ವಿಜಯಪುರ: ‘ಯಾವುದೇ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡದಂತೆ ವರಿಷ್ಠರು ಭಾನುವಾರ ಬೆಳಿಗ್ಗೆ ಫೋನ್ ಮಾಡಿ ತಿಳಿಸಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಷಯವಾಗಿ ಚರ್ಚಿಸುವ ಸಂಬಂಧ ದೆಹಲಿಗೆ ಬರುವಂತೆಯೂ ಪಕ್ಷದ ವರಿಷ್ಠರು ನನಗೆ ಆಹ್ವಾನಿಸಿದ್ದಾರೆ. ಮೀಸಲಾತಿ ಕುರಿತಂತೆ ಕೇಂದ್ರದಿಂದ ಸಿಹಿ ಸುದ್ದಿ ಸಿಗುವ ಆಶಾಭಾವ ಇದೆ’ ಎಂದು ಹೇಳಿದರು. ‘ಪಕ್ಷದಲ್ಲಿ ಇರಲು ಸಾಧ್ಯವಿಲ್ಲದಿದ್ದರೆ …
Read More »Monthly Archives: ಜನವರಿ 2023
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ: ಕೈದಿ ವಿಚಾರಣೆ
ಬೆಳಗಾವಿ: ಭೂಗತಪಾತಕಿ ದಾವೂದ್ ಇಬ್ರಾಹಿಂ ತಂಡದ ಸದಸ್ಯ ಎಂದು ಹೇಳಿಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿಯನ್ನು, ಮಹಾರಾಷ್ಟ್ರದ ಪೊಲೀಸರು ಭಾನುವಾರ ಇಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದರು. ತನಿಖೆಗೆ ಮಹಾರಾಷ್ಟ್ರದ ಎಟಿಎಸ್ ಮತ್ತು ನಾಗ್ಪುರದ ಪೊಲೀಸರ ತಂಡ ಧಾವಿಸಿದ್ದು, ಕೈದಿಯಿಂದ ಮಾಹಿತಿ ಕಲೆ ಹಾಕಿತು. ಆತನಿಂದ ಡೈರಿ ಜಪ್ತಿ ಮಾಡಿದೆ. ಆದರೆ, ಕರೆ ಮಾಡಲು ಬಳಸಿದ್ದ ಮೊಬೈಲ್ ಸಿಕ್ಕಿಲ್ಲ. ಕೊಲೆ ಸೇರಿ …
Read More »2ಎ ಮೀಸಲಾತಿ ಸಿಗುವವರೆಗೂ ಸಿಂಹಾಸನದಲ್ಲಿ ಕೂರುವುದಿಲ್ಲ: ವಚನಾನಂದ ಸ್ವಾಮೀ
ದಾವಣಗೆರೆ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬೆಳ್ಳಿ ಸಿಂಹಾಸನದಲ್ಲಿ ಕೂರುವುದಿಲ್ಲ’ ಎಂದು ಪೀಠಾಧಿಪತಿ ವಚನಾನಂದ ಸ್ವಾಮೀಜಿ ಪ್ರಕಟಿಸಿದರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇತ್ರದಲ್ಲಿ ಭಾನುವಾರ ನಡೆದ ಹರಜಾತ್ರೆ ಹಾಗೂ ‘ಪಂಚಮ ಪೀಠಾರೋಹಣ’ ಸಮಾರಂಭದಲ್ಲಿ ಅವರು ಸಿಂಹಾಸನದಲ್ಲಿ ಕೂರಲು ನಿರಾಕರಿಸಿದರು. ‘ಸಮುದಾಯಕ್ಕೆ ಮೀಸಲಾತಿ ಸಿಗುವಂತೆ ಮಾಡಿ ಜನರ ಹೃದಯ ಸಿಂಹಾಸನದಲ್ಲಿ ಕೂರಲು ಇಚ್ಛೆ ಪಡುತ್ತೇನೆ. ಪಂಚಮ ಪೀಠಾರೋಹಣ ಮಾಡುವುದಿಲ್ಲ’ ಎಂದು …
Read More »ಗಂಗಾಮತಸ್ಥರಿಗೆ ST ಮೀಸಲಾತಿ ಸೌಲಭ್ಯ : ಸಿಎಂ
ಹಾವೇರಿ: ‘ಅಂಬಿಗರ ಸಮಾಜಕ್ಕೆ (ಗಂಗಾಮತಸ್ಥರು) ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿ ಸೌಲಭ್ಯ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಮಾಜದ ಬೇಡಿಕೆಯನ್ನು ಈಡೇರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದರು. ತಾಲ್ಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ‘ಪರಿಶಿಷ್ಟ ಪಂಗಡದ ಮೀಸಲಾತಿ ಅಡಿ ಪರಿಗಣಿಸಲು ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿ ಮಾಡಿ ಈಗಾಗಲೇ ಚರ್ಚಿಸಲಾಗಿದೆ. ಕೇಂದ್ರದ …
