸಾಲಿನಿಂದ ತರಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡರೆ, ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ …
Read More »ನೀರಜ್ ಚೋಪ್ರಾ ಪ್ರತಿಮೆಯಲ್ಲಿದ್ದ ಜಾವೆಲಿನ್ ಕಳ್ಳತನ.. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿ ಸಾರ್ವಜನಿಕರು
ಮೀರತ್ (ಉತ್ತರ ಪ್ರದೇಶ): ಸ್ಟಾರ್ ಜಾವೆಲಿನ್ ಥ್ರೋವರ್ ಮತ್ತು ಒಲಿಂಪಿಕ್ ಚಾಂಪಿಯನ್, ಇತ್ತಿಚೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರ ಪ್ರತಿಮೆಯನ್ನು ಇಲ್ಲಿನ ಹಾಪುರ್ನ ಸರ್ಕಲ್ ಸ್ಥಾಪಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಈ ಪ್ರತಿಮೆಯ ಕೈಯಲ್ಲಿದ್ದ ಜಾವೆಲಿನ್ ಬದಲಾಗಿತ್ತು. ಮೂರ್ತಿ ಸ್ಥಾಪಿಸಿದಾಗ ಫೈಬರ್ನಿಂದ ಮಾಡಿದ ಜಾವೆಲಿನ್ ಇಡಲಾಗಿತ್ತು. ಈಗ ಆ ಜಾಗದಲ್ಲಿ ಕಿಡಿಗೇಡಿಗಳು ಮರದ ಕೋಲನ್ನು ಇಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಈ …
Read More »ನಿರೀಕ್ಷೆಯಂತೆ ಸೇಂಟ್ ಪಾಲ್ಸ್ ಪ್ರೌಢಶಾಲೆಯು 55ನೇ ಫಾದರ್ ಎಡ್ಡಿ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು..
ಬಿಗ್ ವೆಂಚರ್ ಬ್ರಾಡ್ಬ್ಯಾಂಡ್ ಪ್ರಾಯೋಜಕತ್ವದಲ್ಲಿ ಸೇಂಟ್ ಪಾಲ್ಸ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವಾದ ಬೆಳಗಾವಿ ವರ್ಲ್ಡ್ವೈಡ್ ಪಾಲಿಟ್ಸ್ ಆಯೋಜಿಸಿದ್ದ 55ನೇ ಫಾದರ್ ಎಡ್ಡಿ ಸ್ಮೃತಿ ನಾಕ್ಔಟ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ಇಂದು ಸೇಂಟ್ ಪಾಲ್ಸ್ ಹೈಸ್ಕೂಲ್ ಮತ್ತು ಲವ್ ಡೇಲ್ ಸೆಂಟ್ರಲ್ ಸ್ಕೂಲ್ ನಡುವೆ ನಡೆಯಿತು. . ಶಿಬಿರದ ಸೇಂಟ್ ಪಾಲ್ಸ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೇಂಟ್ ಪಾಲ್ಸ್ ಪ್ರೌಢಶಾಲೆ 6-5 ಗೋಲುಗಳಿಂದ ಲವ್ ಡೇಲ್ …
Read More »