Breaking News

Daily Archives: ಫೆಬ್ರವರಿ 16, 2023

ಶೀಘ್ರವೇ ನನಸಾಗಲಿದೆ ಧಾರವಾಡ- ಬೆಳಗಾವಿ ರೈಲ್ವೇ ಲೈನ್ ಕನಸು

ಹುಬ್ಬಳ್ಳಿ: ಬೆಳಗಾವಿ ಹಾಗೂ ಧಾರವಾಡ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ಬಹುದಿನಗಳ ಕನಸು ನನಸಾಗುವ ಘಳಿಗೆ ಸಮೀಪಿಸಿದ್ದು ಮೊದಲ ಹಂತದಲ್ಲಿ ಕ್ಯಾರಕೊಪ್ಪ-ಮಮ್ಮಿಗಟ್ಟಿ ಮಧ್ಯೆ ಮಾರ್ಗ ನಿರ್ಮಾಣಕ್ಕೆ ನೈರುತ್ಯ ರೈಲ್ವೆ ನಿರ್ಧಾರ ತಳೆದಿದೆ. 2021-22ನೇ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ  ಈ ಯೋಜನೆಗೆ 463 ಕೋಟಿ ರೂ. ಘೋಷಿಸಲಾಗಿತ್ತು. ರೈಲ್ವೆ ಇಲಾಖೆ ಕಳೆದ ವರ್ಷ 20 ಕೋಟಿ ಹಾಗೂ ಪ್ರಸಕ್ತ ವರ್ಷ 10 ಕೋಟಿ ರೂ. ಒದಗಿಸುವುದಾಗಿ ಘೋಷಿಸಿದೆ. ಕ್ಯಾರಕೊಪ್ಪವರೆರೆಗೆ ಹಾಲಿ ಇರುವ …

Read More »

ಜಾಕ್‌ವೆಲ್‌ ಮುತ್ತಿಗೆ ಯತ್ನ: ಲಘು ಲಾಠಿ ಪ್ರಹಾರ

ಸವದತ್ತಿ: ಬಾಕಿ ವೇತನ ಹಾಗೂ ನೇಮಕಾತಿ ಆದೇಶ ನೀಡಲು ಆಗ್ರಹಿಸಿ ಧಾರವಾಡದ ಜಲಮಂಡಳಿಯ ದಿನಗೂಲಿ ಕಾರ್ಮಿಕರು ಪಟ್ಟಣದಲ್ಲಿ ಬುಧವಾರ ನಡೆಸಿದ ಧರಣಿ ವೇಳೆ, ನೂಕಾಟ- ತಳ್ಳಾಟ ನಡೆದಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಈ ಸಂದರ್ಭದಲ್ಲಿ 12 ಮಂದಿಗೆ ಸಣ್ಣಪುಟ್ಟ ಗಾಯಗಳಾದವು.   ಹುಬ್ಬಳಿ- ಧಾರವಾಡ ನಗರಗಳಿಗೆ ನೀರು ಸರಬರಾಜು ಮಾಡುವ ಇಲ್ಲಿನ ಜಾಕ್‌ವೆಲ್ ಬಳಿ ಬೆಳಿಗ್ಗೆಯಿಂದ ಶಾಂತಿಯುತ ಧರಣಿ ನಡೆಸಲಾಯಿತು. ಮಧ್ಯಾಹ್ನದವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ, …

Read More »

ಬೀದಿ ದೀಪ ಅಳವಡಿಸಿ ಇಂಥ ರೀತಿಯ ಪರಿಸ್ಥಿತಿ ಕಳೆದ ಐದು ವರ್ಷಗಳಿಂದಲೂ ಇದೆ.

  ಬೆಳಗಾವಿ: ಇಲ್ಲಿನ ಆದರ್ಶ ನಗರದ ಆದರ್ಶ ಶಾಲೆಯಿಂದ ಹಿಡಿದು ವಡಗಾಂವಿ (ಗ್ರಾಮೀಣ ಪೊಲೀಸ್ ಠಾಣೆ ಹಿಂಭಾಗ) ಮಾರ್ಗದಲ್ಲಿ ವಿದ್ಯುತ್‌ ಕಂಬಗಳಿವೆ. ಆದರೆ, ವಿದ್ಯುತ್‌ ದೀಪಗಳೇ ಇಲ್ಲ. ಇದರಿಂದ ಈ ಪ್ರದೇಶ ದಿನವೂ ಕತ್ತಲು ಆವರಿಸಿರುತ್ತದೆ. ಇಂಥ ರೀತಿಯ ಪರಿಸ್ಥಿತಿ ಕಳೆದ ಐದು ವರ್ಷಗಳಿಂದಲೂ ಇದೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೂ ಯಾರೂ ಕಣ್ಣೆತ್ತಿ ನೋಡಿಲ್ಲ. ಸರ್ಕಾರದ ‘ಜನಹಿತ’ ವೆಬ್‌ಸೈಟ್‌ನಲ್ಲೂ …

Read More »

