Breaking News

Monthly Archives: ಮಾರ್ಚ್ 2023

ಸಾರಿಗೆ ನೌಕರರಿಗೂ ಸಂಬಳ ಹೆಚ್ಚಳ; ಮಾ.1ಕ್ಕೆ ಅನ್ವಯಿಸುವಂತೆ ಆದೇಶ ಜಾರಿ

ಬೆಂಗಳೂರು: ಸಂಬಳ ಹೆಚ್ಚಳಕ್ಕಾಗಿ ಸರ್ಕಾರಿ ನೌಕರರು ತಂಡೋಪತಂಡವಾಗಿ ಪ್ರತಿಭಟನೆ/ಮುಷ್ಕರ ನಡೆಸಿದ್ದು ಫಲ ಕೊಟ್ಟಿದ್ದು, ಇದೀಗ ಸಾರಿಗೆ ನೌಕರರ ವಿಷಯದಲ್ಲೂ ಅದು ನಿಜವಾಗಿದೆ. ನಾಲ್ಕೂ ನಿಗಮದ ಸಾರಿಗೆ ನೌಕರರ ವೇತನವನ್ನು ಸರ್ಕಾರ ಹೆಚ್ಚಳ ಮಾಡಿದೆ.   ವೇತನ ಹೆಚ್ಚಳವನ್ನೇ ಪ್ರಮುಖ ಬೇಡಿಕೆ ಆಗಿರಿಸಿಕೊಂಡು ಸಾರಿಗೆ ನೌಕರರು ಕೆಲವು ದಿನಗಳಿಂದ ಪ್ರತಿಭಟನೆ ನಡೆಸಿದ್ದು, ನೌಕರರು ಶೇ. 20 ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದರೂ ಕೊನೆಗೆ ಸರ್ಕಾರ ಶೇ. 15 ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. …

Read More »

ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಯ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ

ಅಥಣಿ : ಬೆಳಗಾವಿ ಜಿಲ್ಲೆ ಅಥಣಿ (Athani) ತಾಲೂಕಿನ ತಾಂವಶಿ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಯ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ ಮೃತ ಯುವಕ ಆಕಾಶ ಮಹಾದೇವ ಮಿರ್ಜಿ (22) ಎಂದು ತಿಳಿದುಬಂದಿದೆ. ಆಕಾಶ ಖಾಸಗಿ ಕಾಲೇಜಿನಲ್ಲಿ (Private College) ವಿದ್ಯಾಭ್ಯಾಸ ಮಾಡುತ್ತಿದ್ದನು. ನಿನ್ನೆ ರಾತ್ರಿ ತಾಂವಶಿ ಗ್ರಾಮದ ಅನಂತಪೂರ ರಸ್ತೆ ಪರಮಾನಂದ ತೋಟ ಹತ್ತಿರ ನೇಣಿಗೆ ಶರಣಾಗಿದ್ದಾನೆ.

Read More »

4 ವರ್ಷಗಳ ಬಳಿಕ ಬೆಂಗಳೂರಿನಲ್ಲಿ IPL ಪಂದ್ಯಗಳು: ಟಿಕೆಟ್​ ಖರೀದಿ ಜೋರು

ಬೆಂಗಳೂರು: ನಾಲ್ಕು ವರ್ಷಗಳ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯಗಳ ನಡೆಯಲಿದ್ದು, ಟಿಕೆಟ್​ ಖರೀದಿಗಾಗಿ ರಾಯಲ್​ ಚಾಲೆಂಜರ್ಸ್​ ಅಭಿಮಾನಿಗಳು ಟಿಕೆಟ್​ ಖರೀದಿಗಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.   ಏಪ್ರಿಲ್ 2ರಂದು ಹಾಗೂ ಏಪ್ರಿಲ್​ 10 ರಂದು ನಡೆಯುವ ಎರಡು ಪಂದ್ಯಗಳಿಗಾಗಿ ಟಿಕೆಟ್ ಖರೀದಿಗೆ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಏಪ್ರಿಲ್ 2 ರಂದು ಆರ್​ಸಿಬಿ‌ ಹಾಗೂ ಮುಂಬೈ ನಡುವೆ ನಡೆಯಲಿದೆ ಮತ್ತು ಏಪ್ರಿಲ್ 10 ರಂದು …

