Breaking News

Yearly Archives: 2023

ಕಾವೇರಿಗಾಗಿ ಭಿಕ್ಷಾ ಪಾತ್ರೆ ಹಿಡಿದು ರಕ್ಷಣಾವೇದಿಕೆಯಿಂದ ವಿಶೇಷ ಪ್ರತಿಭಟನೆ

ಮಂಡ್ಯ : ಮತ್ತೆ ತಮಿಳುನಾಡಿಗೆ ನೀರು ಬಿಡಲು ನಿಯಂತ್ರಣ ಸಮಿತಿ ಸೂಚನೆ ಹಿನ್ನೆಲೆಯಲ್ಲಿ ಮಂಡ್ಯದ ಸಂಜಯ ವೃತ್ತದಲ್ಲಿ ವಿಶೇಷವಾಗಿ ಭಿಕ್ಷೆ ಪಾತ್ರೆ ಹಿಡಿದು ರೈತರು ಪ್ರತಿಭಟನೆ ನಡೆಸಿದರು. ಹರಕಲು ಅಂಗಿ, ಚಡ್ಡಿ ಧರಿಸಿ, ಕೆಲವರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು. ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ವಿನೂತನ ಹೋರಾಟ ನಡೆದಿದ್ದು, ಮತ್ತೆ ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದ ಜನರು ಭಿಕ್ಷೆ ಎತ್ತಬೇಕಾಗುತ್ತೆ ಎಂದು ಅಣಕಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಈಗಾಗಲೇ ನಮ್ಮನ್ನ …

Read More »

ಬೆಂಗಳೂರಿನ 12 ಆರ್​​ಟಿಒ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ

ಬೆಂಗಳೂರು: ವ್ಯಾಪಕ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರ ನೇತೃತ್ವದ ತಂಡ ನಗರದಲ್ಲಿನ 12 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್​ಟಿಓ) ಮೇಲೆ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಆರ್​​ಟಿಓ ಕಚೇರಿಗಳಲ್ಲಿ ನಿರಂತರ ಅವ್ಯವಹಾರ ಹಾಗೂ ಅಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆ, ಗೌಪ್ಯ ಮಾಹಿತಿ ಆಧರಿಸಿ ಬುಧವಾರ ಖುದ್ದು ಲೋಕಾಯುಕ್ತ ನ್ಯಾಯಮೂರ್ತಿಗಳು ಆರ್​​ಟಿಓ ಕಚೇರಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಜಯನಗರ ಹಾಗೂ ರಾಜಾಜಿನಗರದ ಆರ್​​ಟಿಓ …

Read More »

ಬೈಕ್‌ನಲ್ಲಿ ಅವಿತುಕೊಂಡಿದ್ದ ನಾಗಪ್ಪಾ

ಬೈಕ್‌ನಲ್ಲಿ ಅವಿತುಕೊಂಡಿದ್ದ ಉರಗವನ್ನು ರಕ್ಷಣೆ ಮಾಡಿರುವ ಘಟನೆ ವಿಜಯಪುರ ನಗರ್ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಡೆದಿದೆ. ಉರಗ ಪ್ರೇಮಿ ಉಮೇಶ ಎಂಬುವರು ಉರಗವನ್ನು ರಕ್ಷಣೆ ಮಾಡಿದರು. ಇನ್ನೂ ಜಿಲ್ಲಾಡಳಿತ ಕಚೇರಿಯ ಆವರಣದಲ್ಲಿ ನಿಲ್ಲಿಸಿದ ಬೈಕ್‌‌ನಲ್ಲಿ ಹಾವು ಅವಿತುಕೊಂಡಿತ್ತು‌. ತಕ್ಷಣವೇ ಬೈಕ್‌ನಲ್ಲಿದ ಹಾವನ್ನು ಉಮೇಶ ಹೊರಗಡೆಗೆ ಜಾಗೃತವಾಗಿ ತೆಗೆದಿದ್ದಾನೆ. ಅಲ್ಲದೇ, ಇದೇ ವೇಳೆಯಲ್ಲಿ ಉರಗ ರಕ್ಷಕ ಉಮೇಶ ಹಾವನ್ನು ಖಾಲಿ ಡಬ್ಬದಲ್ಲಿ ತೆಗೆದುಕೊಂಡು ನಗರದ ಹೊರವಲಯದಲ್ಲಿರುವ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ ಇವರ …

Read More »

