Breaking News

Yearly Archives: 2022

ಕಾಮಿಡಿ ನಟಿ ನಯನಾ ವಿರುದ್ಧ ನಿಂದನೆ ಆರೋಪ, ಕೇಸ್‌ ದಾಖಲು

ಕಾಮಿಡಿ ನಟಿ ನಯನಾ ವಿರುದ್ಧ ಕೇಸ್ ದಾಖಲಾಗಿದೆ. ಜೀವ ಬೆದರಿಕೆ ಮತ್ತು ನಿಂದನೆ ಆರೋಪದಲ್ಲಿ ಕೇಸ್ ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ನಯನಾ ಅವರು ಮತ್ತೊಬ್ಬ ಕಾಮಿಡಿ ನಟ ಸೋಮಶೇಖರ್‌ಗೆ ಬೆದರಿಕೆ ಹಾಕಿದ್ದಾರೆ (Crime news) ಎಂದು ಆರೋಪಿಸಲಾಗಿದೆ. ಸೋಮಶೇಖರ್ ರಿಂದ ದೂರು ದಾಖಲಾಗಿದೆ. ಕಾಮಿಡಿ ಕಿಲಾಡಿ ಗ್ಯಾಂಗ್ಸ್ ನಲ್ಲಿ ಸೋಮಶೇಖರ್ ತಂಡ ಭಾಗವಹಿಸಿತ್ತು. ಖಾಸಗಿ ಚಾನಲ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಕಾರ್ಯಕ್ರಮದಲ್ಲಿ ಬಹುಮಾನದ ಹಣವಾಗಿ 3 ಲಕ್ಷ ಹಣ …

Read More »

ಗಂಗಾವತಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಿಸಿಯೇ ಬಿಟ್ಟ ಸಿದ್ದರಾಮಯ್ಯ

ಗಂಗಾವತಿ :ಮುಂದಿನ 2023 ರ ವಿಧಾನಸಭೆಯ ಗಂಗಾವತಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯನ್ನು ಗೆಲ್ಲಿಸುವ ಮೂಲಕ ನನಗೆ ಬಲ ನೀಡಿ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. . ಅವರು ಭಾನುವಾರ ವಳಬಳ್ಳಾರಿಯಲ್ಲಿ ಕಾಂಗ್ರೆಸ್‌ ಕಾರ್ತಕರ್ತ ಅರಸಿನಕೇರಿ ಹನುಮಂತಪ್ಪ ನಿವಾಸದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನೆರೆದ ಜನರಿಗೆ ಮನವಿ ಮಾಡಿದರು. ಬಿಜೆಪಿಯವರ ಭ್ರಷ್ಟಾಚಾರಕ್ಕೆ ರಾಜ್ಯದ ಜನರು ರೋಸಿ ಹೋಗಿದ್ದು ಜೆಡಿಎಸ್- ಬಿಜೆಪಿಗೆ …

Read More »

ಇಬ್ರಾಹಿಂ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಬೆಳಗಾವಿ : ‘ಕುಮಾರಸ್ವಾಮಿ’ ಸಿಎಂ ಆಗಲಿ ಎಂದು ‘ಕೈ’ ನಾಯಕರು ದೇವೇಗೌಡರ ಕಾಲಿಗೆ ಬಿದ್ದಿದ್ದರು’ ಎಂದು ಸಿಎಂ ಇಬ್ರಾಹಿಂ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಾತನಾಡಿದ ಇಬ್ರಾಹಿಂ, ಕುಮಾರಸ್ವಾಮಿ ಸಿಎಂ ಆಗಲಿ ಎಂದು ಕಾಂಗ್ರೆಸ್ ನಾಯಕರು H.D.ದೇವೇಗೌಡರ ಕಾಲಿಗೆ ಬಿದ್ದಿದ್ದರು. ಸಿಎಂ ಮಾಡಿದ 14 ತಿಂಗಳಲ್ಲೇ ಶಾಸಕರನ್ನ ಮುಂಬೈಗೆ ಕಳಿಸಿದ್ರು. ಮುಂಬೈಗೆ ಕಳಿಸಿ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಸಿದ್ದರಾಮಯ್ಯ ಎಂದು ಹೇಳಿದ್ದಾರೆ. ಇಬ್ರಾಹಿಂ ಹೇಳಿಕೆ …

Read More »

ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ : ಶೀಘ್ರವೇ ಹಕ್ಕುಪತ್ರ ವಿತರಣೆ

ದಾವಣಗೆರೆ : ಸಾರ್ವಜನಿಕ ಸಮಸ್ಯೆಗೆ ಸ್ಪಂಧಿಸಿರುವ ಅಭಿವೃದ್ದಿಗೆ ಶ್ರಮಿಸಿದವರನ್ನು ಬೆಂಬಲಿಸಿ ಆರ್ಶಿವದಿಸಿ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೈರತಿ ಅವರು ಹೇಳಿದರು. ಸಂತೆಬೆನ್ನೂರಿನಲ್ಲಿ ಶನಿವಾರ ಜಿಲ್ಲಾಡಳಿತದಿಂದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಅಂಗವಾಗಿ ಆಯೋಜಿಸಲಾದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದುಕೊರತೆ ಅಲಿಸಿ ಮಾತಾನಾಡಿದರು. ಜನಸ್ಪಂದನ ಕಾರ್ಯಕ್ರಮ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕಾರ್ಯಕ್ರಮ ಕಚೇರಿ ಕೆಲಸಗಳಿಗಾಗಿ ಜನರು ಅಲೆಯುವುದನ್ನು ತಪ್ಪಿಸಲು ನಮ್ಮ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ …

Read More »

ಶ್ರೀರಾಮುಲು ರಕ್ತ ಪವಿತ್ರ, ಮುಂದೊಂದು ದಿನ ಮುಖ್ಯಮಂತ್ರಿ ಆಗ್ತಾನೆ: ಸಿಎಂ ಬೊಮ್ಮಾಯಿ

ಬಳ್ಳಾರಿ: ಶ್ರೀರಾಮುಲು ರಕ್ತ ಪವಿತ್ರ ರಕ್ತ, ಹಿಂದೆ ಅವರ ಬಗ್ಗೆ ಹಗುರವಾಗಿ ಮಾತಾಡಿದ್ರಿ. ರಾಮುಲು ಅನ್ನು ಪೆದ್ದ ಅಂದ್ರು, ರಾಮುಲು ಈ ಸಮುದಾಯದ ಹೃದಯ ಸಾಮ್ರಾಟ. ರಾಮುಲುಗೆ ಪೆದ್ದ ಅಂತೀಯಾ ಸಿದ್ದರಾಮಣ್ಣಾ? ನೀನ್ ಬಾಳ ಬುದ್ಧಿವಂತ ಅಲ್ವಾ? ನೀನು ಮುಖ್ಯಮಂತ್ರಿಯಾಗಿದ್ದೆ, ಮುಂದೊಂದು ದಿನ ಅವಕಾಶ ಬಂದ್ರೆ ಶ್ರೀರಾಮುಲು ಕೂಡ‌ ಮುಖ್ಯಮಂತ್ರಿ ಆಗ್ತಾನೆ. ಸಾಮಾಜಿಕ ನ್ಯಾಯ ಕೊಡೋದು ಬಿಜೆಪಿ ಮಾತ್ರ ಎಂದು ಕಾಂಗ್ರೆಸ್​ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಬಳ್ಳಾರಿಯಲ್ಲಿ …

Read More »

ಶಾಸಕರಿಗೇ ಹೊಡೆದು ಬಟ್ಟೆ ಹರಿದು ಹಾಕಿದ ಜನರು

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಸಾವಿಗೀಡಾದ ಪ್ರಕರಣ ವಿಕೋಪಕ್ಕೆ ತೆರಳಿದ್ದು ಉದ್ರಿಕ್ತ ಜನರು ಶಾಸಕರಿಗೇ ಹೊಡೆದು ಅಂಗಿ ಹರಿದು ಹಾಕಿದ ಪ್ರಸಂಗ ನಡೆದಿದೆ. ಮಾತ್ರವಲ್ಲ, ಶಾಸಕರು ಕತ್ತಲಲ್ಲಿ ಹರಿದ ಬಟ್ಟೆಯಲ್ಲೇ ತಮ್ಮ ಪರಿಸ್ಥಿತಿ ವಿವರಿಸಿದ್ದಾರೆ.   ಕಾಡಾನೆಯಿಂದ ಮಹಿಳೆ ಸಾವಿಗೀಡಾದ ಪ್ರದೇಶಕ್ಕೆ ತೆರಳಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಅವರ ಬಟ್ಟೆಯನ್ನೂ ಹರಿದು ಹಾಕಿದೆ. ಅಲ್ಲಿಂದ ಕೊನೆಗೂ ಅವರನ್ನು ಹರಸಾಹಸಪಟ್ಟು ಪೊಲೀಸರು ರಕ್ಷಿಸಿ ಕರೆದೊಯ್ದಿದ್ದಾರೆ. ನಡೆದ ಘಟನೆ …

