Breaking News

Daily Archives: ಏಪ್ರಿಲ್ 22, 2022

ಇಂದಿನಿಂದ ದ್ವಿತೀಯ PU ಪರೀಕ್ಷೆ; ಎಕ್ಸಾಂ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ‌ʼಆಲ್‌ ದಿ ಬೆಸ್ಟ್ʼ

ಇಂದಿನಿಂದ ರಾಜ್ಯದಾದ್ಯಂತ ಪಿಯು ಪರೀಕ್ಷೆ ಆರಂಭವಾಗಲಿದ್ದು, ಮೇ 18 ರ ವರೆಗೆ ನಡೆಲಿದೆ. ಪರೀಕ್ಷೆ ಸುಗಮವಾಗಿ ನಡೆಯಲು ಈಗಾಗಲೇ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಸಹಾಯವಾಣಿಯನ್ನೂ ಸಹ ಆರಂಭಿಸಲಾಗಿದ್ದು, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆಲ್‌ ದಿ ಬೆಸ್ಟ್.   ಬೆಳಿಗ್ಗೆ 10:15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದ್ದು, 6 ಲಕ್ಷದ 84 ಸಾವಿರದ 255 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದ …

Read More »

ಜೆಡಿಎಸ್ ಟೀ ಶರ್ಟ್ ಹಾಕಿ ಬೈಕ್ ರ್ಯಾಲಿಗೆ ಬಂದವರಿಗೆ ಫುಲ್ ಟ್ಯಾಂಕ್ ಪೆಟ್ರೋಲ್

ಕೋಲಾರ: ಬೈಕ್​ ರ್ಯಾಲಿಯಲ್ಲಿ ಪಾಲ್ಗೊಂಡವರಿಗೆ ಉಚಿತ ಪೆಟ್ರೋಲ್​ ಎಂದಿದ್ದೇ ತಡ ಬೈಕ್​ ಸವಾರರು ಪೆಟ್ರೋಲ್​ ಬಂಕ್​ನಲ್ಲಿಯೇ ಮುಗಿಬಿದ್ದ ಪ್ರಸಂಗ ಕೋಲಾರದ ಮಾಲೂರಿನಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಜೆಡಿಎಸ್ ಪಕ್ಷದಿಂದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಪೆಟ್ರೋಲ್​ ಉಚಿತ ಎಂದು ಹೇಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಸೇರಿದಂತೆ ಹಲವಾರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಇದಕ್ಕಾಗಿ ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ಬೈಕ್​ ರ್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಉಚಿತ …

Read More »

ಸರ್ಪ್ರೈಸ್​ ಕೊಡ್ತೀನಿ ಅಂತಾ ಕಣ್ಣು ಮುಚ್ಚಿ ಭಾವಿ ಪತಿಯ ಕತ್ತು ಸೀಳಿದ ಯುವತಿಯ ಭಯಾನಕ ಸಂಚು

ವಿಜಯವಾಡ: ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಸರ್ಪ್ರೈಸ್​ ಗಿಫ್ಟ್​​ ಕೊಡುವುದಾಗಿ ಕರೆದು ಭಾವಿ ಪತಿಯ ಕತ್ತು ಕೊಯ್ದಿದ್ದ ಯುವತಿಯೊಬ್ಬಳನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ.   ಆಂಧ್ರದ ಅನಕಪಲ್ಲಿ ಜಿಲ್ಲೆಯ ರವಿಕಾಮತಮ್​ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಆರೋಪಿಯ ಹೆಸರು ಪುಷ್ಪಾ. ಮದುವೆ ಇಷ್ಟವಿಲ್ಲದಿದ್ದಕ್ಕೆ ಈ ಕೃತ್ಯ ಎಸಗಿದೆ ಎಂದು ಪುಷ್ಪಾ ತಪ್ಪೊಪ್ಪಿಕೊಂಡಿದ್ದು, ಆಕೆಯ ವಿರುದ್ಧ …

Read More »

ಹೊಸ ಸಿನಿಮಾ ತೋರಿಸುವೆ ಕಾಯಿರಿ: ಸಿ.ಎಂ. ಇಬ್ರಾಹಿಂ

ಹಾಸನ: ‘ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ಎಷ್ಟೇ ಕುಣಿದಾಡಿದರೂ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಬೇಕು. ಸರ್ವಧರ್ಮ ಸಮನ್ವಯ ಉಳಿಯಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಜೆಡಿಎಸ್‌ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಜೆಡಿಎಸ್ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಗೊತ್ತಿದೆ. ಶಿವಲಿಂಗೇಗೌಡ, ರಾಮಸ್ವಾಮಿ ಸೇರಿದಂತೆ ಯಾರೂ, ಎಲ್ಲೂ ಹೋಗಲ್ಲ. ಉತ್ತರ ಕರ್ನಾಟಕ ಹಲವರು ಪಕ್ಷಕ್ಕೆ ಬರುತ್ತಾರೆ. ಮುಂದೆ ಹೊಸ ಸಿನಿಮಾ ತೋರಿಸುವೆ, …

