Breaking News

Daily Archives: ಫೆಬ್ರವರಿ 8, 2023

ವಿಧನಾಸಭಾ ಚುನಾವಣೆಗೆ ಭಾರಿ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ : ಉಸ್ತುವಾರಿಗಳ ನೇಮಕ

ಬೆಂಗಳೂರು: ವಿಧನಾಸಭಾ ಚುನಾವಣೆಗೆ ಭಾರಿ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಜಿಲ್ಲೆಗಳಲ್ಲಿ ಮೋರ್ಚಾ ಸಮಾವೇಶ, ಫಲಾನುಭವಿಗಳ ಸಮ್ಮೇಳನ, ವಿಡಿಯೋ ವ್ಯಾನ್ ಪ್ರಚಾರ, ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ, ರಥ ಯಾತ್ರೆಗಳಿಗೆ ಉಸ್ತುವಾರಿಗಳನ್ನು ನೀಮಕ ಮಾಡಿದೆ. ಯಾತ್ರೆ ಪ್ರಮುಖರಾಗಿ ಸಚಿವರ ಸಿ‌ಸಿ ಪಾಟೀಲ್, ಪಕ್ಷದ ಎಲ್ಲ ಮೋರ್ಚಾಗಳ ಜಿಲ್ಲಾ ಸಮಾವೇಶ ಸಂಚಾಲಕರಾಗಿ ಬಿ.ವೈ ವಿಜಯೇಂದ್ರ, ಫಲಾನುಭವಿಗಳ ಸಮ್ಮೇಳನದ ಸಂಚಾಲಕರಾಗಿ‌ …

Read More »

ರೆಪೊ ದರ ಹೆಚ್ಚಳದಿಂದಾಗಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲೆ ಬಡ್ಡಿದರ ಹೆಚ್ಚಳ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ-ಆರ್ ಬಿಐ, ಸಾಲಗಾರರಿಗೆ ಮತ್ತೆ ಶಾಕ್ ನೀಡಿದೆ. ರೆಪೊ ದರವನ್ನು ಹೆಚ್ಚಳ ಮಾಡಿದ್ದು, ಬ್ಯಾಂಕ್ ಸಾಲದ ಬಡ್ಡಿದರದಲ್ಲಿ ಏರಿಕೆಯಾಗಲಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಆರ್ ಬಿಐ ರೆಪೊ ದರವನ್ನು 25 ಮೂಲಾಂಶದಷ್ಟು ಹೆಚ್ಚಿಸಿದೆ. ಈ ಮೂಲಕ ಪರಿಷ್ಕೃತ ರೆಪೊದರ ಶೇ.6.50ರಷ್ಟಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಕೆಲವು ಹಣಕಾಸು ನೀತಿಯಲ್ಲಿ ಆರ್ ಬಿ ಐ ತನ್ನ ರೆಪೊ ದರವನ್ನು ಹೆಚ್ಚಿಸುತ್ತಾ …

Read More »

ರಾಜ್ಯದ ಮುಖ್ಯಮಂತ್ರಿ ಆಗುವುದಿದ್ದರೆ ಅದು ಸತೀಶ ಜಾರಕಿಹೊಳಿಯವರು ಮಾತ್ರ: ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಿಂದ ಯಾರಾದರೂ ರಾಜ್ಯದ ಮುಖ್ಯಮಂತ್ರಿ ಆಗುವುದಿದ್ದರೆ ಅದು ಸತೀಶ ಜಾರಕಿಹೊಳಿಯವರು ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.   ಅವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ತಾರೀಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕಗಳ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಬಲಪಡಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ …

Read More »

ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಿಂದ ಈ ವರ್ಷದ ಕ್ಯಾಲೆಂಡರ್ ವಿತರಣೆ

: ಗೋಕಾಕ: ಗೋಕಾಕ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ್ ಒಡೆತನದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಡಿಂದ ಹೊಸ ವರ್ಷದ ಕ್ಯಾಲೆಂಡರ್ ವಿತರಣೆ ಮಾಡಿದ್ದಾರೆ.  ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಟೇಬಲ್ ಕ್ಯಾಲೆಂಡರ್, ಡೈರಿ ಕೂಡ ಎಲ್ಲ ವಿವಿಧ ಗ್ರಾಮ ಪಂಚಾಯತಿ ಗಳಿಗೆ, KSRTC ಕಚೇರಿ ಗಳಿಗೆ, ತಹಸೀಲ್ದಾರ ಆಫೀಸ್ ಗಳನ್ನ್ ಸೇರಿ ನಗರದ ಹಾಗೂ ಗೋಕಾಕ ನ ವಿವಿಧ ಗ್ರಾಮ ಗಳಲ್ಲಿ ವಿತರಣೆ ಮಾಡಿದ್ದಾರೆ.

