ಪ್ರಭಾಸ್ ನಟನೆಯ ಸಲಾರ್ ಸಿನಿಮಾ 2022ರ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಪ್ರಭಾಸ ಸಿನಿಮಾ ಕೆರಿಯರ್ನಲ್ಲಿ ಚಿತ್ರ ಮತ್ತೊಂದು ದೊಡ್ಡ ಬ್ರೇಕ್ ನೀಡಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಬಜೆಟ್ ವಿಚಾರಕ್ಕೆ ಸಲಾರ್ ಸಿನಿಮಾ ತುಂಬಾನೇ ದೊಡ್ಡ ಮಟ್ಟಕ್ಕೆ ಟ್ರೋಲ್ ಆಗುತ್ತಿದೆ. ಸಲಾರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಇದೇ ಮೊದಲ ಬಾರಿಗೆ ಪ್ರಶಾಂತ್ ನೀಲ್ ಟಾಲಿವುಡ್ಗೆ ಕಾಲಿಡುತ್ತಿದ್ದಾರೆ. …
Read More »Yearly Archives: 2021
ಶೂಟಿಂಗ್ ವೇಳೆ ಸಂಭವಿಸಿದ ಅವಗಡ; ಅಪಾಯದಿಂದ ಪಾರಾದ ರಿಷಬ್ ಶೆಟ್ಟಿ
ಹಾಸನ : ಬೇಲೂರು ಬಳಿ ಚಿರಣ ನಡೆಸುತ್ತಿದ್ದ ಸಂದರ್ಭದಲ್ಲಿ ನಟ ರಿಷಬ್ ಶೆಟ್ಟಿ ಚಿತ್ರೀಕರಣದ ವೇಳೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಹೀರೋ ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಾಂಬ್ ಗೆ ಬೆಂಕಿ ಹಿಡಿಯಿತು. ಅದರ ಬೆಂಕಿ ರಿಷಬ್ ಶೆಟ್ಟಿ ಅವರ ಬೆನ್ನಿಗೆ ಕೂಡ ತಗುಲಿತ್ತು ಎಂದು ವರದಿಗಳು ತಿಳಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಈ ಕುರಿತಾಗಿ ಹೇಳಿಕೆ ನೀಡಿರುವ ಚಿತ್ರತಂಡ ರಿಷಬ್ ಶೆಟ್ಟಿ …
Read More »ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ
ತಿರುಪತಿ : ತಿರುಪತಿ ವಿಮಾನ ನಿಲ್ದಾಣದಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಂದ್ರಬಾಬು ನಾಯ್ಡು ಚಿತ್ತೂರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ, ಅವರನ್ನು ಏರ್ಪೋರ್ಟ್ನಲ್ಲೇ ರೇನಿಗುಂಟಾ ಪೊಲೀಸರು ತಡೆದಿದ್ದಾರೆ. ಇದನ್ನು ಅಲ್ಲಿಯೇ ಖಂಡಿಸಿದ ಅವರು ಬೇಕಾದರೆ ನನ್ನನ್ನು ಬಂಧಿಸಿ.ಆದರೆ ನಿರ್ಭಂಧಿಸಬೇಡಿ. ಇಲ್ಲಿ ಏನು ನಡೆಯುತ್ತಿದೆ? ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತಿದ್ದೇನಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. …
Read More »ಪ್ರಧಾನಿ ಮೋದಿ ಪಡೆದುಕೊಂಡ ʼಕೊರೊನಾʼ ಲಸಿಕೆ ಯಾವುದು ಗೊತ್ತಾ.?
