ಧಾರವಾಡ: ಚಕ್ಕಡಿಯ ನೊಗ ಹೆಗಲ ಮೇಲಿಟ್ಟುಕೊಂಡು ಚಕ್ಕಡಿಯನ್ನೇ ಎಳೆದುಕೊಂಡು ಮುಸ್ಲಿಂ ಸಮುದಾಯ ವ್ಯಕ್ತಿಯೊಬ್ಬರು ಉಳವಿಯತ್ತ ಪ್ರಯಾಣವನ್ನು ಗುರುವಾರ ಆರಂಭಿಸಿದ್ದು, ಇದು ಈಗ ಎಲ್ಲರ ಗಮನ ಸೆಳೆದಿದೆ. ಈ ಸಾಹಸಮಯ ಭಕ್ತಿಯ ಸಂಕಲ್ಪ ಕೈಗೊಂಡಿರುವುದು ಮಂಗಳಗಟ್ಟಿ ಗ್ರಾಮದ ಇಮಾಮ್‌ಸಾಬ್ ನದಾಫ್. ಗರಗದ ಕಲ್ಮಠದ ಶ್ರೀಗಳೊಂದಿಗೆ ಗರಗ ಮಡಿವಾಳೇಶ್ವರ ಮಠದಿಂದ ಉಳವಿ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಏಳನೇ ವರ್ಷದ ಪಾದಯಾತ್ರೆಯನ್ನು ಆರಂಭಿಸಿದ್ದು, ಈ ಪಾದಯಾತ್ರೆ ಮೂಲಕ ಇಮಾಮ್‌ಸಾಬ್ ಗಮನ ಸೆಳೆಯುವಂತೆ ಮಾಡಿರುವುದು ವಿಶೇಷ. ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ …
Read More »Daily Archives: ಡಿಸೆಂಬರ್ 21, 2023
ಕಲ್ಯಾಣ ಕರ್ನಾಟಕ ಸಾರಿಗೆ ಸಿಬ್ಬಂದಿಗೆ ಪ್ರೀಮಿಯಂ ರಹಿತ ವಿಮಾ ಯೋಜನೆ
ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ಪ್ರೀಮಿಯಂ ರಹಿತ ರೂ.1.20 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಪ್ರೀಮಿಯಂ ರಹಿತ ರೂ.1.20 ಕೋಟಿ ವಿಮಾ ಯೋಜನೆಗೆ ಇಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಉಪಸ್ಥಿತಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ, ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ವಲಯ ಮುಖ್ಯಸ್ಥ ನವನೀತ್ ಕುಮಾರ್ ರವರೊಂದಿಗೆ ಒಡಂಬಡಿಕೆ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ …
Read More »Covid 19 ಆತಂಕ ಪಡುವ ಅಗತ್ಯವಿಲ್ಲ, ಎಚ್ಚರಿಕೆಯಿಂದಿದ್ದರೆ ಸಾಕು: C.M.
ಬೆಂಗಳೂರು: ಕೋವಿಡ್ ಹೊಸ ಉಪತಳಿಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿದ್ದರೆ ಸಾಕು. ಆದರೆ ಹಿಂದಿನ ಸರ್ಕಾರದಲ್ಲಾದ ತಪ್ಪುಗಳು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೋವಿಡ್ ಕುರಿತ ಉನ್ನತ ಮಟ್ಟದ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಇನ್ನಿತರೆ ಯಾವುದಕ್ಕೂ ಕೊರತೆ ಆಗಬಾರದು. ಈಗಿನ ಉಪತಳಿ JN.1 ಅಪಾಯಕಾರಿಯಲ್ಲ. ಈ ಉಪತಳಿ ರಾಜ್ಯದಲ್ಲಿ 92 …
Read More »ಡಿ.ಕೆ. ಸುರೇಶ್ ಸೇರಿ ಮೂವರು ಸಂಸದರು ಅಮಾನತು:ಸಂಖ್ಯೆ 146ಕ್ಕೇರಿಕೆ