Read More »ಆಕಸ್ಮಿಕ ಬೆಂಕಿ: ಉರಿದ ಲಾರಿ
ಚನ್ನಮ್ಮನ ಕಿತ್ತೂರು: ಸಮೀಪದ ಶಿವ ಪೆಟ್ರೋಲ್ ಪಂಪ್ ಬಳಿ ತಮಿಳನಾಡಿಗೆ ಸೇರಿದ ಲಾರಿಯೊಂದಕ್ಕೆ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟಿದೆ. ಪೊಟ್ರೋಲ್ ಪಂಪ್ ಸಮೀಪದಲ್ಲೇ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಭಯದ ವಾತಾವರಣ ಮನೆ ಮಾಡಿತು. ಮುಂಬೈಗೆ ಹೊರಟಿದ್ದ ಲಾರಿ ಚಾಲಕರು ಪಂಪ್ ಬಳಿ ವಿಶ್ರಾಂತಿಗಾಗಿ ತಂಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಾರಿಯಲ್ಲಿದ್ದ ಎಳನೀರು ಕಾಯಿಗಳೂ ಸುಟ್ಟಿವೆ. ಅಗ್ನಿಶಾಮಕ ದಳದವರು ಮತ್ತು ಪೊಲೀಸರು …
Read More »ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ತೆಲಸಂಗ: ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ 1979ನೇ ಬ್ಯಾಚಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶನಿವಾರ ನಡೆಯಿತು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಭಾಸ ಸಜ್ಜನ, ‘ನಮ್ಮ ಶಿಕ್ಷಕರು ಕೇವಲ ಪಠ್ಯ ಬೋಧಿಸಲಿಲ್ಲ. ಜೀವನದಲ್ಲಿ ಎದುರಾಗಬಹುದಾದ ಕಷ್ಟ ಹೇಗೆ ಎದುರಿಸಬೇಕೆಂದು ಕಲಿಸಿದರು. ಮಾದರಿಯಾಗಿ ನಮ್ಮ ಬದುಕು ರೂಪಿಸಿದರು’ ಎಂದು ಸ್ಮರಿಸಿದರು. ಓಗೆಪ್ಪ ಅರಟಾಳ, ಸಾವಿತ್ರಿ ಹಿರೇಮಠ, ಉಮಾ ಪೋತದಾರ, ಶಾಲೆಯಲ್ಲಿ ತಾವು ಕಳೆದ ಬಾಲ್ಯದ ದಿನಗಳನ್ನು ಮೆಲಕು ಹಾಕಿದರು. …
Read More »ರಾಮದುರ್ಗ ಸರ್ಕಾರಿ ಶಾಲೆ ‘ಸ್ಮಾರ್ಟ್’
ರಾಮದುರ್ಗ: ಶಿಕ್ಷಕರು ಮನಸ್ಸು ಮಾಡಿದರೆ ಸಮುದಾಯದ ಸಹಭಾಗಿತ್ವದೊಂದಿಗೆ ಸರ್ಕಾರಿ ಶಾಲೆಯನ್ನೂ ಮಾದರಿಯಾಗಿ ಅಭಿವೃದ್ಧಿಪಡಿಸಬಹುದು. ಇದಕ್ಕೆ ಉತ್ತಮ ಉದಾಹರಣೆ, ತಾಲ್ಲೂಕಿನ ಕುನ್ನಾಳ ಪ್ರಾಥಮಿಕ ಶಾಲೆ. 1926ರಲ್ಲಿ ಈ ಶಾಲೆ ಸ್ಥಾಪನೆಯಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ, ಶಾಲೆಗೆ ಹೈಟೆಕ್ ಸ್ಪರ್ಶ ಕೊಟ್ಟಿದ್ದಾರೆ. 1ರಿಂದ 8ನೇ ತರಗತಿಯಲ್ಲಿ 253 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಂಪ್ಯೂಟರ್ ಲ್ಯಾಬ್: ಈ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ …
