Breaking News

Yearly Archives: 2023

ಆಸ್ತಿ ತೆರಿಗೆ ಠರಾವ್ ತಿರುಚಿದವರ ವಿರುದ್ಧ ತನಿಖೆಗೆ‌ ನಿರ್ಧಾರ: ಪಾಲಿಕೆ ಸಭೆ ಸಚಿವ ಸತೀಶ ಜಾರಕಿಹೊಳಿ ಬಂದ 10‌ ನಿಮಿಷಕ್ಕೆ ಅಂತ್ಯ

ಬೆಳಗಾವಿ: ಇಂದು ನಡೆದ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಸ್ತಿ ಕರ ಹೆಚ್ಚಳ ವಿಚಾರದಲ್ಲಿ ಸಾಕಷ್ಟು ಸದ್ದು ಗದ್ದಲ ನಡೆಯಿತು. ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಪಾಲಿಕೆ ಸಾಕ್ಷಿಯಾಯಿತು. ಪಾಲಿಕೆ ಆಯುಕ್ತರ ವಿರುದ್ಧ 2024/25ನೇ ಸಾಲಿಗೆ ಆಸ್ತಿ ಕರ ಹೆಚ್ಚಿಸುವ ಠರಾವು ತಿರುಚಿದ್ದಿರಿ ಎಂದು ಆಡಳಿತ ಸದಸ್ಯರು ಆರೋಪಿಸಿದರೆ, ಇದಕ್ಕೆ ಮೇಯರ್ ಅವರು ಕೂಡ ಸಹಿ ಮಾಡಿದ್ದಾರಲ್ಲ ಎಂದು ವಿಪಕ್ಷ ಸದಸ್ಯರು ಹರಿಹಾಯ್ದರು. ಹೌದು ಇಂದು ಮಧ್ಯಾಹ್ನ …

Read More »

ಮಾಜಿ ಸಿಎಂ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ತೆರಳಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.‌ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಅವರು ಇಂದು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿ ಬಸವರಾಜ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿ ಬೇಗ ಗುಣಮುಖರಾಗುವಂತೆ ಹಾರೈಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ …

Read More »

ರಾಜ್ಯದ ರಸ್ತೆ ಸಾರಿಗೆ ನಿಗಮಗಳಿಗೆ 5600 ಬಸ್‌ ಖರೀದಿ: ಮುಖ್ಯಮಂತ್ರಿ

ಬೆಂಗಳೂರು: ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಅಪಾರ ಸ್ಪಂದನೆ ಮತ್ತು ಸಾರ್ವಜನಿಕರ ಮೆಚ್ಚುಗೆ ವ್ಯಕ್ತ ಆಗಿರುವ ಹಿನ್ನೆಲೆಯಲ್ಲಿ 5,675 ಹೊಸ ಬಸ್‌ ಖರೀದಿಯ ಗುರಿ ಹೊಂದಲಾಗಿದ್ದು, ಈ ಕುರಿತು ಶೀಘ್ರವೇ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.   ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪ್ರಸಕ್ತ ಆಯವ್ಯಯದಲ್ಲಿ ಹೊಸ ಬಸ್‌ಗಳ ಖರೀದಿಗೆ 500 ಕೋಟಿ ರೂ. ಒದಗಿಸಲಾಗಿದ್ದು, ಖರೀದಿ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಿದರು. ಶಕ್ತಿ ಯೋಜನೆಯಿಂದ ರಾಜ್ಯ …

Read More »

ನನ್ನ ಹಾಗೂ ಸತೀಶ್​ ಜಾರಕಿಹೊಳಿ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್​

