Breaking News

Yearly Archives: 2023

ಎಸ್‌ಬಿಐನಿಂದ 2,000 ಪಿಒ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಸ್ಟೇಟ್​ ಬ್ಯಾಂಕ್​ನಲ್ಲಿ ಖಾಲಿ ಇರುವ ಪಿಒ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವಿ ಹೊಂದಿರಬೇಕು. ಭಾರತೀಯ ಸ್ಟೇಟ್​ ಬ್ಯಾಂಕ್​ನಿಂದ ಪ್ರೊಬೇಷನರಿ ಆಫೀಸರ್​ (ಪಿಒ) ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ದೇಶಾದ್ಯಂತ ಒಟ್ಟು 2,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ನೇಮಕಾತಿ ನಡೆಯಲಿದೆ. ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಧಿಸೂಚನೆವಿದ್ಯಾರ್ಹತೆ: ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಮತ್ತು ಅಂತಿಮ ವರ್ಷದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಫಲಿತಾಂಶದ …

Read More »

ಸೈಬರ್​ ವಂಚಕರಿಗೆ ಬೆಂಗಳೂರು ಪೊಲೀಸರ ಮಾಸ್ಟರ್​ ಸ್ಟ್ರೋಕ್

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸೈಬರ್​ ಕ್ರೈಂ ಪ್ರಕರಣಗಳ ಸಂಖ್ಯೆ ಮತ್ತು ಹೊಸ ಹೊಸ ವಿಧದಲ್ಲಿ ಸೈಬರ್​ ವಂಚನೆ ಪ್ರಕರಣಗಳು ವರದಿಯಾಗುತ್ತಿರುವುದನ್ನು ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.   ಕೇವಲ ಮೊಬೈಲ್ ಸಂವಹನದಿಂದಲೇ ಸಾರ್ವಜನಿಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದ ವಂಚಕರು ಬಳಸುತ್ತಿದ್ದ ಸಿಮ್ ಕಾರ್ಡ್ಸ್ ಹಾಗೂ ಫೋನ್‌ಗಳನ್ನೆ ನಿಷ್ಕ್ರಿಯ (ಬ್ಲಾಕ್) ಮಾಡಿಸುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಲಾರಂಭಿಸಿದ್ದಾರೆ. ಜನವರಿಯಿಂದ ಇದುವರೆಗಿನ ಸೈಬರ್ ವಂಚನೆ ಪ್ರಕರಣಗಳ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಮ್ …

Read More »

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಅನುಕೂಲ: ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು: ”ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಅನುಕೂಲವಾಗಲಿದೆ” ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ”ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಮಾಡಿಕೊಳ್ಳಲಿ. ಅದು ನಮಗೆ ಸಂಬಂಧಪಟ್ಟ ವಿಷಯ ಅಲ್ಲ. ಆದರೆ, ಅವರು ಮೈತ್ರಿ ಮಾಡಿದರೆ ಕಾಂಗ್ರೆಸ್​ಗೆ ಅನುಕೂಲವಾಗಲಿದೆ. ಇದರಿಂದ ಸೆಕ್ಯುಲರ್ ಎನ್ನುವ ಹೆಸರು ಇಟ್ಟುಕೊಂಡಿರುವ ಜೆಡಿಎಸ್ ಬಣ್ಣವೂ ಬಯಲಾಗಲಿದೆ. ನಾವು ಏಕಾಂಗಿಯಾಗಿ ರಾಜ್ಯದಲ್ಲಿ ಕನಿಷ್ಠ ಅಂದ್ರೂ 20 ಸ್ಥಾನಗಳನ್ನಾದರೂ ಗೆಲ್ಲಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. …

Read More »

ಲೋಕ’ ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ… ‘ದಳ’ಕ್ಕೆ ಸಿಗಲಿರುವ 4 ಕ್ಷೇತ್ರಗಳು ಯಾವುವು?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಮತ್ತೊಮ್ಮೆ ಚುನಾವಣಾ ಪೂರ್ವ ಮೈತ್ರಿ ಘೋಷಣೆಯಾಗಿದೆ.(BJP JDS alliance). ಹೈಕಮಾಂಡ್ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ನಡೆದಿದ್ದು, ಈ ಮೈತ್ರಿಯನ್ನು ಉಭಯ ಪಕ್ಷಗಳ ನಾಯಕರು ಸ್ವಾಗತಿಸಿದ್ದಾರೆ. 24+4 ಸ್ಥಾನಗಳ ಹಂಚಿಕೆ ನಡೆದಿದ್ದು ರಾಜ್ಯ ಬಿಜೆಪಿ ನಾಯಕರು ಖಚಿತಪಡಿಸಿದ್ದಾರೆ. ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ದ …

