Breaking News

Monthly Archives: ಮಾರ್ಚ್ 2023

ಕರ್ನಾಟಕ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮತ್ತೆ ಬಂಧನ ಭೀತಿ!

ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ್ದು, ಬಿಜೆಪಿ ಶಾಸಕರಿಗೆ ಮತ್ತೆ ಬಂಧನ ಭೀತಿ ಶುರುವಾಗಿದೆ. ಬೆಂಗಳೂರು: ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ್ದು, ಬಿಜೆಪಿ ಶಾಸಕರಿಗೆ ಮತ್ತೆ …

Read More »

2025ರೊಳಗೆ ಕ್ಷಯರೋಗ ಮುಕ್ತ ಭಾರತಕ್ಕೆ ಶ್ರಮಿಸಿ: ಡಿಸಿ

ಬೆಳಗಾವಿ: ಕ್ಷಯರೋಗ ನಿರ್ಮೂಲನೆಯಡಿಯಲ್ಲಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಸಮಾಜದ ಕೊನೆಯ ವ್ಯಕ್ತಿಗಳಿಗೆ ತಲುಪಿಸಿ 2025 ನೇ ವೇಳೆಗೆ ಕ್ಷಯ ಮುಕ್ತ ಭಾರತವನ್ನು ಮಾಡುವ ಭಾರತ ಸರ್ಕಾರದ ಗುರಿಯನ್ನು ಮುಟ್ಟಲು ಎಲ್ಲರೂ ಕೂಡಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಕರೆ ನೀಡಿದರು.   ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ , ರೆಡಕ್ರಾಸ್‌ …

Read More »

ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ದಂಪತಿಗಳ ಕನಸಿನ “ನೂತನಬೃಂದಾವನದ” ಗೃಹ ಪ್ರವೇಶ ಸಹಸ್ರಾರು ಜನ ಭಾಗಿ

ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ದಂಪತಿಗಳ ಕನಸಿನ “ನೂತನಬೃಂದಾವನದ” ಗೃಹ ಪ್ರವೇಶ ಸಹಸ್ರಾರು ಜನ ಭಾಗಿ, ಗೋಕಾಕ: ಸಂತೋಷ್ ಜಾರಕಿಹೊಳಿ ಹಾಗೂ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರ ಕನಸಿನ ಬೃಂದಾವನದ ವಾಸ್ತು ಸಮಾರಂಭ ಇಂದು ಗೋಕಾಕ ನಲ್ಲಿ ನಡೆಯಿತು.   https://fb.watch/jsVZ2ZEZ61/?mibextid=RUbZ1f       ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ಅತ್ಯಂತ ಸುಂದರವಾದ ಭವ್ಯ ಬಂಗಲೆ ಯೊಂದನ್ನ ನಿರ್ಮಾಣ ಮಾಡಿದ್ದಾರೆ ಇಂದು ಅದರ ಗೃಹ ಪ್ರವೇಶ …

Read More »

ಕಾಂಗ್ರೆಸ್‌ ಸೇರಿದ ಬಾಬೂರಾವ್ ಚಿಂಚನಸೂರಗೆ ಗುರುಮಠಕಲ್‌

(ಯಾದಗಿರಿ ಜಿಲ್ಲೆ): ಸೋಮವಾರ ಬಿಜೆಪಿಗೆ ಕೈಕೊಟ್ಟ ಕಲ್ಯಾಣ ಕರ್ನಾಟಕ ಭಾಗದ ವರ್ಣರಂಜಿತ ರಾಜಕಾರಣಿ, ಮಾಜಿ ಎಂಎಲ್‌ಸಿ ಬಾಬುರಾವ ಚಿಂಚನಸೂರ ಬುಧವಾರ (ಮಾ.22)ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಸಮ್ಮುಖ ಕಾಂಗ್ರೆಸ್‌ಗೆ ಅಧಿಕೃತ ಸೇರ್ಪಡೆಯಾಗಿದ್ದಾರೆ. ಚಿಂಚನಸೂರ ಪಕ್ಷ ಸೇರ್ಪಡೆಯಿಂದ ಕ್ಷೇತ್ರದ ಟಿಕೆಟ್‌ ‘ಕೈ’ಗಿಟ್ಟಿದೆ ಎನ್ನುವ ಚರ್ಚೆಗಳು ಈಗ ಮುನ್ನೆಲೆಗೆ ಬಂದಿವೆ. ಕೆಲ ದಿನಗಳ ಹಿಂದೆ ಬಿಜೆಪಿ ಎಂಎಲ್ಸಿ ಎನ್‌.ರವಿಕುಮಾರ್ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ್ದ ಚಿಂಚನಸೂರ ‘ಲೋಕಸಭಾ ಚುನಾವಣೆಯಲ್ಲಿ ತೊಡೆತಟ್ಟಿ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ್ದೆ, …

