Breaking News

Yearly Archives: 2023

ಭೂಸ್ವಾಧೀನಾಧಿಕಾರಿ, ಉಪತಹಶೀಲ್ದಾರ್​ಗೆ ತಲಾ 4 ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ

ತುಮಕೂರು : ಜಮೀನು ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ತಬಸುಮ್​ ಜಹೇರಾ ಹಾಗೂ ಬೆಳ್ಳಾವಿ ಉಪ ತಹಶೀಲ್ದಾರ್ ಶಬ್ಬೀರ್​ ಅವರಿಗೆ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ಇಲ್ಲಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಧೀಶ ರಾಮಲಿಂಗೇಗೌಡ ಈ ತೀರ್ಪು ನೀಡಿದ್ದಾರೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಜಯರಾಮ ಎಂಬುವರು 2017ರಲ್ಲಿ …

Read More »

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಿಜೆಪಿ ಪಟ್ಟು: ಅಹೋರಾತ್ರಿ ಪ್ರತಿಭಟನೆಗೆ ನಿರ್ಧಾರ

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ವಿಳಂಬ ಮಾಡುತ್ತಿರುವದನ್ನು‌ ಖಂಡಿಸಿ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ನಿಯೋಗ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದರು. ಈದ್ಗಾ ಮೈದಾನಲ್ಲಿ ಅನುಮತಿ ವಿಳಂಬಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಅರವಿಂದ ಬೆಲ್ಲದ ನೇತೃತ್ವದ ನಿಯೋಗ ಕೂಡಲೇ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ಇಲ್ಲಿಂದ ಎದ್ದು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈದ್ಗಾ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಮುಂಚೆಯೇ ಅನುಮತಿ ನೀಡಬೇಕು. ಪಾಲಿಕೆ …

Read More »

ಬಳ್ಳಾರಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ ಪಲ್ಟಿಯಾಗಿ 9 ಜನರಿಗೆ ಗಾಯ

ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ 9ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ಶಿವಪುರದ ಬಳಿ ನಡೆದಿದೆ. ಬಳ್ಳಾರಿಯಿಂದ ಹಡ್ಲಗಿ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಸಾರಿಗೆ ಬಸ್‌ ರಸ್ತೆ ಬದಿಯ ಗದ್ದೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಸುಮಾರು 50 ಕ್ಕೂ ಹೆಚ್ಚು ಜನರು ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದು, ಅದರಲ್ಲಿ 9 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೋಕಾ ಆಸ್ಪತ್ರೆ ಹಾಗೂ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೋಕಾ …

Read More »

ಇಂದಿರಾ ಕ್ಯಾಂಟಿನ್​ಗಳ ಯಾವುದೇ ಬಿಲ್​ಗಳನ್ನು ಬಾಕಿ ಉಳಿಸಿಕೊಂಡಿಲ್ಲ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌

ಬೆಂಗಳೂರು: ಇಂದಿರಾ ಕ್ಯಾಂಟಿನ್​ಗಳ ಬಿಲ್​ಗಳನ್ನು ಕಾನೂನಾತ್ಮಕವಾಗಿ ಪಾವತಿ ಮಾಡಲಾಗಿದೆ. ಯಾವುದೇ ರೀತಿಯ ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿಲ್ಲ. ಕೆಲವು ಸಣ್ಣಪುಟ್ಟ ಬಿಲ್‌ಗಳು ಮಾತ್ರ ಬಾಕಿ ಇದ್ದು, ಬಹುತೇಕ ಕ್ಲಿಯರ್ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಸ್ಪಷ್ಟಪಡಿಸಿದರು. ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಹಾಗೂ ಟಿಕೆಟ್ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಚೈತ್ರ ಕುಂದಾಪುರ ಅವರ ಆರೋಪಕ್ಕೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪ್ರತಿಕ್ರಿಯಿಸಿರುವ ತುಷಾರ್ ಗಿರಿನಾಥ್‌, 2019ರ ರಾಜ್ಯ ಲೆಕ್ಕ ಪರಿಶೋಧನಾ ಆಡಿಟ್ …

Read More »

ಸರಕು ಸಾಗಣೆಯಲ್ಲಿ ಹೆಚ್ಚು ಆದಾಯ ಗಳಿಸಿ ದಾಖಲೆ ಮಾಡಿದ ನೈರುತ್ಯ ರೈಲ್ವೆ

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಏಪ್ರಿಲ್ – ಆಗಸ್ಟ್ 2023ರ ಅವಧಿಯಲ್ಲಿ ಸರಕು ಸಾಗಣೆಯಲ್ಲಿ ಹೆಚ್ಚು ಆದಾಯ ಗಳಿಸಿ ದಾಖಲೆ ಮಾಡಿದೆ.‌ ನೈರುತ್ಯ ರೈಲ್ವೆಯು 19.27 ದಶಲಕ್ಷ ಟನ್ ಸರಕುಗಳನ್ನು ಲೋಡ್ ಮಾಡಿ ರೂ. 1,909.77 ಕೋಟಿ ಆದಾಯ ಗಳಿಸಿದೆ. ಇದಲ್ಲದೆ 8.27 ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಲೋಡ್ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 37.6 ರಷ್ಟು ಹೆಚ್ಚಾಗಿದೆ. ಇದರ ಜೊತೆಗೆ ನ 270 ಆಟೋಮೊಬೈಲ್ ರೇಕ್​ಗಳನ್ನು …

Read More »

ಮರಾಠ ಮೀಸಲಾತಿಗೆ ಸಿಎಂ ಶಿಂಧೆ ಭರವಸೆ:

