Breaking News

Daily Archives: ನವೆಂಬರ್ 20, 2022

ಆರೋಗ್ಯ ಕೇಂದ್ರಕ್ಕೆ ಬಾರದ ವೈದ್ಯರು, ನರ್ಸ್‌: 2 ತಾಸು ನರಳಾಡಿದ ತುಂಬು ಗರ್ಭಿಣಿ

ಕಿತ್ತೂರು : ಸಮೀಪದ ಸಂಗೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ, ಸೂಕ್ತ ಸಮಯಕ್ಕೆ ಗರ್ಭಿಣಿಗೆ ಚಿಕಿತ್ಸೆ ನೀಡದ ಶುಶ್ರೂಷಕಿಯನ್ನು ವರ್ಗಾವಣೆ ಮಾಡಿದ್ದು, ಆಸ್ಪತ್ರೆಯ ಇಬ್ಬರು ವೈದ್ಯರಿಗೂ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ.   ತಾಲ್ಲೂಕಿನ ಕಡತನಾಳ ಗ್ರಾಮದ ರತ್ನವ್ವ ಕಾದ್ರೊಳ್ಳಿ ಅವರನ್ನು ಗುರುವಾರ ಹೆರಿಗೆಗೆ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಆದರೆ ಅಲ್ಲಿ ವೈದ್ಯರು, ನರ್ಸ್‌ ಸೇರಿದಂತೆ ಯಾರೂ ಇರಲಿಲ್ಲ. ಎರಡು ತಾಸು ಆಸ್ಪತ್ರೆಯ ಆವರಣದಲ್ಲೇ ಗರ್ಭಿಣಿ …

Read More »

ಒತ್ತಡದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳಿ: ರಾಜೇಂದ್ರ ಕಲಘಟಗಿ

ಬೆಳಗಾವಿ: ‘ಪ್ರತಿದಿನವೂ ನಿಯಮಿತ ಹಾಗೂ ಸಮತೋಲನದ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ವಾಯುವಿಹಾರ, ಯಾವುದೇ ಒತ್ತಡ ಪರಿಸ್ಥಿತಿಯಲ್ಲಿಯೂ ಹೊರಗಿನ ಪದಾರ್ಥ ಸೇವಿಸದೇ ಇರುವುದೇ ನನ್ನ ಆರೋಗ್ಯದ ಗುಟ್ಟು. ಪೊಲೀಸ್‌ ಪಡೆ ಸೇರಿದವರು ಇಂಥ ಜೀವನಶೈಲಿ ರೂಢಿಸಿಕೊಳ್ಳುವುದು ಅಗತ್ಯ’ ಎಂದು ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಕಿವಿಮಾತು ಹೇಳಿದರು.   ನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ …

Read More »

ಬೆಳಗಾವಿ: ಜನರ ಮನಸೂರೆಗೊಂಡ ಫಲ-ಪುಷ್ಪ ಪ್ರದರ್ಶನ

ಬೆಳಗಾವಿ: ಒಂದೆಡೆ ಕಾಂತಾರ ಚಲನಚಿತ್ರದ ಪರಿಸರ ದೇವತೆ ಪಂಜುರ್ಲಿ, ಇನ್ನೊಂದೆಡೆ ಎತ್ತುಚಕ್ಕಡಿ ಕಟ್ಟಿ ಬಿತ್ತಲು ನಡೆದ ರೈತ, ಮತ್ತೊಂದೆಡೆ ಕೇಶರಾಶಿ ಹರಡಿ ನಿಂತ ಸುಂದರ ಜಲಕನ್ಯೆ, ಎಲ್ಲರನ್ನೂ ಬರಸೆಳೆಯುವ ನೆಚ್ಚಿನ ನಟ ಪುನೀತ್‌ ರಾಜ್‌ಕುಮಾರ್‌…   ಇಲ್ಲಿನ ಹ್ಯೂಮ್‌ ಪಾರ್ಕಿನಲ್ಲಿ ಆಯೋಜಿಸಿದ ಮೂರು ದಿನಗಳ 63ನೇ ಫಲ ಪುಷ್ಪ ಪ್ರದರ್ಶನದಲ್ಲಿ ಕಂಡುಬರುವ ದೃಶ್ಯಗಳಿವೆ. ಶುಕ್ರವಾರವೇ ಆರಂಭವಾದ ಈ ಪ್ರದರ್ಶನ ಪರಿಸರ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ವಿವಿಧ ಶಾಲಾ ಮಕ್ಕಳು, ಯುವಜನರು, ರೈತರು, …

Read More »

ನವಿಲುತೀರ್ಥ ಜಲಾಶಯ: ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಪಟ್ನಾಳ ಗ್ರಾಮದಲ್ಲಿ ಗೃಹಿಣಿಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಮುಳುಗಿಸಿ ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ ಶಶಿಕಲಾ ಉರೂಫ್‌ ತನುಜಾ ಪರಸಪ್ಪ ಗೋಡಿ (32) ಮಕ್ಕಳಾದ ಸುದೀಪ (4) ರಾಧಿಕಾ (3) ಸಾವಿಗೀಡಾದವರು.   ಗೃಹಿಣಿ ಗುರುವಾರ ರಾತ್ರಿ ತಮ್ಮ ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳಗಿಸಿ ಕೊಲೆ ಮಾಡಿದರು. ಬಳಿಕ ತಾವೂ ನೀರಿಗೆ ಹಾರಿದರು. ಕುಟುಂಬದವರು ರಾತ್ರಿಯಿಡೀ …

Read More »

ಮದ್ಯದ ಅಂಗಡಿಗಳಿಗೆ ಡಿ.ಸಿ ಭೇಟಿ: ಪರಿಶೀಲನೆ

ಬೆಳಗಾವಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಎರಡು ಮದ್ಯದ ಅಂಗಡಿಗಳಿಗೆ ತೆರಳಿದರು. ಲೈಸೆನ್ಸ್, ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು.   ಡಿ.ಸಿ ಗ್ರಾಮ ಪ್ರವೇಶಿಸುತ್ತಿದ್ದಂತೆ ತಡೆದ ಮಹಿಳೆಯರು, ಊರ ಮಧ್ಯದಲ್ಲಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಆಗ, ಪಾಟೀಲ ಸ್ವತಃ ಅಂಗಡಿಗಳಿಗೆ ಹೋಗಿ ಪರಿಶೀಲಿಸಿದರು. ಸದ್ಯ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಲಾಗಿದೆ. ಸಮಗ್ರವಾಗಿ …

Read More »