Breaking News

Yearly Archives: 2021

ರಾಜ್ಯದಲ್ಲಿ ಐದು ಜನಕ್ಕೆ ಹರಡಿದೆ ಓಮಿಕ್ರಾನ್: ಬಿಬಿಎಂಪಿ ಸ್ಪಷ್ಟನೆ

ಬೆಂಗಳೂರು ಡಿಸೆಂಬರ್ 2: ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಎರಡಲ್ಲ ಐದು ಜನಕ್ಕೆ ಹರಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿಗೆ ಓಮಿಕ್ರಾನ್ ಬಿಗ್ ಶಾಕ್ ಕೊಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ ಓಮಿಕ್ರಾನ್ ವೈರಸ್ ಸೋಂಕಿತ ಐದು ಪ್ರಕರಣಗಳು ದಾಖಲಾಗಿವೆ ಎಂದು ಗೌರವ್ ಗುಪ್ತ ಸ್ಪೋಟಕ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಮೂಲಕವೇ ಭಾರತದಲ್ಲಿ ಮೊದಲ ಬಾರಿಗೆ ಐದು ಓಮಿಕ್ರಾನ್ …

Read More »

ಸರ್ಕಾರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : 10 ಸಾವಿರ ರೂ. ಶುಲ್ಕ ಹೆಚ್ಚಳ

ಬೆಂಗಳೂರು : ಸರ್ಕಾರಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ (Engineering) ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ (students) ರಾಜ್ಯ ಸರ್ಕಾರ (State Government) ಬಿಗ್ ಶಾಕ್ ನೀಡಿದ್ದು, ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆವ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದ ಜೊತೆಗೆ 10 ಸಾವಿರ ರೂ. ಇತರೆ ಶುಲ್ಕವನ್ನು ಹೆಚ್ಚುವರಿಯಾಗಿ ವಸೂಲಿಗೆ ಅವಕಾಶ ನೀಡಿದೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕೋರ್ಸ್ ಪ್ರವೇಶಕ್ಕೆ ನಿಗದಿಪಡಿಸಿರುವ ಶುಲ್ಕದ …

Read More »

ಕೋಮಾಗೆ ಜಾರಿದ ಕನ್ನಡ ಹಿರಿಯ ನಟ ಶಿವರಾಂ

ಬೆಂಗಳೂರು: ಮೂರು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಂತ ಸ್ಯಾಂಡಲ್ ವುಡ್ ನಟ ಶಿವರಾಂ ( Sandalwood Actor Shivaram) ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಮೆದುಳಿಗೆ ಡ್ಯಾಮೇಜ್‌ ಆಗಿದ್ದು, ಕೋಮಾಗೆ ಜಾರಿದ್ದಾರೆ. ‌ ಹಿರಿಯ ನಟನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಮೋಹನ್ ಅವ್ರು ಶಿವರಾಂ ಅವ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ‘ ಹಿರಿಯ ನಟನ ಬ್ರೇನ್ ಡ್ಯಾಮೇಜ್‌ ಆಗಿದ್ದು, ಮೆದುಳಿನಲ್ಲಿ ರಕ್ತಸ್ರಾವ‌ ಆಗಿದೆ. ಸಧ್ಯ ಅವ್ರು …

Read More »

ಶಾಲೆಗಳಲ್ಲಿ ʼಮೊಟ್ಟೆ ವಿತರಣೆʼ ಆದೇಶ ವಾಪಸ್‌ ತೆಗೆದುಕೊಳ್ಳಿ, ಇಲ್ಲವಾದ್ರೆ ಹೋರಾಟ ಎದುರಿಸಿ : ಸರ್ಕಾರಕ್ಕೆ ಚನ್ನಬಸವಾನಂದ ಶ್ರೀ ಎಚ್ಚರಿಕೆ

ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ಮಹಾಸಭಾ ಬಸವ ಮಂಟಪದ ಚನ್ನಬಸವಾನಂದ ಶ್ರೀ ವಿರೋಧ ವ್ಯಕ್ತ ಪಡಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಮೊಟ್ಟೆ ವಿತರಣೆ ಆದೇಶ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನಬಸವಾನಂದ ಶ್ರೀಗಳು, ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನ ರಾಜ್ಯ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು. ಮೊಟ್ಟೆ ಪೂರ್ಣವಾಗಿ ಮಾಂಸಹಾರವಾಗಿದ್ದು, ಶಾಲಾ ಮಟ್ಟದಿಂದ್ಲೆ ಮಕ್ಕಳಿಗೆ …

Read More »

ಭಾರತ ಸೇರಿದಂತೆ ವಿಶ್ವದ 30 ದೇಶಗಲ್ಲಿ ಒಮಿಕ್ರಾನ್ ವೈರಸ್ ಎಂಟ್ರಿ: ಯಾವೆಲ್ಲಾ ದೇಶದಲ್ಲಿ ಎಷ್ಟು ಕೇಸ್ ಪತ್ತೆ ಗೊತ್ತಾ.?

