ಬೆಳಗಾವಿ: ಬೆಳಗಾವಿಯಲ್ಲಿ ಬೈಕ್ ಗಳನ್ನು ಕಳ್ಳತನಮಾಡಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಸಿಪಿಐ S C ಪಾಟೀಲ, ಪಿ ಎಸ್ ಐ ವಿನೋದ ಪೂಜಾರಿ ಹಾಗೂ ಸಿಬ್ಬಂದಿಯವರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದು, ಅವರಿಂದ ಒಟ್ಟು 16,10,000/- ಮೊತ್ತದ 23 ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ. ನಿಪ್ಪಾಣಿ ಶಹರ ಹದ್ದಿನ ಶಿರಗುಪ್ಪಿ ರಸ್ತೆಯ ಕ್ರಾಸ್ ಹತ್ತಿರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಶದಲ್ಲಿದ್ದ ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ. …
Read More »Daily Archives: ಮಾರ್ಚ್ 19, 2023
ನಾಳೆ ಇಡೀ ದಿನ ಆಟೋ ಸೇವೆ ಬಂದ್ ಆಗುವ ಸಾಧ್ಯತೆ?
ಬೆಂಗಳೂರು ಆಟೊರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಬೆಂಗಳೂರಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಆಗ್ರಹಿಸಿ ಮಾರ್ಚ್ 20ರಂದು ಆಟೋ ಸಂಚಾರ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ. ಇದರಿಂದ ನಾಳೆ ಸೋಮವಾರ ಇಡೀ ದಿನ ಸಾರ್ವಜನಿಕರಿಗೆ ಆಟೋ ಸೇವೆ ಸಿಗುವುದು ಅನುಮಾನ ಮೂಡಿಸಿದೆ. ಭಾನುವಾರ ಸಂಜೆ ವೇಳೆಗೆ ಸಿಎಂ ಬೈಕ್ ಟ್ಯಾಕ್ಸಿ ಸೇವೆ ರದ್ದು ಮಾಡದಿದ್ದರೇ ಸೋಮವಾರ ಆಟೋ ಸೇವೆ ಬಂದ್ ಮಾಡುವುದು ನಿಶ್ಚಿತ ಎಂದು ಒಕ್ಕೂಟ ಎಚ್ಚರಿಸಿದೆ. ‘ಸಾರಿಗೆ ಇಲಾಖೆ ಮತ್ತು …
Read More »ಬೆಳಗಾವಿ: ಸುರೇಶ ಅಂಗಡಿ, ವೆಂಕಟೇಶ್‌ಗೆ ರಾಣಿ ಚನ್ನಮ್ಮ ವಿ.ವಿ ಗೌರವ ಡಾಕ್ಟರೇಟ್
ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಮಾರ್ಚ್ 20ರಂದು ನಡೆಯಲಿದೆ. ಈ ಬಾರಿ ಇಬ್ಬರಿಗೆ ಗೌರವ ಡಾಕ್ಟರೇಟ್, 27 ಪಿಎಚ್‌ಡಿ ಹಾಗೂ 47,185 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರ ಗೌಡ ತಿಳಿಸಿದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರಿಗೆ ಸಮಾಜ ಸೇವೆಯನ್ನು ಪರಿಗಣಿಸಿ, ಮರಣೋತ್ತರವಾಗಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆ ಪರಿಗಣಿಸಿ ಮಲ್ಲೇಪುರಂ ಜಿ. ವೆಂಕಟೇಶ್ ಅವರಿಗೆ …
Read More »ಬೆಳಗಾವಿ| ಬಸ್- ಬೈಕ್ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿ ಹೊರವಲಯದಲ್ಲಿ ಶನಿವಾರ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಯಬಾಗ ತಾಲ್ಲೂಕಿನ ಹಾಲಶಿರಗೂರು ಗ್ರಾಮದವರಾದ ಭಗವಂತ ಶಿವರಾಯ ಕಾಂಬಳೆ (45), ವಿಶ್ವನಾಥ ಎಸ್. ಕಾಂಬಳೆ (24) ಹಾಗೂ ಕುಮಾರ ಬಾಳಪ್ಪ ಕಾಂಬಳೆ (35) ಮೃತಪಟ್ಟವರು. ಮೂವರೂ ಸಹೋದರ ಸಂಬಂಧಿಗಳಾಗಿದ್ದಾರೆ. ಸರ್ಕಾರಿ ಬಸ್ ಹಾಲಗಿ ಕಡೆಯಿಂದ ಸಾಂಗ್ಲಿ ಕಡೆಗೆ ಹೊರಟಿತ್ತು. ಮೂವರೂ ಸಹೋದರ …
Read More »ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿಎಣ್ಣೆ ಕೊಟ್ಟು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯೋಧ್
ಅಲಪ್ಪುಳ: ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆಯೊಬ್ಬಳಿಗೆ ಆಲ್ಕೋಹಾಲ್ ನೀಡಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯೋಧನನ್ನು ಕೇರಳ ಪೊಲೀಸರು ಶನಿವಾರ (ಮಾ.18) ಬಂಧಿಸಿದ್ದಾರೆ. ಬಂಧಿತ ಯೋಧನನ್ನು ಪ್ರತೀಶ್ ಕುಮಾರ್ ಎಂದು ಗುರುತಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದ ತ್ರಿವೆಂಡ್ರಮ್ ಮೂಲದ ಮಹಿಳೆ ದೂರು ನೀಡಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಪ್ರತೀಶ್ ಕಾಶ್ಮೀರದಲ್ಲಿ ನೆಲೆಸಿರುವ ಯೋಧ. ಈತ ತನ್ನ ಊರಿಗೆ ತೆರಳುತ್ತಿದ್ದ ವೇಳೆ ಉಡುಪಿಯಿಂದ ರಾಜಧಾನಿ ಎಕ್ಸ್‌ಪ್ರೆಸ್ ಹತ್ತಿದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ. …
Read More »ಸ್ವಂತ ತಮ್ಮನನ್ನೇ ಹತ್ಯೆ ಮಾಡಿದ್ದ ಅಕ್ಕ; 8 ವರ್ಷದ ಬಳಿಕ ಪೊಲೀಸರಿಗೆ ಸಿಕ್ಕಿ ಬಿದ್ದಳು!
