Breaking News

Daily Archives: ನವೆಂಬರ್ 9, 2023

ಹುಬ್ಬಳ್ಳಿ ಧಾರವಾಡ ಅವಳಿ ನಗರ ಧೂಳಿನಿಂದ ಮುಕ್ತ ಮಾಡಲು ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆ..!

ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಬೆಳೆಯುತ್ತಲೇ ಇದೆ. ಆದ್ರೆ ನಗರದಲ್ಲಿ ಉಸಿರಾಡಲು ಸ್ವಚ್ಛ ಗಾಳಿ ಸಿಗದಂತಾಗಿದೆ. ಅವಳಿ ನಗರದಲ್ಲಿ ಧೂಳಿನ ಸಮಸ್ಯೆಯಿಂದ ಜನರು ಹೈರಾಣ ಆಗಿದ್ದಾರೆ. ಅವಳಿ ನಗರದಲ್ಲಿ ಧೂಳು ಹೆಚ್ಚಾಗಿರುವ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಜನರಿಗೆ ವಿವಿಧ ಅಲರ್ಜಿಗಳು ಕಾಡುತ್ತಿವೆ. ಹೀಗಾಗಿ ಅವಳಿ‌ನಗರ ಧೂಳುಮುಕ್ತ ಮಾಡಲು ಹಾಗೂ ಧೂಳು ತೆಗೆಯಲು ಈಗ ಪಾಲಿಕೆ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಧೂಳು …

Read More »

ಜಾಮೀನು ರಹಿತ ವಾರಂಟ್​​​​​​​ನಿಂದ ರಣ್​ದೀಪ್​ ಸುರ್ಜೇವಾಲಾಗೆ 5 ವಾರ ಬಿಗ್​ ರಿಲೀಫ್​

ನವದೆಹಲಿ : ಕಾಂಗ್ರೆಸ್​ ವಕ್ತಾರ ರಣ್​ದೀಪ್​ ಸುರ್ಜೇವಾಲಾ ಅವರಿಗೆ ಸುಪ್ರೀಂ ಕೋರ್ಟ್​ ಇಂದು ರಿಲೀಫ್​ ನೀಡಿದೆ. 23 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅವರ ವಿರುದ್ಧ ಜಾರಿಯಾಗಿದ್ದ ಜಾಮೀನು ರಹಿತ ವಾರಂಟ್​​ನಿಂದ ಸರ್ವೋಚ್ಛ ನ್ಯಾಯಾಲಯವು ಐದು ವಾರಗಳ ಕಾಲ ರಕ್ಷಣೆ ನೀಡಿದೆ. ವಾರಾಣಸಿಯ ವಿಭಾಗೀಯ ಆಯುಕ್ತರ ನ್ಯಾಯಾಲಯ ಮತ್ತು ಕಚೇರಿ ಆವರಣದಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 7ರಂದು ವಾರಾಣಸಿಯ ವಿಶೇಷ ನ್ಯಾಯಾಧೀಶರು (ಸಂಸದರು, ಶಾಸಕರ ಪ್ರಕರಣಗಳ ನ್ಯಾಯಾಲಯ) ಜಾಮೀನು …

Read More »

21 ದಿನಕ್ಕೆ 21 ಲಕ್ಷ ರೂ ಕರೆಂಟ್ ಬಿಲ್..

ಮೈಸೂರು: ನಾಡ ಹಬ್ಬ ಮೈಸೂರು ದಸರಾ ನಿಮಿತ್ತ ಮೈಸೂರಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರದಿಂದ ಇಡೀ ಮೈಸೂರನ್ನು ಝಗಮಗಿಸುವಂತೆ ಮಾಡಲಾಗಿತ್ತು. ಇದು ದಿನಕ್ಕೆ ಒಂದು ಲಕ್ಷ ರೂಪಾಯಿಯಂತೆ ಕರೆಂಟ್ ಬಿಲ್ ಬಂದಿದ್ದು. ಒಟ್ಟು 21 ದಿನಕ್ಕೆ 21 ಲಕ್ಷ ರೂಪಾಯಿ ವಿದ್ಯುತ್​​​​​ ವೆಚ್ಚವಾಗಿದೆ. ಇದು ಎಲ್ಲಾ ರಸ್ತೆಗಳು, ವೃತ್ತಗಳು, ಹಲವು ಕಲಾಕೃತಿಗಳ ದೀಪಾಲಂಕಾರ ಸೇರಿದಂತೆ ನಗರದ ದೀಪಾಲಂಕಾರಕ್ಕೆ ತಗುಲಿದೆ ಒಟ್ಟು ಖರ್ಚಾಗಿದೆ. ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಒಟ್ಟು 1.45 ಲಕ್ಷ ಯುನಿಟ್ …