Read More »

ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಅಂಜನಮೂರ್ತಿ ನಿಧನ

ಬೆಂಗಳೂರು: ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಅಂಜನಮೂರ್ತಿ (78) ನಿಧನರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಂಜನಮೂರ್ತಿ (Anjanamurthy) ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ.  ನೆಲಮಂಗಲದಲ್ಲಿ (Nelamangala) ಮೂರು ಬಾರಿ ಸ್ಪರ್ಧಿಸಿ ಶಾಸಕರಾಗಿದ್ದ ಅವರು ವಸತಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಈ ಬಾರಿ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು.

Read More »

ಬೆಳಗಾವಿಯಲ್ಲಿ ಅನುಭವ ಮಂಟಪ ನಿರ್ಮಾಣ,ಸಮುದಾಯದವರ ಮತ ಸೆಳೆಯಲು ಶಾಸಕರು ಕಸರತ್ತು

ಬೆಳಗಾವಿ: ಚುನಾವಣೆ (Election) ಸಮೀಪಿಸುತ್ತಿದ್ದಂತೆ ಸಮುದಾಯದವರ ಮತ ಸೆಳೆಯಲು ಶಾಸಕರು ಕಸರತ್ತು ನಡೆಸುತ್ತಿದ್ದಾರೆ. ಬೆಳಗಾವಿ (Belagavi) ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತ ಸೆಳೆಯಲು ಶಾಸಕ ಅನಿಲ್ ಬೆನಕೆ (Anil Benake) ನಾನಾ ಕಸರತ್ತು ನಡೆಸಿದ್ದು, ಉತ್ತರ ಮತಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಆಗಿವೆ. ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಅನುಭವ ಮಂಟಪ (Anubhava Mantapa) ನಿರ್ಮಾಣಕ್ಕೆ ಶಾಸಕ ಅನಿಲ ಬೆನಕೆ ಮುಂದಾಗಿದ್ದಾರೆ. ಬೆಳಗಾವಿಯ ಮಾಳಮಾರುತಿ ಬಡಾವಣೆಯಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪ …

Read More »

ಸೋಮಣ್ಣ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರನಿಗೆ ನೋಟಿಸ್

ಚಾಮರಾಜನಗರ: ಸಚಿವ ವಿ ಸೋಮಣ್ಣ (V Somanna) ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಚಾಮರಾಜನಗರ (Chamarajanagar) ಜಿಲ್ಲಾ ಬಿಜೆಪಿ ವಕ್ತಾರನಿಗೆ (BJP Spokesperson) ನೋಟಿಸ್ ನೀಡಲಾಗಿದೆ. ಚಾಮರಾಜನಗರ ಜಿಲ್ಲಾ ಬಿಜೆಪಿ ವಕ್ತಾರ ಅಯ್ಯನಪುರ ಶಿವಕುಮಾರ್‌ಗೆ ನೋಟೀಸ್ ಜಾರಿ ಮಾಡಲಾಗಿದೆ. ಸಚಿವ ಸೋಮಣ್ಣ ಅವರಿಗೆ ಮೈಸೂರು ವಿಭಾಗದ ಉಸ್ತುವಾರಿ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಟಿಕೆಟ್ ನೀಡುವುದು ಬೇಡ ಎಂದು ಬಿಜೆಪಿ ವಕ್ತಾರ ಶಿವಕುಮಾರ್ ಒತ್ತಾಯ ಮಾಡಿದ್ದರು. ಚಾಮರಾಜನಗರದಲ್ಲಿ ಟಿಕೆಟ್ ನೀಡಿದರೆ ಗೋ ಬ್ಯಾಕ್ ಚಳವಳಿ …

Read More »

