Breaking News

Yearly Archives: 2023

ಬ್ಯಾರಲ್​ ಬಳಸಿ ಸೇತುವೆ ನಿರ್ಮಾಣ ಮಾಡಿದ ರೈತರು.

ಬಾಗಲಕೋಟೆ : ರೈತರು ಮನಸ್ಸು ಮಾಡಿದರೆ ಯಾವ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಬಾಗಲಕೋಟೆಯ ಜಮಖಂಡಿ ರೈತರು ತೋರಿಸಿಕೊಟ್ಟಿದ್ದಾರೆ. ಇಲ್ಲಿನ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್​ ಸೇತುವೆ ನಿರ್ಮಾಣ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ದಶಕಗಳಿಂದ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮಸ್ಥರು ಎದುರಿಸುತ್ತಿದ್ದ ಸಮಸ್ಯೆಗೆ ರೈತರು ಪರಿಹಾರ ಕಂಡುಕೊಂಡಿದ್ದಾರೆ. ರೈತರಿಂದ ಬ್ಯಾರಲ್​ ಸೇತುವೆ ನಿರ್ಮಾಣ : ಗ್ರಾಮದ ರೈತರು ಸ್ವತಃ ತಾವೇ ಹಣ ಸಂಗ್ರಹಿಸಿ ನದಿ ದಾಟಲು ಬ್ಯಾರಲ್ ಸೇತುವೆ …

Read More »

ಹಿಂದಿನ ಸರ್ಕಾರಗಳೂ ತಮಿಳುನಾಡಿಗೆ ನೀರು ಬಿಟ್ಟಿವೆ. ಈಗ ಮಾತಾಡುವವವರೂ ಆಗ ನೀರು ಬಿಟ್ಟಿದ್ದರು.: ಸತೀಶ್​​ ಜಾರಕಿಹೊಳಿ

ಬೆಳಗಾವಿ: ಹಿಂದಿನ ಸರ್ಕಾರಗಳೂ ತಮಿಳುನಾಡಿಗೆ ನೀರು ಬಿಟ್ಟಿವೆ. ಈಗ ಮಾತಾಡುವವವರೂ ಆಗ ನೀರು ಬಿಟ್ಟಿದ್ದರು. ಹಾಗಾಗಿ, ಆದೇಶ ಯಾರು ಮಾಡಿದ್ದಾರೋ ಅವರ ವಿರುದ್ಧ ಪ್ರತಿಭಟನೆ ಮಾಡಬೇಕು. ಆದರೆ, ಇದಕ್ಕೆ ತದ್ವಿರುದ್ಧವಾಗಿ ನಮ್ಮ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​​ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡಿದೆ. 25 …

Read More »

ನಾಳೆ ಕರ್ನಾಟಕ ಬಂದ್: ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಬಂದೋಬಸ್ತ್.. ಯಾವ ಸೇವೆ ಇರುತ್ತೆ, ಯಾವುದಿರಲ್ಲ?

ಬೆಂಗಳೂರು : ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಂದ್​ಗೆ ಕರೆ ನೀಡಿದ ಬೆನ್ನಲ್ಲೇ ನಾಳೆ ಕರ್ನಾಟಕ ಬಂದ್​ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದು, ಬಹುತೇಕ ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆ ಅಂಗಡಿ-ಮುಂಗಟ್ಟು, ಕೈಗಾರಿಕೆ ಹಾಗೂ ಸಿನಿಮಾ ಥಿಯೇಟರ್ ಸೇರಿದಂತೆ ಬಹುತೇಕ ಸೇವೆಗಳು ಸ್ತಬ್ಧವಾಗುವ ಸಾಧ್ಯತೆಯಿದೆ. ಕಾವೇರಿ ವಿಚಾರವಾಗಿ ರೈತಪರ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಯಶಸ್ವಿಯಾಗಿತ್ತು. ಇದಕ್ಕೂ ಮುನ್ನ ಮಂಡ್ಯ ಬಂದ್ ಸಹ ಯಶಸ್ವಿಯಾಗಿತ್ತು. ಕನ್ನಡ ಒಕ್ಕೂಟದ …

Read More »

