Breaking News

Daily Archives: ಮೇ 28, 2023

ದೇಶದ ಅಭಿವೃದ್ಧಿಗೆ ಸಾಕ್ಷಿಯಾಗಿದ್ದ ಹಳೆಯ ಸಂಸತ್ ಭವನದ ಗತವೈಭವ..

ಹೈದರಾಬಾದ್: ಭಾರತದ ಸಂಸತ್ತಿನ ಭವನ ದಶಕಗಳಿಂದ ದೇಶದ ಜನರ ಏಕತೆ, ಶಕ್ತಿ ಮತ್ತು ಸಾಮೂಹಿಕ ಇಚ್ಛೆಯ ಸಂಕೇತವಾಗಿದೆ. ಆದರೆ ಬದಲಾವಣೆ ಸಹಜ. ಅಂತೆಯೇ ನೂತನ ಸಂಸತ್ ಭವನ ಉದ್ಘಾಟನೆ ಬಳಿಕ ಹಳೆಯ ಸಂಸತ್ ಭವನವು ಮೂಕ ಪ್ರೇಕ್ಷಕನಾಗಲಿದೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಆಗಸ್ಟ್ 15, 1947 ರಂದು ಮಧ್ಯರಾತ್ರಿ ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣದ ಮೂಲಕ ಆರಂಭವಾದ ಇತಿಹಾಸಕ್ಕೆ ಇಂದು (2023ರ ಮೇ 28) ಔಪಚಾರಿಕ ವಿದಾಯ ಹೇಳಿ ಹೊಸದಕ್ಕೆ …

Read More »

ಬೆಂಗಳೂರಲ್ಲಿ ವೃದ್ಧೆಯ ಕೈಕಾಲು ಕಟ್ಟಿ ಹತ್ಯೆಗೈದು ದರೋಡೆ

ಬೆಂಗಳೂರು: ಒಂಟಿ ವೃದ್ಧೆಯ ಕೈಕಾಲು ಕಟ್ಟಿ ಬರ್ಬರವಾಗಿ ಹತ್ಯೆಗೈದು, ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಶನಿವಾರ ಸಂಜೆ‌ ಮಹಾಲಕ್ಷ್ಮಿ ಲೇಔಟಿನಲ್ಲಿ ನಡೆದಿದೆ. ಕಮಲಮ್ಮ (80) ಹತ್ಯೆಯಾದ ವೃದ್ಧೆ. ಮೃತಳ ಪತಿ ಆರು ತಿಂಗಳ ಹಿಂದೆಷ್ಟೇ ಸಾವನ್ನಪ್ಪಿದ್ದರು. ಮೂವರು ಮಕ್ಕಳಿದ್ದು, ಅವರು ಸಹ ಬೇರೆ ಬೇರೆ ಕಡೆ ವಾಸವಿದ್ದರಿಂದ ಕಮಲಮ್ಮ ಒಬ್ಬರೇ ವಾಸವಿದ್ದರು. ನಿನ್ನೆ(ಶನಿವಾರ) ಸಂಜೆ ಮನೆ ಪ್ರವೇಶಿಸಿರುವ ಹಂತಕರು‌ ವೃದ್ಧೆಯ ಕೈಕಾಲು‌ ಕಟ್ಟಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ …

Read More »

ನೀತಿ ಆಯೋಗದ ಸಭೆ ಬಹಿಷ್ಕರಿಸಿದ 7 ಸಿಎಂಗಳು

ನವದೆಹಲಿ, ಮೇ 27- ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಗೆ ದೇಶದ ಏಳು ಮುಖ್ಯಮಂತ್ರಿಗಳು ಗೈರು ಹಾಜರಾಗಿದ್ದಾರೆ.ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಾಜರಾಗದಿರಲು ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿದ್ದರೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗೈರು ಹಾಜರಿಗೆ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ಕೇಂದ್ರದ ಇತ್ತೀಚಿನ ಸುಗ್ರೀವಾಜ್ಞೆಗೆ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ ಮತ್ತು ದೇಶದಲ್ಲಿ …

