Breaking News

Daily Archives: ಜುಲೈ 18, 2022

ಮಳೆರಾಯನ ಅಬ್ಬರ.. ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಗಳು ಜಲಾವೃತ.

ಬೆಳಗಾವಿ : ಬೆಳಗಾವಿಯಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಸತತ ಮಳೆಗೆ ಬೆಳಗಾವಿ ಜನರ ಸ್ಥಿತಿ ಅಯೋ ಮಯವಾಗಿದೆ. ಚರಂಡಿ ವ್ಯವಸ್ಥೆ ಇಲ್ಲದೇ ಹಲವು ರಸ್ತೆಗಳು ಜಲಾವೃತವಾಗಿದೆ. ಉಜ್ವಲ ನಗರ, ಓಂಕಾರ ನಗರ, ಮಹಾಂತೇಶ ನಗರ ಬ್ರಿಡ್ಜ್ , ಬೆಳಗಾವಿ ನಗರ ಸೇರಿ ಹಲವು ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಜಲಾವೃತಗೊಂಡ ರಸ್ತೆಯಲ್ಲಿ ಭಯದಲ್ಲೇ ಬೈಕ್ ಸವಾರರ ಸಂಚಾರ ಮಾಡುತ್ತಿದ್ದಾರೆ. ಚರಂಡಿ ವ್ಯವಸ್ಥೆ ಕಲ್ಪಿಸದ ಬೆಳಗಾವಿ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

Read More »

ಬೆಳಗಾವಿನಗರದ ಜೀವನಾಡಿ ರಕ್ಕಸಕೊಪ್ಪ ಡ್ಯಾಂ ಭರ್ತಿ

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ (Maharashtra Western hills) ಧಾರಾಕಾರ ಮಳೆ (Rainfall) ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನದಿಗಳು (Belagavi Rivers) ಮೈದುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಮಲಪ್ರಭಾ (Malaprabha), ಘಟಪ್ರಭಾ (Ghataprabha), ಮಾರ್ಕಂಡೇಯ (Markandeya) ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ‌.‌ ಇದೇ ರೀತಿ ಇನ್ನೂ ಹದಿನೈದು ದಿನಗಳ ಕಾಲ ಮಳೆ ಮುಂದುವರಿದರೆ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ. ಸದ್ಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು …

Read More »

ಸಿ.ಎಂ. ಆಯ್ಕೆ ಚುನಾವಣೆ ಮುಗಿದ ಮೇಲೆ ನೋಡೋಣ ನಾನು ಆ ರೇಸ್‍ನಲ್ಲಿ ಇಲ್ಲ

ಮುಖ್ಯಮಂತ್ರಿ ಆಯ್ಕೆ ಚುನಾವಣೆ ಮುಗಿದ ಮೇಲೆ ನೋಡೋಣ, ಸದ್ಯಕ್ಕೆ ನಾನು ಸಿಎಂ ರೇಸ್‍ನಲ್ಲಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಹಾರೂಗೇರಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸೈಕಲ್ ಜಾಥಾ ಸಮಾರೋಪ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಸಿದ್ದರಾಮಯ್ಯ ಸಿಎಂ ಆಗುವ ಇಂಗಿತ ವಿಚಾರಕ್ಕೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಚುನಾವಣೆ ಆದ ಮೇಲೆ ಮುಖ್ಯಮಂತ್ರಿಗಳ ಆಯ್ಕೆ ಆಗುತ್ತದೆ. ಸಧ್ಯಕ್ಕೆ ನಾನು ಸಿಎಂ ರೇಸ್‍ನಲ್ಲಿ ಇಲ್ಲ …

Read More »

2023ರ ಚುನಾವಣೆ ಬಳಿಕ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ,ಯಾವ ಸ್ಥಾನಮಾನ, ಹುದ್ದೆಯೂ ನನಗೆ ಬೇಡ.: ಸಿದ್ದರಾಮಯ್ಯ

ಮೈಸೂರು: 2023ರ ಚುನಾವಣೆ ಬಳಿಕ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯಾವ ಸ್ಥಾನಮಾನ, ಯಾವುದೇ ಹುದ್ದೆಯೂ ನನಗೆ ಬೇಡ. ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ನನ್ನನ್ನು ಖುಷಿಪಡಿಸಲೆಂದು ಈ ವಿಚಾರ ಮತ್ತೆ ಪ್ರಸ್ತಾಪ ಮಾಡಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ರವಿವಾರ ಜರಗಿದ ಚಾಮುಂಡೇಶ್ವರಿ ಮತ್ತು ಇಳವಾಲ, ಜಯಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಮುಂಚೂಣಿ ಘಟಕಗಳ ಪದಗ್ರಹಣ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ …

Read More »

ನ.11ರಿಂದ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಹೇಶ ಜೋಶಿ

ಕಲಬುರಗಿ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಈ ಬಾರಿ ನ.11ರಿಂದ 13ರವರೆಗೆ ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಶೀಘ್ರವೇ ಸರ್ಕಾರದಿಂದ ಅಧಿಕೃತ ಘೋಷಣೆ ಆಗಲಿದೆ ಎಂದು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಸೆ.21, 22 ಮತ್ತು 23ರಂದು ನಡೆಸಲು ತೀರ್ಮಾನಿಸಲಾಗಿತ್ತು ಎಂದರು. ಹಾವೇರಿಯಲ್ಲಿ ಪ್ರಮುಖವಾಗಿ ಸಿರಿಗೆರೆ ಜಾತ್ರೆ ನಡೆಯುತ್ತದೆ. ದೊಡ್ಡ ಜಾತ್ರೆಯಾದ್ದರಿಂದ ಖುದ್ದು ಸಿರಿಗೆರೆ ಶ್ರೀಗಳೇ ಮಾತನಾಡಿ ದಿನಾಂಕ …

Read More »

ಕಸದ ಬಂಡಿಯಲ್ಲಿ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್, ಅಬ್ದುಲ್ ಕಲಾಂ ಫೋಟೋ.

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾದಲ್ಲಿ ವ್ಯಕ್ತಿಯೊಬ್ಬ ತಳ್ಳಿಕೊಂಡು ಹೋಗುತ್ತಿರುವ ಕಸದ ಬಂಡಿಯಲ್ಲಿ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳು ಕಂಡುಬಂದಿವೆ. ಈ ದೃಶ್ಯವನ್ನು ಅಲ್ಲಿನ ಜನರು ವಿಡಿಯೋ ಮಾಡಿದ್ದು, ವ್ಯಕ್ತಿಯ ಮೇಲೆ ಆಕ್ರೋಶಗೊಂಡಿರುವ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಎಸೆದ ವಸ್ತುಗಳ ಕಸದ ರಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಪಿಜೆ ಅಬ್ದುಲ್ …

Read More »

ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ

ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಜು.18ರಂದು ಮತದಾನ ನಡೆಯಲಿದ್ದು, ಅದರಂತೆ ರಾಜ್ಯದಲ್ಲೂ ಮತದಾನಕ್ಕೆ ವಿಧಾನಸೌಧದ 106ನೇ ಸಂಖ್ಯೆಯ ಕೊಠಡಿ ಸಜ್ಜುಗೊಂಡಿದೆ. ರಾಷ್ಟ್ರಪತಿ ಚುನಾವಣೆಗೆ ಮತದಾರರಾಗಿರುವ 224 ಶಾಸಕರ ಜತೆಗೆ ವಿಶೇಷ ಅನುಮತಿ ಪಡೆದಿರುವ ಇಬ್ಬರು ಸಂಸದರು ವಿಧಾನಸೌಧದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮತದಾನ ಮಾಡಲಿದ್ದಾರೆ.   ಕೇಂದ್ರ ಚುನಾವಣ ಆಯೋಗದ ವಿಶೇಷ ವೀಕ್ಷಕ ಅಮಿತ್‌ ಕುಮಾರ್‌ ಘೋಷ್‌ ಮಾರ್ಗದರ್ಶನದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ …

Read More »

ಇಂದಿನಿಂದ ಹೊಸ ‘GST ದರ’ ಜಾರಿ; ಯಾವುದು ಅಗ್ಗ? ಯಾವುದು ದುಬಾರಿ?.

