Breaking News

Daily Archives: ಡಿಸೆಂಬರ್ 11, 2022

ತೂಕ ಇಳಿಸಿಕೊಂಡ ದುನಿಯಾ ವಿಜಯ್, ಭೀಮ ಚಿತ್ರಕ್ಕಾಗಿ ಕರಿಚಿರತೆ ಮತ್ತೆ ರೆಡಿ!

ಕನ್ನಡದ ದುನಿಯಾ ವಿಜಯ್ (Duniya Vijay) ಯಾವಾಗಲೂ ಸಾಹಸಗಳನ್ನ ಮಾಡ್ತಾನೇ ಇರ್ತಾರೆ. ಸಾಹಿತ್ಯದ ಬಗ್ಗೆನೂ ವಿಶೇಷ ಆಸಕ್ತಿ ಇದೆ. ಕಥೆಗಳನ್ನೂ ಕೇಳೋದು ಇದೆ. ಕಥೆಗಳನ್ನ ಸಿನಿಮಾಕ್ಕಾಗಿಯೇ ಹೇಳೋದು ಇದೆ. ದುನಿಯಾ ವಿಜಯ್​ ಅವರಿಗೆ (Direction) ನಿರ್ದೇಶನದ ಆಸಕ್ತಿನೂ ಇದೆ. ಆ ಆಸಕ್ತಿಯಲ್ಲಿ ಈಗಾಗಲೇ ಸಲಗ ಸಿನಿಮಾ ಬಂದಿದೆ. ಹಿಟ್ ಕೂಡ ಆಗಿದೆ. ಇದೇ ವಿಜಯ್ ಈಗ ಮತ್ತೊಂದು (Cinema) ಸಿನಿಮಾ ಶುರು ಮಾಡಿದ್ದಾರೆ. ಅದುವೇ ಭೀಮ. ಈ ಚಿತ್ರದ ಪಾತ್ರಗಳು …

Read More »

ಯತ್ನಾಳ ಮಾತ್ರವಲ್ಲ ಯಾರಾದರೂ ದಾಖಲೆ ಬಿಡುಗಡೆ ಮಾಡಲಿ: ವಚನಾನಂದಶ್ರೀ

ವಿಜಯಪುರ: ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಪಾದಯಾತ್ರೆ ಹೋರಾಟಕ್ಕೆ ಮುನ್ನವೇ ಸರ್ಕಾರ ಹರಿಹರ ಪಂಚಮಸಾಲಿ ಪೀಠದ ಅಭಿವೃದ್ಧಿ, ವಿದ್ಯಾರ್ಥಿ ವಸತಿ ನಿಲಗಳಿಗೆ 10 ಕೋಟಿ ರೂ. ನೀಡಿದೆ. ನೀಡಿದ ಅನುದಾನ ಪಾರದರ್ಶಕವಾಗಿ ಬಳಕೆಯಾಗಿದೆ. ಹೀಗಾಗಿ ಯತ್ನಾಳ ಮಾತ್ರವಲ್ಲ ಯಾರು ಬೇಕಾದರೂ ದಾಖಲೆ ಬಿಡುಗಡೆ ಮಾಡಲಿ ಎಂದು ಹರಿಹರ ವೀರಶೈವ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಶ್ರೀಗಳು ಹೇಳಿದರು.   ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರದ ನಮ್ಮ ಪೀಠಕ್ಕೂ, …

Read More »

ಬೆಳಗಾವಿಗೆ ಭೇಟಿ ನೀಡಬೇಕಿದ್ದ `ಮಹಾ’ ಸಚಿವ `ಚಂದ್ರಕಾಂತ್ ಪಾಟೀಲ್’ ಮುಖಕ್ಕೆ ಮಸಿ!

ಬೆಳಗಾವಿ : ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಸಂಬಂಧ ಕಳೆದ ವಾರ ಬೆಳಗಾವಿಗೆ ಭೇಟಿ ನೀಡಬೇಕಿದ್ದ ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲ್ ಮುಖಕ್ಕೆ ವ್ಯಕ್ತಿಯೊಬ್ಬ ಮಸಿ ಬಳಿದಿರುವ ಘಟನೆ ನಡೆದಿದೆ.   ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಜ್ಯೋತಿಬಾ ಫುಲೆ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಪುಣೆಯ ಪಿಂಪ್ರಿ-ಚಿಂಚ್ವಾಡ್ನಲ್ಲಿ ಶನಿವಾರ ಅಪರಿಚಿತ ವ್ಯಕ್ತಿಯೊಬ್ಬ ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಅವರ ಮೇಲೆ ಮಸಿ ಎರಚಿದ್ದಾನೆ. ಪಿಂಪ್ರಿ-ಚಿಂಚ್ವಾಡ್ನಲ್ಲಿ ಸಂಜೆ ಕಾರ್ಯಕ್ರಮವೊಂದರಲ್ಲಿ …

