Breaking News

Daily Archives: ಏಪ್ರಿಲ್ 9, 2023

18 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ತಪ್ಪುವ ಭೀತಿ

ಬೆಂಗಳೂರು: ರಾಜ್ಯದ 18 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ತಪ್ಪುವ ಭೀತಿ ಉಂಟಾಗಿದೆ. ವಯಸ್ಸಿನ ಕಾರಣ ಮತ್ತು ಕ್ಷೇತ್ರದಲ್ಲಿ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಕೆಲವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎನ್ನುವ ಸುದ್ದಿ ಬಂದಿದೆ. ಭಾನುವಾರ ರಾತ್ರಿ ಅಥಾ ಸೋಮವಾರ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು ಇದರಲ್ಲಿ ಸುಮಾರು 75 -80 ಹಾಲಿ ಶಾಸಕರ ಹೆಸರು ಇರುವ ಸಾಧ್ಯತೆ ಇದೆ. ವಯಸ್ಸಿನ ಕಾರಣಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ರಾಮದುರ್ಗದ ಮಹಾದೇವಪ್ಪ ಯಾದವಾಡ, ಕಲಘಟಗಿಯ …

Read More »

ಕನ್ನಡಿಗರ ಬ್ಯಾಂಕ್, ಏರ್ ಪೋರ್ಟ್ ಮುಕ್ಕಿದ್ದಾಯ್ತು, ಈಗ KMF ನುಂಗಲು ಹೊರಟಿದ್ದೀರಾ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯ ಪ್ರವಸದ ಬಗ್ಗೆ ವಿಪಕ್ಷ ನಾಯಕರು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ. ಪ್ರಧಾನಿ ಮೋದಿಯವರೇ ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯ್ತು. ಈಗ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ? ನಮ್ಮ ವಿಜಯಾ ಬ್ಯಾಂಕ್ ನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್ ನದ್ದು. ಬಂದರು, ಏರ್ ಪೋರ್ಟ್ ನುಂಗಿದ ಅದಾನಿ …

Read More »

ಕಿತ್ತೂರನ ಚೆಕ್ ಪೋಸ್ಟ್ ನಲ್ಲಿ 4.5 ಲಕ್ಷ ರೂ. ಮೌಲ್ಯದ ಆಭರಣ ವಶ

ಬೆಳಗಾವಿ: ಕಿತ್ತೂರಿನ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರು ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. 4.5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಾರು ಸಮೇತ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಆಭರಣಗಳಿಗೆ ಯಾವುದೇ ದಾಖಲೆಗಳಿಲ್ಲದ್ದರಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.

Read More »

ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ವೈ.ಎಸ್.ವಿ ದತ್ತಾ ಪಕ್ಷದ ವಿರುದ್ಧ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕ

ಚಿಕ್ಕಮಗಳೂರು: ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ವೈ.ಎಸ್.ವಿ ದತ್ತಾ ಪಕ್ಷದ ವಿರುದ್ಧ ಬಂಡಾಯ ಸಾರಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದರು. ಚಿಕ್ಕಮಗಳೂರಿನ ಕಡೂರಿನಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಿ ಅಭಿಮಾನಿಗಳು, ಬೆಂಬಲಿಗರ ಜೊತೆ ಚರ್ಚಿಸಿದ ವೈ.ಎಸ್.ವಿದತ್ತಾ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರು ಟಿಕೆಟ್ ನೀಡುವ ಭರವಸೆ ನಿಡಿದ್ದರು. ಆದರೆ ಟಿಕೆಟ್ ಕೈತಪ್ಪಿದೆ. ಕಾಂಗ್ರೆಸ್ ಗೆ ರಾಜೀನಾಮೆ ನೀಡುವುದಷ್ಟೇ ಬಾಕಿಯಿದೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗಾಗಿ …

Read More »

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಏ‌.11 ರವರೆಗೆ ಅವಕಾಶ

ಬೆಳಗಾವಿ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಏ‌.11 ರವರೆಗೆ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಏ.20 ಕಡೆಯ ದಿನವಾಗಿರುತ್ತದೆ. ಸಾರ್ವಜನಿಕರು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್(ಎನ್.ವಿ.ಎಸ್.ಪಿ) ಲಾಗಿನ್ ಆಗುವ ಮೂಲಕ ತಮ್ಮ ಹೆಸರು ನೋಂದಾಯಿಸಲು ಅಥವಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬಹುದು. ಇದಲ್ಲದೇ ಅರ್ಹ ಮತದಾರರು ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕವೂ ನಮೂನೆ-6 …

Read More »

ಯಾಕೆ ಹತಾಶರಾಗಿದ್ದಾರೋ ತಿಳಿಯುತ್ತಿಲ್ಲ ಲಕ್ಷ್ಮಣಣ್ಣ ನೀನು ಶಾಂತವಾಗಿರು: ರಮೇಶ ಜಾರಕಿಹೊಳಿ

ಬೆಳಗಾವಿ: ಲಕ್ಷ್ಮಣ ಸವದಿ ಯಾಕೆ ಹತಾಶರಾಗಿದ್ದಾರೋ ತಿಳಿಯುತ್ತಿಲ್ಲ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ, ಲಕ್ಷ್ಮಣಣ್ಣ ನೀನು ಶಾಂತವಾಗಿರು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಟಾಂಗ್ ನೀಡಿದ್ದಾರೆ. ಮಹಾರಾಷ್ಟ್ರದ ಗಡಿ ಶಿನ್ನೋಳಿಯಲ್ಲಿ ರಮೇಶ ಜಾರಕಿಹೊಳಿ ಸಭೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಹೇಶ ಕುಮಟಳ್ಳಿ ಮಧ್ಯೆ ಫೈಟ್ ವಿಚಾರದ ಕುರಿತು ಪ್ರಶ್ನಿಸಿದಾಗ, ಕೆಲವೊಂದು …