ಬೆಳಗಾವಿ: ನನ್ನ ಮೌನವೂ ವೀಕ್ನೆಸ್ ಅಲ್ಲ ಎನ್ನುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಬಂಡಾಯದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ‌. ಮೊನ್ನೆಯಷ್ಟೇ ಖಾಸಗಿ ಮಾಧ್ಯಮದ ಜೊತೆ ಮಾತನಾಡುತ್ತಿದ್ದ ವೇಳೆ ನನ್ನ ಮೌನ ನನ್ನ ವೀಕ್ನೆಸ್ ಅಲ್ಲ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ವಿಚಾರದ ಬಗ್ಗೆ ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬೆಳಗಾವಿಯ ಸಾಂಬ್ರಾ ವಿಮಾನ‌ ನಿಲ್ದಾಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಈ ರೀತಿ ಉತ್ತರಿಸಿದರು. ಜಿಲ್ಲಾ ಕಾಂಗ್ರೆಸ್​ನಲ್ಲಿ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ

ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಶ್ರೀ ಬಲಭೀಮ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ …

Read More »

ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಸೂಪರ್ ಸೀಡ್ ತೂಗುಗತ್ತಿ

ಬೆಳಗಾವಿ: ಒಂದು ಕಡೆ ತಮ್ಮದೇ ಸರ್ಕಾರದ ವಿರುದ್ಧ ಸಚಿವ ಸತೀಶ್​ ಜಾರಕಿಹೊಳಿ ಮುನಿಸು ದೊಡ್ಡ ಸಂಚಲನ ಸೃಷ್ಟಿಸಿದರೆ, ಮತ್ತೊಂದೆಡೆ ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ ಸೀಡ್​ಗೆ ಹುನ್ನಾರ ನಡೆದಿದೆಯಾ ಎಂಬ ಅನುಮಾನ‌ ಮೂಡಿದೆ. ಇದರಿಂದ ಇಂದು ನಡೆಯಲಿರುವ ಪಾಲಿಕೆ‌ ಸಾಮಾನ್ಯ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಹೀಗೊಂದು‌ ಅನುಮಾನ‌ ದಟ್ಟವಾಗಲು ಕಾರಣ, ಪಾಲಿಕೆ ಮೆಯರ್ ಶೋಭಾ ಸೋಮನಾಚೆ ಅವರು. ಅಕ್ಟೋಬರ್ 17 ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ. …

Read More »

ಜಯಪ್ರದಾಗೆ 6 ತಿಂಗಳ ಜೈಲು ಶಿಕ್ಷೆ ಖಚಿತಪಡಿಸಿದ ಮದ್ರಾಸ್​ ಹೈಕೋರ್ಟ್: ​15 ದಿನದಲ್ಲಿ ಶರಣಾಗಲು ಆದೇಶ

ಚೆನ್ನೈ (ತಮಿಳುನಾಡು): ಖ್ಯಾತ ನಟಿ ಜಯಪ್ರದಾ ಅವರಿಗೆ ಕೆಳ ಹಂತದ ನ್ಯಾಯಾಲಯ ವಿಧಿಸಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ಮದ್ರಾಸ್​ ಹೈಕೋರ್ಟ್ ಇಂದು (ಶುಕ್ರವಾರ)​ ಖಚಿತಪಡಿಸಿತು. 15 ದಿನದಲ್ಲಿ ಎಗ್ಮೋರ್ ಕೋರ್ಟ್‌ಗೆ ಶರಣಾಗುವಂತೆ ಹಾಗೂ 20 ಲಕ್ಷ ರೂ. ಠೇವಣಿ ಇಡುವಂತೆ ಸೂಚಿಸಿದೆ. ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ಜಯಪ್ರದಾ, ಸಂಸತ್ ಸದಸ್ಯರಾಗಿದ್ದರು. ಚೆನ್ನೈನಲ್ಲಿ ರಾಮಕುಮಾರ್, ರಾಜ್​ಬಾಬು ಎಂಬವರೊಂದಿಗೆ ಸೇರಿ ಚಿತ್ರಮಂದಿರವನ್ನು ನಡೆಸುತ್ತಿರುವ ಇವರು, …

Read More »