ಕಡೋಲಿ ಗ್ರಾಮದಲ್ಲಿ ಪ್ರೌಡಶಾಲೆ ಸಶ್ಯ ಶಾಮಲಾ ಕಾರ್ಯಕ್ರಮ

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿನ ಸರಕಾರಿ ಕನ್ನಡ ಮಾದ್ಯಮದ ಪ್ರೌಡಶಾಲೆ ಶಾಲೆಯಲ್ಲಿ ಜಿಲ್ಹಾ ಮಟ್ಟದ ಸಶ್ಯ ಶಾಮಲಾ ಕಾರ್ಯಕ್ರಮ ಜರುಗಿತು ಸಸಿಗೆ ನಿರು ಹಾಕುವ ಮುಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಯಿತು.ಶಾಲೆಯಲ್ಲಿನ ಕಾರ್ಯನಿರತ ಶಿಕ್ಷಕಿ ಶ್ರೀಮತಿ ಎಮ್ಮ.ಆಯ್.ಬುಳ್ಳಾ ಇವರಿಗೆ ಜಿಲ್ಹಾ ಆದರ್ಶ ಶಿಕ್ಷಕಿ ಪುರಸ್ಕಾರ ದೊರೆತ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು. ಪ್ಲೊ ಕೆಪಿಸಿಸಿ ಸದಸ್ಯ ಮಲಗೌಡ ಅವರು ಮಾತನಾಡುತ್ತಾ ಇವತ್ತು ಇಡಿ ವಿಶ್ವದಲ್ಲಿಯೇ ಪರಿಸರ ರಕ್ಷಣೆ ಒಂದು ಗಂಭಿರ ಪ್ರಶ್ನೆಯಾಗಿದೆ …

Read More »

ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷಿ ದೇವಿಗೆ ಶ್ರಾವಣ ಮಾಸದ ಕೊನೆಯ ಮಂಗಳವಾರ ಬಳೆಯ ಅಲಂಕಾರ

ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷಿ ದೇವಿಗೆ ಶ್ರಾವಣ ಮಾಸದ ಕೊನೆಯ ಮಂಗಳವಾರ ಬಳೆಯ ಅಲಂಕಾರ ಮಾಡಲಾಗಿದ್ದು, ಭಕ್ತರು ಶ್ರದ್ಧಾಭಕ್ತಿಯಿಂದ ದೇವಿಗೆ ಉಡಿ ತುಂಬಿದರು. ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತ ಸಾಗರ ದೇವಸ್ಥಾನಕ್ಕೆ ಆಗಮಿಸಿತ್ತು. ಬೆಳಗ್ಗೆ 4 ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರು ದೇವಿಗೆ ಉಡಿ ತುಂಬಿದರು. ಶ್ರಾವಣ ಮಾಸದ ಕೊನೆಯ ಮಂಗಳವಾರ ಪ್ರತಿ ವರ್ಷ ಗ್ರಾಮಸ್ಥರು ಉಡಿ ತುಂಬುವ ಸಂಪ್ರದಾಯವಿದ್ದು, ಅದರಂತೆ ಗ್ರಾಮಸ್ಥರು ದೇವಿಗೆ ಉಡಿ ತುಂಬಿ ಪುನೀತರಾದರು. …

Read More »

ಕಸ ಎಸೆಯದಂತೆ ಹೇಳಿದ್ದಕ್ಕೆ ಪೌರಕಾರ್ಮಿಕರ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಾರವಾರ (ಉತ್ತರಕನ್ನಡ): ಕಸ ಎಸೆಯದಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬ ರಸ್ತೆ ಬದಿ ಕಸ ಹಾಕಲು ಮುಂದಾಗಿದ್ದಾನೆ. ಈ ವೇಳೆ ಕಸ ಹಾಕದಂತೆ ತಡೆದ ಪೌರಕಾರ್ಮಿಕನಿಗೆ ಭಯಂಕರವಾಗಿ ಥಳಿಸಲಾಗಿದೆ. ಚೇತನಕುಮಾರ್ ಕೊರಾರ ಹಲ್ಲೆಗೊಳಗಾದ ಪೌರಕಾರ್ಮಿಕ ಆಗಿದ್ದಾನೆ. ಈ ಸಂಬಂಧ ಪೌರಕಾರ್ಮಿಕರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ಕೂಡಾ ನಡೆಸಿದ್ದಾರೆ. ಹಲ್ಲೆಗೊಳಗಾದ ಚೇತನ್​ ಕುಮಾರ್​ ಕಾರವಾರ …

Read More »

ಐಫೋನ್​ 15 ಪ್ರೊ, ಪ್ರೊ ಮ್ಯಾಕ್ಸ್​ ಬಿಡುಗಡೆ: 48 MP ಕ್ಯಾಮರಾ, ಯುಎಸ್‌ಬಿ-ಸಿ ಟೈಪ್ ಚಾರ್ಜರ್‌ ಇನ್ನೂ ಏನೆಲ್ಲಾ!