ಮಹಾಲಿಂಗೇಶ್ವರ ಜಟೋತ್ಸವಕ್ಕೆ ಜನ ಸಾಗರ ;ದೇವರ ಮೊರೆ ಹೋದ ರಾಜಕಾರಣಿಗಳು

ಮಹಾಲಿಂಗಪುರ : ಹಿಂದೂಗಳ ಪವಿತ್ರ ಹಬ್ಬ, ವರ್ಷದ ಆರಂಭ ದಿನದವಾದ ಯುಗಾದಿಯ ದಿನ ನಸುಕಿನ ಜಾವ ನಡೆಯುವ ಜಟೋತ್ಸವ ವಿಕ್ಷಣೆಗಾಗಿ ಮುಂಜಾನೆ ಬುಧವಾರ ಪಟ್ಟಣದ ಐತಿಹಾಸಿಕ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತ ಜನಸಾಗರವೇ ಹರಿದು ಬಂದಿತ್ತು. ಜಟೋತ್ಸವ ಪವಾಡ ಪುರುಷ ಮಹಾಲಿಂಗೇಶ್ವರರ ಜಟೆಗಳು ವಿಜ್ಞಾನಕ್ಕೆ ಸವಾಲು ಎಂಬಂತೆ ಪ್ರತಿವರ್ಷ ಒಂದು ಗೋಧಿ ಕಾಳಿನಷ್ಟು ಬೆಳೆಯುತ್ತಿವೆ. ಇಂತಹ ಪವಾಡ ಸದೃಶ್ಯ ಜಟೆಗಳನ್ನು ನೋಡುವದೇ ಭಕ್ತರ ಸೌಭಾಗ್ಯ. ಇಂತಹ ವೈಶಿಷ್ಟ್ಯ ಪೂರ್ಣ ಜಟೆಗಳ ಅಭಿಷೇಕ (ಜಟೋತ್ಸವ)ದ …

Read More »

ಗೋಕರ್ಣ: ಅಥರ್ವಣ ವೇದ ಪಂಡಿತ ಆಚಾರ್ಯ ಶ್ರೀಧರ ಅಡಿ ವಿಧಿವಶ

ಗೋಕರ್ಣ: ಖ್ಯಾತ ಅಥರ್ವಣವೇದ ಪಂಡಿತರಾಗಿದ್ದ ಗೋಕರ್ಣದ ಆಚಾರ್ಯ ಶ್ರೀಧರ ಅಡಿ ಬುಧವಾರ ಮಹಾರಾಷ್ಟ್ರದ ನಾಸಿಕ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಮತ್ತು ಪುತ್ರಿ ಸೇರಿ ಅಪಾರ ಶಿಷ್ಯವರ್ಗ, ಬಂಧುಗಳನ್ನು ಅಗಲಿದ್ದಾರೆ. ವಾರಾಣಸಿಯಲ್ಲಿ ಋಗ್ವೇದ ಮತ್ತು ಯಜುರ್ವೇದ ಅಧ್ಯಯನ ಮುಗಿಸಿ ನಂತರ ಅಥರ್ವಣ ವೇದ ಪಾರಂಗತರಾಗಿ ವಿವಿಧೆಡೆ ವೇದ ಮಹತ್ವ ಸಾರಿ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿದ್ದರು. ಸಂಸ್ಕೃತ ಪಾಂಡಿತ್ಯ ಹೊಂದಿದ್ದ ಅವರು ವಾಗ್ಮಿಯೂ …

Read More »

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ಸೂಕ್ತ ದಾಖಲಾತಿಗಳಲ್ಲದೇ ಸಾಗಿಸಲಾಗುತ್ತಿದ್ದ 9 ಲಕ್ಷ ರೂಪಾಯಿ ನಗದು ಹಣವನ್ನು ಕಣಬರಗಿ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ನಗರದಿಂದ ಅಂಕಲಗಿ ಕಡೆಗೆ ಹೊರಟಿದ್ದ ಕಾರನ್ನು ಕಣಬರಗಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದಾಗ ನಗದು ಪತ್ತೆಯಾಗಿದೆ.   ನಗದು ಹಣವು ಖಾಸಗಿ ಫೈನಾನ್ಸ್ ಕಂಪನಿಗೆ ಸೇರಿದೆ. ಆದರೆ ಈ ಹಣಕ್ಕೆ ಸಂಬಂಧಿಸಿದಂತೆ ಸಮರ್ಪಕ ದಾಖಲೆಗಳನ್ನು ಅವರು ಒದಗಿಸಿರುವುದಿಲ್ಲ. ಇದಲ್ಲದೇ ಹಣ ಸಾಗಾಣಿಕೆಗೆ ಸಂಬಂಧಿಸಿದಂತೆ ಇರುವ ನಿಗದಿತ ಎಸ್.ಓ.ಪಿ.ಯನ್ನು …

Read More »