Read More »

BJP, JDSಗೂ ಮೊದಲೇ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್

ಬೆಂಗಳೂರು: ರಾಜ್ಯ ಚುನಾವಣೆಗೆ ಆಗಲೇ ವೇದಿಕೆ ಸಿದ್ದವಾಗುತ್ತಿದ್ದು, ಎಲ್ಲಾ ಪಕ್ಷಗಳಿಗಿಂತಲೂ ಮೊದಲೇ ಕಾಂಗ್ರೆಸ್ ಪಕ್ಷವು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿ ಮೂರ್ನಾಲ್ಕು ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್ ಸಿಗುವುದು ಖಚಿತವಾಗಿದೆ.ಕೆಲವೊಂದು ಕ್ಷೇತ್ರಗಳಲ್ಲಿ ನಾಲ್ಕೈದು ರಿಂದ ಹಿಡಿದು ೧೦,೧೫ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ ಬೆಂಗಳೂರು ನಗರ ಕ್ಷೇತ್ರಗಳಲ್ಲಿ ಯಾರಿಗೆಲ್ಲಾ ಸಿಗಲಿದೆ ಟಿಕೆಟ್? ಗಾಂಧಿನಗರ- ದಿನೇಶ್ ಗುಂಡೂರಾವ್ ಬ್ಯಾಟರಾಯನಪುರ- ಕೃಷ್ಣಬೈರೇಗೌಡ ಸರ್ವಜ್ಙನಗರ- …

Read More »

ಶಾಲಾ ಪ್ರವಾಸದ ವೇಳೆ ಕಾಲು ಜಾರಿ ಬಿದ್ದು ವಿದ್ಯಾರ್ಥಿನಿ ಸಾವು

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೆ ಬೆಳಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಕೈಗೊಳ್ಳಲಾಗಿದ್ದ ಪ್ರವಾಸ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. 10ನೇ ತರಗತಿಯಲ್ಲಿ ಓದುತ್ತಿದ್ದ ನಾಗಲಕ್ಷ್ಮಿ(16) ಮೃತ ವಿದ್ಯಾರ್ಥಿನಿ. ಶ್ರವಣಬೆಳಗೊಳದಲ್ಲಿ ಮೆಟ್ಟಿಲು ಹತ್ತುವಾಗ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ಬಿ.ಇ.ಒ ಗುರಪ್ಪ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೆ.ಬೆಳಗಲ್ ಗ್ರಾಮಕ್ಕೆ ತೆರಳಿ ಘಟನೆ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ …

Read More »

ಅದ್ಧೂರಿಯಾಗಿ ಜರುಗಿದ ಅಭಿ-ಅವಿವಾ ನಿಶ್ಚಿತಾರ್ಥ

ಸ್ಯಾಂಡಲ್‌ವುಡ್‌ನಲ್ಲಿ ಈಗ ಸಾಲು ಸಾಲು ಮದುವೆ ಸಂಭ್ರಮಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಅದಿತಿ ಪ್ರಭುದೇವ ಅವರು ಮದುವೆ ಅದ್ಧೂರಿಯಾಗಿ ಜರುಗಿತ್ತು. ಕಳೆದ ಕೆಲ ದಿನಗಳ ಹಿಂದೆ ಹರಿಪ್ರಿಯಾ ವಸಿಷ್ಠ ಸಿಂಹ ಅವರ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ರೆಬೆಲ್ ಸ್ಟಾರ್ ಅಂಬರೀಶ್‌ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಅವಿವಾ ಬಿದ್ದಪ್ಪ ಜೊತೆ ಅದ್ಧೂರಿಯಾಗಿ ನೆರವೇರಿತು. ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿಅಭಿಷೇಕ್‌ ಮತ್ತು ಅವಿವಾ ಎಂಗೇಜ್ಮೆಂಟ್‌ಅದ್ಧೂರಿಯಾಗಿ ನಡೆಯುತ್ತಿದೆ. ಕುಟುಂಬಸ್ಥರ …

Read More »

‘ಕ್ರಾಂತಿ’ ವಿರುದ್ಧ ಶುರು ಬಾಯ್‌ಕಾಟ್ ಟ್ರೆಂಡ್!

