ಬೆಳಗಾವಿ: ಬೇಸಿಗೆ ಕಾಲ ಬಂತೆಂದರೆ ನೀರಿನ ಬವಣೆ ಸಹಜ. ಅದರಂತೆ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟ ತಗ್ಗಿದ್ದರಿಂದ ಸದ್ಯ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ನೀರಿನ ಮಟ್ಟ ತಗ್ಗಿದರೂ ಜೂನ್ ಮಧ್ಯದವರೆಗೂ ಈ ನೀರನ್ನು ಸಮರ್ಪಕವಾಗಿ ಪೂರೈಸಬಹುದಾಗಿದೆ. ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕಿಂತಲೂ ಈ ಸಲ ತುಸು ಕಡಿಮೆ ಆಗಿದೆ. ಈಗ …
Read More »Daily Archives: ಮೇ 17, 2023
3 ತಿಂಗಳೊಳಗೆ ಫಿಟ್ ಆಗಿ ಇಲ್ಲಾ ರಾಜೀನಾಮೆ ನೀಡಿ: ಪೊಲೀಸರಿಗೆ DG ಖಡಕ್ ವಾರ್ನಿಂಗ್
ಮೊದಲೆಲ್ಲಾ ಪೊಲೀಸರಿಗೂ ಡೊಳ್ಳು ಹೊಟ್ಟೆಗೂ ಅದೇನೋ ಸಂಬಂಧವಿದ್ದಂತಿತ್ತು. ಆದರೆ ಈಗ ಕಾಲ ಬದಲಾಗಿದೆ. ಈಗೀಗ ಪೊಲೀಸ್ ಅಧಿಕಾರಿಗಳೂ ಫಿಟ್ ಆಂಡ್ ಫೈನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಸಹೋದ್ಯೋಗಿಗಳಿಗೂ ಅದೇ ರೀತಿ ಇರುವಂತೆ ಪ್ರೇರಣೆಯನ್ನೂ ಮಾಡುತ್ತಿದ್ದಾರೆ. ಇದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಸ್ಸಾಂನ ಪೋಲಿಸ್ ಅಧಿಕಾರಿಯೊಬ್ಬರು ತಮ್ಮ ಸಹೋದ್ಯೋಗಿಗಳಿಗೆ ʻ3 ತಿಂಗಳೊಳಗೆ ಫಿಟ್ ಆಗಿ ಇಲ್ಲಾ ರಾಜೀನಾಮೆ ನೀಡಿʼ ಎಂದು ಖಡಕ್ ಸೂಚನೆ ನೀಡಿದ್ದಾರೆ. ʻನಾವು ಅಸ್ಸಾಂನ ಐಪಿಎಸ್ …
Read More »ಪಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್: ತಾಳಿಕೋಟೆ ಯುವಕನ ಬಂಧನ
ವಿಜಯಪುರ: ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಯುಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿ ಪೊಲೀಸ್ ಅತಿಥಿಯಾಗಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ. ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದ ಯುವಕ ಇಬ್ರಾಹಿಂ ಮುರ್ತುಜಸಾಬ ಮುಲ್ಲಾ ಎಂಬಾತ ಇನ್ಸ್ಟಾಗ್ರಾಂನಲ್ಲಿ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಸ್ಟೋರಿ ಹಾಕಿದ್ದ. ಇಬ್ರಾಹಿಂ ಮುಲ್ಲಾನ ಇನ್ಸ್ಟಾಗ್ರಾಂ ವೀಕ್ಷಿಸಿದ ಸ್ಥಳೀಯರು ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ತಾಳಿಕೋಟೆ ಪೊಲೀಸರು …
Read More »ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮತ್ತೆ ಜೀವ ಬೆದರಿಕೆ ಕರೆ
ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಇದರೊಂದಿಗೆ ಕಳೆದ ನಾಲ್ಕು ತಿಂಗಳಲ್ಲಿ ಬಂದಿರುವ ಎರಡನೇ ಬೆದರಿಕೆ ಕರೆ ಇದಾಗಿದೆ ಎನ್ನಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ ದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ಸೋಮವಾರ ರಾತ್ರಿ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ, ಕರೆ ಸ್ವೀಕರಿಸಿದ ಸಿಬ್ಬಂದಿ …
Read More »ಪ್ರಯಾಣಿಸುತ್ತಿದ್ದಾಕೆಗೆ ಬಸ್ನಲ್ಲೇ ಹೆರಿಗೆ ಮಾಡಿಸಿದ ಮಹಿಳಾ ಕಂಡಕ್ಟರ್
ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಗೆ ಮಹಿಳಾ ಕಂಡಕ್ಟರ್ ಬಸ್ನಲ್ಲೇ ಹೆರಿಗೆ ಮಾಡಿಸಿದ ಅಪರೂಪದ ಪ್ರಸಂಗವೊಂದು ನಡೆದಿದೆ. ಚಿಕ್ಕಮಗಳೂರು ಘಟಕದ ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಪ್ರಕರಣ ನಡೆದಿದೆ.ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು ಘಟಕದ ವಾಹನ ಸಂಖ್ಯೆ ಕೆಎ-13 ಎಫ್-0855ರಲ್ಲಿ ಬೆಂಗಳೂರು-ಚಿಕ್ಕಮಗಳೂರು ಮಾರ್ಗವಾಗಿ ನಿನ್ನೆ ತೆರಳುತ್ತಿದ್ದಾಗ ಉದಯಪುರ ಸಮೀಪದ ಕೃಷಿ ಕಾಲೇಜು ಹತ್ತಿರ ಮಧ್ಯಾಹ್ನ 1.25ರ ಸುಮಾರಿಗೆ ಈ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಬಸ್ನಲ್ಲಿ 15 ಪ್ರಯಾಣಿಕರಿದ್ದರು. ಈ ಬಸ್ನಲ್ಲಿ …
Read More »