ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಸೂಪರ್ ಫೋರ್ ಪಂದ್ಯದ ಭಾರತ ಪಾಕಿಸ್ತಾನ ಮ್ಯಾಚ್ಗೆ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮೀಸಲು ದಿನವನ್ನು ಎಸಿಸಿ ಪ್ರಕಟಿಸಿತ್ತು. ಆದರೆ ವಿಪರ್ಯಾಸ ಎಂದರೆ ಮೀಸಲು ದಿನವೂ ಮಳೆ ಕಾಡುತ್ತಿದ್ದು, 3 ಗಂಟೆಗೆ ಆರಂಭವಾಗಬೇಕಾಗಿದ್ದ ಪಂದ್ಯ ವಿಳಂಬವಾಗಿದೆ. ನಿನ್ನೆ (ಭಾನುವಾರ) 24.1 ಓವರ್ ವರೆಗಿನ ಇನ್ನಿಂಗ್ಸ್ನ್ನು ಭಾರತ ಆಡಿತ್ತು. ಈ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ನಿನ್ನೆ ಸಂಜೆ 5ರ ಸುಮಾರಿಗೆ ಆರಂಭವಾದ ಮಳೆ ಸುಮಾರು …
Read More »Yearly Archives: 2023
ಬಿಜೆಪಿ – ಜೆಡಿಎಸ್ ಮೈತ್ರಿ ಇನ್ನೂ ಫೈನಲ್ ಆಗಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಬಿಜೆಪಿ – ಜೆಡಿಎಸ್ ಮೈತ್ರಿ ಇನ್ನೂ ಫೈನಲ್ ಆಗಿಲ್ಲ. ಅದರ ಬಗ್ಗೆ ನನಗೆ ಸಂಪೂರ್ಣವಾದ ಮಾಹಿತಿ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೈತ್ರಿ ಅನಿವಾರ್ಯ ಎಂದು ಸ್ಥಳೀಯವಾಗಿ ಹೇಳಿರಬಹುದು. ನಾನು ಕೇಂದ್ರದಲ್ಲಿ ಮಂತ್ರಿಯಾಗಿ ಮೈತ್ರಿ ವಿಚಾರವಾಗಿ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. …
Read More »ವ್ಯಕ್ತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಕುಖ್ಯಾತ ರೌಡಿ ವಿಶಾಲ್ ಸಿಂಗ್ ಎಂಬಾತನನ್ನು ಬೆಳಗಾವಿ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬೆಳಗಾವಿ : ವ್ಯಕ್ತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಕುಖ್ಯಾತ ರೌಡಿ ವಿಶಾಲ್ ಸಿಂಗ್ ಎಂಬಾತನನ್ನು ಬೆಳಗಾವಿ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕಳೆದ ಸಪ್ಟೆಂಬರ್ 1 ರಂದು ಪ್ಲ್ಯಾಟ್ ತೋರಿಸುವುದಾಗಿ ನಂಬಿಸಿ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರನ್ನು ಆತನ ಕಾರಿನಲ್ಲಿ ಅಪಹರಿಸಿದ್ದಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಮೂಲದ ಕುಖ್ಯಾತ ರೌಡಿ ವಿಶಾಲಸಿಂಗ್ ಚೌಹಾನ್ ( 25 ) ಬಂಧಿಸಲಾಗಿದೆ, ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ …
Read More »ಗಣೇಶೋತ್ಸವ ವಿಸರ್ಜನಾ ಹೊಂಡಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದ ಮಹಾನಗರ ಪಾಲಿಕೆ
ಗಣೇಶೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತವು ನಗರದ ಗಣೇಶೋತ್ಸವ ವಿಸರ್ಜನಾ ಹೊಂಡಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ನಗರದ ಇಂದ್ರಪ್ರಸ್ಥನಗರದಲ್ಲಿರುವ ಜಕ್ಕಿನಹೊಂಡ ಕೆರೆಯನ್ನು ಸ್ವಚ್ಛಗೊಳಿಸಲಾಯಿತು. ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಯನ್ನು ಕಪಿಲೇಶ್ವರ ಕೆರೆ, ಜಕ್ಕಿನಹೊಂಡ ಕೆರೆ, ಅಂಗೋಲ್ ಕೆರೆ ಮುಂತಾದೆಡೆ ಮಾಡಲಾಗುತ್ತದೆ. ಈ ಎಲ್ಲ ಕೆರೆಗಳ ಸ್ವಚ್ಛತೆ, ಸಣ್ಣಪುಟ್ಟ ದುರಸ್ತಿ, ಬಣ್ಣ ಬಳಿಯುವುದು ಇತ್ಯಾದಿ ಕಾರ್ಯ …
Read More »ಸಿಎಂ ವಿರುದ್ಧ ಟೀಕೆ ಮಾಡಿರುವುದರಿಂದ ಎಂಎಲ್ಸಿ ಬಿ ಕೆ ಹರಿಪ್ರಸಾದ್ ಅವರಿಗೆ ಡ್ಯಾಮೇಜ್ ಆಗಲಿದೆ:ದಿನೇಶ್ ಗುಂಡೂರಾವ್
ಮಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿರುವುದರಿಂದ ಎಂಎಲ್ಸಿ ಬಿ ಕೆ ಹರಿಪ್ರಸಾದ್ ಅವರಿಗೆ ಡ್ಯಾಮೇಜ್ ಆಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ಹರಿಪ್ರಸಾದ್ ಅವರು ಯಾರ ಬಗ್ಗೆ ಟೀಕೆ ಮಾಡ್ತಾರೆ, ಯಾಕೆ ಮಾಡ್ತಾರೆ ಅರ್ಥವಾಗ್ತಿಲ್ಲ. ಅವರು ಟೀಕೆ ಮಾಡಿದ ವೇದಿಕೆಯಲ್ಲಿ ಎಲ್ಲ ಪಕ್ಷದ ಮುಖಂಡರುಗಳಿದ್ದರು. ಈಗಾಗಲೇ ಹೈಕಮಾಂಡ್ ಅವರಿಗೆ ಏನೂ ಮಾತನಾಡಬೇಡಿ ಎಂದು ಹೇಳಿದೆ. ಆದರೆ ಅವರು ಒಬ್ಬ ರಾಜಕಾರಣಿಯಾಗಿ ಆ ರೀತಿ …
Read More »ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ 11ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಬೆಳಗಾವಿ: ಸಾಧಕರ ಸಾಧನೆ ಹಿಂದೆ ಪರಿಶ್ರಮ ಮತ್ತು ಕಣ್ಣೀರಿನ ಕಥೆ ಇರುತ್ತದೆ. ಎಷ್ಟೋ ರಾತ್ರಿಗಳನ್ನು ಹಗಲುಗಳನ್ನಾಗಿ ಪರಿವರ್ತಿಸಿಕೊಂಡಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಮುರುಗೇಶ ಎಚ್.ಎಂ. ಅಭಿಪ್ರಾಯಪಟ್ಟರು. ನಗರದ ಭಡಕಲ್ ಗಲ್ಲಿಯ ಬನಶಂಕರಿ ದೇವಸ್ಥಾನದ ಸಭಾಗೃಹದಲ್ಲಿ ರವಿವಾರ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ 11ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು. ಸಾಧನೆಯ ಮೆಟ್ಟಿಲು …
Read More »ಅಂಗಡಿಯೊಂದಕ್ಕೆ ಬಂದ 10 ಲಕ್ಷ ರೂ. ವಿದ್ಯುತ್ ಬಿಲ್.. ಮಾಲೀಕನಿಗೆ ಪವರ್ ಶಾಕ್!
