ಚಿಕ್ಕೋಡಿ : ವಿದ್ಯುತ್ ಬಿಲ್ ಕಟ್ಟಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗ್ರಾಹಕನಿಗೆ ಹೆಸ್ಕಾಂ ಎಇಇ ಅಧಿಕಾರಿಯೊಬ್ಬರು ಕಸಗುಡಿಸುವ ಪೊರಕೆಯಿಂದ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ನಡೆದಿದೆ. ಅಪ್ಪಾಸಾಬ್ ಮಕಾನಿ ಎಂಬುವರ ಮೇಲೆ ಹೆಸ್ಕಾಂ ಎಇಇ ಹಾಗೂ ಅವರ ಸಿಬ್ಬಂದಿ ಹಲ್ಲೆ ಮಾಡಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಬಿರಡಿ ಗ್ರಾಮದ ಅಪ್ಪಾಸಾಬ್ ಎಂಬಾತ ಕಳೆದ 1 ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾನೆ. …
Read More »Yearly Archives: 2021
ಸಚಿವ ಈಶ್ವರಪ್ಪ ಅಭಿಮಾನಪೂರ್ವಕವಾಗಿ ಹಾಗೆ ಹೇಳಿರಬಹುದು. ನಮ್ಮ ಮೇಲಿರುವ ಪ್ರೀತಿ, ವಿಶ್ವಾಸ ಹಾಗೂ ನಮ್ಮ ಕೆಲಸ, ಸಾಧನೆಯ ಹಾದಿ ನೋಡಿ ಈ ರೀತಿ ಹೇಳಿದ್ದಾರೆ. ಇದಕ್ಕೆ ನಾನು ಋಣಿ’
ಬಾಗಲಕೋಟೆ: ‘ಸಚಿವ ಈಶ್ವರಪ್ಪ ಅಭಿಮಾನಪೂರ್ವಕವಾಗಿ ಹಾಗೆ ಹೇಳಿರಬಹುದು. ನಮ್ಮ ಮೇಲಿರುವ ಪ್ರೀತಿ, ವಿಶ್ವಾಸ ಹಾಗೂ ನಮ್ಮ ಕೆಲಸ, ಸಾಧನೆಯ ಹಾದಿ ನೋಡಿ ಈ ರೀತಿ ಹೇಳಿದ್ದಾರೆ. ಇದಕ್ಕೆ ನಾನು ಋಣಿ’ ಎಂದು ಮುರುಗೇಶ ನಿರಾಣಿ ಹೇಳಿದರು ನಮ್ಮ ಹಿರಿಯ ಸಹೋದರ ಬಸವರಾಜ್ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಗಳಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಾವು ಅವರಿಗೆ ಎಲ್ಲಾ ರೀತಿಯಲ್ಲಿಯೂ ಸಹಕಾರಿಯಾಗಿತ್ತೇವೆ. ಈ ಮೂಲಕ 2023ಕ್ಕೆ ಸಂಪೂರ್ಣವಾಗಿ …
Read More »ಸಿದ್ದುಗೆ ಸಿಎಂ ಕುರ್ಚಿ ಬಿಟ್ಟು ಬೇರೆ ಕಡೆ ಕೂತರೆ ಮುಳ್ಳು ಚುಚ್ಚಿದಂಗೆ : ಸಚಿವ ಈಶ್ವರಪ್ಪ ವ್ಯಂಗ್ಯ
ಬಾಗಲಕೋಟೆ : ಸಿದ್ದರಾಮಯ್ಯಗೆ ಸಿಎಂ ಖುರ್ಚಿ ಕಳೆದುಕೊಂಡ ಬಳಿಕ ಯಾವುದೇ ಖುರ್ಚಿ ಮೇಲೆ ಕುಳಿತರೂ ಮುಳ್ಳು ಚುಚ್ಚಿದ ಹಾಗೇ ಆಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನನೇ ಬೇಕು ಅಂತಾರೆ. ಅದೊಂದೇ ಅವರಿಗೆ ಮೆತ್ತಗೆ ಇರೋ ಖುರ್ಚಿ ಅನಿಸುತ್ತದೆ. ಆದಷ್ಟು ಬೇಗ ಮತ್ತೆ ಮುಖ್ಯಮಂತ್ರಿ ಆಗಬೇಕು ಅನ್ನೋ ಭ್ರಮೆಯಲ್ಲಿದ್ದಾರೆ. ನಾನೇ ಸಿಎಂ ಅಂತಾ ಹೇಳಿಕೊಳ್ಳುತ್ತಾರೆ. ನೀವು ಹೇಳ ಕೂಡದು …