Read More »

ಓದಿನ ಒತ್ತಡ ತಾಳಲಾಗದೆ ನೇಣು ಹಾಕಿಕೊಂಡ ವಿದ್ಯಾರ್ಥಿ

ಮುದ್ದೇಬಿಹಾಳ: ವಿದ್ಯಾರ್ಥಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇಂದು ಇನ್ನೊಬ್ಬ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದಾನೆ. ವಿಜಯನಗರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ವಿಜಯಪುರ ಮೂಲದ ನಾಗರಬೆಟ್ಟದ ಖಾಸಗಿ ವಸತಿ ಕಾಲೇಜಿನ ವಿದ್ಯಾರ್ಥಿ ಅಜಯಕುಮಾರ್ ವಿರುಪಾಕ್ಷಿ ನುಚ್ಚಿ (18) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ವಿದ್ಯಾರ್ಥಿ. ಈತ ನಾಗರಬೆಟ್ಟದ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ನೇಣು ಬಿಗಿದ ಸ್ಥಿತಿಯಲ್ಲಿ ಕಾಲೇಜಲ್ಲೇ ಈತನ ಶವ ಪತ್ತೆಯಾಗಿದೆ. …

Read More »

ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುತ್ತಿರೋ ವಿಶ್ವಕರ್ಮ ಜನರು: ಸ್ಫೋಟಕ ಸಂಗತಿ ಬಯಲು!

ಧಾರವಾಡ: ರಾಜ್ಯದಲ್ಲಿ ವಿಶ್ವಕರ್ಮ ಜನಾಂಗದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರೋ ಹಿನ್ನೆಲೆಯಲ್ಲಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಬಿಜೆಪಿ ಎಂಎಲ್‌ಸಿ ಕೆ.ಪಿ ನಂಜುಂಡಿ ಇಂದು ಬಹಿರಂಗಪಡಿಸಿದ್ದಾರೆ.   ವಿಶ್ವಕರ್ಮ ಸಮಾಜಕ್ಕೆ ಹೆಚ್ಚಿನ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಧಾರವಾಡಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಷ್ಟೋ ಕಡೆ ನಮ್ಮ ಸಮಾಜದವರು ಬೇರೆ ಬೇರೆ ಧರ್ಮಕ್ಕೆ ಹೋಗುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಹೆಚ್ಚಿಗೆ …

Read More »

ಸಿದ್ದು ಕ್ಷೇತ್ರ ನಿರ್ಧಾರ ಇಂದು?; ಕಾಂಗ್ರೆಸ್ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಕೊನೇ ದಿನ

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆಂಬ ಕುತೂಹಲಕ್ಕೆ ಸೋಮವಾರ ತೆರೆಬೀಳುವ ಸಾಧ್ಯತೆ ಇದೆ. ಮುಂಬರುವ ವಿಧಾನಭಾ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆಸಕ್ತರಾದವರು ಕೆಪಿಸಿಸಿಗೆ ನಿಗದಿತ ಶುಲ್ಕ ಕಟ್ಟಿ ಅರ್ಜಿ ಸಲ್ಲಿಸಬೇಕೆಂಬ ನಿಯಮ ಜಾರಿಗೆ ತರಲಾಗಿದೆ. ಆ ಪ್ರಕಾರ 1,200 ಮಂದಿ ಅರ್ಜಿ ಪಡೆದುಕೊಂಡಿದ್ದು, 1,030 ಮಂದಿ ಭರ್ತಿ ಮಾಡಿದ ಅರ್ಜಿಯನ್ನು ಕೆಪಿಸಿಸಿಗೆ ಸಲ್ಲಿಸಿದ್ದಾರೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಸೋಮವಾರ ಕಡೆಯ ದಿನ. ಈವರೆಗೆ …

Read More »

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 48 ವಾಹನಗಳು ಜಖಂಗೊಂಡಿದೆ. ಭಾನುವಾರ ರಾತ್ರಿ ಈ ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪುಣೆ ಸಮೀಪ ಇರುವ ನವಲೆ ಬ್ರಿಡ್ಜ್​ನಲ್ಲಿ ನಡೆದಿದೆ. ಪುಣೆಯ ಅಗ್ನಿ ಶಾಮಕ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಕ್ಷಣಾ ತಂಡ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. …

Read More »