Breaking News

Daily Archives: ಆಗಷ್ಟ್ 14, 2023

ಆಗಸ್ಟ್​ 15ರಂದು ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹಾವೇರಿಯ ಪುಷ್ಪಾವತಿ ಸೋಮಪ್ಪ ಹೊನ್ನತ್ತಿ ಭಾಗವಹಿಸಲಿದ್ದಾರೆ.

ಹಾವೇರಿ : ಆಗಸ್ಟ್​​ 15ರಂದು ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಯ ಪುಷ್ಪಾವತಿ ಸೋಮಪ್ಪ ಹೊನ್ನತ್ತಿ ಅವರು ಆಯ್ಕೆಯಾಗಿದ್ದಾರೆ. ಪುಷ್ಪಾವತಿ ಅವರು ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮ ಪಂಚಾಯತ್​ನಲ್ಲಿ ಮಹಿಳಾ ನೀರಗಂಟಿ (ವಾಟರ್​ ವುಮನ್​) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಪುಷ್ಪಾವತಿ ಅವರಿಗೆ ಅವಕಾಶ ಲಭಿಸಿದ್ದು, ಈ ಸಂಬಂಧ ಹರ್ಷ ವ್ಯಕ್ತಪಡಿಸಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ ಹರ್ ಘರ್ …

Read More »

ಲೋಕಸಭೆ ಚುನಾವಣೆಗೆ ಮೊದಲು ಅಥವಾ ನಂತರ ಕಾಂಗ್ರೆಸ್ ಸರ್ಕಾರ ಪತನ ಖಚಿತ: ಯತ್ನಾಳ್

ವಿಜಯಪುರ: ರಾಜ್ಯದಲ್ಲಿ ಆಡಳಿತ ಹಿಡಿದ ಕಾಂಗ್ರೆಸ್​ ಪಕ್ಷ ಮೂರು ತಿಂಗಳಿನ ಹಿಂದಿದ್ದ ಹಾಗೆ ಇಲ್ಲ. ಇನ್ನು ಆರು ತಿಂಗಳಲ್ಲಿ ಪಕ್ಷದ ಹಣೆಬರಹ ಏನಾಗಲಿದೆ ಎಂಬುದನ್ನು ನೀವೇ ನೋಡಿ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು. ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರ ವ್ಯಾಪಕವಾಗಿದೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಓರ್ವ ಗುತ್ತಿಗೆದಾರ ಡಿಸಿಎಂ ಡಿಕೆಶಿ ಅವರಿಗೆ ಸವಾಲು ಹಾಕಿದ್ದಾರೆ. ನೀವು ಎಲ್ಲ ಗುತ್ತಿಗೆದಾರರಲ್ಲಿ ಶೇ 15 …

Read More »

SBI ಗ್ರಾಹಕರೇ, ಯಾವುದೇ ಗ್ಯಾರೆಂಟಿ ಇಲ್ಲದೇ ಬ್ಯಾಂಕ್ 50 ಸಾವಿರ ಸಾಲ ನೀಡ್ತಿದೆ, ನೀವೂ ಅರ್ಜಿ ಸಲ್ಲಿಸಿ

ಕೆಲವರು ತಾವು ಮಾಡುತ್ತಿರುವ ಉದ್ಯೋಗಕ್ಕಿಂತ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇನ್ನು ಕೆಲವರು ಯಾವುದಾದರೂ ಸಣ್ಣ ವ್ಯಾಪಾರ ಮಾಡಿದರೆ ಉತ್ತಮ ಎಂದು ಭಾವಿಸುತ್ತಾರೆ. ಆದ್ರೆ, ಹಣದ ಸಮಸ್ಯೆ ಅವರನ್ನ ಹಿಂದೆ ಸರಿಯುವಂತೆ ಮಾಡುತ್ತೆ. ಅಂತಹವರ ಪಟ್ಟಿಯಲ್ಲಿ ನೀವೂ ಇದ್ದೀರಾ.? ಹಾಗಿದ್ರೆ, ನಿಮಗಿದು ಗುಡ್ ನ್ಯೂಸ್ ಆಗುವುದು. ನಿಮಗಾಗಿ SBI ಮುದ್ರಾ ಸಾಲವನ್ನ ಒದಗಿಸಲಾಗಿದೆ. ಈ ಯೋಜನೆಯ ಮೂಲಕ ತಕ್ಷಣವೇ 50 ಸಾವಿರದಿಂದ 10 ಲಕ್ಷದವರೆಗೆ ಸಾಲ ಪಡೆಯುವ ಸೌಲಭ್ಯ ಒದಗಿಸುತ್ತಿದೆ. …

Read More »

ಹರ್ ಘರ್ ತಿರಂಗ ವೆಬ್ಸೈಟ್ ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರವನ್ನು ಪಡೆಯುವುದು ಹೇಗೆ ?