Read More »

ಗೋಕಾಕ ನಗರದ ಇಫ್ತಾರ್ ಕೂಟದಲ್ಲಿ ಸತೀಶ್ ಜಾರಕಿಹೊಳಿ ಅವರು ಭಾಗಿ!

ಗೋಕಾಕ: ನಗರದ ಗುರುವಾರ ಪೇಟೆಯ ಮೋಮಿನ ಗಲ್ಲಿಯಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಭಾಗಿಯಾಗಿದ್ದರು. ಇಸ್ಲಾಂ ಬಾಂಧವರು ಗುರುವಾರ ಪೇಟೆಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದರು.ಈ ಸಮಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು. ಮುಸ್ಲಿಂ ಬಾಂಧವರು ಸತೀಶ್ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು. ಈ ಸಂದರ್ಭದಲ್ಲಿ ಮಲ್ಲಿಕ್ ಪೈಲ್ವಾನ್, ಇಲಾಹಿ ಖರಿದಿ, ವಿವೇಕ್ ಜತ್ತಿ, …

Read More »

ಬಾದಾಮಿಯಿಂದ ಸಿದ್ದರಾಮಯ್ಯ ಹುಣಸೂರಿಗೆ ಹೋಗುತ್ತಾರಾ?

ಮೈಸೂರು: ಆಡಳಿತಾರೂಢ ಬಿಜೆಪಿಯಲ್ಲಿ ಜಿಲ್ಲೆಯ ಮಟ್ಟಿಗೆ ವರ್ಚಸ್ವಿ ನಾಯಕರ ಕೊರತೆ, ಈಗಷ್ಟೇ ಮೈ ಚಳಿ ಬಿಟ್ಟು ಏಳುತ್ತಿರುವ ಕಾಂಗ್ರೆಸ್‌, ಗೊಂದಲದ ಗೂಡಾಗಿರುವ ಜೆಡಿಎಸ್‌… ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಾಗ ಮೈಸೂರು ಜಿಲ್ಲೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ಸ್ಥಿತಿ ಇದು. ಮೈಸೂರು ಜಿಲ್ಲೆ ಸದ್ಯದ ಮಟ್ಟಿಗೆ ಒಂದು ರೀತಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ಸಮಬಲದ ಹೋರಾಟದ ಕಣದಂತಿದೆ. ಮೈಸೂರು ಜಿಲ್ಲೆಯಲ್ಲಿ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂ …

Read More »

B.J.P.ದಕ್ಷಿಣ ಕರ್ನಾಟಕ ಭಾಗದಲ್ಲಿ ತನ್ನ ಶಕ್ತಿಯನ್ನು ಬಲಗೊಳಿಸಲು ಸಾಧ್ಯವಾಗಿಲ್ಲ ಎಂಬ ಬೇಸರ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಮೂಡಿದೆ

ಬೆಂಗಳೂರು: ರಾಜ್ಯ ಬಿಜೆಪಿ ಹೇಗಾದರೂ ಮಾಡಿ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕೆಂದು ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದೆ. ಆದರೆ, ಟಾರ್ಗೆಟ್‌ 150 ತಲುಪಲು ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯ ಸೆಳೆಯಲು ಸಮರ್ಥ ನಾಯಕನ ಹುಡುಕಾಟದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರಕ್ಕೆ ಬಂದಿದ್ದರೂ, ಬಹುತೇಕ ಲಿಂಗಾಯತ ಸಮುದಾಯದ ಬೆಂಬಲದಿಂದಲೇ ಅಧಿಕಾರಕ್ಕೆ ಬಂದಿದೆ ಎಂಬ ಅಭಿಪ್ರಾಯ ರಾಜ್ಯದ ಜನರಲ್ಲಿ ಹಾಗೂ ಪಕ್ಷದಲ್ಲಿಯೂ ಇದೆ. ಎರಡು ಬಾರಿಯೂ ಬಿಜೆಪಿಗೆ ಒಳ್ಳೆಯ ಅವಕಾಶವಿದ್ದರೂ, ಸ್ಪಷ್ಟ ಬಹುಮತದಿಂದ …

Read More »