ಚಿಕ್ಕಮಗಳೂರು : ಅಂಗಡಿ ಮಾಲೀಕರೊಬ್ಬರಿಗೆ ಒಂದು ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ವಿದ್ಯುಲ್ ಬಿಲ್ ಬಂದಿದ್ದು, ವಿದ್ಯುತ್ ಬಿಲ್ ಕಂಡು ಅಂಗಡಿ ಮಾಲೀಕರು ಬೆಚ್ಚಿಬಿದ್ದಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್ ನಲ್ಲಿರುವ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳಿಗೆ 10,26,054 ರೂಪಾಯಿ ವಿದ್ಯುತ್ ಬಿಲ್ ನೀಡಲಾಗಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000ರಿಂದ 4,500 ರೂಪಾಯಿ ಮಾತ್ರ ಬರುತ್ತಿತ್ತು. ಆದರೆ …
Read More »ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ಪಡೆದ ಉದ್ಯಮಿ ಪ್ರಶಾಂತ್ ಜೋರಾಪುರ ಅವರು
ಬೆಳಗಾವಿ: ಉದ್ಯೋಗ ಮಾಡೋದು ಎಲ್ಲರಿಗೂ ಗೊತ್ತು ಉದ್ಯೋಗ ಸುಮಾರು ಜನಾ ಮಾಡ್ತಾರೆ ಆದರೆ ಅದರಲ್ಲಿ ಸಾಧನೆ ಮಾಡಿದವರ ಸಂಖ್ಯೆ ಕಮ್ಮಿ ಇನ್ನೂ ಇವತ್ತಿನ ವಿಶ್ ಯಕ್ಕೆ ಬರೋದ ಆದ್ರೇ ನಿನ್ನೆ ಬೆಳಗಾವಿ ನಗರ ದಲ್ಲಿ ಡಿಕೆ ಮೋಟೀವ್ ಅಸೋಸಿಯೇಷನ್ ವತಿಯಿಂದ ಬೆಳಗಾವಿಯಲ್ಲಿ BUSINESS EXCELLENCE AWARD ಸಮಾರಂಭ ಆಯೋಜನೆ ಮಾಡಿ ದ್ದರು ಬೆಳ ಗಾವಿಯ ಎಲ್ಲ ಉದ್ಯಮಿ ಗಳು ಕೂಡ ಅದರಲ್ಲಿ ಭಾಗಿ ಯಾಗಿ ದ್ದರು ಹಾಗೂ ನಗರದ ಜನತೆ …
Read More »ಬುಮ್ರಾ ಅಭಿನಂದಿಸಿ ವಿಶೇಷ ಉಡುಗೊರೆ ನೀಡಿದ ಪಾಕ್ ವೇಗಿ ಶಾಹೀನ್ ಅಫ್ರಿದಿ! ವಿಡಿಯೋ
ಕೊಲೊಂಬೊ (ಶ್ರೀಲಂಕಾ): ಭಾರತ-ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ 2023ರ ಸೂಪರ್-4 ಪಂದ್ಯ ಮಳೆಯಿಂದಾಗಿ ಭಾನುವಾರ ಅಪೂರ್ಣಗೊಂಡಿತು. ಈ ಪಂದ್ಯ ಮೀಸಲು ದಿನವಾದ ಇಂದು ನಡೆಯಲಿದೆ. ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಆಕ್ರಮಣಕಾರಿ ಅರ್ಧಶತಕದಿಂದಾಗಿ ಭಾರತ 24.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಇಬ್ಬರು ಆರಂಭಿಕ ಬ್ಯಾಟರ್‌ಗಳು ಔಟಾದ ನಂತರ ಮೈದಾನದಲ್ಲಿ ಮಳೆ ಅಬ್ಬರಿಸಿತು. ಅಂತಿಮವಾಗಿ ಪಂದ್ಯವನ್ನು ಮೀಸಲು ದಿನದಂದು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಈ …
Read More »ನೈಜ ಘಟನೆಯ ‘ದೈಜಿ’ ಚಿತ್ರದಲ್ಲಿ ಬಹುಭಾಷಾ ನಟ ರಮೇಶ್ ಅರವಿಂದ್
ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂನಲ್ಲೂ ನಟಿಸಿರುವ ಬಹುಭಾಷಾ ನಟ ರಮೇಶ್ ಅರವಿಂದ್ ಅವರು ದೈಜಿ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ಸಿನಿಮಾಗಳ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈಜೋಡಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ‘ದೈಜಿ’ ಎಂದು ಇಡಲಾಗಿದ್ದು, ಇದಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ …
Read More »