ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರಿಗೆ ಮತ್ತೊಮ್ಮೆ ಕೊರೊನಾ ಸೋಂಕು (Corona virus)ದೃಢಪಟ್ಟಿದ್ದು, ಇಂದಿನ ದೆಹಲಿ ಪ್ರವಾಸ ರದ್ದುಪಡಿಸಿದ್ದಾರೆ. ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿಯ ಪ್ರವಾಸ ರದ್ದಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
Read More »Monthly Archives: ಆಗಷ್ಟ್ 2022
ಮನೆ, ವಾಹನ, ಇತರೆ ಸಾಲಗಾರರಿಗೆ ಬಿಗ್ ಶಾಕ್: ಬಡ್ಡಿ ದರ 3 ತಿಂಗಳಲ್ಲಿ ಶೇ. 1.4 ರಷ್ಟು ಏರಿಕೆ: EMI ಹೆಚ್ಚಳ
ಮುಂಬೈ: ಹಣದುಬ್ಬರ ಹಾಗೂ ರೂಪಾಯಿ ಅಪಮೌಲ್ಯ ತಡೆಯುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳು ತನ್ನಿಂದ ಪಡೆಯುವ ಸಾಲದ ಮೇಲಿನ ಬಡ್ಡಿ ದರವನ್ನು(ರೆಪೊ) 0.50 ರಷ್ಟು ಹೆಚ್ಚಳ ಮಾಡಿದೆ. ಮೂರು ತಿಂಗಳಲ್ಲಿ ರೆಪೊ ದರ ಶೇಕಡ 1.4 ರಷ್ಟು ಏರಿಕೆಯಾಗಿದ್ದು, ಇದರಿಂದಾಗಿ ಬ್ಯಾಂಕುಗಳಿಂದ ವೈಯಕ್ತಿಕ, ಗೃಹ, ವಾಹನ ಇನ್ನಿತರೆ ಸಾಲ ಪಡೆದ ಗ್ರಾಹಕರು ಹೆಚ್ಚಿನ ಬಡ್ಡಿ ಪಾವತಿಸುವುದು ಅನಿವಾರ್ಯವಾಗಿದೆ. ಶೇಕಡ 7ರ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದವರು ಶೇಕಡ …
Read More »ಸಿದ್ದು ಕಾರ್ಯಕ್ರಮಕ್ಕೆ ಸಾಕಷ್ಟು ಪ್ರಯತ್ನಿಸಿ, ಹೆಚ್ಚಿನ ಹಣ ಖರ್ಚು ಮಾಡಿ ಜನ ಸೇರಿಸಿದ್ದಾರೆ.: ಶೆಟ್ಟರ್
ಹುಬ್ಬಳ್ಳಿ: ಸಿದ್ದರಾಮಯ್ಯ “ಅಮೃತಮಹೋತ್ಸವ’ದಿಂದ ಹಾನಿಯಾಗುವುದು ಕಾಂಗ್ರೆಸ್‌ಗೇ ಹೊರತು ಬಿಜೆಪಿಗಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾದ ಜನ್ಮದಿನ ಆಚರಣೆಯಿಂದ ಬಿಜೆಪಿ ಬೆಳವಣಿಗೆ, ಸಂಘಟನೆ, ವ್ಯವಸ್ಥೆಗೆ ಯಾವುದೇ ರೀತಿ ಧಕ್ಕೆಯಾಗುವುದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರು ರಾಹುಲ್ ಗಾಂಧಿ ಸೂಚನೆ ಮೇರೆಗೆ ಕೃತಕವಾಗಿ ಅಪ್ಪಿಕೊಂಡಿದ್ದಾರೆ ವಿನಃ ಮನಪೂರ್ವಕವಾಗಿ ಅಲ್ಲ. ತೋರಿಕೆಗಾಗಿ ನಾವೆಲ್ಲ ಒಂದಾಗಿದ್ದೇವೆ …
Read More »ರೈಲು ನಿಲ್ದಾಣದಲ್ಲಿ ವಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆಗೆ ಪ್ರಯತ್ನ
ರೈಲು ನಿಲ್ದಾಣದಲ್ಲಿ ವಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆಗೆ ಪ್ರಯತ್ನ ನಡೆಸಿದ ಓರ್ವ ವ್ಯಕ್ತಿಯನ್ನು ರೈಲ್ವೆ ಪೆÇಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ ಘಟನೆ ಖಾನಾಪುರದ ಲೋಂಡಾ ರೈಲು ನಿಲ್ದಾಣದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ನಾಸೀರ ಇಸ್ಮಾಯಿಲ್ ಪಠಾಣ (32) ಎಂಬುವರ ಮೇಲೆ ಬುಧವಾರ ರಾತ್ರಿ ಲೋಂಡಾ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ನಂ 1 ಹಾಗೂ 2 ರ ನಡುವಿನ ಓವರ್ ಬ್ರಿಡ್ಜ್ ಮೇಲೆ ನಡೆದಿದೆ. …
Read More »ಬೆಳಗಾವಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಆಗಿ, ನೂರರ ಗಡಿ ದಾಟಿದೆ. ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿರುವ ಕೋವಿಡ್ ಬುಲೆಟಿನ್ನಲ್ಲಿ ಶುಕ್ರವಾರ 110 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ ಅಥಣಿಯಲ್ಲಿ 12, ಬೆಳಗಾವಿ ತಾಲೂಕಿನಲ್ಲಿ 14, ಹುಕ್ಕೇರಿ 02, ಚಿಕ್ಕೋಡಿ, ಗೋಕಾಕ, ಖಾನಾಪೂರ, ಸವದತ್ತಿ ತಾಲೂಕಿನಲ್ಲಿ ತಲಾ 5 ಸೋಂಕಿತ ಪ್ರಕರಣಗಳು ದಾಖಲಾಗಿದ್ದರೆ ರಾಮದುರ್ಗ ತಾಲೂಕಿನಲ್ಲಿ ಅತಿಹೆಚ್ಚು 62 ಸೋಂಕಿತ ಪ್ರಕರಣ ದಾಖಲಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ …
Read More »ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ ಅಂಬೇಡ್ಕರ್ ನಗರದಲ್ಲಿ ಘಟನೆ
ಗೋಕಾಕ ಅ 5 : ಮನೆಯಿಂದ ಶೌಚಾಲಯಕ್ಕೆ ತೆರಳುತ್ತಿರುವ ಮಹಿಳೆಯ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಗರದ 21 ನೇ ವಾರ್ಡ್‍ನ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಬೇದಾ ಮುಸ್ತಫಾ ಕಲ್ಲೋಳಿ ಎಂಬ ಮಹಿಳೆ ಮಧ್ಯಾಹ್ನ ಶೌಚಾಲಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಬೀದಿ ನಾಯಿಯು ಮಹಿಳೆಯ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೋಳಿಸಿದ್ದು, ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಂಬೇಡ್ಕರ್ …
Read More »ಅತಿವೃಷ್ಟಿ ಕುರಿತು ಸಚಿವ ಗೋವಿಂದ ಕಾರಜೋಳ ಸಭೆ
ಇತ್ತೀಚಿನ ಮಳೆಯಿಂದ ಯಾವುದೇ ರೀತಿಯ ಬೆಳೆ ಅಥವಾ ಮನೆಹಾನಿಯಾಗಿದ್ದರೆ ಕೂಡಲೇ ಪರಿಹಾರ ನೀಡಬೇಕು. ಮನೆಹಾನಿ ಸಮೀಕ್ಷೆಯ ಕುರಿತ ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಕೂಡ ಆಯಾ ಗ್ರಾಮ ಪಂಚಾಯತಿ ಗಳಲ್ಲಿ ಪ್ರದರ್ಶಿಸಬೇಕು. ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗಳಿದ್ದರೆ ಅವುಗಳನ್ನು ಪರಿಶೀಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅತಿವೃಷ್ಟಿ/ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಆ.5) …
Read More »ಬೆಳಗಾವಿಯ ಜಾಧವ ನಗರದಲ್ಲಿ ಚಿರತೆ
ಬೆಳಗಾವಿಯ ಜಾಧವ ನಗರದಲ್ಲಿ ಚಿರತೆ ದಾಳಿ ಹಿನ್ನೆಲೆ ಆರ್‍ಎಫ್‍ಒ ರಾಕೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಜರ ಹಾಗೂ ಟ್ರ್ಯಾಂಕುಲೇಶನ್ ಗನ್ ಜೊತೆಗೆ ತಜ್ಞರಿಗೆ ಬರಲು ಹೇಳಲಾಗಿದ್ದು ಚಿರತೆಯನ್ನು ಸೆರೆಹಿಡಿಯುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್‍ಎಫ್‍ಒ ರಾಕೇಶ್‍ರವರು, ಈ ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡಿದ್ದನ್ನು ನೋಡಿದರೆ ಅದು ಚಿರತೆ ಅಲ್ಲ ಎನಿಸುತ್ತದೆ. ಲಿಯೋಪರ್ಡ್ ಹಾಗೂ ಲಿಯೋಪರ್ಡ್ ಕ್ಯಾಟ್ ಸೈಜ್ ಒಂದೇ ಆದರೂ ಕೂಡ …
Read More »ಮಗನ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವಾಗಿದೆ
ಬೆಳಗಾವಿಯಲ್ಲಿ ಮಗನ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ತಾಲೂಕಿನ ಖನಗಾಂವಿ ಕೆಎಚ್ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಖನಗಾವಿ ಕೆ.ಹೆಚ್. ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಜಾಧವ್ ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಕಾರ್ಮಿಕ ಖನಗಾಂವಿಯ ಸಿದ್ರಾಯಿ ನಿಲಜ್‌ಕರ್ (೩೮) ಎಂಬವರ ಮೇಲೆ ಮೇಲೆ ಚಿgಚಿve ದಾಳಿ ಮಾಡಿತ್ತು. ಈ ವೇಳೆ ಸಿದ್ರಾಯಿ ಭುಜದ ಮೇಲೆ …