ಕಳೆದ ವರ್ಷದ ಆರಂಭದಲ್ಲಿ ವಿಶ್ವದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್, ಭಾರತದಲ್ಲಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದೀಗ ಕೊರೊನಾ ಕಡಿಮೆಯಾಗುತ್ತಿರುವ ಮಧ್ಯೆ ಮತ್ತೆ ಎರಡನೇ ಅಲೆ ಕಾಣಿಸಿಕೊಂಡಿದೆ ಎಂಬ ವರದಿಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಭಾರತದಲ್ಲಿ ಭಾರತ್ ಬಯೋಟೆಕ್ ʼಕೋವ್ಯಾಕ್ಸಿನ್ʼ ಎಂಬ ಕೊರೊನಾ ಲಸಿಕೆ ತಯಾರಿಸಿದ್ದರೆ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ʼಕೋವಿಶೀಲ್ಡ್ʼ ಎಂಬ ಲಸಿಕೆಯನ್ನು ತಯಾರಿಸಿದೆ. ಈ ಎರಡೂ ಲಸಿಕೆಗಳನ್ನು ಈಗಾಗಲೇ ನೀಡಲಾಗುತ್ತಿದ್ದು, ಮೊದಲ …
Read More »ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.74 ಕೋಟಿ ಮೌಲ್ಯದ 207 ಐಫೋನ್ ವಶ
ಬೆಂಗಳೂರು:ಯುಎಸ್ ದಂಪತಿಯಿಂದ ಅಪಾರ ಮೊತ್ತದ 207 ಐಫೋನ್ ಗಳನ್ನು ವಶಪಡಿಸಿಕೊಂಡಿರವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು. ಈವರೆಗೂ ವಶಪಡಿಸಿಕೊಂಡಿರುವ ಫೋನ್ ಸಂಬಂಧಿ ಪ್ರಕರಣಗಳಲ್ಲಿ ಇದು ಅತಿ ದೊಡ್ಡ ಪ್ರಕರಣ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ಫೋನ್ಗಳು ಐಫೋನ್ 12 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳಾಗಿದ್ದವು ಮತ್ತು ಅವುಗಳ ಒಟ್ಟು ಮೌಲ್ಯ 2, 74,19,400 ರೂ. ಎಂದು ಹೇಳಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ, ರಸ್ತೆ ಮೂಲಕ ಹೈದರಾಬಾದ್‌ಗೆ ಸಾಗಿಸಲು ವಿಮಾನ …
Read More »ಯಾರಿಗೂ ವಂಚನೆ ಮಾಡಿಲ್ಲ – ಐ ವಿಲ್ ಕಮ್ ಬ್ಯಾಕ್ ಅಗೈನ್ – ಬಿ.ಆರ್ ಶೆಟ್ಟಿ
ಉಡುಪಿ ಮಾರ್ಚ್ 1: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಎನ್‌ಎಂಸಿ ಆರೋಗ್ಯ ಸೇವಾ ಸಂಸ್ಥೆಯ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಅವರು ವಿಶ್ವದೆಲ್ಲೆಡೆ ಹೊಂದಿರುವ ಆಸ್ತಿ ಮುಟ್ಟುಗೋಲಿಗೆ ಬ್ರಿಟನ್‌ನ ಕೋರ್ಟ್ ಆದೇಶ ನೀಡಿದ ನಂತರ ಮೊದಲ ಬಾರಿಗೆ ಬಿ.ಆರ್ ಶೆಟ್ಟಿ ಮಾಧ್ಯಮಗಳ ಮುಂದೆ ಬಂದಿದ್ದು, ಜನರ ಆಶಿರ್ವಾದದಿಂದ ನಾನು ಎಲ್ಲಾ ಸಮಸ್ಯೆಗಳಿಂದ ಹೊರ ಬರುತ್ತೆನೆ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವ್ಯವಹಾರದಲ್ಲಿ ನಾನು ಕೆಲವು …
Read More »ಬನವಾಸಿಯ ಸೊಬಗನೊಮ್ಮೆ ನೋಡಿ ಬನ್ನಿ
ಗಂಧದಗುಡಿ ಎಂದೇ ಕರೆಯಲ್ಪಡುತ್ತಿದ್ದ ಕರ್ನಾಟಕದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ. ಅದೇ ರೀತಿ ಕದಂಬ ರಾಜ್ಯವನ್ನು ಕರ್ನಾಟಕದ ಮೊದಲ ರಾಜ್ಯವೆಂದು, ಕದಂಬರನ್ನು ಮೊದಲ ಕನ್ನಡಿಗ ರಾಜರೆಂದು ಹೇಳಲಾಗುತ್ತದೆ. ಮಯೂರ ವರ್ಮ ಕದಂಬ ರಾಜ್ಯದ ಸಂಸ್ಥಾಪಕನಾಗಿದ್ದು, ಈತನ ರಾಜಧಾನಿ ಬನವಾಸಿಯಾಗಿತ್ತು. ಬನವಾಸಿ ಶಿರಸಿಯಿಂದ ಸೊರಬಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಸುಮಾರು 30 ಕಿಲೋ ಮೀಟರ್ ದೂರದಲ್ಲಿದೆ. ಅಶೋಕ ಚಕ್ರವರ್ತಿ ಬೌದ್ಧ ಧರ್ಮ ಪ್ರಸಾರಕ್ಕೆ ಕಳುಹಿಸಿದ್ದ ಬೌದ್ಧಭಿಕ್ಷು ಒಬ್ಬರು ಇಲ್ಲಿಗೆ ಭೇಟಿ ನೀಡಿದ್ದರೆಂದು ಮಹಾವಂಶ …