Read More »

ಜಿಲ್ಲಾ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ; ಮೀಸಲು ನಿಗದಿಗೆ ಅಂತಿಮ ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಚುನಾವಣೆಗಾಗಿ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಗೆ ಹೈಕೋರ್ಟ್ ಅಂತಿಮ ಗಡುವು ನೀಡಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ತಿದ್ದುಪಡಿ ತಂದಿರುವುದನ್ನು …

Read More »

ಚಿಕ್ಕೋಡಿ ತಾಲೂಕಿನಲ್ಲಿ ಸರಣಿ ಎಟಿಎಂ ಕಳ್ಳತನದಿಂದ ಸಾರ್ವಜನಿಕರ ಆತಂಕ

ಚಿಕ್ಕೋಡಿ (ಬೆಳಗಾವಿ) : ತಡರಾತ್ರಿ ಚಿಕ್ಕೋಡಿ ತಾಲೂಕಿನ ಪ್ರತ್ಯೇಕ ಕಡೆ ಎರಡು ಎಟಿಎಂಗಳಲ್ಲಿ ಕಳ್ಳರು ಲಕ್ಷಾಂತರ ರೂಪಾಯಿ ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಎಸ್‌ಬಿಐ ಎಟಿಎಂ ಬುಧವಾರ ತಡರಾತ್ರಿ ಕಳ್ಳರು ಗ್ಯಾಸ್ ಕಟರ್ ಬಳಸಿಕೊಂಡು ಸರಿಸುಮಾರು 10 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ದರೋಡೆ ಮಾಡಿದ್ದಾರೆ.   ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಎಟಿಎಂನಲ್ಲಿ ನಿಖರವಾಗಿ ಎಷ್ಟು ಹಣ …

Read More »

ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ

ಬೆಂಗಳೂರು : ನಗದು ಹಾಗೂ ಚೆಕ್ ರೂಪದಲ್ಲಿ ಲಂಚ ಸ್ವೀಕರಿಸುತ್ತಿದ್ದ ದಾಸನಪುರದ ಕಂದಾಯ ನಿರೀಕ್ಷಕ ಮತ್ತು ಮತ್ತು ಆತನ ಆಪ್ತನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಕಂದಾಯ ನಿರೀಕ್ಷಕನನ್ನು ವಸಂತ್​ ಎಂದು ಗುರುತಿಸಲಾಗಿದೆ. ವಸಂತ್​ 3.5 ಲಕ್ಷ ರೂ. ನಗದು ಹಾಗೂ 4 ಲಕ್ಷ ಚೆಕ್ ರೂಪದಲ್ಲಿ ಪಡೆದಿದ್ದ ಎಂದು ತಿಳಿದುಬಂದಿದೆ. ಕಂದಾಯ ನಿರೀಕ್ಷಕ ವಸಂತ್​ ಅವರು ಬೆಟ್ಟಸ್ವಾಮಿ ಗೌಡ ಎಂಬುವವರಿಗೆ ಖಾತೆ ಪೋಡಿ ಮಾಡಿ ಕೊಡಲು 28 ಲಕ್ಷ ರೂ …

Read More »

ಗ್ರಾಮ ಪಂಚಾಯಿತಿಗಳಿಗೂ ಬಂತು ಕ್ಯೂಆರ್ ಕೋಡ್ ವ್ಯವಸ್ಥೆ!, ಈ ಕ್ರಾಂತಿಕಾರಕ ಬದಲಾವಣೆಗೆ ಗ್ರಾಮಸ್ಥರು ಮೆಚ್ಚುಗೆ

ಮೈಸೂರು: ಈವರೆಗೆ ಕೇವಲ ನಗರ ಪ್ರದೇಶಗಳಿಗಷ್ಟೇ ಸಿಮಿತವಾಗಿದ್ದ ಡಿಜಿಟಲ್​ ಪೇ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ತೆರಿಗೆ ಸೇರಿದಂತೆ ಇತರ ಸೇವಾ ಶುಲ್ಕವನ್ನು ಕ್ಯೂಆರ್ ಕೋಡ್ ಮೂಲಕ ಪಾವತಿಸಲಾಗುತ್ತಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಚಯಿಸಿದ ಪ್ರಥಮ ಪ್ರಯೋಗ ಇದಾಗಿದ್ದು, ಈ ವಿನೂತನ ಸೌಲಭ್ಯದಿಂದ ಸ್ಥಳೀಯರಿಗೆ ತುಂಬಾ ಅನುಕೂಲವಾಗಿದೆ. ಈ ಕ್ರಾಂತಿಕಾರಕ …

