ಮೂಡಲಗಿ: ‘ಬೆಳಗಾವಿ ಜಿಲ್ಲೆಯಲ್ಲಿಯೇ 72ಕ್ಕೂ ಅತೀ ಹೆಚ್ಚು ಸಹಕಾರಿ ಸಂಘಗಳನ್ನು ಹೊಂದಿರುವ ಪಟ್ಟಣವನ್ನು ಸಹಕಾರ ನಗರ ಎಂದು ಗುರುತಿಸಿ ವಿಶೇಷ ಸ್ಥಾನಮಾನ ನೀಡುವಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರಿಗೆ ಪ್ರಸ್ತಾವನೆ ಸಲ್ಲಿಸಿ, ಒತ್ತಾಯಿಸುತ್ತೇನೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಪಟ್ಟಣದ ಬಸವ ರಂಗ ಮಂಟಪದಲ್ಲಿ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಕಬ್ಬಿನ ಪೈರಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದ ಅವರು, ಬಿಡಿಸಿಸಿ …
Read More »Monthly Archives: ಜನವರಿ 2023
ಸವಿತಾ ಸಮುದಾಯದವರ ಜೀವನಮಟ್ಟ ಸುಧಾರಿಸಲಿ’:.ನಿರ್ಮಲಾ ಬಟ್ಟಲ್
ಬೆಳಗಾವಿ: ‘ಸಮಾಜದಲ್ಲಿ ಎಲ್ಲ ವರ್ಗಗಳ ಜನರು ಸುಂದರವಾಗಿ ಕಾಣಲು ಕಾರಣವಾಗಿರುವ ಸವಿತಾ ಸಮುದಾಯದವರ ಜೀವನಮಟ್ಟ ಸುಧಾರಣೆಯಾಗಬೇಕು. ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅವರೂ ಬೆಳೆಯಬೇಕು’ ಎಂದು ಎಂಎನ್‌ಆರ್‌ಎಸ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯೆ ಪ್ರೊ.ನಿರ್ಮಲಾ ಬಟ್ಟಲ್ ಹೇಳಿದರು. ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಶನಿವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ …
Read More »ಬೆಳಗಾವಿ; ಸ್ತ್ರೀ ಸಂವೇದನೆಗಳಿಗೆ ಕನ್ನಡಿ ಹಿಡಿದ ಸಮ್ಮೇಳನ
ಬೆಳಗಾವಿ: ಇಲ್ಲಿ ಶನಿವಾರ ಆರಂಭವಾದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನವು ಸ್ತ್ರೀ ಸಂವೇದನೆಗಳಿಗೆ ಕನ್ನಡಿ ಹಿಡಿಯಿತು. ಮೊದಲ ದಿನದ ಗೋಷ್ಠಿಗಳಲ್ಲಿ ಕಾವ್ಯಗಳನ್ನು ಪ್ರಸ್ತುತಪಡಿಸಿದ ವಿವಿಧ ರಾಜ್ಯಗಳ ಕವಯತ್ರಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಆಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯಗಳನ್ನು ಖಂಡಿಸಿದರು. ಪುರುಷರು ಮತ್ತು ಮಹಿಳೆಯರ ಮಧ್ಯೆ ಇರುವ ಅಸಮಾನತೆ ನಿವಾರಣೆ, ಮಹಿಳಾ ಸಬಲೀಕರಣದ ಬಗ್ಗೆಯೂ ದನಿ ಎತ್ತಿದರು. ಮಹಿಳೆಯರ ಅಂತಃಶಕ್ತಿಯಾಗಿರುವ ಪ್ರೀತಿ, ಪ್ರೇಮ, ಕರುಣೆ, ಸಹನೆ ಮೇಲೂ ಹಲವರು …
Read More »ಫೆಬ್ರವರಿ 1ರಿಂದ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆ ಬೆಳವಣಿಗೆ ಎನ್ನುತ್ತ ನಗುತ್ತಲೇ ಹೊರಟುಬಿಟ್ಟರು ಚಾಣಾಕ್ಷ ಬಾಲಚಂದ್ರ ಜಾರಕಿಹೊಳಿ.