ಕ್ರಾಂತಿ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರತಂಡ ಒಂದೆಡೆ ಹಾಡುಗಳನ್ನು ಬಿಡುಗಡೆಗೊಳಿಸುತ್ತಾ ಚಿತ್ರದ ಮೇಲಿನ ಹೈಪ್ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಸ್ವತಃ ಚಾಲೆಂಜಿಂಗ್ ದರ್ಶನ್ ಅವರೇ ಸಂದರ್ಶನಗಳಲ್ಲಿ ಪಾಲ್ಗೊಂಡು ಚಿತ್ರದ ಪ್ರಚಾರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಹೀಗೆ ಸಂದರ್ಶನಗಳಲ್ಲಿ ಭಾಗವಹಿಸುತ್ತಿರುವ ದರ್ಶನ್ ಅವರು ಕೆಲ ಸಂದರ್ಶನಗಳಲ್ಲಿ ನೀಡಿದ ಒಂದು ನಿರ್ದಿಷ್ಟ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ಎದುರಿಸುತ್ತಿದೆ. ಹೌದು, ಚಿತ್ರರಂಗದಲ್ಲಿ ನಿರ್ಮಾಪಕರು ಸಿಗುವುದು ಕಷ್ಟ, ಅಂತಹ ಅವಕಾಶ …

Read More »

10 ತಿಂಗಳ ಮಗುವನ್ನು ಕ್ಯಾಬ್​ನಿಂದ ಹೊರಗೆಸೆದು ಕೊಂದು ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ

ಮುಂಬೈ: ಹತ್ತು ತಿಂಗಳ ಮಗುವನ್ನು ಕ್ಯಾಬ್​ನಿಂದ ಹೊರಗೆಸೆದು ಸಾಯಿಸಿ, ಮಗುವಿನ ತಾಯಿಯ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಶನಿವಾರ ಬೆಳಗ್ಗೆ ಮಹಾರಾಷ್ಟ್ರದ ಪಾಲ್ಘರ್​ ಬಳಿ ಇರುವ ಮುಂಬೈ-ಅಹಮದಾಬಾದ್​ ಹೆದ್ದಾರಿಯಲ್ಲಿ ನಡೆದಿದೆ. ಮಹಿಳೆ ಮತ್ತು ಮಗು ಇತರ ಪ್ರಯಾಣಿಕರು ಹಂಚಿಕೊಂಡ ಕ್ಯಾಬ್‌ನಲ್ಲಿ ಪೆಲ್ಹಾರ್‌ನಿಂದ ಪೊಶೆರೆಗೆ ಹಿಂತಿರುಗುತ್ತಿದ್ದರು. ಈ ನಡುವೆ ಟ್ಯಾಕ್ಸಿ ಚಾಲಕ ಹಾಗೂ ಇತರೆ ಪ್ರಯಾಣಿಕರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆಕೆ ವಿರೋಧಿಸಿದಾಗ ಮಗುವನ್ನು ಕ್ಯಾಬ್‌ನಿಂದ ಹೊರಕ್ಕೆ ಎಸೆದಿದ್ದಾರೆ. ಇದರ …

Read More »

ಬೆಳಗುಂದಿ ಗ್ರಾಮದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ..

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಜರುಗಿತು. ಭಾನುವಾರ ದಂದು ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ರವಳನಾಥ ಪಂಚಕ್ರೋಶಿ ಸಾಹಿತ್ಯ ಅಕಾಡೆಮಿ ವತಿಯಿಂದ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.ಬೆಳಿಗ್ಗೆ ಸಮ್ಮೇಳನದ ಅಧ್ಯಕ್ಷರು ಗ್ರಂಥ ದಿಂಡಿಗೆ ಚಾಲನೆ ನೀಡುವ ಮೂಲಕ ಸಾಹಿತ್ಯ ಸಮ್ಮೇಳೆಕ್ಕೆ ಅಧಿಕೃತವಾಗಿ ಉದ್ಘಾಟಿಸಿದರು.ನಂತರ ಗ್ರಂಥದಿಂಡಿಯು ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿತು.ಚಿಕ್ಕಮಕ್ಕಳು ಆಕರ್ಷಕ ವೇಷಭೂಷಣದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಮೆರುಗು ತಂದರು. ನಂತರ ವೇದಿಕೆ ಕಾರ್ಯಕ್ರಮ ನೆರವೇರಿತು.ರಾಮಚಂದ್ರ …

Read More »

ಗ್ರಾಮೀಣ ಕ್ಷೇತ್ರದ ಬಿಜೆಪಿ ಟೀಕೆಟ್ ಆಕಾಂಕ್ಷಿ ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ನಾಗಪೂರಕ್ಕೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟೀಕೆಟ್ ಆಕಾಂಕ್ಷಿ ಎಂದು ಹೇಳಲಾಗುತ್ತಿರುವ ನಾಗೇಶ ಮನ್ನೋಳಕರ ಅವರು ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ನಾಗಪೂರಕ್ಕೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ. ಮರಾಠಾ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ ಮನ್ನೋಳಕರ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಬೆಂಗಳೂರು ದೆಹಲಿವರೆಗೆ ಓಡಾಡಿ ಇದಿಗ ನಾಗಪೂರಕ್ಕೂ ಪ್ರಯಾಣ ಬೆಳೆಸಿ ಬಿಜೆಪಿ ಮುಖಂಡರನ್ನ ಭೇಟಿ ಆಗಿದ್ದಾರೆ. ರಮೇಶ ಜಾರಕಿಹೊಳಿ …

Read More »