ಆನೇಕಲ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಸ್ವಂತ ತಮ್ಮನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಹಂತಕಿ ಅಕ್ಕ ಹಾಗೂ ಪ್ರಿಯಕರ 8 ವರ್ಷದ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಿಜಾಪುರ ಮೂಲದ ಭಾಗ್ಯಶ್ರೀ(38) ಹಾಗೂ ಶಂಕರಪ್ಪ (42) ಬಂಧಿತ ಆರೋಪಿಗಳು. ಅಕ್ಕನ ಸಂಚಿಗೆ ಲಿಂಗರಾಜು (35) ಮೃತ ದುದೈವಿ. ರಾಯಚೂರಿನ ಕಾಲೇಜೊಂದರಲ್ಲಿ ಓದುತ್ತಿದ್ದ ಭಾಗ್ಯಶ್ರೀ ಆ ದಿನಗಳಲ್ಲೆ ಶಂಕರಪ್ಪ ತಳವಾರ ಎಂಬುವನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಈ ವೇಳೆಗಾಗಲೇ ಶಂಕರಪ್ಪನಿಗೆ …
Read More »ಪ್ರತಿಭಟನಾ ನಿರತ ಆರೋಗ್ಯ ಸಿಬ್ಬಂದಿಗೆ ಶಾಕ್; ಎಸ್ಮಾ ಜಾರಿಗೆ ಮುಂದಾದ ಆರೋಗ್ಯ ಇಲಾಖೆ
ಬೆಂಗಳೂರು: ವೇತನ ಪರಿಷ್ಕರಣೆ, ಖಾಯಂ ನೌಕರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆ ಶಾಕ್ ನೀಡಿದ್ದು, ಎಸ್ಮಾ ಜಾರಿಗೆ ಮುಂದಾಗಿದೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿಗಳು ಕೂಡಲೇ ಕತ್ಯವ್ಯಕ್ಕೆ ಹಾಜರಾಗಲು ಸೂಚನೆ ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ. ಒಂದು ವೇಳೆ ಪ್ರತಿಭಟನೆ ಮುಂದುವರೆಸಿದರೆ ESMA ACT ಜಾರಿಗೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. NHM ಒಳಗುತ್ತಿಗೆ ನೌಕರರನ್ನು ಈ ತನಕ ಯಾವ ರಾಜ್ಯದಲ್ಲೂ ಖಾಯಂಗೊಳಿಸಿಲ್ಲ. ಮಣಿಪುರ, ಅಸ್ಸಾಂ, …
Read More »ಶಾಲೆಗೆ ನುಗ್ಗಿ ಮದ್ಯ, ಗಾಂಜಾ ಸೇವಿಸಿ ನನಗೂ ಪಾಠ ಮಾಡಿ ಎನ್ನುವ ಯುವಕನ ಕಾಟ
ವಿಜಯನಗರ: ಹಳೆಯ ವಿದ್ಯಾರ್ಥಿಯೊಬ್ಬನ ದುರ್ವರ್ತನೆಗೆ ಹೊಸಪೇಟೆಯ ಊರಮ್ಮ ಬಯಲು ಪ್ರದೇಶದಲ್ಲಿರುವ ಶ್ರೀಮತಿ ಕಟ್ಟಾ ಕೃಷ್ಣ ವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ. ವಿದ್ಯಾರ್ಥಿಗಳ ಮಧ್ಯೆ ಬಂದು, ಮದ್ಯ ಮಿಶ್ರಿತ ಜ್ಯೂಸ್ ಸೇವಿಸುತ್ತಾನೆ. ಇಷ್ಟೇ ಅಲ್ಲದೆ, ಶಾಲೆಯಲ್ಲೇ ಗಾಂಜಾ ಹೊಡೆಯುತ್ತಾ ನನಗೂ ಪಾಠ ಮಾಡಿ ಅಂತಾ ಶಿಕ್ಷಕರನ್ನು ಕಾಡುತ್ತಿದ್ದಾನೆ. ಆರೋಪಿಯನ್ನು ರಾಮು ಅಲಿಯಾಸ್ ಹೆಗ್ಗಣ ಎಂದು ಗುರುತಿಸಲಾಗಿದೆ. ಈತ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾನೆ. ಗಾಂಜಾ, …
Read More »