ಬೆಳಗಾವಿ – ಅಮಿತಾ ಶಾ ಬಂದು ಸಭೆ ಮಾಡಿದ್ದು ಬಹಳ ಒಳ್ಳೆಯದಾಗಿದೆ. ಫೆಬ್ರವರಿ 1ರಿಂದ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಬೆಳವಣಿಗೆ ಆಗಲಿದೆ. ಎಲ್ಲ ನಾಯಕರು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಲಿದ್ದಾರೆ ಎಂದು ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಡಿಯೂರಪ್ಪ, ಪ್ರಹ್ಲಾದ ಜೋಶಿ, ನಳೀನ್ ಕುಮಾರ …
Read More »ಮೂರು ಮಕ್ಕಳನ್ನು ನೀರಿನ ಸಂಪ್ ಗೆ ಎಸೆದು ತಾಯಿ ಆತ್ಮಹತ್ಯೆ
ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೂರು ಮಕ್ಕಳನ್ನು ನೀರಿನ ಸಂಪ್ ಗೆ ಎಸೆದು ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಜರುಗಿದೆ. ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾ ಗೀತಾ ರಾಮು ಚೌವ್ಹಾಣ (32) ಮಕ್ಕಳನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತಾಯಿ ಗೀತಾಳಿಂದ ಹತ್ಯೆಯಾದ ಮಕ್ಕಳನ್ನು ಸೃಷ್ಠಿ (6), ಸಮರ್ಥ (4), ಕಿಶನ್ (3) ಎಂದು ಗುರುತಿಸಲಾಗಿದೆ. …
Read More »ಸ್ಯಾಂಡಲ್ ವುಡ್ ಹಿರಿಯ ನಟ ಮಂದೀಪ್ ರಾಯ್ ಇನ್ನಿಲ್ಲ
ಬೆಂಗಳೂರು: ಕನ್ನಡದ ಹಿರಿಯ ನಟ ಮಂದೀಪ್ ರಾಯ್ ಅವರು ಕೊನೆಯುಸಿರೆಳೆದಿದ್ದಾರೆ. 73 ವರ್ಷದ ಮಂದೀಪ್ ರಾಯ್ ಅವರಿಗೆ ಮಧ್ಯರಾತ್ರಿ 1.45ರ ಸುಮಾರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮಂದೀಪ್ ರಾಯ್ ಅವರು ಮೂಲತಃ ಮುಂಬೈನವರು. ಬಾಲ್ಯದಲ್ಲಿ ಕರಾಟೆ, ಕುಂಗ್ ಫು ಅಭ್ಯಾಸ ಮಾಡಿದ್ದ ಮಂದೀಪ್ ಅವರು ಒಂಬತ್ತನೇ ವಯಸ್ಸಿನಲ್ಲಿ ರಂಗಭೂಮಿ ಒಲವು ಮೂಡಿಸಿಕೊಂಡರು. ರಂಗಭೂಮಿಯಲ್ಲಿ ಪರಿಚಯವಾದ ಶಂಕರ್ ನಾಗ್ ಮತ್ತು ಅನಂತ್ ನಾಗ್ ಅವರ ಕಾರಣದಿಂದ …
Read More »ರಾಯಬಾಗ| ಅಪಘಾತದಲ್ಲಿ ಮೂವರು ಸವಾರರ ಸಾವು
ರಾಯಬಾಗ: ತಾಲ್ಲೂಕಿನ ನಿಡಗುಂದಿ ಬಳಿ ಬೈಕ್‌ಗಳ ಮಧ್ಯೆ ಶನಿವಾರ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ನಿವಾಸಿ ಸಿದ್ಧಾರ್ಥ ಜಗದಾಳೆ (24), ಬಾಗಲಕೋಟೆ ಜಿಲ್ಲೆಯ ಲೋಕಾಪುರದ ಮಾರುತಿ ವಿಭೂತಿ (32), ಮುಧೋಳದ ಶಾಮಣ್ಣ ವಿಭೂತಿ(22) ಮೃತರು. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಯುದ್ಧ ವಿಮಾನಗಳ ಪತನದಲ್ಲಿ ಮೃತಪಟ್ಟ ಪೈಲೆಟ್ ಬೆಳಗಾವಿ ಮೂಲದವರು