Read More »100 ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಆಕ್ರೋಶ ಜಾಥಾ
ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಮತ್ತು ಜನ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ ಎಂದುಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರನಾಥ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳೊಂದಿಗೆ ಜನಧ್ವನಿ ಹೋರಾಟದ ಅಂಗವಾಗಿ ಆಯೋಜಿಸಿದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚುನಾವಣಾ ಪ್ರಣಾಳಿಕೆಯ ವಾಗ್ಧಾನಗಳನ್ನು ಈಡೇರಿಸ ಬೇಕೆಂದು ಆಗ್ರಹಿಸಿ ಪ್ರಸಕ್ತ ಸಾಲಿನಲ್ಲಿ ರಾಜ್ಯದ 100 ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ …
Read More »ಬಿಗ್ ನ್ಯೂಸ್: ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಸಿಎಂ ಯಡಿಯೂರಪ್ಪರಿಗೆ ಸಿರಿಗೆರೆ ಶ್ರೀಗಳ ಪತ್ರ
ಬೆಂಗಳೂರು: ರಾಜ್ಯದಲ್ಲಿ ಮಧ್ಯಾಹ್ನ ನಿಷೇಧಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿರಿಗೆರೆ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಮದ್ಯದ ದಾಸರಾಗಿ ರಾಜ್ಯದ ಗ್ರಾಮೀಣ ಪ್ರದೇಶದ ಬಡವರು, ದಲಿತರು, ಮಧ್ಯಮವರ್ಗದ ಕುಟುಂಬದವರು ನಿತ್ಯ ನರಕ ಅನುಭವಿಸುವಂತಾಗಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸುವಂತೆ ಶ್ರೀಗಳು ಒತ್ತಾಯಿಸಿದ್ದಾರೆ. ಮದ್ಯಪಾನದಂತಹ ಅನಿಷ್ಟದಿಂದ ನಾಡಿನ ಪರಂಪರೆಗೆ ಪೆಟ್ಟು ಬೀಳುತ್ತಿದೆ. ಮದ್ಯವ್ಯಸನಿಗಳು ದುಡಿಯುವ ಶಕ್ತಿ ಕಳೆದುಕೊಂಡು ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು …
Read More »ಕೋವಿಡ್ ಲಸಿಕೆ ಎಲ್ಲಿ ಸಿಗುತ್ತೆ..? ಬೆಲೆ ಎಷ್ಟು..? ಇಲ್ಲಿದೆ ಪೂರ್ಣ ಮಾಹಿತಿ
ಬೆಂಗಳೂರು, ಮಾ.1- ರಾಜ್ಯದಲ್ಲೂ ಮೂರನೆ ಹಂತದ ಕೊರೊನಾ ಲಸಿಕಾ ಕಾರ್ಯಕ್ರಮ ಆರಂಭವಾಗಿದ್ದು , 250ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಇಂದಿನಿಂದ ಲಸಿಕಾ ಅಭಿಯಾನ ಆರಂಭಗೊಂಡಿದೆ. ಬಿಬಿಎಂಪಿಯ ಆರೋಗ್ಯ ಕೇಂದ್ರಗಳು ಸೇರಿದಂತೆ ರಾಜ್ಯದ 250 ಆಸ್ಪತ್ರೆಗಳಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಇರುವ 45 ವರ್ಷ ಮೇಲ್ಪಟ್ಟ ಮಧ್ಯ ವಯಸ್ಕರಿಗೆ ಲಸಿಕೆ ಹಾಕಲಾಗುತ್ತಿದೆ. ಕೋ-ವಿನ್ 2.0 ಆ್ಯಪ್ ಮತ್ತು ಪೋರ್ಟಲ್‍ಗಳು ಬೆಳಗ್ಗೆ 9 ಗಂಟೆಯಿಂದ ಸಕ್ರಿಯವಾಗಿದ್ದು , ಲಸಿಕೆ …
Read More »