Breaking News

Monthly Archives: ಏಪ್ರಿಲ್ 2023

ರಾಮೋಜಿ ರಾವ್‌ಗೆ ಇ.ಡಿ ಉರುಳು?

ನವದೆಹಲಿ (‍ಪಿಟಿಐ): ಚಿಟ್‌ ಫಂಡ್ ವ್ಯವಹಾರ ಕಾಯ್ದೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗಸೂಚಿ ಉಲ್ಲಂಘಿಸಿರುವ ಮಾರ್ಗದರ್ಶಿ ಚಿಟ್‌ ಫಂಡ್‌ ಕಂಪನಿಯ (ಎಂಸಿಎಫ್‌ಪಿಲ್‌) ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಲು ಆಂಧ್ರಪ್ರದೇಶದ ಸಿಐಡಿ ವಿಭಾಗವು ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದೆ.   ಮಾರ್ಗದರ್ಶಿ ಕಂಪನಿಯ ಅಧ್ಯಕ್ಷ ರಾಮೋಜಿ ರಾವ್‌, ಅವರ ಸೊಸೆ ಶೈಲಜಾ ಕಿರಣ್‌ ಸೇರಿದಂತೆ ಐವರ ವಿರುದ್ಧ ಈ ಅವ್ಯವಹಾರ ಪ್ರಕರಣ ಸಂಬಂಧ …

Read More »

18 ಸಾವಿರ ನೋಟ್‌ಬುಕ್‌ ಬಳಸಿ ಅಂಬೇಡ್ಕರ್‌ ಭಾವಚಿತ್ರ ರಚನೆ

ಮಹಾರಾಷ್ಟ್ರ : ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ 18 ಸಾವಿರ ನೋಟ್‌ಬುಕ್‌ಗಳನ್ನು ಬಳಸಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್ ಅವರ ಭಾವಚಿತ್ರವನ್ನು ರಚಿಸಲಾಗಿದ್ದು, ಮಹಾರಾಷ್ಟ್ರದ ಲಾತೂರ್‌ನಲ್ಲಿ ಈ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ. Mosaic ಕಲಾ ಶೈಲಿಯಲ್ಲಿ ತಯಾರಾದ ಈ ಭಾವಚಿತ್ರದ ಹಿಂದೆ 18 ಕಲಾವಿದರ ಕೈಚಳಕವಿದೆ. ಪ್ರತಿವರ್ಷ ಏ‍ಪ್ರಿಲ್‌ 14ರಂದು ಅಂಬೇಡ್ಕರ್‌ ಜಯಂತಿಯನ್ನು ಆಚರಿಸಲಾಗುತ್ತದೆ. ಭಾರತದ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಬಿ. ಆರ್‌ ಅಂಬೇಡ್ಕರ್ ಅವರ ಗೌರವಾರ್ಥವಾಗಿ …

Read More »

ಶುಕ್ರವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ, ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ’

ಅಥಣಿ (ಬೆಳಗಾವಿ ಜಿಲ್ಲೆ): ‘ಯಾವುದೇ ಕಾರಣ ಕೊಡದೇ ನನ್ನನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ತೆಗೆದರು. ನಾನೇನು ರೇಪ್‌ ಮಾಡಿದ್ದೀನಾ, ಯಾರದಾದರೂ ಸೆರಗು ಎಳೆದಿದ್ದೀನಾ, ಭ್ರಷ್ಟಾಚಾರ ಮಾಡಿದ್ದೀನಾ? ಹೇಳದೇ ಕೆಳದೇ ಆ ಸ್ಥಾನ ಕಸಿದುಕೊಂಡರು’ ಎಂದು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಟೀಕಾಪ್ರಹಾರ ಮಾಡಿದರು.   ಪಟ್ಟಣದಲ್ಲಿ ಗುರುವಾರ ಮಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ನನಗೆ ಮಾನಸಿಕವಾಗಿ ಹಿಂಸೆ, ಅವಮಾನ ಮಾಡುತಿದ್ದರು. ಎಲ್ಲ ಸಹಿಸಿಕೊಂಡು ಮುಂದುವರಿದಿದ್ದೆ. ಉಪ ಮುಖ್ಯಮಂತ್ರಿ ಸ್ಥಾನ ಕಿತ್ತುಕೊಂಡಾಗಲೂ ನಾನು …

Read More »