ಬೆಳಗಾವಿ: ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಸುಖೋಯ್ 30 ಎಂಕೆಐ ಹಾಗೂ ಮಿರಾಜ್-2000 ಯುದ್ಧ ವಿಮಾನಗಳ ಮಧ್ಯೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪೈಲೆಟ್, ವಿಂಗ್ ಕಮಾಂಡರ್ ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ (34) ಬೆಳಗಾವಿ ಮೂಲದವರು. ಇಲ್ಲಿನ ಗಣೇಶಪುರದ ಮನೆಯಲ್ಲಿ 1987ರಲ್ಲಿ ಜನಿಸಿದ ಅವರು, ಬಾಲ್ಯವನ್ನು ಇಲ್ಲಿಯೇ ಕಳೆದಿದ್ದರು. ನಗರದ ಕೇಂದ್ರೀಯ ವಿದ್ಯಾಲಯ-2ರಲ್ಲಿ ಶಿಕ್ಷಣ ಪೂರೈಸಿದ್ದರು. ಪೈಲೆಟ್ ಆದ ಮೇಲೆ ಪತ್ನಿ, ಮಕ್ಕಳ ಸಮೇತ ಗ್ವಾಲಿಯರ್‌ನಲ್ಲಿ ನೆಲೆಸಿದ್ದರು. 2009ರಿಂದ ಭಾರತೀಯ …
Read More »ನಾನು ಬೆಳಗಾವಿಗೆ ಮತ್ತೊಮ್ಮೆ ಬರುತ್ತೇನೆ ಅಷ್ಟರೊಳಗೆ ಎಲ್ಲ ಭಿನ್ನಮತ ಮುಗಿದಿರಬೇಕು:ಅಮಿತ್ ಶಾ
ಹುಬ್ಬಳ್ಳಿ: ನಾಲ್ಕೈದು ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಸಲ ತ್ರಿಕೋನ ಸ್ಪರ್ಧೆಯಿಲ್ಲ, ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡ ‘ವಿಜಯ ಸಂಕಲ್ಪ ಅಭಿಯಾನ’ ಅಂಗವಾಗಿ ರೋಡ್ ಶೋ ನಡೆಸಿದ ನಂತರ ಅವರು ಮಾತನಾಡಿದರು. ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಅಷ್ಟೆ ಅಲ್ಲ, …
Read More »ಬೆಳಗಾವಿಯಲ್ಲಿ ಅಮಿತ್ ಶಾ ಗೋಪ್ಯ ಸಭೆ
ಬೆಳಗಾವಿ: ‘ನಾನು ಬೆಳಗಾವಿಗೆ ಮತ್ತೊಮ್ಮೆ ಬರುತ್ತೇನೆ ಅಷ್ಟರೊಳಗೆ ಎಲ್ಲ ಭಿನ್ನಮತ ಮುಗಿದಿರಬೇಕು. ಬೆಂಗಳೂರನ್ನು ಹೊರತುಡಿಸಿದರೆ ಬೆಳಗಾವಿಯಲ್ಲೇ ಹೆಚ್ಚು ಕ್ಷೇತ್ರಗಳು ಇವೆ. ಎಲ್ಲ 18 ಕ್ಷೇತ್ರಗಳನ್ನೂ ನಾವು ಗೆಲ್ಲಬೇಕು. ಇದು ಎಲ್ಲರೂ ಒಂದಾಗಿದ್ದರೆ ಮಾತ್ರ ಸಾಧ್ಯ. ಗೆಲುವಿಗೆ ಏನು ಬೇಕೋ ಆ ತಂತ್ರ ರೂಪಿಸೋಣ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಯ ನಾಯಕರಿಗೆ ಕಟ್ಟಪ್ಪಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಗರದ ಯುಕೆ-27 ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ …
Read More »