Read More »ಅಂತರರಾಷ್ಟ್ರೀಯ ವಿಮಾನಯಾನ ನಿಲ್ಲಿಸುವಂತೆ ಪ್ರಧಾನಿಗೆ ಪತ್ರ ಬರೆದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್
ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೋವಿಡ್-19 ಪ್ರಕರಣಗಳ ಹೆಚ್ಚಳವನ್ನು ತಡೆಯಲು ಅಂತರರಾಷ್ಟ್ರೀಯ ವಿಮಾನಯಾನವನ್ನು ನಿಲ್ಲಿಸುವಂತೆ ವಿನಂತಿಸಿದ್ದಾರೆ. WHO ಇತ್ತೀಚೆಗೆ ಗುರುತಿಸಿರುವ ಕಾಳಜಿಯ ಹೊಸ ರೂಪಾಂತರವನ್ನು ಭಾರತಕ್ಕೆ ಪ್ರವೇಶಿಸದಂತೆ ತಡೆಯಲು ನಾವು ಎಲ್ಲವನ್ನೂ ಮಾಡಬೇಕು. ನಮ್ಮ ದೇಶ ಕಳೆದ ಒಂದೂವರೆ ವರ್ಷಗಳಿಂದ ಕರೋನಾ ವಿರುದ್ಧ ಕಠಿಣ ಹೋರಾಟ ನಡೆಸಿದೆ. ಬಹಳ ಕಷ್ಟದಿಂದ ಮತ್ತು ನಮ್ಮ ಲಕ್ಷಾಂತರ ಕೋವಿಡ್ ಯೋಧರ ನಿಸ್ವಾರ್ಥ …
Read More »8,309 ಕೋವಿಡ್ ಪ್ರಕರಣ ದೃಢ, 236 ಸಾವು
ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 8,309 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 236 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಒಂದೇ ದಿನ 9,905 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ವರೆಗೆ ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 3,40,08,183ಕ್ಕೆ ತಲುಪಿದೆ. ಈ ವರೆಗೆ 34,580,832 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 4,68,790 ಮಂದಿ ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಸದ್ಯ ಒಟ್ಟು 1,03,859 ಸಕ್ರಿಯ ಪ್ರಕರಣಗಳಿವೆ.
Read More ».PD.O.ಬೊ..ಮಗನೇ ನಿನ್ನಾ ಬೂಟ್ ತಗೊಂಡು ಹೊಡೀತಿನಿ..!ಅಂದ್ರಾ.?M.P.