ನಾಳೆ ಕರ್ನಾಟಕ ಬಂದ್​​ಗೆ ಸಕಲ ಸಿದ್ಧತೆ ನಡೆದಿದೆ. ಕನ್ನಡ ಚಿತ್ರರಂಗದಿಂದ ಹೋರಾಟಕ್ಕೆ ಬೆಂಬಲ

ನಾಳೆ ಕರ್ನಾಟಕ ಬಂದ್​​ಗೆ ಸಕಲ ಸಿದ್ಧತೆ ನಡೆದಿದೆ. ಕನ್ನಡ ಚಿತ್ರರಂಗದಿಂದ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಕಳೆದ ಮಂಗಳವಾರ ಕಾವೇರಿಗಾಗಿ ನಮ್ಮ ರಾಜ್ಯ ರಾಜಧಾನಿ ಬಂದ್ ಆಗಿತ್ತು. ನಾಳೆ ಕರ್ನಾಟಕ ಬಂದ್​​ಗೆ ಸಕಲ ಸಿದ್ಧತೆ ನಡೆದಿದೆ. ಕನ್ನಡ ಒಕ್ಕೂಟಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್​​ಗೆ ಚಿತ್ರರಂಗ ಕೈ ಜೋಡಿಸಿದೆ. ಹಿರಿಯ ನಟ ಡಾ. ಶಿವರಾಜ್​ಕುಮಾರ್ ನೇತೃತ್ವದಲ್ಲಿ ಇಡೀ ಚಿತ್ರರಂಗ ನಾಳೆಯ ಹೋರಾಟದಲ್ಲಿ ಭಾಗಿಯಾಗಲಿದೆ. ಶೂಟಿಂಗ್ ಜೊತೆ ಥಿಯೇಟರ್ ಕೂಡ ಕ್ಲೋಸ್ ಆಗಲಿವೆ. …

Read More »

ಕಾವೇರಿ ನೀರು ಬಿಡುಗಡೆ ವಿರುದ್ಧ ಕರ್ನಾಟಕ ಬಂದ್ ಅಗತ್ಯವಿಲ್ಲ: ಗೃಹ ಸಚಿವ ಡಾ.‌ಜಿ ಪರಮೇಶ್ವರ್

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್ ಮಾಡುವ ಅಗತ್ಯವಿಲ್ಲ ಎಂದು‌ ಗೃಹ ಸಚಿವ ಡಾ.‌ ಜಿ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನ್ಯಾಯಾಲಯ ಕೂಡ ಬಂದ್ ಮಾಡಬಾರದು ಎಂದು ಹೇಳಿದೆ. ಆದರೆ, ಪ್ರತಿಭಟನೆ ಮಾಡಬಹುದು. ಪ್ರತಿಭಟನೆ ಅವರ ಹಕ್ಕು.‌ ಸಂಘಟನೆಗಳಿಗೆ ಕರ್ನಾಟಕ ಬಂದ್ ಬೇಡ ಎಂದು ಮನವಿ ಮಾಡಿದ್ದೇವೆ. ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಬಂದ್​ಗೆ ಬೆಂಬಲ ಕೊಡುತ್ತಿದ್ದಾವೆ. ಇಂತಹ ಸಂದರ್ಭದಲ್ಲಿ ರಾಜಕೀಯ …

Read More »

ನಾಳೆ ಕರ್ನಾಟಕ ಬಂದ್​ ಹಿನ್ನೆಲೆ ಬೆಂಗಳೂರಲ್ಲಿ ಇಂದು ಮಧ್ಯರಾತ್ರಿಯಿಂದಲೇ 144 ಸೆಕ್ಷನ್​ ಜಾರಿ

ನಾಳೆ ಕರ್ನಾಟಕ ಬಂದ್​ ಹಿನ್ನೆಲೆ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಇಂದು ಮಧ್ಯರಾತ್ರಿಯಿಂದಲೇ 144 ಸೆಕ್ಷನ್​ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ‌ ದಯಾನಂದ ಮಾಹಿತಿ ನೀಡಿದ್ದಾರೆ. ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನ ಖಂಡಿಸಿ ವಿವಿಧ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್​ಗೆ ಕರೆ ನೀಡಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಬಿಗಿ ಪೊಲೀಸ್ ಭದ್ರತೆ ಕೈಗೊಂಡಿದ್ದರು. ತಮಿಳು ಭಾಷಿಕರು ವಾಸವಿರುವ ಪ್ರದೇಶ, ಚಿತ್ರಮಂದಿರ ಸೇರಿದಂತೆ ಸೂಕ್ಷ್ಮ ಹಾಗೂ …

Read More »

ಕಾವೇರಿಗಾಗಿ ನಾಳೆ ರಾಜ್ಯ ಬಂದ್.. ದಕ್ಷಿಣ ಕನ್ನಡದಲ್ಲಿ ಇಲ್ಲ ಬೆಂಬಲ

ಮಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ವಿಚಾರದಲ್ಲಿ ಸರ್ಕಾರದ ನಿಲುವನ್ನು ವಿರೋಧಿಸಿ ನಾಳೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ಆದರೆ, ಕರ್ನಾಟಕ ಬಂದ್​ಗೆ ರಾಜ್ಯದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಕಾವೇರಿ ಹೋರಾಟದ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸರ್ಕಾರದ ಮನವಿಗೂ ಮಣಿಯದೇ ಕನ್ನಡ ಪರ ಮತ್ತು ರೈತ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಬಂದ್ ನಿರ್ಧರವನ್ನು ಕೈಬಿಡಲು ಜಲಸಂಪನ್ಮೂಲ ಸಚಿವರೂ ಆಗಿರುವ …