Read More »

ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಹಾಕಿದ್ದಾರೆ

ನವದೆಹಲಿ: ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಹಾಕಿದ್ದಾರೆ . ಅವರು ಇತ್ತೀಚೆಗೆ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ಅವರ ಜೀವನದ ಗುರಿ ಎಂದು ಹೇಳಿದ್ದಾರೆ. ಕೃಷ್ಣಮೃಗವನ್ನು ಕೊಂದದ್ದಕ್ಕಾಗಿ ಸಲ್ಮಾನ್​ ಖಾನ್​ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆ ಎಂದು ಲಾರೆನ್ಸ್​ ಬಿಷ್ನೋಯ್​ ಹೇಳಿದರು. ‘ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಅವರು ಬಿಕಾನೇರ್‌ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು. …

Read More »

ಬೆಳಗಾವಿ: ಸೀಜ್ ಮಾಡಿದ್ದ ಸಾರಾಯಿ ಬಾಕ್ಸ್ ಗಳನ್ನೇ ಕದ್ದ ಅಬಕಾರಿ ಅಧಿಕಾರಿಗಳು

ಬೆಳಗಾವಿ: ಇದು ಬೇಲಿಯೇ ಎದ್ದು ಹೊಲಮೇಯ್ದ ಕಥೆ. ಜಪ್ತಿ ಮಾಡಿದ್ದ ಸಾರಾಯಿ ಬಾಕ್ಸ್ ಗಳ ಪೈಕಿ 301 ಬಾಕ್ಸ್ ಗಳನ್ನೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಳ್ಳತನ ಮಾಡಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಖಾನಾಪುರ ತಾಲೂಕಿನ ಮೋದೆಕೊಪ್ಪ ಗ್ರಾಮದ ಬಳಿ ಗೋವಾದಿಂದ ಸಾಗಿಸಲಾಗುತ್ತಿದ್ದ 753 ಸಾರಾಯಿ ಬಾಕ್ಸ್ ಗಳನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಜಪ್ತಿಮಾಡಿದ್ದ ಮಾರನೇ ದಿನವೇ 301 ಬಾಕ್ಸ್ ಗಳನ್ನು ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಳ್ಳತನ ಮಾಡುವ …

Read More »

ಅಕ್ಕಮಹಾದೇವಿಯವರ ಪ್ರತಿಮೆ ಸ್ಥಾಪನೆ: ಶಿವಶರಣರಿಗೆ ದೊಡ್ಡ ಕಾಣಿಕೆ: C,M,

ಶಿವಮೊಗ್ಗ : ಶಿವಶರಣೆ, ವೈಚಾರಿಕ ಕ್ರಾಂತಿ ನಡೆಸಿದ ಅಕ್ಕಮಹಾದೇವಿಯವರ ಪ್ರತಿಮೆ ಸ್ಥಾಪಿಸಿ, ಶಿವಶರಣರಿಗೆ ದೊಡ್ಡ ಕಾಣಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿಕಾರಿಪುರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಬಸವಕಲ್ಯಾಣ, ಉಡುತಡಿಯಲ್ಲಿ ಅವರ ಕೊಡುಗೆ ಇದೆ . ಕರ್ನಾಟಕದ ಜನತೆ ಇದಕ್ಕಾಗಿ ಯಡಿಯೂರಪ್ಪ ಅವರನ್ನು ಸದಾ ಸ್ಮರಿಸುತ್ತಾರೆ ಎಂದರು. ಪರಿಶೀಲನೆ 2018 ಕೆ.ಎಸ್.ಆರ್.ಟಿ. ಸಿ ಗಾರ್ಡ್ ಹಾಗೂ ತಾಂತ್ರಿಕ ಅಧಿಕಾರಿಗಳು ಹುದ್ದೆ ತುಂಬುವ …