ನವದೆಹಲಿ:ಭಾರತವು ನಾಳೆ 76 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ಸಿದ್ಧವಾಗಿದೆ. ಈ ದಿನವನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಹರ್ ಘರ್ ತಿರಂಗ ವೆಬ್‌ಸೈಟ್‌ನಲ್ಲಿ ಸುಮಾರು 40 ಮಿಲಿಯನ್ ಜನರು ತಮ್ಮ ಸೆಲ್ಫಿಗಳನ್ನು ಉಪಕ್ರಮದ ಭಾಗವಾಗಿ ಅಪ್‌ಲೋಡ್ ಮಾಡಿದ್ದಾರೆ.   ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರನ್ನು ಅಭಿಯಾನದ ಭಾಗವಾಗುವಂತೆ ಆಹ್ವಾನಿಸಿದರು ಮತ್ತು ಅಭಿಯಾನದ ಭಾಗವಾಗಿ ತಮ್ಮ …

Read More »

ರೈತರು ಈ ಕೆಲಸ ಮಾಡಿದ್ರೆ ಪಿಎಂ ಕಿಸಾನ್ 14 ನೇ ಕಂತು ಪಡೆಯಬಹುದು!

ದೇಶದ ಅಗತ್ಯವಿರುವ ಮತ್ತು ಬಡ ವರ್ಗಕ್ಕಾಗಿ ಸರ್ಕಾರವು ಅನೇಕ ರೀತಿಯ ಪ್ರಯೋಜನಕಾರಿ ಮತ್ತು ಕಲ್ಯಾಣ ಯೋಜನೆಗಳನ್ನು ನಡೆಸುತ್ತದೆ. ಈ ಯೋಜನೆಗಳ ಮೂಲಕ, ಅಗತ್ಯವಿರುವ ಆರ್ಥಿಕ ಸಹಾಯವನ್ನು ಜನರಿಗೆ ತಲುಪಿಸಲಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಒಂದು ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಅರ್ಹ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ಮತ್ತು ನಂತರ ಈ ಹಣವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2-2 ಸಾವಿರ ರೂಪಾಯಿಗಳ ಮೂರು ಕಂತುಗಳಲ್ಲಿ …

Read More »

ನಟ ಉಪೇಂದ್ರ’ಗೆ ‘ಹೈಕೋರ್ಟ್’ ಬಿಗ್ ರಿಲೀಫ್: FIRಗೆ ತಡೆ

ಬೆಂಗಳೂರು: ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಂತ ಹೇಳಿಕೆ ಸಂಬಂಧ ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಇಂತಹ ಕೇಸ್ ರದ್ದು ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ಹೈಕೋರ್ಟ್ ಎಫ್‌ಐಆರ್ ಗೆ ತಡೆ ನೀಡುವ ಮೂಲಕ ಬಿಗ್ ರಿಲೀಫ್ ನೀಡಿದೆ.   ನಟ ಉಪೇಂದ್ರ ವಿರುದ್ಧ ಜಾತಿನಿಂದಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ಮಧ್ಯಂತರ ತಡೆಯಾಜ್ಞೆ ನೀಡಿ ಎಂದು …

Read More »

ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಶಿಫಾರಸ್ಸು ಮಾಡಲು ಸಿಎಂಗೆ ಮನವಿ ಮಾಡ್ತೇವೆ: ಸಿದ್ಧರಾಮ ಸ್ವಾಮೀಜಿ

ಗದಗ: ”2018ರ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಕಾಂಗ್ರೆಸ್​ಗೆ ಸೋಲಾಗಲಿಲ್ಲ. ಕೆಲವರು ಬೇಕಂತಲೇ ಈ ರೀತಿ ಉಯಿಲು ಎಬ್ಬಿಸಿದರು. ನಾವು ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಶಿಫಾರಸ್ಸು ಮಾಡಲು ಸಿಎಂಗೆ ಮನವಿ ಮಾಡ್ತೇವೆ” ಎಂದು ಗದಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಸಿದ್ದರಾಮಯ್ಯನವರು ಬದ್ಧತೆಗೆ ಹೆಸರಾಗಿರುವಂತವರು. ಲಿಂಗಾಯತ ಧರ್ಮವು ಸ್ವತಂತ್ರ ಧರ್ಮ ಅನ್ನೋದನ್ನು ಮನಗಂಡಿದ್ದರು. ಹೀಗಾಗಿ ನಾಗಮೋಹನ್ ದಾಸ್ ಅವರ ವರದಿಯನ್ನು …