Read More »ಸವದತ್ತಿ : ಹಾಳು ಕೊಂಪೆಯಾದ ‘ಮಿನಿಹಂಪಿ’
ಹೂಲಿ (ಸವದತ್ತಿ ತಾ.): ಮೈ ನವಿರೇಳಿಸುವಂಥ ಶಿಲ್ಪಕಲಾಕೃತಿ ಹೊಂದಿದ ಈ ಜಾಗ ಹಾಳು ಕೊಂಪೆಯಾಗಿದೆ. ಶಿಲ್ಪವೈಭವದ ಶ್ರೀಮಂತಿಕೆಯ ಕಾರಣದಿಂದ ಇದಕ್ಕೆ ‘ಮಿನಿಹಂಪಿ’ ಎಂದೇ ಕರೆಯಲಾಗುತ್ತದೆ. ರೋಮಾಂಚಕ ಇತಿಹಾಸವನ್ನು ತನ್ನ ಒಡಲೊಳಗೆ ಹುದುಗಿಸಿ ಇಟ್ಟುಕೊಂಡ ಮಂದಿರಗಳು, ಕಟ್ಟಡಗಳು ದುಷ್ಕರ್ಮಿಗಳ ಉಪಟಳಕ್ಕೆ ನಲುಗಿ ಹೋಗಿವೆ. ಸವದತ್ತಿಯಿಂದ ರಾಮದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಹೂಲಿ ಎಂಬ ಗ್ರಾಮದ ಕತೆ-ವ್ಯಥೆ ಇದು. ಪುರಾತನ ಕಾಲದ 101 ದೇವಸ್ಥಾನಗಳು, 101 ಬಾವಿಗಳನ್ನು ಹೊಂದಿದ್ದು ಈ ಊರಿನ ಹಿರಿಮೆ. …
Read More »ಹುಬ್ಬಳ್ಳಿ-ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್
ಬೆಂಗಳೂರು: ಹುಬ್ಬಳ್ಳಿ ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್‌ಎಫ್‌ಎಸ್‌ಯು) ಸ್ಥಾಪನೆಗೆ ಭಾರತ ಸರ್ಕಾರದ ಗೃಹ ಸಚಿವಾಲಯವು ತಾತ್ವಿಕ ಅನುಮೋದನೆಯನ್ನು ನೀಡಿದೆ. ಟ್ವಿಟರ್‌ನಲ್ಲಿ ಸುದ್ದಿ ಹಂಚಿಕೊಂಡಿರುವ ಕೇಂದ್ರ ಸಚಿವ ಮತ್ತು ಧಾರವಾಡ ಸಂಸದಪ್ರಲ್ಹಾದ ಜೋಶಿ, ಅವಳಿ ನಗರಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಮತ್ತೊಂದು ಸಂಸ್ಥೆಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದ್ದಾರೆ.ಎನ್‌ಎಫ್‌ಎಸ್‌ಯು ಅಪರಾಧ ತನಿಖಾ ಕ್ಷೇತ್ರದಲ್ಲಿ ನುರಿತ ಮಾನವಶಕ್ತಿಯನ್ನು ಸೃಷ್ಟಿಸುತ್ತದೆ ಮತ್ತು ತನಿಖೆ, ತಡೆಗಟ್ಟುವಿಕೆ ಮತ್ತು ಅಪರಾಧಗಳ ಪತ್ತೆಗೆ ಸಂಬಂಧಿಸಿದ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಲು …
Read More »ವಾಡಿ: ಗೂಡ್ಸ್ ರೈಲು ಅಪಘಾತ. ತಪ್ಪಿದ ದುರಂತ
ವಾಡಿ: ಹಳಿ ತುಂಡಾದ ಪರಿಣಾಮ ಸುಮಾರು ಮೂವತ್ತು ಬೋಗಿಗಳುಳ್ಳ ಗೂಡ್ಸ್ ರೈಲು ಅಪಘಾತಕ್ಕೀಡಾದ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಲಹಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಶನಿವಾರ ಮಧ್ಯಾಹ್ನ ಹೈದರಾಬಾದ್ ನಿಂದ ವಾಡಿ ಮಾರ್ಗವಾಗಿ ಬರುತ್ತಿದ್ದ ಸಿಮೆಂಟ್ ಸಾಗಾಣಿಕೆ ಗೂಡ್ಸ್ ರೈಲು ಚಿತ್ತಾಪುರ ನಿಲ್ದಾಣ ದಾಟಿದ ಕೆಲವೇ ಹೊತ್ತಿನಲ್ಲಿ ಬೋಗಿಗಳು ಹಳಿ ತಪ್ಪಿ ಉರುಳಿ ಬಿದ್ದಿವೆ. ಘಟನೆಯಿಂದ ಎರಡು ಬೋಗಿಗಳು ಮುಗುಚಿ ಬಿದ್ದಿದ್ದು. ಬೋಗಿಗಳಲ್ಲಿದ್ದ ನೂರಾರು ಟನ್ ತೂಕದ ಸಿಮೆಂಟ್ ಚೀಲಗಳು …
Read More »