Breaking News

Daily Archives: ಏಪ್ರಿಲ್ 13, 2023

ಕಡೂರು| ವೈ.ಎಸ್.ವಿ‌. ದತ್ತ ಮರಳಿ ಜೆಡಿಎಸ್‌ಗೆ

ಕಡೂರು: ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಯಗಟಿಯ ಮನೆಗೆ ಗುರುವಾರ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದು, ಅವರ ಸನ್ಮುಖದಲ್ಲಿ ದತ್ತ ಅವರು ಮತ್ತೆ ಜೆಡಿಎಸ್‌ಗೆ ಮರಳಿದರು. ಯಗಟಿಯ ಅವರ ಮನೆಯಲ್ಲಿ ಸೇರಿದ್ದ ಸಾವಿರಾರು ಜನರ ಉಪಸ್ಥಿತಿಯಲ್ಲಿ ಸಂಸದ ಪ್ರಜ್ವಲ್ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಕೇವಲ ದತ್ತಣ್ಣ ಅವರನ್ನು ನಂಬಿಸಿ ಮೋಸ ಮಾಡಿಲ್ಲ. ಅವರ ಅಭಿಮಾನಿಗಳಿಗೂ ಮೋಸ ಮಾಡಿದೆ. ಇದನ್ನು ಈ ಹಿಂದೆಯೇ ದತ್ತ ಅವರಿಗೆ …

Read More »

ಆಕಾಂಕ್ಷಿಗಳು ಯಾವ ಕಾರಣಕ್ಕೂ ಪಕ್ಷ ಬಿಡಬಾರದು.: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯು ಬಿಡುಗಡೆಗೊಂಡಿದ್ದು, ಟಿಕೇಟ್ ಮೇಲೆ ಕಣ್ಣಿಟ್ಟು ನಿರಾಶೆಗೊಂಡಿರುವ ಆಕಾಂಕ್ಷಿಗಳು ಯಾವ ಕಾರಣಕ್ಕೂ ಪಕ್ಷ ಬಿಡಬಾರದು. ಆತುರದ ನಿರ್ಧಾರವನ್ನು ಕೈಗೊಳ್ಳಬಾರದು. ಇಷ್ಟರಲ್ಲಿಯೇ ಪಕ್ಷದ ವರಿಷ್ಠರು ಅಸಮಧಾನಿತರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕಲ್ಲೋಳಿ ಪಟ್ಟಣದ ಬಸವಂತ ದಾಸನವರ ತೋಟದಲ್ಲಿ ಬುಧವಾರ ಸಂಜೆ ಜರುಗಿದ ಮೂಡಲಗಿ, ನಾಗನೂರ, ಕಲ್ಲೋಳಿ ಮತ್ತು ಅರಭಾವಿ ಪಟ್ಟಣಗಳ ಬಿಜೆಪಿ ಕಾರ್ಯಕರ್ತರು, …

Read More »

ಬಿಜೆಪಿ ಶಾಸಕ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ ರಾಜಿನಾಮೆ

ಶಿರಸಿ: ಶಾಸಕ ಸ್ಥಾನಕ್ಕೆ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ ರಾಜಿನಾಮೆ ನೀಡಿದರು. ಗುರುವಾರ ಸಂಜೆ ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದರು. ಬಿಜೆಪಿ ಟಿಕ್ಟ್ ತಪ್ಪಿದ್ದರಿಂದ ಬೇಸರಗೊಂಡು ಅವರು ರಾಜಿನಾಮೆ ನೀಡಿದರು.2023ರ ವಿಧಾನಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.ಷಡ್ಯುಲ್ ಕ್ಯಾಸ್ಟ್ ನವರು ಎಸ್.ಸಿ ಕ್ಷೇತ್ರದಲ್ಲಿ ನಿಲ್ಲಬೇಕು.‌ ಎಸ್‌ಟಿ ಕ್ಷೇತ್ರದಲ್ಲಿ ಎಸ್.ಟಿ ಜನಾಂಗದವರು ಚುನಾವಣೆಗೆ ನಿಲ್ಲಬೇಕು. ಜನರಲ್ ನವರು …

Read More »

