Breaking News

Yearly Archives: 2021

ಮನೆಯ ಪೈಪ್ ಗಳನ್ನು ಪ್ಲಂಬರ್ ಸಹಾಯದಿಂದ ಕತ್ತರಿಸಿದ್ದು, ಕೆಜಿ ಗಟ್ಟಲೆ ಚಿನ್ನಾಭರಣ, ಕಂತೆ ಕಂತೆ ನೋಟು,

ಕಲಬುರ್ಗಿ: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ಸಮರ ಸಾರಿದ್ದು, ತಂಡೋಪತಂಡವಾಗಿ ರಾಜ್ಯದ 68 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಭ್ರಷ್ಟರ ಮನೆಯಲ್ಲಿ ಪತ್ತೆಯಾಗಿರುವ ಕೆಜಿ ಗಟ್ಟಲೆ ಚಿನ್ನಾಭರಣ, ಕಂತೆ ಕಂತೆ ನೋಟು, ಅಕ್ರಮ ಸಂಪತ್ತು ಕಂಡು ಅಧಿಕಾರಿಗಳೇ ದಂಗಾಗಿಹೋಗಿದ್ದಾರೆ. ಎಸಿಬಿ ದಾಳಿಗೆ ಹೆದರಿ ಕಲಬುರ್ಗಿ ಲೋಕೋಪಯೋಗಿ ಇಲಾಖೆ ಜೆಇ ಶಾಂತಗೌಡ ಮನೆಯ ಪೈಪ್ ಗಳಲ್ಲಿ ನಗದು ಹಣವನ್ನು ಬಚ್ಚಿಟ್ಟಿದ್ದು, ಪೈಪ್ ಕತ್ತರಿಸಿ ಬಕೆಟ್ ಗಳಲ್ಲಿ ಕಂತೆ ಕಂತೆ ಹಣವನ್ನು ಮೊಗೆದು ಹೊರತೆಗೆಯುತ್ತಿರುವ …

Read More »

ಗೋಕಾಕ್ ನಗರದಲ್ಲಿ ಸದಾಶಿವ ಮರಲಿಂಗಣ್ಣವರ್ ಮನೆ ಮೇಲೆ A.C.B. ದಾಳಿ

ಗೋಕಾಕ : ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಗೋಕಾಕಿನ ಹಿರಿಯ ಮೋಟರ ವಾಹನ ನಿರೀಕ್ಷಕ (R.T.O) ರ ಮನೆ ಮೇಲೆ ಎಸಿಬಿಯವರು ಬೆಳಂ ಬೆಳಗ್ಗೆ ದಾಳಿ ಮಾಡಿದ್ದಾರೆ. ಆರ್ ಟಿ ಓ ಆದಿಕಾರಿ ಸದಾಶಿವ ಮರಲಿಂಗನ್ನವರ ಇವರ ಗೋಕಾಕದ ವಿವೇಕಾನಂದ ನಗರದಲ್ಲಿರುವ 7ಕ್ರಾಸಿನಲ್ಲಿರುವ ಮನೆಯ ಮೇಲೆ ಎಸಿಬಿ ಯ ಡಿ,ಎಸ್,ಪಿ, ಕರುನಾಕರ ಶೆಟ್ವಿ ಅವರು ತಮ್ಮ ಸಿಬ್ಬಂದಿಗಳೊಡನೆ ದಾಳಿ ಮಾಡಿ ಅವರ ಆಸ್ತಿ ಮತ್ತು ಆದಾಯದ ಜೊತೆ ಇತರೆ ದಾಖಲಾತಿಗಳನ್ನು …

Read More »

ಸೋರುತಿಹುದು ಅರಮನೆ ಮಾಳಿಗೆ!