ಹೊಸದಿಲ್ಲಿ: ಡಿ.ಕೆ. ಸುರೇಶ್ ಸೇರಿ ಕಾಂಗ್ರೆಸ್ ನ ಮೂವರು ಸಂಸದರನ್ನು ಗುರುವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.ದೀಪಕ್ ಬೈಜ್, ನಕುಲ್ ನಾಥ್ ಅವರನ್ನೂ ಅಮಾನತು ಮಾಡಲಾಗಿದ್ದು, ಅಮಾನತುಗೊಂಡಿರುವ ಪ್ರತಿಪಕ್ಷಗಳ ಒಟ್ಟು ಸದಸ್ಯರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. ಡಿಸೆಂಬರ್ 13 ರಂದು ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ ಮತ್ತು ಘೋಷಣೆಗಳನ್ನು ಕೂಗಿದ ಕಾರಣಕ್ಕೆ ವಿಪಕ್ಷಗಳ ಸಂಸದರನ್ನು …
Read More »ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮಾನತು
ಬೆಳಗಾವಿ: ದುರ್ನಡತೆ ಹಾಗೂ ಬೆಳಗಾವಿ ಜಿಲ್ಲಾ ಕಚೇರಿಯ ಅಧಿಕಾರಿಗಳು ಹಾಗೂ ನೌಕರರ ಮೇಲೆ ದೌರ್ಜನ್ಯ ಎಸಗಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜ ಎ.ಎಂ. ಅವರನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತು ಗೊಳಿಸಿ ಆದೇಶಿಸಲಾಗಿದೆ. ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿಎಂ.ಎಸ್. ಈ ಆದೇಶ ಹೊರಡಿಸಿದ್ದು ಅಮಾನತಿಗೊಳಗಾದ ಅಧಿಕಾರಿಯು ಸಕ್ಷಮ …
Read More »ಎಲ್ಲ ಮಠಗಳ ಮಧ್ಯೆ ಆತ್ಮೀಯತೆ ಬಂದರೆ, ಎಲ್ಲ ಧಾರ್ಮಿಕ ಸಂಪ್ರದಾಯಗಳೂ ಒಂದಾದರೆ ದೇಶ ಅಖಂಡವಾಗುತ್ತದೆ.
ಬೆಳಗಾವಿ: ಎಲ್ಲ ಮಠಗಳ ಮಧ್ಯೆ ಆತ್ಮೀಯತೆ ಬಂದರೆ, ಎಲ್ಲ ಧಾರ್ಮಿಕ ಸಂಪ್ರದಾಯಗಳೂ ಒಂದಾದರೆ ದೇಶ ಅಖಂಡವಾಗುತ್ತದೆ. ದೇಶದ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಹಾಗೂ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಹುಕ್ಕೇರಿ ಹಿರೇಮಠದ ಬೆಳಗಾವಿ ಶಾಖೆಯಲ್ಲಿ ಮಂಗಳವಾರ ಹಿರೇಮಠದ ವತಿಯಿಂದ ಸ್ವರ್ಣವಲ್ಲೀ ಶ್ರೀಗಳನ್ನು ಸತ್ಕರಿಸಿ, ಗೀತಾಭಿಯಾನಾರ್ಣವ ಬಿರುದು ಪ್ರದಾನ ಮಾಡಲಾಯಿತು. ಶ್ರೀ ಚಂದ್ರಶೇಖರ …
Read More »ವೃತ್ತಿ ರಂಗಭೂಮಿ ಉಳಿಸಿ ಬೆಳೆಸಬೇಕಿದೆ- ಕಾಮನ್
ತೆಲಸಂಗ: ವೃತ್ತಿ ರಂಗಭೂಮಿ ಇಂದು ಸೋತು ಸುಣ್ಣವಾಗಿದ್ದು, ಅದೆಷ್ಟೋ ವೃತ್ತಿ ನಾಟಕ ಕಂಪನಿಗಳು ಬಾಗಿಲು ಮುಚ್ಚಿ ಕೇವಲ ಬೆರಳೆಣಿಕೆಯಷ್ಟೇ ಈಗ ಉಳಿದುಕೊಂಡಿವೆ. ವೃತ್ತಿರಂಗಭೂಮಿಗೆ ಕಾಯಕಲ್ಪ ಕೊಡುವುದು ಹೇಗೆಂದು ಚಿಂತಿಸಬೇಕಿದೆ ಎಂದು ಹವ್ಯಾಸಿ ಕಲಾವಿದ ಡಾ| ಬಿ.ಎಸ್.ಕಾಮನ್ ಹೇಳಿದರು. ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಹಮ್ಮಿಕೊಂಡ ನಾಟಕ ಪ್ರದರ್ಶನದಲ್ಲಿ ಡಾ| ಪಂ| ಪುಟ್ಟರಾಜ ಕವಿ ಗವಾಯಿಗಳ ರಂಗ ಸಂಸ್ಥೆಯಿಂದ ವೃತ್ತಿ ರಂಗಭೂಮಿ ಕಲಾವಿದರನ್ನು ಸತ್ಕರಿಸಿ ಅವರು ಮಾತನಾಡಿ, ರಂಗಭೂಮಿಗೆ ಪುರಾತನ ಇತಿಹಾಸವಿದೆ. …
