ಬೆಳಗಾವಿ: ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಕಣಬರಗಿ ಚೆಕ್ ಪೋಸ್ಟ್ ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.77 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದೆ. ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣಾ ಸಂದರ್ಭದಲ್ಲಿ ನಗದು ಪತ್ತೆಯಾಗಿರುತ್ತದೆ. ಸದರಿ ಹಣವನ್ನು ಜಿಲ್ಲಾ ಖಜಾನೆಯಲ್ಲಿ ಜಮೆ ಮಾಡಲಾಗಿದ್ದು, ಪಂಚಾಯತ ಮುಖ್ಯ ಕಾರ್ಯನಿರ್ವಾಹಕರು ಅಧ್ಯಕ್ಷರಾಗಿರುವ ತ್ರಿಸದಸ್ಯ ಸಮಿತಿಗೆ ಪ್ರಕರಣವನ್ನು ವರ್ಗಾಯಿಸಲಾಗಿರುತ್ತದೆ. ಚುನಾವಣಾಧಿಕಾರಿ ಅಕ್ರಮ್ ಇಂಫಾಲ್, ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ, ಎಫ.ಎಸ್.ಟಿ. …
Read More »Monthly Archives: ಮಾರ್ಚ್ 2023
ಯುವಕ್ರಾಂತಿ ರ್ಯಾಲಿಯಲ್ಲಿ ಯುವಕರಿಗೆ ಯೋಜನೆ ಘೋಷಣೆ, ಯುವಕರಿಗೆ ಬಲತುಂಬಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಣ
ಬೆಳಗಾವಿ: ” ಭರವಸೆಗಳನ್ನು ನೀಡಿ, ಯುವಕರಿಗೆ ಉದ್ಯೋಗ ನೀಡದ ಬಿಜೆಪಿ ಸರ್ಕಾರವನ್ನು ಬುಡಸಮೇತ ಕಿತ್ತೆಸೆಯಲು ಯುವಜನತೆ ಮುಂದಾಗಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಕರೆ ನೀಡಿದರು. ಇಲ್ಲಿನ ಸಿಪಿಎಡ್ ವೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರ ನೀಡಿದ ಪೊಳ್ಳು ಭರವಸೆಯಿಂದ ಯುವಕರು ಉತ್ಸಾಹ ಕಳೆದುಕೊಂಡಿದ್ದಾರೆ. ಯುವಕರಿಗೆ ಬಲತುಂಬಲೆಂದೇ ರಾಹುಲ್ ಗಾಂಧಿ ಅವರು ಪಣತೊಟ್ಟಿದ್ದು, ಬೆಳಗಾವಿಯಿಂದ ಯುವಕಾಂತ್ರಿ ರ್ಯಾಲಿ ಮಾಡುವ ಮೂಲಕ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ ಎಂದರು. …
Read More »ವಿಶ್ವದ ಅತಿ ಉದ್ದದ ರೈಲ್ವೇ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್*
ಹುಬ್ಬಳ್ಳಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಿದರು. ಸೌತ್ ವೆಸ್ಟರ್ನ್ ರೈಲ್ವೇ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ಅವರು ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಿಶೋರ್ ಅವರು ಹುಬ್ಬಳ್ಳಿ ಜಂಕ್ಷನ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಕೈಗೊಂಡ ಪ್ರಮುಖ ಸುಧಾರಣೆಗಳು ಮತ್ತು ಭವಿಷ್ಯದ …
Read More »ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರ ಬಲಿ
ಬೆಳಗಾವಿ: ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರು ಬಲಿಯಾಗಿದ್ದಾರೆ. ಯಮನಪ್ಪ ಪ್ರಕಾಶ ರೆಡ್ಡರಟ್ಟಿ (10) ಹಾಗೂ ಯೇಶು ಬಸಪ್ಪ (14) ಮತರಾದ ಬಾಲಕರು. ಭಾನುವಾರ ಸಂಜೆ 4.30ರ ಹೊತ್ತಿಗೆ ಈ ಬಾಲಕರು ಈಸಲೆಂದು ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಈ ವೇಳೆ ಯಮನಪ್ಪ ನೀರಿನಲ್ಲಿ ಮುಳುಗುತ್ತಿದ್ದ. ಆತನನ್ನು ರಕ್ಷಿಸಲು ಯೇಶು ಪ್ರಯತ್ನಿಸಿದ್ದಾನೆ. ಆದರೆ ಇಬ್ಬರೂ ಬದುಕುಳಿಯಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Read More »ಕಾಂಗ್ರೆಸ್ ಮೊದಲ 80ಅಭ್ಯರ್ಥಿ ಗಳ ಪಕ್ಕಾ ಲಿಸ್ಟ್ ಬಹುತೇಕ ಖಚಿತ..?
80 ಅಭ್ಯರ್ಥಿಗಳ ಮೊದಲ ಪಟ್ಟಿ : 1. ಚಿಕ್ಕೋಡಿ – ಗಣೇಶ ಹುಕ್ಕೇರಿ 2. ಯಮಕನಮರಡಿ – ಸತೀಶ್ ಜಾರಕಿಹೊಳಿ 3. ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್ 4. ಖಾನಾಪುರ – ಅಂಜಲಿ ನಿಂಬಾಳ್ಕರ್ 5. ಬೈಲಹೊಂಗಲ : ಮಹಾಂತೇಶ 6. ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ 7. ಬಬಲೇಶ್ವರ : ಎಂ. ಬಿ. ಪಾಟೀಲ 8. ಬಸವನಬಾಗೇವಾಡಿ : ಶಿವಾನಂದ ಪಾಟೀಲ್ 9. ಇಂಡಿ : …
Read More »ಫಕೀರನ ವೇಷದಲ್ಲಿ ಬಂದು ಮನೆಗೆ ಕನ್ನ ಹಾಕುತ್ತಿದ್ದ ಖದೀಮರು ಅಂದರ್; !