ಮೈಸೂರು: ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ವಿಶ್ವವಿಖ್ಯಾತ ಮೈಸೂರಿನ ಅಂಬಾವಿಲಾಸ ಅರಮನೆ ಮೇಲ್ಛಾವಣಿ ಸೋರುತ್ತಿದ್ದು, ಗೋಡೆಗಳು ತೇವಗೊಂಡಿವೆ. ರಾಜವಂಶಸ್ಥರು ವಾಸಿಸುತ್ತಿರುವ ಅರಮನೆಯ ಭಾಗದ ಮೇಲ್ಛಾವಣಿ ಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಸೋರುತ್ತಿದ್ದು, ಛಾವಣಿಯ ಪ್ಲಾಸ್ಟರಿಂಗ್‌ ಉದುರಿ ಬಿದ್ದಿದೆ. ಆಗ ಯಾರೂ ಇಲ್ಲದಿದ್ದ ಕಾರಣ ಅಪಾಯ ಸಂಭವಿಸಿಲ್ಲ. ನೆಲಕ್ಕೆ ಹಾಸಲಾಗಿರುವ ಟೈಲ್ಸ್‌ಗಳೂ ಕಿತ್ತು ಬಂದಿವೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಹೇಳಿದ್ದಾರೆ. ಅರಮನೆಯ ಕೆಲವು ಭಾಗಗಳು ಈ ಹಿಂದೆಯೇ ದುರಸ್ತಿಯಾಗಿವೆ. …

Read More »

ದೇವರಿಗೇ ಧನಸಹಾಯ ಮಾಡಿದ ಅಜ್ಜಿ; ಆಂಜನೇಯನ ಮುಖವಾಡಕ್ಕಾಗಿ ಭಿಕ್ಷೆ ಬೇಡಿ ಹಣ ಕೊಟ್ಟರು..

ಚಿಕ್ಕಮಗಳೂರು: ಕೆಲವು ತಿಂಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ವೃದ್ಧೆಯೊಬ್ಬರು ಭಿಕ್ಷೆ ಬೇಡಿ ಉಳಿಸಿದ್ದ ಒಂದು ಲಕ್ಷ ರೂಪಾಯಿಯನ್ನು ದೇವಸ್ಥಾನದ ಅನ್ನದಾನಕ್ಕಾಗಿ ಕೊಟ್ಟು ರಾಜ್ಯದ ಗಮನ ಸೆಳೆದಿದ್ದರು ಅದೇ ರೀತಿ ಮತ್ತೊಬ್ಬ ವೃದ್ಧೆ ದೇವರಿಗೇ ಧನಸಹಾಯ ಮಾಡಿದ್ದಾರೆ.   ಅಂದರೆ ಆಂಜನೇಯ ಸ್ವಾಮಿಯ ಬೆಳ್ಳಿ ಮುಖವಾಡಕ್ಕಾಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ದೇವಸ್ಥಾನಕ್ಕೆ ಈ ಅಜ್ಜಿ ಹಣ ನೀಡಿದ್ದಾರೆ. ಕೆಂಪಜ್ಜಿ ಎಂಬ …

Read More »

ಇಂದಿನಿಂದಲೇ ಮಳೆಹಾನಿ ಸಂತ್ರಸ್ಥರ ಖಾತೆಗೆ RTGS ಮೂಲಕ ಪರಿಹಾರ ಜಮಾ: ಜಿಲ್ಲಾಧಿಕಾರಿ ಆದೇಶ

ಧಾರವಾಡ: ಕಳೆದ ಜುಲೈ, ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಹಾಗೂ ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಮನೆ ಹಾನಿಯಾಗಿರುವ ಫಲಾನುಭವಿಗಳಿಗೆ ತಕ್ಷಣಕ್ಕೆ ಪರಿಹಾರ ವಿತರಿಸಲು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು 14 ಕೋಟಿ, 74 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ.   ನ.24 ರಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮೆ ಮಾಡಲು ಕ್ರಮವಹಿಸಬೇಕೆಂದು ಎಲ್ಲ ತಹಶಿಲ್ದಾರರಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ. ಅವರು ನಿನ್ನೆ ಸಂಜೆ …

Read More »

ಲಕ್ಷ್ಮಿ ಹೆಬ್ಬಾಳಕರ ಹೆಸರು ಹೇಳುತ್ತಿದ್ದಂತೆಯೇ ‘ಥೂ… ಥೂ…’ ಎಂದು ಉಗಿದ ಎಂದು ಪ್ರತಿಕ್ರಿಯಿಸಿದರು.ರಮೇಶ!