Read More »

ಯೂರಿಯಾ ಚೀಲದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ ಆರೋಪಿಯೋರ್ವನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಯೂರಿಯಾ ಚೀಲದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ ಆರೋಪಿಯೋರ್ವನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಯೂರಿಯಾ ಚೀಲದಲ್ಲಿ ವಿವಿಧ ರೀತಿಯ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು 43.5 ಲೀಟರ ಅಂದಾಜಿನ ಸುಮಾರು 16848 ರೂಪಾಯಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಪಿಐ ಘಟಪ್ರಭಾ ರವರು ಹಾಗೂ ಅವರ ಸಿಬ್ಬಂದಿ ಜನರು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ರೇಡ್ ಮಾಡಿ ಜಪ್ತಿ ಮಾಡಿಕೊಂಡಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ …

Read More »

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದ ಪರ ಕೇಂದ್ರ ಸರ್ಕಾರ ಮತ್ತೊಮ್ಮೆ ಬ್ಯಾಟಿಂಗ್‌ ಮಾಡಿದೆ

ನವದೆಹಲಿ: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದ ಪರ ಕೇಂದ್ರ ಸರ್ಕಾರ ಮತ್ತೊಮ್ಮೆ ಬ್ಯಾಟಿಂಗ್‌ ಮಾಡಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಹಣ ಉಳಿತಾಯವಾಗಲಿದೆ. ಸಂವಿಧಾನದಲ್ಲಿ ತಿದ್ದುಪಡಿ ತರುವ ಮೊದಲು, ಎಲ್ಲಾ ರಾಜಕೀಯ ಪಕ್ಷಗಳನ್ನು ಒಳಗೊಂಡಂತೆ ಅದರ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಶುಕ್ರವಾರ ಹೇಳಿದೆ.   ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು, “ಲೋಕಸಭೆ …

Read More »

ಲಿಂಗಾಯತ ಸಿಎಂ ಬೇಕಾದರೆ ಬಿಜೆಪಿಗೆ ಮತ ನೀಡಿ : ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಈ ರಾಜ್ಯದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯಾಗಬೇಕಾದರೆ ವೀರಶೈವ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟಿನಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು.   ಶುಕ್ರವಾರ ನಾಗನೂರ ಪಟ್ಟಣದ ಹೊರವಲಯದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಅರಭಾವಿ ಮತಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರುವ ಚುನಾವಣೆಯಲ್ಲಿ ಸಮಾಜ ಬಾಂಧವರು …

Read More »

ಮಹಾರಾಷ್ಟ್ರ ಮಹಿಳೆಯರಿಗೆ ಬಸ್‌ ಶುಲ್ಕದಲ್ಲಿ ರಿಯಾಯತಿ

ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಎಲ್ಲಾ ಬಸ್‌ಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ಶುಲ್ಕದಲ್ಲಿ ಶೇ.50 ರಿಯಾಯತಿ ನೀಡುವ ನಿಯಮವನ್ನು ಮಾ.17ರ ಶುಕ್ರವಾರದಿಂದ ಜಾರಿಗೊಳಿಸಲಾಗಿದೆ. ರಿಯಾಯತಿಯು ಮಹಿಳಾ ಸಮ್ಮಾನ್‌ ಯೋಜನೆಯ ವಿಸ್ತರಣೆಯ ಭಾಗವಾಗಿದ್ದು, ಸಾರಿಗೆ ನಿಗಮಗಳಿಗೆ ರಿಯಾಯತಿ ಹಣವನ್ನು ಸರ್ಕಾರ ಪಾವತಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಮಾರ್ಚ್‌ 9ರಂದು ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ದೇವೇಂದ್ರ ಫ‌ಡ್ನವೀಸ್‌ ಮಂಡಿಸಿದ 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ, ಮಹಿಳೆಯರಿಗೆ ಶೇ.50 …

Read More »