ದಿನನಿತ್ಯ ನೂರಾರು ಜನ ಸಂಚರಿಸುವನ ನಗರದ ಮುಖ್ಯ ರಸ್ತೆ ಆದ್ರೆ ರಸ್ತೆ ಅಭಿವೃದ್ಧಿ ಮಾತ್ರ ಮರೀಚಿಕೆ ಯಾಗಿದೆ ದಿನ ಬೆಳಗಾದರೆ ಸಾಕು ಸಂಚರಿಸುವ ಜನರಿಗೆ ತಾಪತ್ರಯ ತಪ್ಪದಾಗಿದೆ.ಹೌದು ಅದು ಕಣಬರ್ಗಿಗ್ರಾಮದ ಮುಖ್ಯ ಪ್ರವೇಶ ದ್ವಾರ ಅಲ್ಲಿಯ ವಾಹನ ಸವಾರರಿಗೆ ಮಾತ್ರ ತಪ್ಪದ ಗೋಳಾಟ. ಬೆಳಗಾವಿ ಸ್ಮಾರ್ಟ್ ಸಿಟಿ ಅನ್ನೋ ಮಾತು ಈ ರಸ್ತೆ ನೋಡಿದ್ರೆ ಹೆಸರಿಗೆ ಮಾತ್ರ ಅನ್ಸುತ್ತೆ ನಗರದ ಪ್ರಸಿದ್ಧ ಶ್ರೀ ಸಿದ್ದೇಶ್ವರ ದೇವಾಲಯ ಇರುವ ಕಂಬರ್ಗಿಯಲ್ಲಿ ಕಳೆದ …
Read More »Monthly Archives: ಮೇ 2023
ಇನ್ಮುಂದೆ ಕರೆಂಟ್ ಬಿಲ್ ನೆನಪು ಮಾತ್ರ
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಕಾಂಗ್ರೆಸ್ ಪಕ್ಷವು ಮ್ಯಾಜಿಕ್ ನಂಬರ್ ದಾಟಿ ಬರೋಬ್ಬರಿ ಐತಿಹಾಸಿಕ ದಾಖಲೆ ಎನ್ನುವಂತೆ 135 ಸ್ಥಾನವನ್ನು ಗೆದ್ದುಕೊಂಡಿದೆ. ಇದೇ ಹೊತ್ತಿನಲ್ಲಿ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿಗಳಲ್ಲಿ 200 ಯೂನಿಟ್ ವಿದ್ಯುತ್ ಉಚಿತದ ಮೀಮ್ಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿವೆ. ಹೀಗೆ ಕಾಂಗ್ರೆಸ್ ಪಕ್ಷದಿಂದ ಘೋಷಿಸಿದ್ದಂತ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಟೋವೊಂದು ವೈರಲ್ ಆಗಿದೆ.ಅದರಲ್ಲಿ ಇನ್ಮುಂದೆ ಮುಂದೆ …
Read More »ಯಾವ ಜಿಲ್ಲೆಯಲ್ಲಿ ಯಾರ ಮೇಲುಗೈ?
1.ನಿಪ್ಪಾಣಿ: ಶಶಿಕಲಾ ಜೊಲ್ಲೆ- ಬಿಜೆಪಿ 2. ಚಿಕ್ಕೋಡಿ ಸದಲಗ: ಗಣೇಶ್ ಹುಕ್ಕೇರಿ- ಕಾಂಗ್ರೆಸ್ 3. ಅಥಣಿ: ಲಕ್ಷ್ಮಣ ಸವದಿ- ಕಾಂಗ್ರೆಸ್ 4. ಕಾಗವಾಡ: ಭರಮಗೌಡ ಆಲಗೌಡ ಕಾಗೆ- ಕಾಂಗ್ರೆಸ್ 5. ಕುಡಚಿ: ಮಹೇಂದ್ರ ಕೆ. ತಮ್ಮಣ್ಣನವರ್- ಕಾಂಗ್ರೆಸ್ 6. ರಾಯಭಾಗ: ದುರ್ಯೋಧನ ಐಹೊಳೆ-ಬಿಜೆಪಿ 7. ಹುಕ್ಕೇರಿ: ನಿಖಿಲ್ ಕತ್ತಿ-ಬಿಜೆಪಿ 8. ಅರಭಾವಿ: ಬಾಲಚಂದ್ರ ಜಾರಕಿಹೊಳಿ-ಬಿಜೆಪಿ 9. ಗೋಕಾಕ: ರಮೇಶ್ ಜಾರಕಿಹೊಳಿ- ಬಿಜೆಪಿ 10. ಯಮಕನಮರಡಿ: ಸತೀಶ್ ಜಾರಕಿಹೊಳಿ- ಕಾಂಗ್ರೆಸ್ 11. …
Read More »ಹೀನಾಯವಾಗಿ ಸೋತಿರುವ ಹಿನ್ನೆಲೆ ನಳೀನ್ ಕುಮಾರ ಕಟೀಲು ರಾಜಿನಾಮೆ?
