ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕೆಲಸಗಳು ನಡೆದಿರುವುದು ನಿಜ. ‘ಅವುಗಳನ್ನು ಮಾಡಿಸಿದ್ದು ಗುತ್ತಿಗೆದಾರ ದಿವಂಗತ ಸಂತೋಷ್ ಪಾಟೀಲ’ ಎಂದು ಹಲವರು ಹೇಳಿದರೆ, ‘ಕಾಮಗಾರಿಗಳು ಆಗಿವೆ. ಆದರೆ ಗುತ್ತಿಗೆ ಪಡೆದಿದ್ದವರು ಯಾರು ಎನ್ನುವುದು ನಮಗೆ ಗೊತ್ತಿಲ್ಲ’ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದರು. ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲಿ ‘ಪ್ರಜಾವಾಣಿ’ಯು ಗ್ರಾಮದಲ್ಲಿ ಭಾನುವಾರ ಸಂಚರಿಸಿ ‘ರಿಯಾಲಿಟಿ ಚೆಕ್’ ನಡೆಸಿತು. ಆಗ ಗ್ರಾಮಸ್ಥರಿಂದ ಭಿನ್ನ ಅಭಿಪ್ರಾಯಗಳು …
Read More »Daily Archives: ಏಪ್ರಿಲ್ 18, 2022
ಆರಗ ಖಾತೆ ಬಿಡಬೇಕು: ಯತ್ನಾಳ,ಗಲಭೆ ಸೃಷ್ಟಿಸಿ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವವರನ್ನು ಮನೆ ಮನೆ ಹೊಕ್ಕು ಎಳೆತನ್ನಿ
ಹೊಸಪೇಟೆ: ಗೃಹ ಮಂತ್ರಿಗಳು ಆ ಹುದ್ದೆಗೆ ತಕ್ಕಂತೆ ಖಡಕ್ ಇಲ್ಲದಿರುವುದರಿಂದ ಅವರನ್ನು ಶೀಘ್ರ ಬದಲಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು. ಹುಬ್ಬಳ್ಳಿ ಘಟನೆಯ ಹಿನ್ನೆಲೆಯಲ್ಲಿ ಅವರು ಈ ಆಗ್ರಹ ಮಾಡಿದರು. ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಸರ್ಕಾರದ ವರ್ತನೆ ಸಾರ್ವಜನಿಕ ನಿರೀಕ್ಷೆಯಂತೆ ಇಲ್ಲ. ಬಿಜೆಪಿ ಇಮೇಜ್‌ಗೆ ಹಾನಿಯಾಗಿದೆ ಎಂಬುದಾಗಿಯೂ ಕಿಡಿಕಾರಿದರು. ಬಿಜೆಪಿ ಕಾರ್ಯಕಾರಣಿ ಸ್ಥಳದಲ್ಲೇ ಯತ್ನಾಳ ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿರುವ ಈ ಪ್ರತಿಕ್ರಿಯೆ ಭಾರೀ ಸದ್ದು ಮಾಡಿದೆ. ಹುಬ್ಬಳ್ಳಿಯಂತಹ …
Read More »ಪತ್ನಿಗೆ ಪ್ರಜ್ಞೆ ತಪ್ಪಿಸಿ ನಗ್ನಚಿತ್ರ ಸೆರೆಹಿಡಿದು ಸ್ನೇಹಿತರಿಗೆ ಕಳುಹಿಸಿದ ಪತಿ
ಬೆಂಗಳೂರು: ಜ್ಯೂಸ್‌ನಲ್ಲಿ ಮತ್ತು ಬರುವ ವಸ್ತು ಹಾಕಿ ಪತ್ನಿಗೆ ಕೊಟ್ಟು ಆಕೆ ಪ್ರಜ್ಞೆತಪ್ಪಿದ ಬಳಿಕ ನಗ್ನ ಚಿತ್ರ ಸೆರೆಹಿಡಿದು ಅದನ್ನು ಸ್ನೇಹಿತರಿಗೆ ಕಳುಹಿಸಿದ ಘಟನೆ ಬಸವನಗುಡಿ ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ (30) ದೂರಿನ ಆಧಾರದ ಮೇಲೆ ಆಕೆಯ ಪತಿ ವೆಂಕಟಸ್ವಾಮಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರುದಾರ ಮಹಿಳೆ 2013ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದು, ವೆಂಕಟಸ್ವಾಮಿಯನ್ನು ಪ್ರೀತಿಸಿ 2ನೇ ವಿವಾಹವಾಗಿದ್ದಳು. ವಿವಾಹವಾದ ಆರಂಭದಲ್ಲಿ ಪತ್ನಿ ಜತೆಗೆ ಅನ್ಯೋನ್ಯವಾಗಿದ್ದ …
Read More »ಏನ್ ಇವ್ರು ಮಾತ್ರ ಉಪ್ಪು, ಹುಳಿ ಖಾರ ತಿಂತಾರಾ..? ಸಿ.ಟಿ. ರವಿ
ವಿಜಯನಗರ : ವಾಟ್ಸ್ಯಾಪ್ ಸ್ಟೇಟಸ್ ಹಾಕಿದ್ದ ಎಂಬ ಸಣ್ಣ ವಿಚಾರಗಳಿಗೆ ಯಾಕೆ ಕೆರಳುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ನಾವು ಶಾಂತಿ, ಸೌಹಾರ್ದತೆ, ವಿಶ್ವಾಸದಿಂದ ಇದ್ದೇವೆ ಆದ್ರೆ ಅವರು ಸಣ್ಣ ಘಟನೆ ಇಟ್ಟುಕೊಂಡು ಗಲಾಟೆ ಮಾಡೋಕೆ ಕಾಯ್ತಾ ಇರ್ತಾರಾ ಅಂತ ಅನಿಸುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಘಟನೆ ದುರದೃಷ್ಟಕರ. ನಮ್ಮ ಐತಿಹಾಸಿಕ ದೇವಾಲಯಗಳನ್ನೇ ನಾಶ ಮಾಡಿದ್ರು ಸಹ ನಾವು …
Read More »ಇನ್ಮುಂದೆ ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳು ‘ಆನ್ ಲೈನ್’ನಲ್ಲೇ ಲಭ್ಯ
ಬೆಂಗಳೂರು: ಇದುವರೆಗೆ ರೈತರು ಕಂದಾಯ ಇಲಾಖೆಯ ಕೆಲ ದಾಖಲೆಗಳನ್ನು ಪಡೆಯೋದಕ್ಕಾಗಿ ದಿನಂಪ್ರತಿ ಕಚೇರಿಗೆ ಅಲೆಯಬೇಕಾಗಿತ್ತು. ಆದ್ರೇ ಇದಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದೆ. ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳನ್ನು ಇನ್ನೂ ಆನ್ ಲೈನ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಹೌದು.. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರೆ ನಕ್ಷೆಗಳನ್ನು ಇನ್ಮುಂದೆ ಆನ್ ಲೈನ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ರಾಜ್ಯದ ರೈತರು https://103.138.196.154/service19/Report/ApplicationDetails ಈ …
Read More »
Laxmi News 24×7