ಮಕ್ಕಳ ಕ್ಯಾನ್ಸರ್‌ಗೆ ಪರಿಹಾರವಿದೆ

ಬೆಳಗಾವಿ: ‘ಮಕ್ಕಳಲ್ಲಿ ಕ್ಯಾನ್ಸರ್‌ ಕಾಣಿಸಿಕೊಂಡಿದೆ ಎಂದ ತಕ್ಷಣ ಪಾಲಕರು ಎದೆಗುಂದಬಾರದು. ಇದರಿಂದ ಮಕ್ಕಳೂ ಮಾನಸಿಕವಾಗಿ ಕುಂದುತ್ತಾರೆ. ಅವರ ಲವಲವಿಕೆಯೇ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆಧುನಿಕ ವೈದ್ಯ ವಿಜ್ಞಾನದಲ್ಲಿ ಎಂಥ ಕ್ಯಾನ್ಸರ್‌ಗೂ ಚಿಕಿತ್ಸೆ ಇದೆ’ ಎಂದು ಲೋಕಾಯುಕ್ತ ಎಸ್ಪಿ ಯಶೋದಾ ವಂಟಗೋಡಿ ಸಲಹೆ ನೀಡಿದರು.   ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ, ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕ್ಕಮಕ್ಕಳ ಕ್ಯಾನ್ಸರ್‌ ವಿಭಾಗವು …

Read More »

ಕಲುಷಿತ ನೀರು ಕುಡಿದು ಇಬ್ಬರು ಸಾವು; 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಗುರು ಮಠಕಲ್ ತಾಲ್ಲೂಕಿನ ಅನಪುರದಲ್ಲಿ ಕಲುಷಿತ ನೀರು ಕುಡಿದು ಬುಧವಾರ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಸಾವಿತ್ರಮ್ಮ ವೆಂಕಟಪ್ಪ ನಕ್ಕ (35), ಸಾಯಮ್ಮ ಭೀಮಶಪ್ಪ ಮಿನಾಸ ಪುರಂ (72) ಮೃತರು. ‘ಅಸ್ವಸ್ಥರನ್ನು ತೆಲಂಗಾಣದ ನಾರಾಯಣಪೇಟೆ ಆಸ್ಪತ್ರೆ, ಮೆಹಬೂಬ್ ನಗರದ ಆಸ್ಪತ್ರೆ ಮತ್ತು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸ ಲಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ. ‘ಇಬ್ಬರು ಮಹಿಳೆಯರು ಸಾವಿಗೆ ಮತ್ತು ಜನರು ಅಸ್ವಸ್ಥಗೊಳ್ಳಲು ಕಲುಷಿತ …

Read More »

ರಾಜ್ಯದಲ್ಲಿ ಬಿಜೆಪಿ ಪರ ಅಲೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬರಲಾರಂಭಿಸಿದ ಬಳಿಕ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಬೀಸಲಾರಂಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಖಾಸಗಿ ಹೊಟೇಲ್ ನಲ್ಲಿ ಬುಧವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮಾತನಾಡಿ, ಆಡಳಿತ ವಿರೋಧಿ ಅಲೆ ಇಲ್ಲ. ಯಾರೂ ಧೃತಿಗೆಡಬೇಕಾಗಿಲ್ಲ, ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು. ಕಾಂಗ್ರೆಸ್ ನವರ ಈಗಿನ ಅಬ್ಬರ ಚುನಾವಣೆ ವೇಳೆಗೆ ಇರುವುದಿಲ್ಲ ಎಂದೂ …

Read More »

2023: ಸ್ವಿಗ್ಗಿ ಆಹಾರ ಹೊತ್ತು ಸಾಗಲಿವೆ ಡ್ರೋನ್

ಬೆಂಗಳೂರು: ಸ್ವಿಗ್ಗಿ ಆಯಪ್‌ನಲ್ಲಿ ಆಹಾರ ಪೂರೈಕೆಗೆ ಆರ್ಡರ್ ಮಾಡಿದರೆ ಅದನ್ನು ಮುಂದಿನ ದಿನಗಳಲ್ಲಿ ಹೊತ್ತು ಡೆಲಿವರಿ ಬಾಯ್ ತರುವುದಿಲ್ಲ, ಬದಲಿಗೆ ಡ್ರೋನ್ ಬರಲಿದೆ! ಹೌದು, ಆಹಾರ ಹೊತ್ತು ಬರುವ ಡ್ರೋನ್ ಈಗ ಸಿದ್ಧವಾಗಿದೆ. ಗರುಡ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿರುವ ಡ್ರೋನ್, ಏರೋ ಇಂಡಿಯಾ-2023ರಲ್ಲಿ ಪ್ರದರ್ಶನಗೊಳ್ಳುತ್ತಿದೆ.   ‘ಡೆಲಿವರಿ ಡ್ರೋನ್’ ಎಂದೇ ಇದಕ್ಕೆ ಹೆಸರಿಡಲಾಗಿದ್ದು, ಸದ್ಯಕ್ಕೆ 5 ಕೆ.ಜಿ ತೂಕ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 10 ರಿಂದ 15 ಕೆ.ಜಿ …

Read More »