ಬೊಮ್ಮಾಯಿ ಅವರು ಪ್ರಯಾಣಿಸುವ ಹೆಲಿಕಾಪ್ಟರ್ ಟೇಕಾಫ್ ಗೆ ಮುನ್ನ ಹೆಲಿ ಪ್ಯಾಡ್ ಬಳಿ ಬೆಂಕಿ

ಬೈಂದೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣಿಸುವ ಹೆಲಿಕಾಪ್ಟರ್ ಟೇಕಾಫ್ ಗೆ ಮುನ್ನ ಹೆಲಿ ಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಸಮೀಪದ ಅರೆಶಿರೂರು ಹೆಲಿಪ್ಯಾಡ್ ನಲ್ಲಿ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ನಲ್ಲಿ ಸಿಎಂ ಕೊಲ್ಲೂರಿಗೆ ಹೊರಡುವ ವೇಳೆ ಈ ಘಟನೆ ಸಂಭವಿಸಿದೆ. ಹೆಲಿ ಪ್ಯಾಡ್ ಬಳಿಯ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಭುಗಿಲೆದ್ದು ಆವರಿಸಿಕೊಳ್ಳತೊಡಗಿತು. ಕೂಡಲೆ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ಇದರಿಂದ ಸಿಎಂ ಪ್ರಯಾಣ …

Read More »

ಬಿಜೆಪಿಯಲ್ಲಿ ಮುಂದುವರೆದಿದ ರಾಜೀನಾಮೆ ಪರ್ವ

ಕಲಬುರಗಿ : ರಾಜ್ಯ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ಸದ್ಯ ಬಿಜೆಪಿ ಮುಖಂಡ, ಮಾಜಿ ಶಾಸಕ ದೊಡ್ಡಪ್ಪ ಗೌಡ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.     ಕಲಬುರ್ಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ದೊಡ್ಡಪ್ಪಗೌಡ ಅವರಿಗೆ ಟಿಕೆಟ್ ಕೈತಪ್ಪಿದೆ. ಇದರಿಂದ ಅಸಮಾಧಾನಗೊಂಡಿರುವ ದೊಡ್ಡಪ್ಪಗೌಡ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಗೆ ದೊಡ್ಡಪ್ಪಗೌಡ ಅವರು ಜೆಡಿಎಸ್ ನಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ.   …

Read More »

ನಾಮಪತ್ರ ಸಲ್ಲಿಕೆ: ಐವರಿಗಷ್ಟೇ ಕಚೇರಿಗೆ ಪ್ರವೇಶ

ಬೆಂಗಳೂರು: ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಗುರುವಾರದಿಂದ ಆರಂಭವಾಗುತ್ತಿದ್ದು, ಅಭ್ಯರ್ಥಿಯೂ ಸೇರಿದಂತೆ ಐದು ಮಂದಿ ಮಾತ್ರ ಚುನಾವಣಾಧಿಕಾರಿ ಕಚೇರಿಯೊಳಕ್ಕೆ ಪ್ರವೇಶಿಸಲು ಅವಕಾಶವಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.   ಏಪ್ರಿಲ್‌ 20ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಅಂಬೇಡ್ಕರ್‌ ಜಯಂತಿ (ಏಪ್ರಿಲ್‌ 14) ಹಾಗೂ ಭಾನುವಾರದಂದು ನಾಮಪತ್ರ ಸಲ್ಲಿಸಲು ಅವಕಾಶವಿರುವುದಿಲ್ಲ. ಉಳಿದ ದಿನಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ಮಾಹಿತಿ …

Read More »

ಸವದಿ ಮನವೊಲಿಸಲು ಬಂದ ಬಿಜೆಪಿ ಮುಖಂಡನ ಎಳೆದಾಡಿ, ಕಾರಿಗೆ ಗುದ್ದಿದ ಕಾರ್ಯಕರ್ತರು

ಅಥಣಿ (ಬೆಳಗಾವಿ ಜಿಲ್ಲೆ): ಪಕ್ಷ ಬಿಡದಂತೆ ಲಕ್ಷ್ಮಣ ಸವದಿ ಅವರ ಮನವೊಲಿಸಲು ಇಲ್ಲಿಗೆ ಗುರುವಾರ ಬಂದಿದ್ದ ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ನೇರ್ಲಿ ಹಾಗೂ ಆರ್.ಎಸ್.ಎಸ್. ಮುಖಂಡರಿಗೆ ಸವದಿ ಬೆಂಬಲಿಗರು ಮುತ್ತಿಗೆ ಹಾಕಿ, ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.   ಮತ್ತೆ ಕೆಲವರು ನೇರ್ಲಿ ಅವರ ಕಾರಿಗೆ ಗುದ್ದಿ ಕಿಡಿ ಕಾರಿದರು. ‘ನಮ್ಮ ಸಾಹುಕಾರಗೆ ಯಾಕೆ ಟಿಕಟ್ ತಪ್ಪಿಸಿದ್ದೀರಿ ಎಂದು ಉತ್ತರ ಕೊಟ್ಟೇ ಹೋಗಬೇಕು’ ಎಂದು ಪಟ್ಟು ಹಿಡಿದರು. ‘ಈ …