ಮಾಜಿ ಸಚಿವ ಶಶಿಕಾಂತ ನಾಯಿಕ ಬಿಜೆಪಿಗೆ ರಾಜಿನಾಮೆ

ಬೆಳಗಾವಿ: ಮಾಜಿ ಸಚಿವ ಶಶಿಕಾಂತ ನಾಯಿಕ ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ. ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಕೊಡದಿರುವ ಹಿನ್ನೆಲೆಯಲ್ಲಿ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶಶಿಕಾಂತ ನಾಯಿಕ ಗುರುವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಪಕ್ಷ ಕಟ್ಟಲು ಸಹವಾಲು ವರ್ಷಗಳ ಕಾಲ ಶ್ರಮಿಸಿದ್ದೇನೆ. ಹಳ್ಳಿ ಹಳ್ಳಿಯಲ್ಲಿ ಸಂಘಟನೆ ಮಾಡಿದ್ದೇನೆ. ಆದರೆ ಪಕ್ಷ ನನ್ನನ್ನು ಗುರುತಿಸಲಿಲ್ಲ. ಅನೇಕ ಬಾರಿ ಟಿಕೆಟ್ ಕೇಳಿದರೂ ಕೊಡಲಿಲ್ಲ. ಯಾವುದೇ …

Read More »

‘ಮೋದಿ ಬ್ಯಾನರ್’ ಹಾಕಿದವರೇ ಕಿತ್ತೆಸೆಯುತ್ತಿದ್ದಾರೆ, ಇದಲ್ಲವೇ ‘ಅಚ್ಛೆ ದಿನ್’: ‘ಟ್ವಿಟ್’ನಲ್ಲಿ ‘ಕಾಂಗ್ರೆಸ್’ ಕುಟುಕು

ಬೆಂಗಳೂರು: ಮೋದಿ ಬ್ಯಾನರ್ ( Modi Banner ) ಹಾಕಿದವರೇ ಮೋದಿಯನ್ನು ಕಿತ್ತೆಸೆಯುತ್ತಿದ್ದಾರೆ. ಇದಲ್ಲವೇ ಅಚ್ಛೆ ದಿನ್, ಇದಲ್ಲವೇ ಅಮೃತಕಾಲ್ ಬಿಜೆಪಿ ? ಮೋದಿ ಮುಖ ನೋಡಿ ಮತ ಕೊಡಿ ಎನ್ನುವ ಕಾಲ ಹೋಗಿದೆ, ಬಿಜೆಪಿ ಕಾರ್ಯಕರ್ತರಿಗೆ ( BJP Worker ) ಈಗ ಮೋದಿಯೇ ಅಪಥ್ಯ! ಕಾಲಚಕ್ರ ತಿರುಗುತ್ತದೆ, ತಲೆ ಮೇಲೆ ಬಿದ್ದ ನೀರು ಕಾಲಬುಡಕ್ಕೆ ಬರಲೇಬೇಕು ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿಯನ್ನು …

Read More »

ಕರ್ನಾಟಕ ವಿಧಾನಸಭಾ ಚುನಾವಣೆ’ಗೆ ‘ಗೆಜೆಟ್ ಅಧಿಸೂಚನೆ’ ಪ್ರಕಟ

ಬೆಂಗಳೂರು: 224 ಕರ್ನಾಟಕ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯನ್ನು ( Karnataka Assembly Election 2023 ) ದಿನಾಂಕ 29-03-2023ರಂದು ಕೇಂದ್ರ ಚುನಾವಣಾ ಆಯೋಗದಿಂದ ಘೋಷಣೆ ಮಾಡಲಾಗಿತ್ತು. ಮೇ.10ರಂದು ಮತದಾನ, ಮೇ.13ಕ್ಕೆ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು ಅಧಿಕೃತವಾಗಿ ಚುನಾವಣೆಗೆ ಗೆಜೆಟ್ ಅಧಿಸೂಚನೆಯನ್ನು ( gazette notification ) ಹೊರಡಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಅಧಿಸೂಚನೆಯ ಅನುಸಾರ, ರಾಜ್ಯಪಾಲರಾದಂತ ಥಾವರ್ ಚೆಂದ್ ಗೆಹ್ಲೋಟ್ ಅವರು, ಇಂದು ಕರ್ನಾಟಕ ವಿಧಾನಸಭಾ ಚುನಾವಣೆ-2023ರಕ್ಕೆ …

Read More »

ಪದ್ಮನಾಭನಗರ ಅಭ್ಯರ್ಥಿಗೆ ಬಿ ಫಾರಂ ನೀಡದ ಡಿಕೆ ಶಿವಕುಮಾರ್ ನಡೆಯ ಹಿಂದಿನ ಮರ್ಮವೇನು?