Read More »ರಾಜಕುಮಾರ್ ಟಾಕಳೆಗೆ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಬೆಳಗಾವಿಯಲ್ಲಿ ನವ್ಯಶ್ರೀ ರಾವ್ ಪರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಟಾಕಳೆ ನನ್ನನ್ನು ಹೆಂಡತಿಯಾಗಿ ಒಪ್ಪಿಕೊಳ್ಳದಿದ್ದರೆ ರಾಜಕುಮಾರನ ರಾಣಿ ಹೇಗಾಗಬೇಕೆಂದು ನನಗೆ ಗೊತ್ತಿದೆ ಎಂದು ನವ್ಯಶ್ರೀ ಹೇಳಿದ್ದಾರೆ.ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯನ್ನು ನನಡೆಸಿ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ನಾನು ವಿದೇಶದಿಂದ ಹಿಂದುರಿಗಿದ ಮೇಲೆ ಕಳೆದ 20 ದಿನಗಳಿಂದ ಬೆಳಗಾವಿಯಲ್ಲಿದ್ದುಕೊಂಡು ಕಾನೂನು ಹೋರಾಟವನ್ನು ಮಾಡುತ್ತಿದ್ದೇನೆ. ನನಗಾದ ಅನ್ಯಾಯ ಕುರಿತಂತೆ ಎಪಿಎಂಸಿ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದೆ.ಅದಕ್ಕೆ ಸಂಬಂಧಿಸಿದಂತೆ ರಾಜ್‍ಕುಮಾರ್ ಟಾಕಳೆ ಆಂಟಿಸಿಪೇಟರಿ ಬೇಲ್‍ಗೆ ಅರ್ಜಿ ಹಾಕಿದ್ದರು. ಆದರೆ ನ್ಯಾಯಾಲಯ ಈ ಬೇಲ್ ಅರ್ಜಿಯನ್ನು ತಳ್ಳಿಹಾಕಿದೆ. ಇನ್ನು ನಾನು ಕಾನೂನು ರೀತಿಯ ಹೋರಾಟವನ್ನು ಮುಂದುವರೆಸುತ್ತೇನೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಈಗಾಗಲೇ ಟಾಕಳೆ ರವರ ಮೇಲೆ ಎಫ್‍ಐಆರ್ ಆಗಿದೆ. ಆದರೆ ಇನ್ನೂ ಅವರ ಬಂಧನವಾಗಿಲ್ಲ. ಮಂಗಳವಾರ ಬೆಂಗಳೂರಿಗೆ ಹೋಗಿ ನನ್ನ ವಕೀಲರನ್ನೆಲ್ಲ ಭೇಟಿಯಾಗಿ ವೀಡಿಯೋ ಹರಿದಾಡಿದ್ದ ಕುರಿತಂತೆ ನಾನು ಮೊದಲು ಕೇಸ್ ದಾಖಲಿಸಿದೆ. ಈ ಎಲ್ಲಾ ಘಟನೆಗಳು ನಡೆದಿದ್ದು ಬೆಳಗಾವಿ ಸುತ್ತಮುತ್ತವಾದ್ದರಿಂದ ನಾನು ಮೊದಲು ಎಪಿಎಂಸಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇನೆ. ನನಗೆ ಪೊಲೀಸರ ಮೇಲೆ ನನಗೆ ವಿಸ್ವಾಸವಿದೆ. ಅವರು ನನಗೆ ನ್ಯಾಯವನ್ನು ಕೊಟ್ಟೇ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ರಾಜಕುಮಾರ್ ಟಾಕಳೆಗೆ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಬೆಳಗಾವಿಯಲ್ಲಿ ನವ್ಯಶ್ರೀ ರಾವ್ ಪರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಟಾಕಳೆ ನನ್ನನ್ನು ಹೆಂಡತಿಯಾಗಿ ಒಪ್ಪಿಕೊಳ್ಳದಿದ್ದರೆ ರಾಜಕುಮಾರನ ರಾಣಿ ಹೇಗಾಗಬೇಕೆಂದು ನನಗೆ ಗೊತ್ತಿದೆ ಎಂದು ನವ್ಯಶ್ರೀ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯನ್ನು ನನಡೆಸಿ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ನಾನು ವಿದೇಶದಿಂದ ಹಿಂದುರಿಗಿದ ಮೇಲೆ ಕಳೆದ 20 ದಿನಗಳಿಂದ ಬೆಳಗಾವಿಯಲ್ಲಿದ್ದುಕೊಂಡು ಕಾನೂನು ಹೋರಾಟವನ್ನು ಮಾಡುತ್ತಿದ್ದೇನೆ. ನನಗಾದ ಅನ್ಯಾಯ ಕುರಿತಂತೆ ಎಪಿಎಂಸಿ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದೆ. …
Read More »
Laxmi News 24×7