ಬೆಂಗಳೂರು: ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತಿರುವ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಸೋಮವಾರ ರಾಜಿನಾಮೆ ನೀಡುವ ಸಾಧ್ಯತೆ ಇದೆ. ಚುನಾವಣೆ ಫಲಿತಾಂಶವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಶನಿವಾರ ತಿಳಿಸಿದ್ದ ಕಟೀಲು, ಇದರ ಪೂರ್ಣ ಹೊಣೆಯನ್ನು ರಾಜ್ಯಾಧ್ಯಕ್ಷನಾಗಿ ನಾನು ಹೊರುವೆ ಎಂದಿದ್ದರು. ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಬೇರೆಯವರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
Read More »ಬಿಜೆಪಿಗೆ ಫಲ ನೀಡದ ಎಸ್‌ಟಿ ಮೀಸಲು ಹೆಚ್ಚಳ
ರಾಯಚೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿ ದ್ದಂತೆ ಪರಿಶಿಷ್ಟ ಪಂಗಡ ಸಮಾಜದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸುವ ಮೂಲಕ ಹಿಂದಿನ ಬಿಜೆಪಿ ಸರಕಾರ ಹೆಣೆದ ತಂತ್ರಗಾರಿಕೆ ಶೂನ್ಯ ಫಲಿತಾಂಶ ನೀಡಿದೆ. ಎಸ್‌ಟಿಗೆ ಮೀಸಲಾದ 15 ಕ್ಷೇತ್ರಗಳಲ್ಲಿ ಒಂದು ಕಡೆಯೂ ಬಿಜೆಪಿಗೆ ಗೆಲ್ಲಲಾಗಿಲ್ಲ. 15ರಲ್ಲಿ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ, ಒಂದರಲ್ಲಿ ಜೆಡಿಎಸ್ ಗೆದ್ದಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ಸಮಾಜದ ಗುರುಗಳಾದ ಪ್ರಸನ್ನಾನಂದಪುರಿ ಸ್ವಾಮೀಜಿ ಬೆಂಗಳೂರಿನಲ್ಲಿ ಸುದೀರ್ಘ ಹೋರಾಟ ನಡೆಸಿದ್ದರು. …
Read More »ಪರೀಕ್ಷೆ ಫೇಲ್: ಅಪಹರಣದ ಕಥೆ!
ಇಂದೋರ್: ಬಿಎ ಪ್ರಥಮ ವರ್ಷದ ಪರೀಕ್ಷೆಯಲ್ಲಿ ನಪಾಸಾದ 18 ವರ್ಷದ ಯುವತಿಯೊಬ್ಬಳು, ಪೋಷಕರ ಬೈಗುಳದಿಂದ ತಪ್ಪಿಸಿಕೊಳ್ಳಲು ಅಪಹರಣದ ಕಥೆ ಕಟ್ಟಿದ್ದಾಳೆ. ಇದು ನಡೆದಿದ್ದು ಮಧ್ಯಪ್ರದೇಶದ ಇಂದೋರ್‌ನಲ್ಲಿ. ಶುಕ್ರವಾರ ಬಿಎ ಪ್ರಥಮ ವರ್ಷದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅನುತ್ತೀರ್ಣಗೊಂಡ ಯುವತಿ, ಇಂದೋರ್‌ನಿಂದ ಉಜ್ಜಯಿನಿಗೆ ತೆರಳಿದ್ದಾಳೆ. ಬಳಿಕ ಅವರ ತಂದೆಗೆ ಕರೆ ಮಾಡಿ, ಇಂದೋರ್‌ನ ದೇವಾಲಯವೊಂದರ ಬಳಿಯಿಂದ ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಅಪರಿಚಿತ ಫೋನ್‌ನಿಂದ ಕರೆ ಮಾಡಿದ್ದಾಳೆ. ಮನೆಗೆ ಆಟೋದಲ್ಲಿ ಬರುತ್ತಿದ್ದ …
Read More »ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ತೆ ಶೀಘ್ರ ಹೆಚ್ಚಳ?