Read More »

ಶಾಂತಿ ಕದಡುವ ಸಂಘಟನೆಯ ಮೇಲೆ ಕಠಿಣ ಕ್ರಮ : ಸಿಎಂ ವಾರ್ನಿಂಗ್

ಬೆಂಗಳೂರು, ಮೇ 27- ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯ ಕದಡುವ ಕೆಲಸ ಮಾಡುವ ಯಾವುದೇ ಸಂಘಟನೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 59 ನೇ ಪುಣ್ಯ ತಿಥಿಯ ಅಂಗವಾಗಿ ಇಂದು ವಿಧಾನಸೌಧದ ಬಳಿ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರ ನಿಷೇಧ ಮಾಡುವ ಬಗ್ಗೆ ಸರ್ಕಾರ ಹೇಳಿಲ್ಲ. ಕಾನೂನು …

Read More »

ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ

ಬೆಂಗಳೂರು,ಮೇ 27- ಸಚಿವ ಸಂಪುಟದಲ್ಲಿ ಅವಕಾಶ ವಂಚಿತರು ಅಸಮಾಧಾನಗೊಂಡಿದ್ದು, ಹೈಕಮಾಂಡ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಚಿವಾಕಾಂಕ್ಷಿಗಳ ಬೆಂಬಲಿಗರು ಮೈಸೂರು ಸೇರಿಂತೆ ಕೆಲವು ಕಡೆ ರಸ್ತೆಗಿಳಿದು ಪ್ರತಿಭಟನೆಯನ್ನೂ ನಡೆಸಿದ್ದಾರೆ.ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸಂಪುಟದಲ್ಲಿರುವ ಎಲ್ಲಾ 34 ಸ್ಢಾನಗಳಿಗೂ ಸಚಿವರನ್ನು ನಿಯೋಜಿಸುವ ದಿಟ್ಟ ನಿರ್ಧಾರ ಕೈಗೊಂಡಿದೆ. ಸಚಿವ ಸ್ಥಾನದ ಮೇಲೆ ಸುಮಾರು 70ಕ್ಕೂ ಹೆಚ್ಚು ಮಂದಿ ಕಣ್ಣಿಟ್ಟಿದ್ದರು, ಅವರಲ್ಲಿ ಬಹುತೇಕರು ದೆಹಲಿಗೆ ತೆರಳಿ ಲಾಬಿ ನಡೆಸಿದ್ದರು. ಮುಖ್ಯಮಂತ್ರಿ …

Read More »

ಅಂಡರ್‌ಪಾಸ್‌ನಲ್ಲಿ ಯುವತಿ ಸಾವು : ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ

ಬೆಂಗಳೂರು,ಮೇ.27- ಅಂಡರ್‍ಪಾಸ್‍ನಲ್ಲಿ ಕ್ಯಾಬ್ ಮುಳುಗಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಸಿದಂತೆ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.ಕಳೆದ ಮೇ 21ರಂದು ಬೆಂಗಲೂರಿನಲ್ಲಿ ಸುರಿದ ರಭಸ ಮಳೆಗೆ ಕೆಆರ್ ಸರ್ಕಲ್ ಅಂಡರ್‍ಪಾಸ್‍ನಲ್ಲಿ ಕ್ಯಾಬ್ ಮುಳುಗಿ ಇನ್ಫೋಸಿಸ್ ಭಾನುರೇಖ (23) ಸಾವನ್ನಪ್ಪಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿ ಜೂನ್ 5ರೊಳಗೆ ಪ್ರತಿಕ್ರಿಯೆ ನೀಡುವಂತೆ ಪೂರ್ವ ವಲಯದ ಮುಖ್ಯ ಆಯುಕ್ತರು ಮತ್ತು ವಲಯ ಆಯುಕ್ತರು ಸೇರಿದಂತೆ ಎಂಟು ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸï.ಪಾಟೀಲ್ …