ನಿಮಗೆ ಪ್ರತಿದಿನ ಮೊಸರು ಖರೀದಿಸುವ ಅಭ್ಯಾಸವಿದೆಯೇ? ಹಾಗಾದ್ರೆ, ಇನ್ಮುಂದೆ ನಿಮ್ಮ ಜೇಬಿನ ಭಾರ ಹೆಚ್ಚಿಸಿಕೊಳ್ಳಲೇಕಾಗುತ್ತೆ. ಯಾಕಂದ್ರೆ, ಇಂದಿನಿಂದ ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಮೊಸರಿನ ಬೆಲೆ ಹೆಚ್ಚಾಗಲಿದೆ. ಕೇವಲ ಇದೊಂದೇ ಅಲ್ಲ, ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಮಜ್ಜಿಗೆ, ಪನ್ನೀರ್ ಮತ್ತು ಲಸ್ಸಿಯಂತಹ ಹಾಲಿನ ಉತ್ಪನ್ನಗಳು ಜಿಎಸ್ಟಿಯಿಂದಾಗಿ ಬೆಲೆಗಳಲ್ಲಿ ಹೆಚ್ಚಳವನ್ನ ಕಾಣುವ ಸಾಧ್ಯತೆಯಿದೆ. ಇನ್ನು ಹವಾಮಾನವು ತಂಪಾಗಿದೆ ಅಂತಾ ನೀವು ಯಾವುದೇ ಟೂರ್‌ ಹೊಡೆಯಲು ಯೋಜಿಸಿದ್ದೀರಾ? ಆದಾಗ್ಯೂ, …

Read More »

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ನೀರುಪಾಲಾದ

ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ನೀರುಪಾಲಾದ ಘಟನೆ ಕಲಘಟಗಿ ತಾಲೂಕಿನ ನೀರಸಾಗರದ ಜಲಾಶಯದಲ್ಲಿ ನಡೆದಿದೆ. ಕಿರಣ ರಜಪೂತ(22) ನೀರಲ್ಲಿ ಕೊಚ್ಚಿ ಹೋಗಿರುವ ಯುವಕ. ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ‌ ಕಿರಣ ಇಂದು ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದರು. ಈ ಸಮಯದಲ್ಲಿ ಸೆಲ್ಫಿಗಾಗಿ ನೀರಸಾಗರ ಜಲಾಶಯದ ದಡದಲ್ಲಿ ನಿಂತಿದ್ದರು. ಈ ವೇಳೆ ನೀರಿನ ರಭಸ ಹೆಚ್ಚಾಗಿದ್ದರಿಂದ ಕಿರಣ ಕೊಚ್ಚಿ ಹೋಗಿದ್ದಾರೆ. ಯುವಕನಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು …

Read More »

ಆರ್‌ಟಿಐ ಕಾರ್ಯಕರ್ತರೊಬ್ಬರು ಪಡೆದ ಮಾಹಿತಿಯಲ್ಲಿ ಮಾಜಿಗಳಿಗೆ ಸರ್ಕಾರ ಪಿಂಚಣಿ, ವೈದ್ಯಕೀಯ ಭತ್ಯೆ ರೂಪದಲ್ಲಿ ಕೋಟಿ ಕೋಟಿ ಹಣ ವ್ಯಯಿಸುತ್ತಿರುವ ಸತ್ಯಾಂಶ ಬೆಳಕಿಗೆ

ಬೆಂಗಳೂರು: ಸರ್ಕಾರ ಪ್ರತಿ ವರ್ಷ ಮಾಜಿ ಶಾಸಕರ ಪಿಂಚಣಿ, ವೈದ್ಯಕೀಯ ಭತ್ಯೆಗಳಿಗಾಗಿ ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿದೆ. ಈ ಸಂಬಂಧ ಆರ್​ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಮೂಲಕ ಪಡೆದ ಮಾಹಿತಿಯಲ್ಲಿ ಮಾಜಿಗಳಿಂದ ಸರ್ಕಾರದ ಬೊಕ್ಕಸದ ಮೇಲಾಗುತ್ತಿರುವ ಹೊರೆ ಬಯಲಾಗಿದೆ. ಒಂದು ಸಾರಿ ಶಾಸಕನಾದರೆ ಸಾಕು ಆ ವ್ಯಕ್ತಿಗೆ ಜೀವನ ಪೂರ್ತಿ ಭತ್ಯೆಗಳು, ಪಿಂಚಣಿಯನ್ನು ಸರ್ಕಾರ ಪಾವತಿಸಬೇಕಾಗುತ್ತದೆ.‌ ಮಾಜಿ ಶಾಸಕರ ಹೊರೆ ಏನು?: 2013 ರಿಂದ 2021ರವರೆಗೆ ಪಿಂಚಣಿ ಹಾಗೂ ವೈದ್ಯಕೀಯ ಭತ್ಯೆ ರೂಪದಲ್ಲಿ …

Read More »