ಬೆಂಗಳೂರು: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸ್ಪರ್ಧಿಸುವ ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನಾಗಿ ಆರ್ ಅಶೋಕ (R Ashoka) ಅವರನ್ನು ಕಣಕ್ಕಿಳಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಆರ್ ಅಶೋಕ್ ಸ್ಪರ್ಧಿಸುವ ಮತ್ತೊಂದು ಕ್ಷೇತ್ರ ಪದ್ಮನಾಭನಗರದಲ್ಲಿ (Padmanabhanagar) ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಘುನಾಥ್ ನಾಯ್ಡು (Raghunath Naidu) ಅವರಿಗೆ ಬಿ …

Read More »

ಮಾಳವಿಕಾ ಆಕರ್ಷಕ ಮುಖಚಹರೆಯನ್ನೇ ಬದಲಾಯಿಸಿಬಿಟ್ಟಿದೆ. ಮೈಗ್ರೇನ್

ಬೆಂಗಳೂರು: ಮನುಷ್ಯನನ್ನು ಕಿತ್ತು ಕಾಡಲು ದೊಡ್ಡ ಕಾಯಿಲೆಗಳೇ ಬೇಕಿಲ್ಲ. ಸಣ್ಣಪುಟ್ಟದೆಂದು ನಿರ್ಲಕ್ಷ್ಯಿಸುವ ನೋವುಗಳೂ ದೊಡ್ಡ ವ್ಯಾಧಿಗಳಾಗಿ ಕಾಡಬಹುದು. ಅದಕ್ಕೆ ನಟಿ ಮಾಳವಿಕಾ ಉದಾಹರಣೆಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ವಿಪರೀತವಾದ ಮೈಗ್ರೇನ್ ಮಾಳವಿಕಾ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ. ಇದಕ್ಕೂ ಮುಖ್ಯ ವಿಷಯವೆಂದರೆ ಸದಾ ಅಪ್ಪಟ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮಾಳವಿಕಾ ಆಕರ್ಷಕ ಮುಖಚಹರೆಯನ್ನೇ ಬದಲಾಯಿಸಿಬಿಟ್ಟಿದೆ. ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಹೊಂದಿರುವ, ಕಾನೂನು ಪದವೀಧರೆ ಮಾಳವಿಕಾ ಅವರು …

Read More »

ರಾಮೋಜಿ ರಾವ್‌ಗೆ ಇ.ಡಿ ಉರುಳು?

ನವದೆಹಲಿ (‍ಪಿಟಿಐ): ಚಿಟ್‌ ಫಂಡ್ ವ್ಯವಹಾರ ಕಾಯ್ದೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗಸೂಚಿ ಉಲ್ಲಂಘಿಸಿರುವ ಮಾರ್ಗದರ್ಶಿ ಚಿಟ್‌ ಫಂಡ್‌ ಕಂಪನಿಯ (ಎಂಸಿಎಫ್‌ಪಿಲ್‌) ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಲು ಆಂಧ್ರಪ್ರದೇಶದ ಸಿಐಡಿ ವಿಭಾಗವು ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದೆ.   ಮಾರ್ಗದರ್ಶಿ ಕಂಪನಿಯ ಅಧ್ಯಕ್ಷ ರಾಮೋಜಿ ರಾವ್‌, ಅವರ ಸೊಸೆ ಶೈಲಜಾ ಕಿರಣ್‌ ಸೇರಿದಂತೆ ಐವರ ವಿರುದ್ಧ ಈ ಅವ್ಯವಹಾರ ಪ್ರಕರಣ ಸಂಬಂಧ …

Read More »

18 ಸಾವಿರ ನೋಟ್‌ಬುಕ್‌ ಬಳಸಿ ಅಂಬೇಡ್ಕರ್‌ ಭಾವಚಿತ್ರ ರಚನೆ

ಮಹಾರಾಷ್ಟ್ರ : ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ 18 ಸಾವಿರ ನೋಟ್‌ಬುಕ್‌ಗಳನ್ನು ಬಳಸಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್ ಅವರ ಭಾವಚಿತ್ರವನ್ನು ರಚಿಸಲಾಗಿದ್ದು, ಮಹಾರಾಷ್ಟ್ರದ ಲಾತೂರ್‌ನಲ್ಲಿ ಈ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ. Mosaic ಕಲಾ ಶೈಲಿಯಲ್ಲಿ ತಯಾರಾದ ಈ ಭಾವಚಿತ್ರದ ಹಿಂದೆ 18 ಕಲಾವಿದರ ಕೈಚಳಕವಿದೆ. ಪ್ರತಿವರ್ಷ ಏ‍ಪ್ರಿಲ್‌ 14ರಂದು ಅಂಬೇಡ್ಕರ್‌ ಜಯಂತಿಯನ್ನು ಆಚರಿಸಲಾಗುತ್ತದೆ. ಭಾರತದ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಬಿ. ಆರ್‌ ಅಂಬೇಡ್ಕರ್ ಅವರ ಗೌರವಾರ್ಥವಾಗಿ …

Read More »