ಬೆಳಗಾವಿ: ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು, ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೆಸರೇಳುತ್ತಿದ್ದಂತೆಯೇ ‘ಥೂ… ಥೂ…’ ಎಂದು ಪ್ರತಿಕ್ರಿಯಿಸಿದರು. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ನಾಮಪತ್ರ ಸಲ್ಲಿಕೆಗೆ ಬಂದಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಚುನಾವಣೆ ರಮೇಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಹಣಾಹಣಿಯಾ?’ಎನ್ನುವ ಪ್ರಶ್ನೆಗೆ ಸಿಡಿಮಿಡಿಯಾಗಿ ‘ಥೂ ಥೂ’ ಎಂದು ಹೇಳಿ ಹೊರಟರು.   ಇದಕ್ಕೂ ಮುನ್ನ, ‘ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ …

Read More »

ಈರುಳ್ಳಿ ಬೆಲೆ 100 ರೂ. ತಲುಪುವ ಸಾಧ್ಯತೆ

ದಾವಣಗೆರೆ : ಒಂದೆಡೆ ಮುಂಗಾರು ಹಂಗಾಮಿನ ಬೆಳೆ ಕಟಾವು ಮುಗಿದಿದೆ. ಇನ್ನೊಂದೆಡೆ ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಈರುಳ್ಳಿ ಅತಿಯಾದ ಮಳೆಯಿಂದ ಕೊಳೆಯುತ್ತಿದೆ. ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ 34,000 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿಗೀಡಾಗಿದೆ. ಹೀಗಾಗಿ, ಬೆಳೆಗಾರರು ತೀವ್ರ ನಷ್ಟ ಅನುಭವಿಸುವ ಜತೆಗೆ ಈರುಳ್ಳಿ ಬೆಲೆ ಗಗನಕ್ಕೇರಲಿದ್ದು, ರೈತ-ಗ್ರಾಹಕ ಇಬ್ಬರ ಕಣ್ಣುಗಳಲ್ಲಿ ನೀರು ತರಿಸಲಿದೆ. ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಸೇರಿ ರಾಜ್ಯದ ಪ್ರಮುಖ ಈರುಳ್ಳಿ ಮಾರುಕಟ್ಟೆಗಳಲ್ಲಿ ಅವಕ ಕುಸಿದಿದೆ. ರಾಜ್ಯದ …

Read More »

ಎಲ್ಲಿ ಹೋಯಿತು ಕಾಲುವೆಗೆ ಸುರಿದ ಕೋಟಿ ಕೋಟಿ ಹಣ

ಬೆಂಗಳೂರು: ‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದಡೆಂತಯ್ಯಾ’ ಎಂಬ ಅಕ್ಕಮಹಾದೇವಿಯ ಸಾಲುಗಳಂತೆ ‘ರಾಜಕಾಲುವೆ, ಕೆರೆಗಳ ಒಡಲಿನಲ್ಲೇ ಮನೆಗಳನ್ನು ಕಟ್ಟಿ ಪ್ರವಾಹಕ್ಕೆ ಅಂಜಿದಡೆಂತಯ್ಯಾ’ ಎಂಬಂತಾಗಿದೆ ಬೆಂಗಳೂರಿನ ಕೆಲ ಬಡಾವಣೆಗಳ ಜನರ ಸ್ಥಿತಿ…’ ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ರೂಪಿಸಿರುವ ನಾಲೆಗಳೇ ರಾಜಕಾಲುವೆಗಳು. ಇವುಗಳನ್ನು ಅಭಿವೃದ್ಧಿಪಡಿಸಲು ಹಾಗೂ ನಿರ್ವಹಣೆ ಮಾಡಲು ಬಿಬಿಎಂಪಿ ಪ್ರತಿವರ್ಷ ನೂರಾರು ಕೋಟಿ ಹಣವನ್ನು ವ್ಯಯಿಸುತ್ತಿದೆ. ಆದರೂ, ಮಳೆ ನೀರು ಮನೆಗಳಿಗೆ ನುಗ್ಗುವುದು ತಪ್ಪಿಲ್ಲ. ಕಣಿವೆಗಳು ಮತ್ತು ಪರಿಸರ …