ಜಲ್ನಾ (ಮಹಾರಾಷ್ಟ್ರ): ಮರಾಠಾ ಮೀಸಲಾತಿಯ ಬೇಡಿಕೆಗಾಗಿ ಜಲ್ನಾದಲ್ಲಿ ಕಳೆದ 16 ದಿನಗಳಿಂದ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಕೊನೆಗೊಂಡಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ನೀಡದ ಭರವಸೆ ಮೇರೆಗೆ ಧರಣಿ ನಡಸುತ್ತಿದ್ದ ಮನೋಜ್ ಜಾರಂಜ್ ಅವರು ಉಪವಾಸವನ್ನು ಹಿಂಪಡೆದಿದ್ದಾರೆ. ಸಿಎಂ ಶಿಂಧೆ ಅವರ ಕೈಯಿಂದ ಮನೋಜ್​ ಅವರು ಜ್ಯೂಸ್​ ಕುಡಿಯುವ ಮೂಲಕ ಉಪವಾಸ ಕೊನೆಗೊಂಡಿತು. ಈ ವೇಳೆ ಮಾತನಾಡಿದ ಮನೋಜ್ ಜಾರಂಗೆ, ಮರಾಠ ಮೀಸಲಾತಿ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ …

Read More »

ತಮಿಳುನಾಡು ಸರ್ಕಾರ ಪ್ರತಿ ಮನೆಯೊಡತಿಗೆ ತಲಾ ₹1000 ರೂ. ನೀಡುವ ಯೋಜನೆಯನ್ನು ನಾಳೆ (ಸೆ. 15 ರಂದು) ಜಾರಿಗೆ ತರಲಿದೆ.

ಚೆನ್ನೈ (ತಮಿಳುನಾಡು): ರಾಜ್ಯದ ಕಾಂಗ್ರೆಸ್​ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಂತೆಯೇ ತಮಿಳುನಾಡು ಸರ್ಕಾರ ಇದೀಗ ಪ್ರತಿ ಕುಟುಂಬದ ಅರ್ಹ ಯಜಮಾನಿಗೆ ಪ್ರತಿ ತಿಂಗಳು ತಲಾ 1000 ರೂ ಆರ್ಥಿಕ ನೆರವು ನೀಡಲು ಮುಂದಾಗಿದೆ. ಇದಕ್ಕಾಗಿ ಆ ರಾಜ್ಯದ 1.06 ಕೋಟಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಬೃಹತ್ ಯೋಜನೆಗೆ ನಾಳೆ ( ಸೆ.15 ರಿಂದ) ಚಾಲನೆ ನೀಡಲಿದೆ. ಈ ಬಗ್ಗೆ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, …

Read More »

ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂಬ ಆರೋಪ!

ಹಾವೇರಿ: ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಯ ಥಳಿಸಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನ ರಾಮಪ್ಪ ಹರಿಜನ ಎಂದು ಗುರುತಿಸಲಾಗಿದೆ. ಡಿಶ್ ಟಿವಿ ಕೇಬಲ್ ಕತ್ತರಿಸಿದ ಆರೋಪದ ಹಿನ್ನೆಲೆ ವ್ಯಕ್ತಿಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಏರಿಯಾದಲ್ಲಿ ಕೆಇಬಿ ಸಿಬ್ಬಂದಿ ಮರದ ಟೊಂಗೆಗಳನ್ನ ಕತ್ತರಿಸಿ ಹೋಗಿದ್ದಾರೆ. ಅದರ ಜೊತೆಗೆ ಕೇಬಲ್ ಟಿವಿ ವೈಯರ್ ಕತ್ತರಿಸಿ ಹೋಗಿದ್ದಾರೆ. …

Read More »

ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದೆ. ಒಟ್ಟು 161 ತೀವ್ರ ಮತ್ತು 34 ಸಾಧಾರಣ ಬರಪೀಡಿತ ತಾಲೂಕುಗಳೆಂದು ಆದೇಶ ಹೊರಡಿಸಿದೆ.

ಬೆಂಗಳೂರು : ಕೊನೆಗೂ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದೆ. 161 ತಾಲೂಕುಗಳನ್ನು ತೀವ್ರ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ.   2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದ್ದು, ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳು ಮತ್ತು 34 ಸಾಧಾರಣ ಬರಪೀಡಿತ ತಾಲೂಕುಗಳೆಂದು ತಕ್ಷಣದಿಂದ ಜಾರಿಗೆ ಬರುವಂತೆ …

Read More »

ರಾಜ್ಯ- ರಾಷ್ಟ್ರಕ್ಕೆ ಕೆಲ ಅವಘಡಗಳು ಎದುರಾಗಲಿವೆ ಎಂದು ಕೋಡಿಮಠ ಶ್ರೀ ಭವಿಷ್ಯ ನುಡಿದಿದ್ದಾರೆ.

ದಾವಣಗೆರೆ : ಕಾರ್ತಿಕ ಮಾಸ, ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೆಲ ಅವಘಡಗಳು ಎದುರಾಗಲಿವೆ ಎಂದು ಕೋಡಿಮಠ ಮಹಾಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯ ರಾಷ್ಟ್ರದಲ್ಲಿ ನಡೆಯುವ ಅವಘಡಗಳಿಂದ ಪಾರು ಮಾಡಿದ್ರೇ ಮುಂದಿನ ಭವಿಷ್ಯ ಹೇಳುವೆ, ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರುತ್ತದೆ. ಆತಂಕ ಪಡುವ ಅಗತ್ಯವಿಲ್ಲ ಎಂದರು. ಅನೇಕ ತಪ್ಪು ಒಪ್ಪುಗಳು ಪ್ರಾಣಿಗಳಲ್ಲಾಗುತ್ತಿವೆ ಹಾಗೂ …

Read More »