Read More »

ಸರ್ವೋದಯ ಕರ್ನಾಟಕ ಪಕ್ಷದಿಂದ ಚುನಾವಣೆ ಸ್ಪರ್ಧೆ: ಚಾಮರಸ

ಧಾರವಾಡ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷವು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ’ ಎಂದು ಪಕ್ಷದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.   ‘ರಾಜಕೀಯದಿಂದ ಭ್ರಷ್ಟಾಚಾರವನ್ನು ದೂರ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಈ ಬಾರಿ ಯುವ ಸಮುದಾಯಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಲಾಗುತ್ತಿದೆ. ಜತೆಗೆ ರಾಜಕೀಯ ಎಂಬುದು ಹಣ ಗಳಿಕೆಯ ಉದ್ಯೋಗವಲ್ಲ, ಅದು ಸೇವಾ ಕ್ಷೇತ್ರ …

Read More »

ಕನ್ನಡಿಗರ ವಿರುದ್ಧ ಪ್ರಚೋದನಕಾರಿ ಭಾಷಣ: ಸಂಜಯ್‌ ರಾವುತ್‌ಗೆ ಷರತ್ತುಬದ್ಧ ಜಾಮೀನು

ಬೆಳಗಾವಿ: ಮಹಾರಾಷ್ಟ್ರದ ರಾಜ್ಯಸಭೆ ಸದಸ್ಯ ಹಾಗೂ ಶಿವಸೇನೆ ರಾಜ್ಯ ವಕ್ತಾರ ಸಂಜಯ್‌ ರಾವುತ್‌ ಸೇರಿದಂತೆ ಇಬ್ಬರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ. 2018ರ ಮಾರ್ಚ್‌ 30ರಂದು ಇಲ್ಲಿನ ಭಾಗ್ಯ ನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ವೆಬ್‌ಸೈಟ್‌ವೊಂದರ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಸಂಜಯ ರಾವುತ್‌ ಕನ್ನಡಿಗರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು.   ರಾವುತ್‌, ಬೆಳಗಾವಿಯ ಪತ್ರಕರ್ತರಾದ ಕಿರಣ್‌ ಠಾಕೂರ, …

Read More »

ಪುನೀತ್‌ ಸಮಾಧಿ ಸ್ಥಳದಲ್ಲಿ ಶೀಘ್ರ ಸ್ಮಾರಕ: ಸಿಎಂ ಬೊಮ್ಮಾಯಿ

ಬೆಂಗಳೂರು: ಪುನೀತ್‌ ಹೆಸರನ್ನು ಮತ್ತಷ್ಟು ಚಿರಸ್ಥಾಯಿಯಾಗಿ ಮಾಡಲು ಅಪ್ಪು ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಪದ್ಮನಾಭನಗರದ ಅಟಲ್‌ ಬಿಹಾರಿ ವಾಜಪೇಯಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಿಂಗ್‌ ರೋಡ್‌ ರಸ್ತೆಗೆ ಡಾ.ಪುನೀತ್‌ ಹೆಸರು ನಾಮಕರಣ ಮಾಡಿ ಮಾತನಾಡಿದ ಅವರು, ಸ್ಮಾರಕದಲ್ಲಿ ಡಾ|ರಾಜ್‌, ಪುನೀತ್‌ ಜೀವನ ಸಾಧನೆ ಜನರಿಗೆ ತಿಳಿಹೇಳುವ ಕೆಲಸ ಮಾಡಲಾಗುವುದು ಎಂದರು.   ಹಾಗೆಯೇ ಅಂಬರೀಶ್‌ ಕೂಡ ಕನ್ನಡ ಚಿತ್ರರಂಗದಲ್ಲಿ ಕೊಡಗೈ ದಾನಿ ಎನಿಸಿ¨ªಾರೆ. …

Read More »

