ಜನವರಿ 26ರಂದು ಗಣರಾಜ್ಯೋತ್ಸವ ನಿಮಿತ್ಯ ರಾಷ್ಟ್ರಧ್ವಜಕ್ಕೆ ಆಗುವ ಅವಮಾನ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ ಆದೇಶದಂತೆ ಪ್ಲಾಸ್ಟಿಕ್ ಧ್ವಜವನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಗುರುವಾರ ಬೆಳಗಾವಿ ಡಿಸಿ ಕಚೇರಿಗೆ ಆಗಮಿಸಿದ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ರಾಷ್ಟ್ರಧ್ವಜವು ರಾಷ್ಟ್ರದ ಗೌರವದ ಪ್ರತೀಕವಾಗಿದೆ. ಆದರೆ ದುರ್ದೈವದ ಸಂಗತಿ ಎಂದರೆ ಹೆಚ್ಚಿನ ಭಾರತೀಯರಿಗೆ ರಾಷ್ಟ್ರಧ್ವಜ ನೆನಪಾಗುವುದು ಆಗಸ್ಟ್ 15 ಹಾಗೂ ಜನವರಿ …
Read More »Yearly Archives: 2021
ದಾವೂದ್ ಸಹಚರ ಬಂಧನ
ಮುಂಬೈ, ಜ.21- ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಪರ್ವೇಜ್ ಖಾನ್ ಅಲಿಯಾಸ್ ಚಿಂಕೂ ಪಠಾಣ್ ಎಂಬುವನನ್ನು ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ನವಿ ಮುಂಬೈ ಬಳಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‍ಸಿಬಿ) ತಂಡ ಬಂಧಿಸಿದೆ. ಆರೋಪಿ ಖಾನ್‍ನಿಂದ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ. ಮಾಫಿಯ ಡಾನ್ ಕರೀಂ ಲಾಲಾ ಸಂಬಂಧಿಯೂ ಆಗಿರುವ ಖಾನ್‍ನನ್ನು ಖಚಿತ ಮಾಹಿತಿ ಮೇಲೆ ಎನ್‍ಸಿಬಿ ವಿಭಾಗ ನಿರ್ದೇಶಕ ಸಮೀರ್ ವಾಂಖೆಡೆ ತಂಡ ಬಲೆ ಬೀಸಿ ಬಂಧಿಸಿದೆ.ಖಾನ್ …
Read More »ಅಬಕಾರಿ ಖಾತೆ ನಂಗೆ ಬೇಕಿಲ್ಲ: M.T.B.
ಬೆಂಗಳೂರು, ಜ.21- ಖಾತೆ ಹಂಚಿಕೆ ಬೆನ್ನಲ್ಲೇ ಸಚಿವರಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಅಬಕಾರಿ ಇಲಾಖೆ ನನಗೆ ಬೇಡ. ಅದರಲ್ಲಿ ಮಾಡುವ ಕೆಲಸ ಏನೂ ಇಲ್ಲ ಎಂದು ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಸತಿ ಖಾತೆಗೆ ರಾಜೀನಾಮೆ ನೀಡಿ ಬಂದಿದ್ದೇನೆ. ಸಿಎಂ ಉತ್ತಮ ಖಾತೆ ನೀಡುವ ಭರವಸೆ ನೀಡಿದ್ದರು. ಆದರೆ, ಈಗ ಅಬಕಾರಿ ಖಾತೆ ನೀಡಿದ್ದಾರೆ. ನನಗೆ ಈ ಖಾತೆ ಬೇಡ ಎಂದು ಹೇಳಿಬಂದಿದ್ದೇನೆ. ಅಬಕಾರಿಯಲ್ಲಿ ಮಾಡುವ ಕೆಲಸ ಏನಿದೆ? …
Read More »ಶಾರುಖ್ ಖಾನ್ ಅಭಿನಯದ ಬಿಗ್ ಬಜೆಟ್ ಸಿನಿಮಾ ನಿರ್ದೇಶಿಸುತ್ತಿರುವ ಹಿಟ್ ನಿರ್ದೇಶಕನಿಗೆ ಸೆಟ್‌ನಲ್ಲಿಯೇ ಸಹಾಯಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ.
