ಬೆಳಗಾವಿ: ‘ಮಾರ್ಚ್ 4 ಮತ್ತು 5ರಂದು ಬಸವಕಲ್ಯಾಣದಲ್ಲಿ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾದಿವೇಶನ ನಡೆಸಲಾಗುತ್ತಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಜನ ಪಾಲ್ಗೊಳ್ಳಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು. ’12ನೇ ಶತಮಾನದಲ್ಲಿ ಬಸವಣ್ಣನವರಿಂದ ಅವೈದಿಕ ಲಿಂಗಾಯತ ಧರ್ಮ ಸ್ಥಾಪಿತವಾಗಿದ್ದು ಬಸವ ಕಲ್ಯಾಣದಲ್ಲಿ. ಅನುಭವ ಮಂಟಪ ಸ್ಥಾಪನೆಯಾದದ್ದು ಕೂಡ ಅಲ್ಲಿಯೇ. ಹೀಗಾಗಿ ಬಸವಕಲ್ಯಾಣವು ಲಿಂಗಾಯತರಿಗೆ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಆ ಕಾರಣಕ್ಕಾಗಿ ಪ್ರಪ್ರಥಮ ರಾಷ್ಟ್ರೀಯ …
Read More »Monthly Archives: ಮಾರ್ಚ್ 2023
ಕಾಂಗ್ರೆಸ್ ಮುಖಂಡನಿಗೆ ಚಾಕು ಇರಿತ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಕಾಗವಾಡ: ಕಾಂಗ್ರೆಸ್‌ನ ಕಾಗವಾಡ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಪ್ರಶಾಂತ ಅಪರಾಜ ಅವರಿಗೆ ಐನಾಪುರ ಪಟ್ಟಣದಲ್ಲಿ ಸೋಮವಾರ ಸಂಜೆ ಅಪರಿಚಿತರು ಚಾಕು ಇರಿದು ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಪ್ರಶಾಂತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐನಾಪುರ ಹೊರವಲಯದ ಬೈಕ್ ಮೇಲೆ ಹೊರಟಾಗ ಅಡ್ಡಗಟ್ಟಿದ ಇಬ್ಬರು ಅಪರಿಚಿತ ಯುವಕರು, ಪ್ರಶಾಂತ ಅವರ ಕೈ- ಹೊಟ್ಟೆಗೆ ಚಾಕು ಇರಿದು ಪರಾರಿಯಾದರು. ಘಟನೆ ಕಾರಣ ಗೊತ್ತಾಗಿಲ್ಲ. ಅಲ್ಲದೇ ಪ್ರಶಾಂತ ಅವರು ಚಾಕು ಇರಿದವರನ್ನು ಗುರುತಿಸಿಲ್ಲ ಎಂದು ಪೊಲೀಸರು …
Read More »ಪದ್ಮಶ್ರೀ ಸೀತವ್ವ ಜೋಡಟ್ಟಿ ಅವರಿಗೆ ‘ರಾಣಿ ಮಲ್ಲಮ್ಮ ಪ್ರಶಸ್ತಿ’ ಪ್ರದಾನ
(ಬೈಲಹೊಂಗಲ ): ‘ರಾಣಿ ಮಲ್ಲಮ್ಮನ ವೀರೋಚಿತ ಹೋರಾಟ, ಕೆಚ್ಚೆದೆಯ ಗುಣ ಆಧುನಿಕ ಮಹಿಳೆಯರಿಗೆ ದಾರಿದೀಪವಾಗಲಿ’ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೀತವ್ವ ಜೋಡಟ್ಟಿ ಆಶಿಸಿದರು. ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಮಂಗಳವಾರ ರಾತ್ರಿ ಆಯೋಜಿಸಿದ್ದ ‘ಬೆಳವಡಿ ಮಲ್ಲಮ್ಮನ ಉತ್ಸವ’ ಉದ್ಘಾಟನೆ ಸಮಾರಂಭದಲ್ಲಿ ‘ರಾಣಿ ಮಲ್ಲಮ್ಮ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ‘ವೀರ ವನಿತೆ ಬೆಳವಡಿ ಮಲ್ಲಮ್ಮನ ಸಾಹಸಮಯ ಇತಿಹಾಸ ಹಾಗೂ ಭಾಷಾ ಪ್ರೇಮ …
Read More »ಮಲ್ಲಮ್ಮನ ಪ್ರತಿಮೆ ಲೋಕಾರ್ಪಣೆ ನಿರ್ಲಕ್ಷ್ಯ, ತೀವ್ರ ಪ್ರತಿಭಟನೆ
ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಅಶ್ವಾರೂಢ ಕಂಚಿನ ಪ್ರತಿಮೆ ಅನಾವರಣ ಸಂಬಂಧವಾಗಿ ಮಂಗಳವಾರ ರಾತ್ರಿ ಗ್ರಾಮದಲ್ಲಿ ತೀವ್ರ ವಾಗ್ವಾದ ನಡೆಯಿತು. ಬೆಳವಡಿ ಮಲ್ಲಮ್ಮನ ಉತ್ಸವ ಮೆರವಣಿಗೆ ಬೆಳಿಗ್ಗೆಯೇ ನಡೆಯಿತು. ಇದಕ್ಕೂ ಮುನ್ನ ಪ್ರತಿಮೆ ಅನಾವರಣ ಕಾರ್ಯಕ್ರಮ ಇತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿಯೂ ಬರಲಿಲ್ಲ. ಇದರಿಂದ ಅನಾವರಣ ಕಾರ್ಯಕ್ರಮವನ್ನು ಮುಂದಕ್ಕೆ ಹಾಕುತ್ತ ಬರಲಾಯಿತು. ರಾತ್ರಿ 8ರ ನಂತರ ಸಂಸದೆ …
Read More »ಬೆಳಗಾವಿ: ಮಾರ್ಚ್ 1ರಂದು ಸಿದ್ದರಾಮಯ್ಯ ‘ಪ್ರಜಾಧ್ವನಿ’ ಯಾತ್ರೆ
ಬೆಳಗಾವಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆಯ ಅಂಗವಾಗಿ ಮಾರ್ಚ್ 1ರಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಂತಬಾಳೆಕುದ್ರಿಯಲ್ಲಿ ಸಮಾವೇಶ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಶಿಂಧೋಳಿಯಿಂದ ಮೆರವಣಿಗೆ ನಡೆಯಲಿದೆ. 5 ಸಾವಿರ ಬೈಕುಗಳ ಸಮೇತ ಯುವಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಅಲ್ಲಿಂದ ಪಂತಬಾಳೆಕುಂದ್ರಿಯ ವೈರ್‌ಲೆಸ್ ಮೈದಾನಕ್ಕೆ ತೆರಳಿ ಅಲ್ಲಿ ಸಮಾವೇಶ ನಡೆಸಲಾಗುವುದು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, …
Read More »ಕೊಡಲಿಯಿಂದ ಹೊಡೆದು ಮಗನ ಕೊಲೆ ಮಾಡಿದ ತಂದೆ
ಕಾಗವಾಡ: ತಾಲ್ಲೂಕಿನ ಉಗಾರ ಬಿ.ಕೆ. ಗ್ರಾಮದಲ್ಲಿ ಮಂಗಳವಾರ ತಂದೆ ಮಗನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಭರತೇಶ ಉರೂಫ್ ಚೇತನ್ ಖಾಂಜೆ (30) ಕೊಲೆಯಾದ ಯುವಕ. ಜಿನ್ನಪ್ಪ ಪಾಯಪ್ಪ ಖಾಂಜೆ (64) ಕೊಲೆ ಆರೋಪಿ. ‘ಭರತೇಶ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಂದೆ- ತಾಯಿಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿರಲಿಲ್ಲ. ಕುಡಿತದ ಚಟ ಬೆಳೆಸಿಕೊಂಡಿದ್ದ. ಮದ್ಯಕ್ಕಾಗಿ ಹಣ ಕೊಡುವಂತೆ ಪದೇ ಪದೇ ಹೆತ್ತವರೊಂದಿಗೆ ಜಗಳವಾಡುತ್ತಿದ್ದ. ಮಂಗಳವಾರ ಕೂಡ ಇದೇ ಕಾರಣಕ್ಕೆ ಜಗಳ ನಡೆದಿದ್ದು, ಆವೇಶದಲ್ಲಿ ಕೊಲೆಯಾಗಿದೆ’ …
Read More »10 ಲಕ್ಷ ನೌಕರರನ್ನು ಸರಕಾರ ಜೈಲಿಗೆ ಹಾಕುವುದಾದರೆ ಹಾಕಲಿ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಸ
ಬೆಂಗಳೂರು – 7ನೇ ವೇತನ ಆಯೋಗದ ವರದಿ ಜಾರಿ ಮತ್ತು ಹಳೆ ಪಿಂಚಣಿ ಯೋಜನೆ ಜಾರಿ ಬೇಡಿಕೆಗಳನ್ನು ಮುಂದಿಟ್ಟು ಸರಕಾರಿ ನೌಕರರು ಬುಧವಾರದಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ನಡೆಸಲು ನೌಕರರ ಸಂಘ ನಿರ್ಧರಿಸಿದೆ. ತುರ್ತು ಸೇವೆ ಹೊರತುಪಡಿಸಿ ಯಾವುದೇ ನೌಕರರು ಕೆಲಸಕ್ಕೆ ಹಾಜರಾಗಬಾರದೆಂದು ತಿಳಿಸಿದೆ. ಇದರ ಬೆನ್ನಲ್ಲೆ ಮಂಗಳವಾರ ಸರಕಾರಿ ಕಠಿಣ ಎಚ್ಚರಿಕೆ ನೀಡುವ ಸುತ್ತೋಲೆಯೊಂದನ್ನು ಹೊರಡಿಸಿದೆ. ಸರಕಾರದ ವಿಶೇಷಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ಆದಿತ್ಯ …
Read More »