ಹೊಸಕೋಟೆ: ಹೊಸಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಖತರ್ನಾಕ್ಕಳ್ಳರು ಫಕೀರರ ವೇಷ ಹಾಗೂ ಪಾಲಿಶ್ ಮಾಡುವ ನೆಪದಲ್ಲಿ ಮನೆಗಳಿಗೆ ಬಂದು ಕನ್ನ ಹಾಕುತ್ತಿದ್ದವನ್ನು ಬಂಧಿಸಿದ್ದಾರೆ. ಈ ಮೂರು ಜನ ಅಂತರ್ರಾಜ್ಯ ಕುಖ್ಯಾತ ಕಳ್ಳರನ್ನು ಪೊಲೀಸರು ಬಂದಿಸಿದ್ದಾರೆ. ಬಂಧಿತರಿಂದ ಒಟ್ಟು 32 ಲಕ್ಷ ಮೌಲ್ಯದ 502 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರನ್ನು ಆರೋಪಿಗಳನ್ನು ಸೈಯದ್ ಆಲಿ, ಭರತ್ ಕುಮಾರ್, ಮತ್ತು ಆನಂದ್ ಎಂದು ಗುರುತಿಸಲಾಗಿದೆ. ಈ ಖದೀಮರು ಫಕೀರನ ವೇಶ ಹಾಕಿಕೊಂಡು …
Read More »ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡ ಸೈಲೆಂಟ್ ಸುನೀಲ.
ಬೆಂಗಳೂರು: ಬಿಜೆಪಿಗೆ ಸೈಲೆಂಟ್ ಸುನೀಲ ಸೇರುತ್ತಾರಾ ಇಲ್ಲವಾ ಎನ್ನುವ ಪ್ರಶ್ನೆ ಹಲವು ದಿನಗಳಿಂದ ಕಾಡುತ್ತಿತ್ತು. ಇದೀಗ ಬಿಜೆಪಿಗೆ ಸೈಲೆಂಟ್ ಸುನೀಲ ಅಧಿಕೃತವಾಗಿ ಸೇರ್ಪಡೆಯಾಗಿದ್ದು ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಹಿಂದೆ ಸೈಲೆಂಟ್ ಸುನೀಲ ರನ್ನು ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದು ಬಿಜೆಪಿ ಹೇಳಿತ್ತು. ಆದರೆ ಈಗ ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಪ್ರತಿಪಕ್ಷಗಳಿಗೆ ಆಹಾರವಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷ, ಬಿಜೆಪಿಯನ್ನು ರೌಡಿ ಮೋರ್ಚಾ ಎಂದಿತ್ತು. ಸೈಲೆಂಟ್ ಸುನೀಲ ಪಕ್ಷ …
Read More »ಶ್ರೀಗಂಧದ ಕಟ್ಟಿಗೆಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಪೊಲೀಸರು
ಬೆಳಗಾವಿ: ಖಾನಾಪುರ ತಾಲೂಕಿನ ಕಸಬಾ ನಂದಗಡ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಶ್ರೀಗಂಧದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ. ಆನಂದ ಮಾರುತಿ ರಾಮಣ್ಣವರ (25) ಬಂಧಿತ ಆರೋಪಿ. ಈತ ಶ್ರೀಗಂಧದ ಗಿಡವನ್ನು ಕಡಿದು ಅದರ ತುಂಡುಗಳನ್ನು ಸರ್ಕಾರದ ಯಾವುದೇ ಪಾಸ್, ಪರ್ಮಿಟ್, ಲೈಸನ್ಸ್ ಯಾವುದೂ ಇಲ್ಲದೆ ತನ್ನ ವಶದಲ್ಲಿ ಇಟ್ಟುಕೊಂಡು ಕಾನೂನು ಬಾಹಿರವಾಗಿ ಸಾಗಿಸುವ ಯತ್ನದಲ್ಲಿದ್ದ.
Read More »ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಂತು ಯುವಕನೊಬ್ಬ ಆಜಾನ್ ಕೂಗಿದ
ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಂತು ಯುವಕನೊಬ್ಬ ಆಜಾನ್ ಕೂಗಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಜಾನ್ ಬಗ್ಗೆ ನೀದಿದ್ದ ಹೇಳಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಈ ವೇಳೆ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಯುವಕ ಆಜಾನ್ ಕೂಗುತಿದ್ದಂತೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ …
Read More »ಬೈಕ್ ಗಳನ್ನು ಕಳ್ಳತನಮಾಡಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಬಂಧಿಸಿದ ನಿಪ್ಪಾಣಿ ಪೊಲೀಸರು
ಬೆಳಗಾವಿ: ಬೆಳಗಾವಿಯಲ್ಲಿ ಬೈಕ್ ಗಳನ್ನು ಕಳ್ಳತನಮಾಡಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಸಿಪಿಐ S C ಪಾಟೀಲ, ಪಿ ಎಸ್ ಐ ವಿನೋದ ಪೂಜಾರಿ ಹಾಗೂ ಸಿಬ್ಬಂದಿಯವರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದು, ಅವರಿಂದ ಒಟ್ಟು 16,10,000/- ಮೊತ್ತದ 23 ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ. ನಿಪ್ಪಾಣಿ ಶಹರ ಹದ್ದಿನ ಶಿರಗುಪ್ಪಿ ರಸ್ತೆಯ ಕ್ರಾಸ್ ಹತ್ತಿರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಶದಲ್ಲಿದ್ದ ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ. …
Read More »