ಪ್ರಗತಿ ಪಥದತ್ತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌

ಗ್ರಾಮೀಣ ಬ್ಯಾಂಕು ಉಳ್ಳವರಿಗೂ ಬೇಕು… ಕೊಳ್ಳಲಿರುವವರಿಗೂ ಬೇಕು.. – ಊರಿನೆಲ್ಲರಿಗೂ ಬೇಕು.. ತಾ ಊರುಗೋಲಾಗಿ ಮುನ್ನಡೆಸಲು ಸರ್ವರನೂ.. ಜನ ಸಾಮಾನ್ಯರ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ 1975ರಲ್ಲಿ ಗ್ರಾಮೀಣ ಬ್ಯಾಂಕಿಂಗ್‌ ವ್ಯವಸ್ಥೆ ಆರಂಭಿಸಿತು. ರಾಜ್ಯದ ಮಲಪ್ರಭಾ, ಬಿಜಾಪೂರ, ವರದಾ, ನೇತ್ರಾವತಿ ಗ್ರಾಮೀಣ ಬ್ಯಾಂಕುಗಳು ಒಗ್ಗೂಡಿಸಿ 2005 ಸೆಪ್ಟೆಂಬರ್‌ 12ರಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಉದಯಗೊಂಡಿತು. ಈ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರ (ಶೇ.50) ರಾಜ್ಯ ಸರ್ಕಾರ (ಶೇ.15) ಮತ್ತು …

Read More »

ಕಳ್ಳರ ಹಾವಳಿ ತಪ್ಪಿಸಲು ‘ಸೀಟಿ’ ಅಸ್ತ್ರ

ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ 11ನೇ ಬಡಾವಣೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದರಿಂದ ಮುಕ್ತಿ ಹೊಂದಲು ಸ್ವತಃ ನಾಗರಿಕರೇ ಸೀಟಿ ಹೊಡೆಯುವ ದಾರಿ ಕಂಡುಕೊಂಡಿದ್ದಾರೆ. ಕಳವು ಪ್ರಕಟಣಗಳಿಂದ ಬೇಸತ್ತ ಬಡಾವಣೆಯ ಮುಖಂಡರು 120 ಮನೆಗಳಿಗೆ ಸೀಟಿಗಳನ್ನು ವಿತರಿಸಿದ್ದಾರೆ. ಕಳ್ಳರು ಎಂಬ ಅನುಮಾನ ಬಂದ ತಕ್ಷಣ ಅಕ್ಕ‍ಪಕ್ಕದವರೆಲ್ಲ ಸೇರಿಕೊಂಡು ಸೀಟಿ ಊದಬೇಕು ಎಂದೂ ಮಾಹಿತಿ ನೀಡಿದ್ದಾರೆ. ಹಲವರು ತಮ್ಮ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಬಡಾವಣೆಗೆ ಭಿಕ್ಷುಕರು ಬರದಂತೆ, ಬಂದರೂ ಅವರಿಗೆ …

Read More »

ನಾಳೆಯಿಂದ ಜಾತ್ರಾ ಮಹೋತ್ಸವ

ಮುಗಳಖೋಡ: ಸಮೀಪದ ಕಟಕಬಾವಿ ಗ್ರಾಮದ ಪಿಡಾಯಿ ತೋಟದಲ್ಲಿ 4ನೇ ವರ್ಷದ ಜಕ್ಕಮ್ಮದೇವಿ ಹಾಗೂ ಧರಿದೇವರ ಪುಣ್ಯಾಶ್ರಮದ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಫೆ. 9ರಿಂದ 13ರವರೆಗೆ ನಡೆಯಲಿದೆ. ಅಭಿನವ ಧರೇಶ್ವರ ಸ್ವಾಮೀಜಿ ಜಕ್ಕಮ್ಮದೇವಿ ಹಾಗೂ ಧರಿದೇವರ ಪುಣ್ಯಾಶ್ರಮ ಕಟಕಬಾವಿ ಅವರ ಸಾನ್ನಿಧ್ಯದಲ್ಲಿ ಸರ್ವ ಕಾರ್ಯಕ್ರಮಗಳು ಜರುಗುವವು. 9ರಂದು ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ, ಅದೇ ದಿನ ಪಲ್ಲಕ್ಕಿಗಳು ಸುಕ್ಷೇತ್ರ ರಾಮನಕಟ್ಟಿಗೆ ಸ್ನಾನಕ್ಕೆ ಹೋಗುತ್ತವೆ. ಅದೇ ದಿನ ಸಂಜೆ …

Read More »