ಹೊಸದಿಲ್ಲಿ: ಸದ್ಯದಲ್ಲೇ ಕೇಂದ್ರ ಸರಕಾರಿ ನೌಕರರಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡುವ ಸಾಧ್ಯತೆಯಿದೆ. 7ನೇ ವೇತನ ಆಯೋಗದ ಅನ್ವಯ ಸರಕಾರಿ ನೌಕರರ ತುಟ್ಟಿ ಭತ್ತೆ (ಡಿಎ) ಮತ್ತು ಫಿಟ್ಮೆಂಟ್ ಅಂಶ ಹೆಚ್ಚಳದ ಕುರಿತು ಶೀಘ್ರವೇ ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಫಿಟ್ಮೆಂಟ್ ಅಂಶ ಹೆಚ್ಚಳದಿಂದಾಗಿ ನೌಕರರ ಕನಿಷ್ಠ ಮೂಲ ವೇತನದಲ್ಲಿ ಏರಿಕೆಯಾಗಲಿದೆ. ಕೇಂದ್ರ ಸರಕಾರಿ ನೌಕರರ ಕನಿಷ್ಠ ಆದಾಯವು ಈಗಿರುವ 18 ಸಾವಿರ ರೂ.ಗಳಿಂದ 26 …
Read More »ಉದ್ಧವ್ ಗೆ ಪಾಠ ಕಲಿಸಲು ಪವಾರ್ ಬೆಂಬಲ ಅಗತ್ಯವಾಗಿತ್ತು: ಮುಂಗಂತಿವಾರ್
ಮುಂಬಯಿ: ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರಿಗೆ ಪಾಠ ಕಲಿಸಲು 2019 ರಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಬೆಂಬಲವನ್ನು ಪಡೆಯುವುದು ಅಗತ್ಯವಾಗಿತ್ತು ಎಂದು ಮಹಾರಾಷ್ಟ್ರ ಸಚಿವ ಸುಧೀರ್ ಮುಂಗಂತಿವಾರ್ ಹೇಳಿಕೆ ನೀಡಿದ್ದಾರೆ. 2019 ರಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಪವಾರ್ ರಚಿಸಿದ್ದ ಮೈತ್ರಿಯ ಸ್ಪಷ್ಟ ಉಲ್ಲೇಖ ಮಾಡಿ ಮಾತನಾಡಿದ ಮುಂಗಂತಿವಾರ್ “ಆ ಸಮಯದಲ್ಲಿ ಉದ್ಧವ್ ಠಾಕ್ರೆ ತಂದ ಹೊಸ ರಾಜಕೀಯ ವ್ಯವಸ್ಥೆ ವಿರುದ್ಧ …
Read More »ಇದುಮೋದಿ ಸೋಲಲ್ಲ, ಕಾಂಗ್ರೆಸ್ ನಾಯಕತ್ವ ದೇಶದಲ್ಲೇ ಸೋತಿದೆ: ಬೊಮ್ಮಾಯಿ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ದಯನೀಯ ಸೋಲಿನ ಕುರಿತು ರಾಷ್ಟ್ರೀಯ ನಾಯಕರು ವರದಿ ಕೇಳಿದ್ದರು. ಈಗ ಇರುವ ಮಾಹಿತಿಯನ್ನು ಕಳುಹಿಸಿ ಕೊಡಲಾಗಿದೆ. ಸದ್ಯದಲ್ಲೇ ಸೋಲಿನ ಕುರಿತು ಆತ್ಮಾವಲೋಕನ ಸಭೆ ನಡೆಸಿ ತಪ್ಪು ತಿದ್ದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸೋಲು, ಗೆಲುವಿನ ಬಗ್ಗೆ …
Read More »ಕರ್ನಾಟಕ ನೂತನ ಸಿಎಂ ಆಯ್ಕೆ ವಿಚಾರ ‘ಕೈ’ ನಾಯಕಿ ಸೋನಿಯಾ ಗಾಂಧಿ ಅಂಗಳಕ್ಕೆ
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಯಾರಾಗಬೇಕೆಂಬ ವಿಚಾರ ಇದೀಗ ಹೈಕಮಾಂಡ್ ಅಂಗಳ ತಲುಪಿದೆ. ಒಂದೆಡೆ, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಂದು ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಇದರಿಂದ ಮುಂದೆ ಗೊಂದಲ ಉಂಟಾಗದಿರಲಿ ಎಂಬ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಸಿಎಂ ಆಯ್ಕೆ ವಿಚಾರ ಸೋನಿಯಾ …
Read More »