Read More »

ಇಂದು ರಾತ್ರಿಯೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್‌

ಬೆಂಗಳೂರು: ದಿಲ್ಲಿಯಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ, ಇಂದು ರಾತ್ರಿ ಅಥವಾ ನಾಳೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.   ಪ್ರಧಾನಿ ನೇತೃತ್ವದ ಈ ಸಭೆಯಲ್ಲಿ 140ಕ್ಕೂ ಹೆಚ್ಚು ಹೆಸರುಗಳನ್ನು ಒಳಗೊಂಡಿರುವ ಮೊದಲ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿದ್ದು, ಪಟ್ಟಿ ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. …

Read More »

ಚೆನ್ನೈ-ದೆಹಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊಗೆ: ಪ್ರಯಾಣಿಕರು ಗಾಬರಿ

ಅಮರಾವತಿ (ಆಂಧ್ರಪ್ರದೇಶ): ‌ಚೆನ್ನೈ-ದೆಹಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಗಾಬರಿ ಮೂಡಿಸಿದ ಪ್ರಸಂಗ ನೆಲ್ಲೂರಿನಲ್ಲಿ ಭಾನುವಾರ ನಡೆದಿದೆ. ಜನರ ಈ ಗಾಬರಿಗೆ ಇತ್ತೀಚೆಗೆ ಕೇರಳದ ರೈಲು ಬೋಗಿಗೆ ಬೆಂಕಿಯಿಟ್ಟ ದುರ್ಘಟನೆಯೇ ಕಾರಣ ಎಂದು ನಂಬಲಾಗಿದೆ.   ಪ್ರಯಾಣದ ವೇಳೆ ಚೆನ್ನೈ-ದೆಹಲಿ ಎಕ್ಸ್‌ಪ್ರೆಸ್‌ನ B-5ನೇ ಬೋಗಿಯಲ್ಲಿ ಹೊಗೆ ಎದ್ದಿರುವುದು ಕಂಡುಬಂತು. ಈ ಸಂದರ್ಭ ಆಗಬಹುದಾದ ದುರಂತ ತಪ್ಪಿಸುವ ಎಚ್ಚರಿಕೆಯಿಂದ ಚಾಲಕರು ರೈಲನ್ನು 20 ನಿಮಿಷಗಳ ಕಾಲ ಕಾವಾಲಿ ನಿಲ್ದಾಣದ ಸಮೀಪ …

Read More »

ವಿಜಯಪುರ: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯತ್ತ ಎಲ್ಲರ ಚಿತ್ತ

ವಿಜಯಪುರ : ಅಳೆದು, ತೂಗಿ ಕೊನೆಗೂ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಏಪ್ರಿಲ್‌ 9 ಅಥವಾ 10ರಂದು ಘೋಷಣೆಯಾಗುವ ನಿರೀಕ್ಷೆ ಇದೆ.   ಹೇಗಾದರೂ ಮಾಡಿ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಹರಸಾಹಸಕ್ಕೆ ಬಿದ್ದಿರುವ ಬಿಜೆಪಿಯ ಕೇಂದ್ರ ವರಿಷ್ಠರು ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಸಮೀಕ್ಷೆ ನಡೆಸಿದ್ದಾರೆ. ಅಲ್ಲದೇ, ಬಿಜೆಪಿ ಘಟಕ, ಸಂಘ ಪರಿವಾರ ಕೂಡ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸರ್ವೆ …

Read More »

ಕರಡಿಗುದ್ದಿ, ಡಾ.ದೀಕ್ಷಿತ್‌ಗೆ ‘ಸಿರಿಗನ್ನಡ ಗೌರವ’

ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು 2022ನೇ ಸಾಲಿನ ‘ಸಿರಿಗನ್ನಡ ಗೌರವ’ ಮತ್ತು 2021ನೇ ಸಾಲಿನ ‘ಸಿರಿಗನ್ನಡ ಪುಸ್ತಕ ಪ್ರಶಸ್ತಿ’ ಪ್ರಕಟಿಸಿದೆ. ಸಿರಿಗನ್ನಡ ಗೌರವ ಪ್ರಶಸ್ತಿಗೆ ಪ್ರೊ.ರಾಜಶೇಖರ ಎಂ. ಕರಡಿಗುದ್ದಿ ಮತ್ತು ಡಾ.ಮಾಧವ ದೀಕ್ಷಿತ ಭಾಜನರಾಗಿದ್ದಾರೆ. ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಈರಯ್ಯ ಕಿಲ್ಲೇದಾರ ಅವರ ವೈಚಾರಿಕ ಲೇಖನ ಸಂಗ್ರಹ ‘ಉರಿಯ ಪೇಟೆಯಲ್ಲಿ’ ಕೃತಿ ಮತ್ತು ಚಂದ್ರಶೇಖರ ಪೂಜಾರ ಅವರ ಗಜಲ್ ಸಂಕಲನ ‘ಬೆಳಕ ನಿಚ್ಚಣಿಕೆ’ ಕೃತಿ ಆಯ್ಕೆಯಾಗಿವೆ. ಜೀವನಮಾನ ಸಾಧನೆ ಪ್ರಶಸ್ತಿಗಳು: …

Read More »