ಕೋಲಾರ: ಕಾರ್ಯಕ್ರಮಕ್ಕೆ ಸರಿಯಾಗಿ ವ್ಯವಸ್ಥೆ ಆಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೋಲಾರ ಎಂಪಿ ಮುನಿಸ್ವಾಮೀ ಪಂಚಾಯತಿ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನುವ ಆಡಿಯೋ ಇದೀಗ ವೈರಲ್ ಆಗಿದೆ..!? ಪಿಡಿಓ ಜೊತೆ ಮಾತನಾಡುತ್ತಲೇ ನಿನ್ನನ್ನು ಬೂಟಿನಿಂದ ಒದೆಯುತ್ತೇನೆ,ಬೊ.. ಮಗನೇ,ಅನ್ನುತ್ತಾ ಅವಾಚ್ಯವಾಗಿ ನಿಂದಿಸಿದ ಆಡಿಯೋ ಇದೀಗ ವೈರಲ್ ಆಗಿದೆ. ಶ್ರೀನಿವಾಸ್ ರೆಡ್ಡಿ ಎನ್ನುವ ಪಿಡಿಓ ಅವರಿಗೆ ಅವಾಚ್ಯವಾಗಿ ಎಂಪಿ ಮುನಿಸ್ವಾಮೀ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದ್ದು..! ಎಂಪಿ ಬಾಯಲ್ಲಿ ಬಂದ ಮಾತುಗಳನ್ನು ಕೇಳಿ ಇದೀಗ ಸಾರ್ವಜನಿಕರು …
Read More »ಸರ್ಕಾರಿ ಬಸ್ ಹಾಗೂ ಪಾರ್ಚೈನರ್ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ,MLA ಅಳಿಯ” ಸೇರಿ ನಾಲ್ಕು ಜನ ಸ್ಥಳದಲ್ಲೇ ಸಾವು.!
ವಿಜಯಪುರ: ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್ ಹಾಗೂ ಪಾರ್ಚೈನರ್ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಈ ಅಪಘಾತದಲ್ಲಿ ಅಪಘಾತದಲ್ಲಿ ನಾಗಠಾಣ ಶಾಸಕ ದೇವಾನಂದ್ ಚವ್ಹಾಣ ಅಳಿಯ ವಿಜಯಕುಮಾರ್ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದ ನಾಲ್ವರು ನಿವಾಸಿಗಳು ಸ್ಥಳದಲ್ಲೇ …
Read More »ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರ ದಾಳಿ
ಧಾರವಾಡ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರು ನಿನ್ನೆ ರಾತ್ರಿ ಇಲ್ಲಿನ ಹೊಯ್ಸಳ ನಗರದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಪ ನಗರ ಠಾಣೆಯ ಇನಸ್ಪೆಕ್ಟರ್ ರಮೇಶ ಹೂಗಾರ,ಮಹಿಳಾ ಠಾಣೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಮತ್ತು ಪುರುಷನೋರ್ವನನ್ನು ಬಂಧಿಸಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು …
Read More »58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ
ಬೆಂಗಳೂರು: 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಮಾಡಿದ್ದು, ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ. 5 ನಗರಸಭೆ, 19 ಪುರಸಭೆ, 34 ಪ.ಪಂಚಾಯತ್, ಸ್ಥಳೀಯ ಸಂಸ್ಥೆಗಳ 1185 ವಾರ್ಡ್ ಗಳಿಗೆ ಮತದಾನ …
Read More »ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ ಹಾಗಾಗಿ ವಿವೇಚನೆಯುಳ್ಳ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಗೆ ಮತ ನೀಡಲಿದ್ದಾರೆ:ಡಿ.ಕೆ.ಶಿವಕುಮಾರ
ಬೆಳಗಾವಿ – ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಅತೀ ಹೆಚ್ಚು ಒತ್ತು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. 1 ಲಕ್ಷ ದಿಂದ 5 ಲಕ್ಷಕ್ಕೆ ಅನುದಾನ ಏರಿಕೆ ಮಾಡಿದ್ದು ಕಾಂಗ್ರೆಸ್. ನರೇಗಾ ಜಾರಿಗೆ ತಂದು ಗ್ರಾಮ ಪಂಚಾಯಿತಿಗಳ ಜೀವ ಉಳಿಸಿದ್ದು ಕಾಂಗ್ರೆಸ್ ಸರಕಾರ. ಶೇ.50ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ ಹಾಗಾಗಿ ವಿವೇಚನೆಯುಳ್ಳ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಗೆ ಮತ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ …
Read More »