ಕ್ಯಾಲಿಫೋರ್ನಿಯಾ (ಯುಎಸ್‌ಎ): ಆಯಪಲ್ ಕಂಪೆನಿಯು ತನ್ನ ಪ್ರಧಾನ ಕಚೇರಿ ಇರುವ ಅಮೆರಿಕದ ಆಯಪಲ್ ಪಾರ್ಕ್ ಕ್ಯುಪರ್ಟಿನೊದಲ್ಲಿ ಮಂಗಳವಾರ ‘ವಾಂಡರ್‌ಲಸ್ಟ್’ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಆಯಪಲ್‌ ಮೊಬೈಲ್‌ಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಟೆಕ್ ದೈತ್ಯ ತನ್ನ ಹೊಸ, ಉನ್ನತ ಮಟ್ಟದ ಐಫೋನ್‌ಗಳನ್ನು (iPhone 15 Pro ಮತ್ತು 15 Pro Max) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ಗಳಲ್ಲಿ ಹೆಚ್ಚು ಪ್ರೀಮಿಯಂ ಅನ್ನಿಸುವ ವಸ್ತುಗಳನ್ನು ಬಳಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದೇ ಮೊದಲ …

Read More »

ಬೀದರ್​: ಕುಡಿಯಲು ಹಣ ನೀಡುವಂತೆ ಪೀಡಿಸಿ ಹೆತ್ತ ತಾಯಿಯನ್ನೇ ಕೊಂದ ಪುತ್ರ

ಬೀದರ್: ಹೆತ್ತ ತಾಯಿಯನ್ನೇ ಮಗ ಕೊಡಲಿಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದ ಚೆಟ್ಟಿ ಗಲ್ಲಿಯಲ್ಲಿ ಮಂಗಳವಾರ ನಡೆದಿದೆ. ಶಂಕುತಲಾ ರಾಜಕುಮಾರ ಸಿಂಧೆ (55) ಹತ್ಯೆಯಾದವರು. ಮಗ ದೀಪಕ ಆರೋಪಿ. ದೀಪಕ ಕುಡಿತದ ಚಟಕ್ಕೆ ದಾಸನಾಗಿದ್ದ. ಪ್ರತಿನಿತ್ಯ ಹಣ ನೀಡುವಂತೆ ತಾಯಿಯೊಂದಿಗೆ ಜಗಳವಾಡುತ್ತಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮಂಗಳವಾರವೂ ಸಹ ಕುಡಿಯಲು ಹಣ ನೀಡುವಂತೆ ಜಗಳ ಮಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿದೆ. ಕುಪಿತ ಆರೋಪಿ ಕೊಡಲಿಯಿಂದ ತಾಯಿಯ …

Read More »

ಗಣೇಶ ಹಬ್ಬಕ್ಕೆ ವಿಶೇಷ ಬಸ್ ಗಳ ವ್ಯವಸ್ಥೆ

ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಘೋಷಣೆ ಬೆನ್ನಲ್ಲೆ NWKRTC ಸಹ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಬಿಡುವುದಾಗಿ ತಿಳಿಸಿದೆ.  ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC)ಯಿಂದ ಗೌರಿ ಗಣೇಶದ ಮುಗಿಸಿ ಉತ್ತರ ಕರ್ನಾಟಕದಿಂದ ತಮ್ಮ ಕೆಲಸದ ಊರುಗಳಿಗೆ ತೆರಳುವವರಿಗೆ ನೆರವಾಗಲೆಂದು 500ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ. ಸೋಮವಾರ ಗಣೇಶ ಚತುರ್ಥಿ ಇದೆ. ಅಲ್ಲದೇ ಶನಿವಾರ, ಭಾನುವಾರ ವಾರಾಂತ್ಯ ಇರುವುದರಿಂದ ಬಹುತೇಕ ಮಂದಿ …

Read More »

ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಅವರ ತಂದೆ, ತಾಯಿ ಇಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದರು

ರಾಯಚೂರು: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ತಂದೆ ಯಶವೀರ್ ಸುನಕ್, ತಾಯಿ ಉಷಾ ಸುನಕ್ ಹಾಗೂ ಇನ್ಫೋಸಿಸ್​​ ಫೌಂಡೇಶನ್​ ಸಂಸ್ಥಾಪಕಿ ಸುಧಾ ಮೂರ್ತಿ ಇಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ್ದರು. ಆರಂಭದಲ್ಲಿ ಗ್ರಾಮದ ಅಧಿದೇವತೆ ಶ್ರೀಮಂಚಾಲಮ್ಮ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಯರ ಮೂಲಬೃಂದಾವನ ದರ್ಶನ ಪಡೆದು, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ಮಂತ್ರಾಲಯಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ​ ರಿಷಿ ಸುನಕ್‌ …

Read More »