ಶಾರುಖ್ ಖಾನ್ ಅಭಿನಯದ ಬಿಗ್ ಬಜೆಟ್ ಸಿನಿಮಾ ನಿರ್ದೇಶಿಸುತ್ತಿರುವ ಹಿಟ್ ನಿರ್ದೇಶಕನಿಗೆ ಸೆಟ್‌ನಲ್ಲಿಯೇ ಸಹಾಯಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ. ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಗೆ ಸಹಾಯಕ ನಿರ್ದೇಶಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಬಾಲಿವುಡ್ ಹಂಗಾಮ ಹಾಗೂ ಇನ್ನೂ ಕೆಲವು ಬಾಲಿವುಡ್ ಪತ್ರಿಕೆಗಳು ವರದಿ ಮಾಡಿವೆ. ಸಿದ್ಧಾರ್ಥ್ ಆನಂದ್ ತುಸು ಸಿಟ್ಟಿನ ವ್ಯಕ್ತಿಯಾಗಿದ್ದು, ಸೆಟ್‌ನಲ್ಲಿ ತಮ್ಮ ಸಹಾಯಕನೊಬ್ಬ ಸೂಕ್ತವಾಗಿ ಕೆಲಸ ಮಾಡಿಲ್ಲವೆಂಬ ಕಾರಣಕ್ಕೆ ಸಹಾಯಕನ ಕಪಾಳಕ್ಕೆ …
Read More »ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
ಸ್ಟಾರ್ ನಟರ ಚಿತ್ರಗಳು ಒಂದೊಂದೆ ಬಿಡುಗಡೆ ದಿನಾಂಕ ಘೋಷಿಸಿದೆ. ಸ್ಯಾಂಡಲ್‌ವುಡ್‌ನಲ್ಲಿ ಇನ್ನು ಎರಡು ತಿಂಗಳು ಸ್ಟಾರ್ ನಟರ ಅಬ್ಬರ ಜೋರಾಗಿರಲಿದೆ. ಈ ಗ್ಯಾಪ್‌ನಲ್ಲಿ ಹೊಸಬರ ಸಿನಿಮಾಗಳು ತೆರೆಗೆ ಬರುವುದು ಸ್ವಲ್ಪ ಮಟ್ಟಿಗೆ ಕಷ್ಟ ಎನ್ನಬಹುದು. ಬಹುಶಃ ಅದಕ್ಕಾಗಿಯೇ ಈ ವಾರ ಐದು ಕನ್ನಡ ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ. ಜನವರಿ 22 ರಂದು ಐದು ಕನ್ನಡ ಸಿನಿಮಾ ಥಿಯೇಟರ್‌ಗೆ ಬರ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ‘ತಲಾಖ್ ತಲಾಖ್ ತಲಾಖ್ ಸಿನಿಮಾ ಈ …
Read More »ಯುವತಿಯರು ಅರೆಸ್ಟ್.. ಮಾನವ ಹಕ್ಕು ಮತ್ತು ಮಾಧ್ಯಮದ ಹೆಸರಲ್ಲಿ ವೈದ್ಯರಿಗೆ ಬ್ಲ್ಯಾಕ್‌ಮೇಲ್!
ಮೈಸೂರು: ಮಾನವ ಹಕ್ಕುಗಳು ಮತ್ತು ಮಾಧ್ಯಮದ ಹೆಸರಲ್ಲಿ ವೈದ್ಯರಿಗೆ ಬ್ಲ್ಯಾಕ್‌ಮೇಲ್ ಒಡ್ಡಿ ಕೆ.ಆರ್.ಆಸ್ಪತ್ರೆ ವೈದ್ಯರಿಂದ ಹಣ ವಸೂಲಿ ಮಾಡಲು ಹೊರಟ ಆರೋಪಿಗಳನ್ನು ಬಂಧಿಸಲಾಗಿದೆ. ಕೆ.ಆರ್ ಆಸ್ಪತ್ರೆಯ ವೈದ್ಯರಾದ ಡಾ.ರಾಜೇಶ್ ಎಂಬವರಿಗೆ ಮಾಧ್ಯಮದ ಹೆಸರಿನಲ್ಲಿ, ಸುವರ್ಣ ಕಾವೇರಿ ಎಕ್ಸ್‌ಪ್ರೆಸ್ ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರ್ತಿ ಆಯಿಷಾ ಬಾಯಿ ಮತ್ತು ಕ್ರೈಂ ವರದಿಗಾರ್ತಿ ಅಮ್ರೀನ್ ಹಾಗೂ ಶಹೀನಾ ನವೀದ್‌ಎಂದು ನಕಲಿ ಗುರುತಿನ ಚೀಟಿಯನ್ನು ಸಿದ್ಧಪಡಿಸಿಕೊಂಡು ಬೆದರಿಕೆ ಒಡ್ಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ನೀವು …
Read More »ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ರೈಲ್ವೆ ಹಳಿಮೇಲೆ ಎಸೆದು ಹೋದ ಆರೋಪಿಗಳು!