Read More »

ಕನ್ನಡದ ಪ್ರಸಿದ್ಧ ನಟ ‘ಆಟೋರಾಜ’ ದಿ.ಶಂಕರ್ ನಾಗ್ ಅವರಿಗಿಂದು 69ನೇ ವರ್ಷದ ಹುಟ್ಟುಹಬ್ಬ.

‘ಶಂಕರ್ ನಾಗ್’. ಅಮೋಘ ಅಭಿನಯ, ಅಪಾರ ಅಭಿಮಾನಿಗಳು, ಎಲ್ಲಕ್ಕಿಂತ ಮಿಗಿಲಾಗಿ ಕನ್ನಡಿಗರ ಮನದಾಳದಲ್ಲಿ ಅಚ್ಚಳಿಯದ ಹೆಸರು ಈ ‘ಆಟೋರಾಜ’. ಇಂದು ದಿ.ಶಂಕರ್​ ನಾಗ್​ ಅವರ 69ನೇ ಜನ್ಮದಿನವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಶಂಕರ್​​ ನಾಗ್​ ಇಹಲೋಕ ತ್ಯಜಿಸಿ ಹಲವು ವರ್ಷಗಳೇ ಕಳೆದಿವೆ. ಅವರು ಅಭಿನಯಿಸಿದ ಸಿನಿಮಾಗಳು, ನಿರ್ದೇಶಿಸಿದ ಚಿತ್ರಗಳು ಹಾಗೂ ಕರಾಟೆ ಕಿಂಗ್​​ಗಿದ್ದ ದೂರದೃಷ್ಟಿ, ಕನ್ನಡ ಚಿತ್ರರಂಗವನ್ನು ಮುಗಿಲೆತ್ತರ ಬೆಳೆಸುವ ಕನಸೆಲ್ಲವನ್ನೂ ಈಗಲೂ ಅಭಿಮಾನಿಗಳ ಸ್ಮರಿಸುತ್ತಾರೆ. ಬಣ್ಣದ ಲೋಕದಲ್ಲಿ ಅತ್ಯಂತ …

Read More »

ದೀಪಾವಳಿ ಹಬ್ಬ; ಸಂತೋಷ ಜಾರಕಿಹೊಳಿ ಅವರಿಂದ ನೌಕರರಿಗೆ ಸಿಹಿ ಹಂಚಿಕೆ

ದೀಪಾವಳಿ ಹಬ್ಬ; ಸಂತೋಷ ಜಾರಕಿಹೊಳಿ ಅವರಿಂದ ನೌಕರರಿಗೆ ಸಿಹಿ ಹಂಚಿಕೆ ಗೋಕಾಕ : ದೀಪಾವಳಿ ಹಬ್ಬದ ನಿಮಿತ್ತ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರಿಂದ   ನಗರ ಸಭೆ ಪೌರ ಕಾರ್ಮಿಕರಿಗೆ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ಅನೇಕ ನೌಕರರಿಗೆ ಸಿಹಿ ವಿತರಿಸಿದರು.

Read More »

ಬೆಂಗಳೂರಲ್ಲಿ ರೌಡಿಶೀಟರ್ ಬರ್ಬರ ಕೊಲೆ. ಹಳೆ ವೈಷಮ್ಯದಿಂದ ಹತ್ಯೆ ಶಂಕೆ.

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ 9:30ರ ಸುಮಾರಿಗೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಚುಂಚನಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದೆ. ಸಹದೇವ್ ಕೊಲೆಯಾದ ರೌಡಿಶೀಟರ್​​​​. ಟೀ ಕುಡಿಯಲು ಬೇಕರಿ ಬಳಿ ಬಂದಿದ್ದಾಗ ಮೂರು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ಗುಂಪು, ​ಸಹದೇವ್ ಮೇಲೆ ಹಲ್ಲೆ ಮಾಡಿ ಹತ್ಯೆಗೈದು ಪರಾರಿಯಾಗಿದೆ. ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಡಿದ್ದಾರೆ. ಕೊಲೆಯಾದ ವ್ಯಕ್ತಿ ಕೋಣನಕುಂಟೆ …

Read More »