Read More »

ಫಡಣವೀಸ್‌ ವಾಸ್ತವ್ಯವಿದ್ದ ಹೋಟೆಲ್‌ಗೆ ಕಾಂಗ್ರೆಸ್‌ ನಾಯಕ ಭೇಟಿ, ಕುತೂಹಲ

ಪಣಜಿ: ಗೋವಾದ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡಣವೀಸ್ ಅವರು ವಾಸ್ತವ್ಯವಿದ್ದ ಹೋಟೆಲ್‌ಗೆ ಗೋವಾ ಕಾಂಗ್ರೆಸ್‌ ಘಟಕದ ಕಾರ್ಯಾಧ್ಯಕ್ಷರು ಸೋಮವಾರ ಮಧ್ಯರಾತ್ರಿ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಗೋವಾ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆದಿರುವ ಹೊತ್ತಿನಲ್ಲಿಯೇ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಲೊರೆಂಕೊ ಅವರು ಭೇಟಿ ನೀಡಿದ್ದಾರೆ. ಈ ಭೇಟಿ ಕುರಿತಂತೆ ಹೋಟೆಲ್‌ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಚರ್ಚಿಸಲು ಅವರು ನಿರಾಕರಿಸಿದ್ದರು. ಗೋವಾ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ …

Read More »

ನಾಮಪತ್ರ ವಾಪಸ್ ತೆಗೆದುಕೊಳ್ಳುವುದಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸುತ್ತಮುತ್ತ ಇರುವವರು ಊಹಾಪೋಹಗಳನ್ನು ಹಬ್ಬಿಸುತ್ತಿರುತ್ತಾರೆ’

ಬೆಳಗಾವಿ: ‘ನಾಮಪತ್ರ ವಾಪಸ್ ತೆಗೆದುಕೊಳ್ಳುವುದಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸುತ್ತಮುತ್ತ ಇರುವವರು ಊಹಾಪೋಹಗಳನ್ನು ಹಬ್ಬಿಸುತ್ತಿರುತ್ತಾರೆ’ ಎಂದು ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೋಕಾಕದ ಉದ್ಯಮಿ ಲಖನ್‌ ಜಾರಕಿಹೊಳಿ ಪ್ರತಿಕ್ರಿಯಿಸಿದರು.   ಇಲ್ಲಿ ನಾಮಪತ್ರ ಸಲ್ಲಿಕೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಟಿಕೆಟ್ ವಿಚಾರದಲ್ಲಿ ಸಹೋದರರು ಅವರವರ ಅನಿಸಿಕೆ ಹೇಳಿದ್ದಾರೆ. ನಮ್ಮ ಬೆಂಬಲಿಗರು-ಕಾರ್ಯಕರ್ತರು ಹೇಳಿದ್ದಕ್ಕೆ ಸ್ಪರ್ಧಿಸಿದ್ದೇನೆ’ ಎಂದು ತಿಳಿಸಿದರು. ‘ಪ್ರತಿಸ್ಪರ್ಧಿ ಯಾರೂ ಇಲ್ಲ. ಆ ಬಗ್ಗೆ ವಿಚಾರ ಮಾಡುವುದಿಲ್ಲ. …

Read More »