Read More »

ಧಾರವಾಡ: ಹೆದ್ದಾರಿ ಡಿವೈಡರ್​ಗೆ ಕಾರು ಡಿಕ್ಕಿ.. ಇಬ್ಬರು ಸಾವು

ಧಾರವಾಡ: ರಸ್ತೆ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಭವಿಸಿದೆ. ಕಳೆದ ತಡರಾತ್ರಿ ಧಾರವಾಡದಿಂದ ಊಟಕ್ಕೆ ಢಾಬಾಗೆ ಹೋಗಿದ್ದ ಯುವಕರು ತಮ್ಮ ಕಾರಿನಲ್ಲಿ ವಾಪಸ್‌ ಬರುವಾಗ ಹೆದ್ದಾರಿ ಡಿವೈಡರ್​ಗೆ ಕಾರು ಡಿಕ್ಕಿ‌ ಹೊಡೆದಿದೆ. ಸ್ಥಳದಲ್ಲಿ ಓರ್ವ ಸಾವನ್ನಪ್ಪಿದ್ದರೆ,‌ ಮತ್ತೋರ್ವ ‌ಚಿಕಿತ್ಸೆ‌ ಫಲಿಸದೇ ಧಾರವಾಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ವಿನಯ ಹಿರೇಮಠ (28) ಹಾಗೂ ಸಂದೀಪ್ (29) …

Read More »

ರಾಘವೇಂದ್ರ ರಾಜ್​ಕುಮಾರ್ ಮತ್ತು ಶೃತಿ ಅಭಿನಯದ ’13’ ಸಿನಿಮಾಗೆ ಸೆನ್ಸಾರ್​ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.

ರಾಘವೇಂದ್ರ ರಾಜ್​ಕುಮಾರ್ ಮತ್ತು ಶೃತಿ ಅಭಿನಯದ ’13’ ಸಿನಿಮಾಗೆ ಸೆನ್ಸಾರ್​ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಕನ್ನಡ ಚಿತ್ರರಂಗದ ಸ್ಟಾರ್​ ನಟ ರಾಘವೇಂದ್ರ ರಾಜ್​ಕುಮಾರ್ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಡುಗಡೆ ಹಂತದಲ್ಲಿರುವ ಅವರ ಮುಂದಿನ ಚಿತ್ರ ’13’. ಕೆ ನರೇಂದ್ರ ಬಾಬು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಶೃತಿ ನಟಿಸಿದ್ದಾರೆ. ಸದ್ಯ ಶೂಟಿಂಗ್​ ಮುಗಿಸಿರುವ ಚಿತ್ರತಂಡ ಸಿನಿಮಾ ಬಿಡುಗಡೆಗೆ ತಯಾರಿ …

Read More »

ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ ಮೂವರು ಅಪರಾಧಿಗಳಿಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್​

ನವದೆಹಲಿ: ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆ ಗಂಭೀರವಾದುದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕೋಚ್‌ಗೆ ಕಲ್ಲೆಸೆದು, ಪ್ರಯಾಣಿಕರನ್ನು ದೋಚಿದ್ದ ಮೂವರು ಆರೋಪಿಗಳ ಜಾಮೀನನ್ನು ಸೋಮವಾರ ತಿರಸ್ಕರಿಸಿದೆ.   2002 ರ ಫೆಬ್ರವರಿ 27 ರಂದು ಗುಜರಾತ್​ನ ಗೋಧ್ರಾದಲ್ಲಿ ರೈಲಿನ ಕೋಚ್​ಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ದುರ್ಘಟನೆಯಲ್ಲಿ 59 ಜನರು ಅಗ್ನಿಗಾಹುತಿಯಾಗಿ, ಹಲವರು ಗಾಯಗೊಂಡಿದ್ದರು. ಬಳಿಕ ಇದು ರಾಜ್ಯದ ಅನೇಕ ಭಾಗಗಳಲ್ಲಿ ದೊಡ್ಡ ಗಲಭೆ, ಹತ್ಯಾಕಾಂಡಕ್ಕೆ ಕಾರಣವಾಗಿತ್ತು. ಅಂತಹ ಪ್ರಕರಣದ …

Read More »