Read More »

ಬೆಳಗಾವಿ: ನೀತಿ ಸಂಹಿತೆ ಉಲ್ಲಂಘನೆ, ಕುಡಚಿ ಶಾಸಕ ರಾಜೀವ್ ಮೇಲೆ ಕೇಸ್‌

ಬೆಳಗಾವಿ: ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡಿದ ಆರೋಪದಡಿ ಕುಡಚಿ ಶಾಸಕ ಪಿ.ರಾಜೀವ್ ಅವರ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ರಾಯಬಾಗ ತಾಲ್ಲೂಕಿನ ಮುಗಳಖೋಡದ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ಏ.10ರಂದು ಶಾಸಕ ಪಿ. ನಡೆದ ಪ್ರಚಾರ ಸಭೆ ನಡೆಸಿದ್ದರು. ಆಗ ಮಕ್ಕಳನ್ನು ಉದ್ದೇಶಿಸಿ ಪ್ರಚಾರ ಮಾಡುವಂತೆ ತಿಳಿಸಿದ್ದರು. ಕೆಲವು ಬಾಲಕರು ಬಿಜೆಪಿ ಚಿಹ್ನೆ ಇರುವ ಟೀ-ಶಾರ್ಟ್‌, ಶಾಲು ಧರಿಸಿದ್ದರು. ಈ ಬಗ್ಗೆ ಚುನಾವಣಾಧಿಕಾರಿ ಶಾಸಕ ಹಾಗೂ ದೇವಸ್ಥಾನ ಸಮಿತಿಯವರ ವಿರುದ್ಧ …

Read More »

ಕೈತಪ್ಪಿದ ಟಿಕೆಟ್, ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ: ಸರನೋಬತ್‌

ಖಾನಾಪುರ: ‘ಬಿಜೆಪಿ ಟಿಕೆಟ್‌ ಸಿಗುತ್ತದೆ ಎಂಬ ಭರವಸೆಯಲ್ಲಿದ್ದ ನನಗೆ ತುಂಬ ಆಘಾತವಾಗಿದೆ. ನನ್ನೊಂದಿಗೆ ಇಷ್ಟು ದಿನ ಇದ್ದ ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಹೆಜ್ಜೆ ಇಡುತ್ತೇನೆ’ ಎಂದು ಬಿಜೆಪಿ ನಾಯಕಿ ಡಾ.ಸೋನಾಲಿ ಸರನೋಬತ್‌ ಹೇಳಿದರು.   ಪಟ್ಟಣದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಕಳೆದ ಹಲವು ತಿಂಗಳಿಂದ ಖಾನಾಪುರ ಕ್ಷೇತ್ರದ ಉದ್ದಗಲ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ನನಗೆ ಇಲ್ಲಿಯ ಜನರೊಂದಿಗೆ ಭಾವನಾತ್ಮಕ ಸಂಬಂಧವಿದೆ. ಇಲ್ಲಿಯ ಕಾಂಗ್ರೆಸ್ ಅಭ್ಯರ್ಥಿ …

Read More »

ರಾಮದುರ್ಗ ಕ್ಷೇತ್ರದ ಹೊರಗಿನ ವ್ಯಕ್ತಿಗೆ ಟಿಕೆಟ್‌ ನೀಡಿದ್ದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು

ರಾಮದುರ್ಗ (ಬೆಳಗಾವಿ ಜಿಲ್ಲೆ): ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಕಡೆಗಣಿಸಿ, ಕ್ಷೇತ್ರದ ಹೊರಗಿನ ವ್ಯಕ್ತಿಗೆ ಟಿಕೆಟ್‌ ನೀಡಿದ್ದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬುಧವಾರ ಶಾಸಕರ ಮನೆ ಮುಂದೆ ಜಮಾವನೆಗೊಂಡ ಅಪಾರ ಸಂಖ್ಯೆಯ ಕಾರ್ಯಕರ್ತರು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್‌ ರ್‍ಯಾಲಿ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ‘ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸಿದವರು ಮಹಾದೇವಪ್ಪ. ಅವರಿಗೆ ಟಿಕೆಟ್‌ …

Read More »