Read More »

ತಮ್ಮ ಪ್ರಥಮ ತಿಂಗಳ ವೇತನವನ್ನ ಗ್ರಂಥಾಲಯಕ್ಕೆ ನೀಡುವುದಾಗಿ ಘೋಷಣೆ:ವಿಶ್ವಾಸ ವೈದ್ಯ

ಸವದತ್ತಿ ತಾಲೂಕಿನ ಗ್ರಂಥಾಲಯಗಳ ಕಾಯಕಲ್ಪಕ್ಕೆ ನೂತನ ಶಾಸಕರ ಸಂಕಲ್ಪನೂತನ ಶಾಸಕ ವಿಶ್ವಾಸ ವೈದ್ಯರಿಂದ ವಿನೂತನ ಕಾರ್ಯಕ್ಕೆ ಚಾಲನೆಇಂದು ಸವದತ್ತಿ   ಸರ್ಕಾರಿ ಗ್ರಂಥಾಲಯಕ್ಕೆ ಅನಿರೀಕ್ಷಿತ ಭೇಟಿ, ಪರಿಶೀಲನೆ ಗ್ರಂಥಾಲಯದ ಕಟ್ಟಡ, ಮೂಲಭೂತ ಸೌಲಭ್ಯಗಳ ಪರಿಶೀಲನೆ ಗ್ರಂಥಾಲಯದಲ್ಲಿ ಅಧ್ಯಯನ ಮಾಡುವ ಯುವಕರಿಂದ ಮಾಹಿತಿ ಪಡೆದ ಶಾಸಕರು ತಮ್ಮ ಪ್ರಥಮ ತಿಂಗಳ ವೇತನವನ್ನ ಗ್ರಂಥಾಲಯಕ್ಕೆ ನೀಡುವುದಾಗಿ ಘೋಷಣೆ ಮುಂದಿನ ಹಂತದಲ್ಲಿ ತಾಲೂಕಿನ ಎಲ್ಲ ಗ್ರಂಥಾಲಯಗಳ ಅಭಿವೃದ್ಧಿ ಭರವಸೆ ಶಾಸಕರ ಕಾರ್ಯಕ್ಕೆ ತೀವ್ರ‌ ಮೆಚ್ಚುಗೆ …

Read More »

ಸರಕಾರದ ಸಚಿವರುಗಳಿಗೆ ಖಾತೆ ಹಂಚಿಕೆ ಇನ್ನೂ ಆಗಿಲ್ಲ. ಹರಿದಾಡುತ್ತಿರುವದು ಪಟ್ಟಿ ನಕಲಿ ಎಂದ

ಬೆಂಗಳೂರು: ಕಾಂಗ್ರೆಸ್ ಸರಕಾರದ ಸಚಿವರುಗಳಿಗೆ ಖಾತೆ ಹಂಚಿಕೆ ಇನ್ನೂ ಆಗಿಲ್ಲ. ಈಗ ಹರಿದಾಡುತ್ತಿರುವ ಪಟ್ಟಿ ನಕಲಿ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಈ ಕುರಿತು ಇದೀಗ ಕಾಂಗ್ರೆಸ್ ಟ್ವೀಟ್ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಖಾತೆ ಹಂಚಿಕೆಯಾಗಿರುವ ಬಗ್ಗೆ ನಕಲಿ ಪಟ್ಟಿ ವೈರಲ್ ಆಗಿದೆ. ಇನ್ನೂ ಸಹ ಖಾತೆ ಹಂಚಿಕೆಯಾಗಿರುವುದಿಲ್ಲ, ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗಳನ್ನು ಹಂಚಬೇಡಿ. ಸರ್ಕಾರ ಅಧಿಕೃತವಾಗಿ ಖಾತೆ ಹಂಚಿಕೆಯ ಪಟ್ಟಿಯನ್ನು ಶೀಘ್ರದಲ್ಲೇ …

Read More »