ಇಂದೋರ್: ಮಧ್ಯಪ್ರದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ನಡುವೆಯೇ ಕಾಲೇಜು ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ರೈಲ್ವೆ ಹಳಿ ಮೇಲೆ ಎಸೆದು ಹೋಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಂದೋರ್ ನ 19 ವರ್ಷದ ಕಾಲೇಜು ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಚೂರಿಯಿಂದ ಇರಿದು ರೈಲ್ವೆ ಹಳಿ ಮೇಲೆ ಎಸೆದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಬದುಕುಳಿದಿರುವುದಾಗಿ ವರದಿ ತಿಳಿಸಿದೆ. ವ ದೂರಿನ ಪ್ರಕಾರ, ಯುವತಿಯನ್ನು …
Read More »ಶಿವಸೇನೆ ಪುಂಡಾಟ ಸಹಿಸೋಲ್ಲ, : ಸಚಿವೆ ಶಶಿಕಲಾ ಜೊಲ್ಲೆ
ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಉದ್ಧಟತನ ಮೆರೆಯುತ್ತಿದ್ದು, ಪಾಲಿಕೆ ಮುಂದೆ ಭಗವ ಧ್ವಜಾ ಹಾರಿಸುತ್ತೇವೆ ಎಂದು ಕ್ಯಾತೆ ತೆಗೆದಿದ್ದಾರೆ. ಮಹಾರಾಷ್ಟ್ರದಿಂದ ಶಿವಸೇನೆ ಪುಂಡರು ಬೆಳಗಾವಿ ಗಡಿ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರು ತಡೆದಿದ್ದಾರೆ. ಇನ್ನು ಶಿವಸೇನೆ ಪುಂಡರನ್ನ ತಡೆ ಹಿಡದ ಕರ್ನಾಟಕ ಪೊಲೀಸರು ಲಾಠಿ ಚಾರ್ಜ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಬಗ್ಗೆ ಬೆಳಗಾವಿ ಪ್ರತಿನಿಧಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಸಿದ್ದು, ಶಿವಸೇನೆ ಪುಂಡರ …
Read More »ಬೆಳಗಾವಿಯಲ್ಲಿ ಪುಂಡಾಟ ಮೆರೆದ ‘ಶಿವಸೇನೆ ಪುಂಡ’ರನ್ನು ಬಂಧಿಸಿ – ವಾಟಾಳ್ ನಾಗರಾಜ್
ಬೆಂಗಳೂರು : ಬೆಳಗಾವಿಯಲ್ಲಿ ಭಗವಾ ಧ್ವಜ ಸ್ತಂಭ ನೆಡಲು ಶಿವಸೇನೆ ಯತ್ನಿಸಿದ್ದು ಖಂಡನೀಯ. ಇದಕ್ಕೆಲ್ಲಾ ಕಾರಣ ಬೆಳಗಾವಿ ಜಿಲ್ಲೆ ರಾಜಕಾರಣಿಗಳು. ಬೆಳಗಾವಿಯಲ್ಲಿ ಪುಂಡಾಟ ಮೆರೆದಂತ ಶಿವಸೇನೆ ಪುಂಡರನ್ನು ಬಂಧಿಸುವಂತೆ ನಾಳೆ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನ ನಡೆಸುವುದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪುಂಡಾಟ ಮೆರೆದಂತ ಶಿವಸೇನೆ ಪುಂಡರನ್ನು ಬಂಧಿಸಬೇಕು. ಇದಕ್ಕೆಲ್ಲಾ ಬೆಳಗಾವಿ ಜಿಲ್ಲೆ ರಾಜಕಾರಣಿಗಳೇ ಕಾರಣ. …
Read More »ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ.
ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಉದ್ಧಟತನ ಮೆರೆಯುತ್ತಿದ್ದು, ಪಾಲಿಕೆ ಮುಂದೆ ಹಾರಿಸಿರುವ ಕನ್ನಡ ಧ್ವಜಾವನ್ನ ತೆರವುಗೊಳಿಸಿ, ಭಗವ ಧ್ವಜಾ ಹಾರಿಸುತ್ತೇವೆ ಎಂದು ಕ್ಯಾತೆ ತೆಗೆದಿದ್ದಾರೆ. ಹಾಗಾಗಿ ಗಡಿ ಪ್ರವೇಶಿಸಲು ಯತ್ನಿಸಿದ್ದ ಶಿವಸೇನೆ ಪುಂಡರನ್ನ ಪೊಲೀಸರು ತಡೆದಿದ್ದಾರೆ. ಬೆಳಗಾಮಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗುತ್ತಿದ್ದು, ಶಿವಸೇನಾ ಪುಂಡರನ್ನ ಬೆಳಗಾವಿ ಗಡಿ ಪ್ರವೇಶಿಸದಂತೆ ಪೊಲೀಸರು ತಡೆಯಿಡಿದ್ದಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ. ಬೆಳಗಾವಿಯ …
Read More »