Read More »

2ಎ‌ ಮೀಸಲಾತಿ ಸಲುವಾಗಿ ಮತ್ತೆ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ‌ ಮೀಸಲಾತಿ ನೀಡಬೇಕು, ಸಮಾಜದ ಎಲ್ಲ ಉಪ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್‌ 10 ರಂದು ನಿಪ್ಪಾಣಿಯಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.   ನಗರದ ಗಾಂಧಿ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಬೇಡಿಕೆ ಈಡೇರಿಸುವಂತೆ …

Read More »

ಗೃಹಲಕ್ಷ್ಮೀ ಯೋಜನೆಯ ಹೊಸ ನೋಂದಣಿ ಸ್ಥಗಿತಗೊಂಡಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಗೃಹಲಕ್ಷ್ಮೀ ಯೋಜನೆಯ ಹೊಸ ನೋಂದಣಿ ಸ್ಥಗಿತಗೊಂಡಿಲ್ಲ.‌ ಇಲಾಖೆ ವೆಬ್‌ಸೈಟ್ ನಲ್ಲಿ ಮಾಡಿರುವ ಪ್ರಕಟಣೆ ಬಗ್ಗೆ ನನಗೆ ಗೊತ್ತಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿತ ಫಲಾನುಭವಿಗಳ ಖಾತೆಗೆ ರೂ.2000 ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದಿರಲೆಂದು, ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿ ಸಲಾಗಿದ್ದು, ಶೀಘ್ರವೇ ನೋಂದಣಿ …

Read More »

ಸನಾತನ ಧರ್ಮದ ವಿಚಾರವಾಗಿ ಮಾತನಾಡಿಲ್ಲ. ಬೇರೆಯವರು ಏನ ವಿಶ್ಲೇಷಣೆ ಮಾಡತ್ತಾರೆ. ಅದಕ್ಕೆಲ್ಲ ಉತ್ತರ ಕೊಡಲ್ಲ ಎಂದ ಗೃಹ ಸಚಿವ

ಸನಾತನ ಧರ್ಮದ ವಿಚಾರವಾಗಿ ಮಾತನಾಡಿಲ್ಲ. ಬೇರೆಯವರು ಏನ ವಿಶ್ಲೇಷಣೆ ಮಾಡತ್ತಾರೆ. ಅದಕ್ಕೆಲ್ಲ ಉತ್ತರ ಕೊಡಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ನಾನು ಸಮಯ ಸಂದರ್ಭದಲ್ಲಿ ಏನ ಹೇಳಬೇಕೋ ಅದನ್ನು ಹೇಳಿದ್ದೇನೆ. ನಮ್ಮ ಅಭಿಪ್ರಾಯ ಹೇಳಿದ್ದೇನೆ. ಯಾರ ಏನ ಬೇಕಾದರೂ ವಿಶ್ಲೇಷಣೆ ಮಾಡಲಿ. ಅವರ ಹಾಗೇ ಮಾತನಾಡುತ್ತಾರೆ, ಹೀಗೆ ಮಾತನಾಡುತ್ತಾರೆ ಅಂದರೆ ನಾನು ಉತ್ತರ ಕೊಡುವುದಿಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾನು ಹೇಳಿರೋ ಹೇಳಿಕೆ ಬಗ್ಗೆ ಮಾತನಾಡಿಲ್ಲ‌. ಸನಾತನ …

Read More »

ಚೇಂಬರ್ ಆಫ್ ಕಾಮರ್ಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ ಸಿ ಹೊಂಡದಕಟ್ಟಿ

ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ನ ನೂತನ ಕಾರ್ಯನಿರ್ವಾಹಕರ ಪದಗ್ರಹಣ ಸಮಾರಂಭ ಬುಧವಾರ ಸಂಜೆ ಫೌಂಡ್ರಿ ಕ್ಲಸ್ಟರ್ ನಲ್ಲಿ ನಡೆಯಿತು 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿ ಸಿ ಹೊಂಡದಕಟ್ಟಿ, ಹಿರಿಯ ಉಪಾಧ್ಯಕ್ಷ ಸಂಜೀವ್ ಕಟ್ಟಿಶೆಟ್ಟಿ, ಉಪಾಧ್ಯಕ್ಷ ಸತೀಶ ಕುಲಕರ್ಣಿ, ಕೀತ್ ಮಚಾಡೋ, ಕಾರ್ಯದರ್ಶಿ ರಾಜೇಂದ್ರ ಮುತಗೇಕರ, ಕೋಶಾಧಿಕಾರಿ ರೋಹಿತ್ ಕಪಾಡಿಯಾ ಅವರನ್ನು ನೇಮಿಸಲಾಯಿತು ಹೇಮಚಂದ್ರ ಪೋರವಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ …

Read More »

ಗೋಕಾಕ ನಗರಕ್ಕೆ ಅಂಟಿಕೊಂಡ ಗಾಂಜಾ ಘಾಟು! ನಿತ್ಯ ಹತ್ತಾರು ಯುವಕರು ಗಾಂಜಾ ಬಲೆಗೆ

ಗೋಕಾಕ : ನಗರದ ನದಾಫ್ ಗಲ್ಲಿ ಮಸ್ತಾನ್ ಸಾಬ್ ದರ್ಗಾ ಹತ್ತಿರ ನಿತ್ಯ ಹತ್ತಾರು ಯುವಕರು ಗಾಂಜಾ ಬಲೆಗೆ ಬೀಳುತ್ತಿದ್ದು ಗಾಂಜಾ ಸೇವನೆಗೆ ಬಳಸುವ ವಸ್ತುಗಳು ದಿನನಿತ್ಯ ಈ ಪ್ರದೇಶದಲ್ಲಿ ಕಂಡು ಬರುತ್ತಿವೆ. ಯುವಕರು ಸಿಗರೇಟ್ ಸೆದುತ್ತಿರುವಂತೆ ಕಂಡು ಬಂದರು ಸಹಿತ ಅದು ಸಿಗರೇಟ್ ಆಗಿರುವುದಿಲ್ಲ. ಬದಲಾಗಿ ಅದರೊಂದಿಗೆ ಗಾಂಜಾ ಕೂಡ ಸೇರಿಸಿ ಸಿಗರೇಟ್ ಸೆದುತ್ತಿರುವುದು ಕಂಡು ಬರುತ್ತದೆ. ಪೋಷಕರಿಗೆ ಆತಂಕ! ನಮ್ಮ ಮಗನೊಬ್ಬ ಗಾಂಜಾಗೆ ಬಲೆಗೆ ಸಿಲುಕಿದ್ದು ,ನಾವು …

Read More »

ಬೆಳಗಾವಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ವರನಟ ಡಾ.ರಾಜ್‌ಕುಮಾರ್​ ಅವರ ಮೊಮ್ಮಗಳಾದ ಸರಸ್ವತಿ ಭಾಗಿಯಾಗಿ ಗಮನ ಸೆಳೆದರು.

ಬೆಳಗಾವಿ : ಇಲ್ಲಿನ ವೈಭವ ನಗರದ ರೂಪಾಲಿ ಹೊಸಕೋಟಿ ಎಂಬವರ ಮನೆಯಲ್ಲಿ ಗುರುವಾರ ಶ್ರೀಕೃಷ್ಣಜನ್ಮಾಷ್ಠಮಿ ನಿಮಿತ್ತ ವಿಶೇಷ ಪೂಜೆ ನಡೆಯಿತು. ಈ ಕಾರ್ಯಕ್ರಮಕ್ಕೆ ಬೆಳಗಾವಿಯ ಶಿವಬಸವ ನಗರದಲ್ಲಿ ನೆಲೆಸಿರುವ ಡಾ.ರಾಜ್‌ಕುಮಾರ್ ಮಗಳು‌ ಲಕ್ಷ್ಮಿ ಮತ್ತು ಗೋವಿಂದರಾಜ ದಂಪತಿಯ ಪುತ್ರಿ ಸರಸ್ವತಿ ಆಗಮಿಸಿದ್ದು ವಿಶೇಷವಾಗಿತ್ತು. ಸರಸ್ವತಿ ಹಾಡು ಹಾಡಿ, ಶ್ರೀಕೃಷ್ಣನ ನೆನೆದು, ಎಲ್ಲರೊಂದಿಗೂ ಬೆರೆತು ಖುಷಿಪಟ್ಟರು. ಮತ್ತೊಂದೆಡೆ ಪೂಜೆಗೆ ಆಗಮಿಸಿದ್ದ ಮಹಿಳೆಯರು ಸರಸ್ವತಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹರ್ಷ ವ್ಯಕ್ತಪಡಿಸಿದರು‌. ಡಾ. ರಾಜ್‌ಕುಮಾರ …

Read More »