Read More »ಮಹಾನಗರ ಪಾಲಿಕೆ ಬಾಕಿ ತೆರಿಗೆ ಸಂಗ್ರಹಕ್ಕೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆ
ಬೆಂಗಳೂರು, ಡಿಸೆಂಬರ್ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಾಕಿ ತೆರಿಗೆ ಸಂಗ್ರಹಕ್ಕೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್(HK Patil), 2024ರ ಜೂನ್ 30ರವರೆಗೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನೀರಿನ ಕರ ದರ ಇನ್ನು ಮುಂದೆ ವಾರ್ಷಿಕ ಹಣದುಬ್ಬರ …
Read More »ಕೇರಳದಲ್ಲಿ ಒಂದೇ ದಿನದಲ್ಲಿ ಪತ್ತೆಯಾದವು 300 ಸಕ್ರಿಯ ಕೋವಿಡ್ ಪ್ರಕರಣ
ನವದೆಹಲಿ/ ಮಂಗಳೂರು: ದೇಶದಲ್ಲಿ ಚಳಿ ಹೆಚ್ಚಿದಂತೆ ಕೋವಿಡ್ ಪ್ರಕರಣಗಳ ಏರಿಕೆ ಕಂಡಿದೆ. ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋವಿಡ್ ರೂಪಾಂತರ ತಳಿ ಜೆಎನ್.1 ಪತ್ತೆಯಾದ ಕೇರಳದಲ್ಲಿ ಡಿಸೆಂಬರ್ 20ರಂದು ಒಟ್ಟು 300 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 3 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ಬಿಡುಗಡೆ ಮಾಡಿದೆ. ಇದೀಗ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2669 ಆಗಿದೆ. ಕಳೆದ ಮೂರು ವರ್ಷಗಳ …
Read More »ಹೆಸ್ಕಾಂನಲ್ಲಿ 51 ಕೋಟಿ ರೂ. ವಂಚನೆ: ಮಧ್ಯಂತರ ವರದಿ ಸಲ್ಲಿಕೆ; ಐವರು ಸಿಬ್ಬಂದಿ ಅಮಾನತು…
ಹುಬ್ಬಳ್ಳಿ: ಹೆಸ್ಕಾಂನ ಹುಬ್ಬಳ್ಳಿಯ ಉಗ್ರಾಣದಲ್ಲಿ ನಡೆದ 51 ಕೋಟಿ ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸ್ಕಾಂನ ಲೆಕ್ಕಾಧಿಕಾರಿ ಸೇರಿದಂತೆ ಐವರನ್ನು ಅಮಾನತು ಮಾಡಲಾಗಿದೆ. ಲೆಕ್ಕಾಧಿಕಾರಿ ಬೆಂಜಮಿನ್ ಮಸ್ಕನರ್ಸ್, ಸಹಾಯಕ ಲೆಕ್ಕಾಧಿಕಾರಿ ಯು.ಎಸ್.ಉಳ್ಳಾಗಡ್ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ವಿಶ್ವನಾಥ ಶಿರಹಟ್ಟಿಮಠ, ವಸಂತಕುಮಾರ ರಾಠೋಡ, ಅಂಜಿನಪ್ಪ ಬಿ, ಅಮಾನತುಗೊಂಡವರು. ಅವ್ಯವಹಾರದ ಕುರಿತು ತನಿಖೆ ನೆಡೆಸಲು ಐವರು ಅಧಿಕಾರಿಗಳ ತಂಡ ರಚಿಸಲಾಗಿತ್ತು. ತಂಡ ಮೂರು ವರ್ಷ ತನಿಖೆ ನಡೆಸಿ, ಮಧ್ಯಂತರ ವರದಿ ಸಲ್ಲಿಸಿದ್ದು, ಅದರನ್ವಯ ಹೆಸ್ಕಾಂ …
Read More »