ಮತ್ತೆ ಚಲಾವಣೆಗೆ ಬರುತ್ತಾ 1,000 ರೂಪಾಯಿ ನೋಟು?: ಹೀಗೊಂದು ವದಂತಿ

ನವದೆಹಲಿ: ಏಳು ವರ್ಷಗಳ ಹಿಂದೆ ರದ್ದಾದ 1,000 ರೂಪಾಯಿ ಮುಖಬೆಲೆಯ ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರೊಂದಿಗೆ ಭಾರತೀಯ ರಿಸರ್ವ್​​ ಬ್ಯಾಂಕ್​ (ಆರ್​ಬಿಐ) ಹಳೆಯ ನೋಟನ್ನು ಮತ್ತೆ ಪರಿಚಯಿಸುವ ಆಲೋಚನೆಯಲ್ಲಿಲ್ಲ ಎಂದೂ ವರದಿಯಾಗಿದೆ.   2016ರಲ್ಲಿ ನವೆಂಬರ್​ನಲ್ಲಿ ಕೇಂದ್ರ ಸರ್ಕಾರ 500 ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯ ಎಂದು ಘೋಷಿಸಿತ್ತು. ಆರ್​ಬಿಐ 500 ರೂ.ಗಳ ಹೊಸ ನೋಟುಗಳು ಹಾಗೂ 2000 ರೂ. ಬೆಲೆಯ ನೋಟುಗಳನ್ನು …

Read More »

ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯುವ ವಿಚಾರ: ಕಡತ ಕ್ಯಾಬಿನೆಟ್ ಮುಂದಿಡಲು ಸಿಎಂ ಸೂಚನೆ

ಬೆಂಗಳೂರು: ಕಾವೇರಿ, ಮೇಕೆದಾಟು ಪಾದಯಾತ್ರೆ ಸೇರಿದಂತೆ ನಾಡಿನ ಹಿತರಕ್ಷಣೆಯ ಹೋರಾಟಗಳಲ್ಲಿ ಭಾಗವಹಿಸಿದ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಕಡತವನ್ನು ಸಂಪುಟ ಸಭೆ ಮುಂದೆ ತರಲು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ‌.   ಈ ಕುರಿತು ಎಂಎಲ್​ಸಿ ದಿನೇಶ್ ಗೂಳಿಗೌಡ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಸಿಎಂ, ಪ್ರಕರಣಗಳನ್ನು ಹಿಂಪಡೆಯುವ ವಿಚಾರವಾಗಿ ಸಚಿವ ಸಂಪುಟ ಉಪ ಸಮಿತಿಯ ಮುಂದೆ ಕಡತ …

Read More »

ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ನಾನು ಬಿಜೆಪಿಗೆ ಸತ್ತರೂ ಹೋಗಲಾರೆ-ಕಾಂಗ್ರೆಸ್​ ಶಾಸಕ ರಾಜು ಕಾಗೆ

ಬೆಳಗಾವಿ: ನಾವು ಸಾಯುವವರೆಗೂ ಬಿಜೆಪಿಗೆ ಮರಳಿ ಹೋಗುವ ಪ್ರಶ್ನೆಯೇ ಇಲ್ಲ. ಇದು ನೂರಕ್ಕೆ ನೂರು ಸತ್ಯ. ಸತ್ತರೆ ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿಕೆ ನೀಡಿದರು. ಬೆಳಗಾವಿಯಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಅವರು, ಮರಳಿ ಬಿಜೆಪಿ‌ ಸೇರ್ಪಡೆಯಾಗುತ್ತೀರಾ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಮೈಸೂರು ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿ, ಏನೂ ಇಲ್ಲ, ಪ್ರವಾಸಕ್ಕೆ ಹೋಗಿದ್ದೆವು. ಜೀವನದಲ್ಲಿ ಎಂದೂ ಮೈಸೂರಿಗೆ ಹೋಗಿರಲಿಲ್ಲ. ಹಾಗಾಗಿ, …

Read More »