Read More »

ನಿನ್ನೆ ಕೊಲೆ ಮಾಡಿ ಇಂದು ನೇಣಿಗೆ ಶರಣಾದ ವಾಚಮನ್

ಯುವಕನೊಬ್ಬನ ಭೀಕರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಹುಬ್ಬಳ್ಳಿಯ ಸಿಲ್ವರ್ ಟೌನ್‌‌ನಲ್ಲಿ ಮೌಲಾಲಿ ಎನ್ನುವ ಯುವಕನ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದ ಆರೋಪಿ ಪರಸಪ್ಪ‌, ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಗಿಡದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಸಪ್ಪ (50) ನೇಣಿಗೆ ಶರಣಾದ ಆರೋಪಿಯಾಗಿದ್ದು, ನಿನ್ನೆ ಹುಬ್ಬಳ್ಳಿಯ ಸಿಲ್ವರ್ ಟೌನ್‌‌ನಲ್ಲಿ ಮೌಲಾಲಿ ಎನ್ನುವ ಯುವಕನ ಕೊಲೆ ಮಾಡಿದ ಆರೋಪ ಈತನ ಮೇಲಿತ್ತು. ಪೊಲೀಸರು ಈತನನ್ನು ವಶಕ್ಕೆ …

Read More »

ಕಾರವಾರಕ್ಕೆ ಬಂದ ಟುಪೆಲೊವ್-142 ಯುದ್ಧವಿಮಾನ

ಕಾರವಾರ: ಬಹುನಿರೀಕ್ಷಿತ ಟುಪೆಲೊವ್-142 ಯುದ್ಧ ವಿಮಾನ ಕೊನೆಗೂ ಕಾರವಾರಕ್ಕೆ ಆಗಮಿಸಿದೆ. ನಗರದ ಚಾಪೆಲ್ ಯುದ್ಧ ನೌಕೆ ಸಂಗ್ರಹಾಲಯದ ಬಳಿಯೇ ಸಿದ್ಧತೆ ನಡೆದಿದೆ. ನಿರೀಕ್ಷೆಯಂತೆ ಜೋಡಣೆ ನಡೆದಲ್ಲಿ ತಿಂಗಳೊಳಗೆ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಮತ್ತೊಂದು ಗರಿ‌ ಮೂಡಲಿದೆ. ಕರಾವಳಿಯ ಹೆಬ್ಬಾಗಿಲು ಉತ್ತರಕನ್ನಡ ಜಿಲ್ಲೆಯ ಕಾರವಾರ ಅಂದಾಕ್ಷಣ ಮೊದಲು ನೆನಪಾಗೋದೇ ಇಲ್ಲಿನ ವಿಶಾಲವಾದ ಕಡಲತೀರ. ಜೊತೆಗೆ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾದ ಕದಂಬ ನೌಕಾ ನೆಲೆ. ತಾಲೂಕಿನ ಅರಗಾ ಗ್ರಾಮದ ಬಳಿ ಇರುವ ಕದಂಬ ನೌಕಾನೆಲೆ …

Read More »

ಬಾಂಬ್​ನಂತೆ ಸಿಡಿದ ಜಾರ್ಜಿಂಗ್​ ಇಟ್ಟ ಮೊಬೈಲ್ ಫೋನ್​: ಮನೆಗೆ ಭಾರಿ ಹಾನಿ, ಮೂವರಿಗೆ ತೀವ್ರ ಗಾಯ

(ಮಹಾರಾಷ್ಟ್ರ) : ಮೊಬೈಲ್​ಗಳು ಸ್ಫೋಟಗೊಳ್ಳುತ್ತಿರುವ ವರದಿಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಮಹಾರಾಷ್ಟ್ರದ ನಾಸಿಕ್​ನಲ್ಲೂ ಇಂಥದ್ದೊಂದು ಸುದ್ದಿಯಾಗಿದೆ. ಜಾರ್ಜ್​ ಮಾಡುವ ವೇಳೆ ಮೊಬೈಲ್​ ಬಾಂಬ್​ನಂತೆ ಸಿಡಿದು ಇಡೀ ಮನೆಯನ್ನು ಧ್ವಂಸ ಮಾಡಿದೆ. ಮನೆಯಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿಟಕಿ, ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಲ್ಲದೇ, ಸುತ್ತಮುತ್ತ ಮನೆಗಳಿಗೂ ಹಾನಿಯಾಗಿದೆ. ಮೊಬೈಲ್ ಫೋನ್ ಸ್ಫೋಟದಿಂದಾಗಿ ಇಷ್ಟು ದೊಡ್ಡ ಪ್ರಮಾಣದ ಹಾನಿ ಸಂಭವಿಸಿರುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮೂವರ ಪೈಕಿ ಒಬ್ಬರ ಸ್ಥಿತಿ …

Read More »