ನವದೆಹಲಿ: ಕೊರೊನಾ ವೈರಸ್ ಕಾಯಿಲೆಯ (ಕೋವಿಡ್-19) ಒಮೈಕ್ರಾನ್ ರೂಪಾಂತರವು ಹೆಚ್ಚು ಸಾಂಕ್ರಾಮಿಕ ಮತ್ತು ಆಗಾಗ್ಗೆ ರೂಪಾಂತರಗಳಿಗೆ ಒಳಗಾಗುವ ಸಾಮರ್ಥ್ಯಹೊಂದಿದೆ ಎಂದು ಪರಿಗಣಿಸಲಾಗಿದೆ. ಈಗ ಕರ್ನಾಟಕದ ಇಬ್ಬರು ವ್ಯಕ್ತಿಗಳಿಗೆ ಒಮಿಕ್ರಾನ್ ವೈರಸ್ ( Omicron Variant ) ಪಾಸಿಟಿವ್ ಎಂಬುದಾಗಿ ದೃಢಪಟ್ಟ ನಂತ್ರ, ಭಾರತಕ್ಕೂ ಒಮಿಕ್ರಾನ್ ಎಂಟ್ರಿ ಕೊಟ್ಟಂತೆ ಆಗಿದೆ. ಹೀಗಾಗಿ ಒಮಿಕ್ರಾನ್ ವೈರಸ್ ಸೋಂಕಿತ ದೇಶಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.   ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ …

Read More »

ಕರ್ನಾಟಕಕ್ಕೆ ʼಒಮಿಕ್ರಾನ್‌ʼ ಎಂಟ್ರಿ : ವೈರಸ್ ಲಕ್ಷಣಗಳೇನು? ಹೊಸ ರೂಪಾಂತರಿ ಎಷ್ಟು ಅಪಾಯಕಾರಿ? ಇಲ್ಲಿದೆ ಮಾಹಿತಿ

ಬೆಂಗಳೂರು : ದೇಶದಲ್ಲಿಯೇ ಮೊದಲ ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿವೆ. ಇನ್ನು ಈ ವೇಳೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ 66 ವರ್ಷದ ವೃದ್ದ ಮತ್ತು ಬೆಂಗಳೂರಿನ 46 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್‌ ವೈರಸ್‌ ಪತ್ತೆಯಾಗಿದೆ.   ಮೂಲತಃ ಬೆಂಗಳೂರಿನ ಆರೋಗ್ಯ ಕಾರ್ಯಕರ್ತನಾದ 46 ವರ್ಷದ ವ್ಯಕ್ತಿಗೆ ಅಪಾಯಕಾರಿ ಒಮಿಕ್ರಾನ್‌ ಪತ್ತೆಯಾಗಿದೆ. ಅಘಾತಕಾರಿ ಅಂದ್ರೆ, ಇವ್ರಿಗೆ ಯಾವುದೇ ಟ್ರಾವೇಲ್‌ ಹಿಸ್ಟ್ರಿ ಇಲ್ಲ. ಹಾಗಾಗಿ ಈ …

Read More »

ರೂಪಾಂತರಿ ತಳಿ ಬಗ್ಗೆ ಭಯ ಬೇಡ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ

ಹೊಸ ತಳಿ ವೇಗವಾಗಿ ಹರಡುತ್ತದೆ. ಆದರೆ, ಜೀವಕ್ಕೆ ಅಪಾಯ ಇಲ್ಲ. ಸರ್ಕಾರ ಕಟ್ಟೆಚ್ಚರ ವಹಿಸಿದೆ. ಬೇರೆ ಬೇರೆ ದೇಶಕ್ಕೆ ಹರಡುವುದನ್ನು ತಡೆಗಟ್ಟುವ ಕೆಲಸ ಆಗುತ್ತಿದೆ. ಕಡ್ಡಾಯವಾಗಿ ತಪಾಸಣೆ ಆಗಿದ್ದರೂ, ರಿಪೋರ್ಟ್ ಬರೋವರೆಗೂ ಅವರನ್ನು ಕಳುಹಿಸುವುದಿಲ್ಲ. ನೆಗೆಟಿವ್ ರಿಪೋರ್ಟ್ ಬಂದ ಬಳಿಕ ಕಳಿಸಲಾಗುವುದು ಎಂದು ಹೇಳಿದರು. ಮಹಾರಾಷ್ಟ್ರದಿಂದ ಬರುತ್ತಿರುವವರಿಗೆ RTPCR ಟೆಸ್ಟ್ ಕಡ್ಡಾಯ. ನೆಗೆಟಿವ್ ಬಂದವರಿಗೆ ಮಾತ್ರ ಒಳಗೆ ಬಿಟ್ಟು ಕೊಳ್ಳಲಾಗುವುದು ಎಂದರು. ಅಧಿವೇಶನ ನಡೆಸುವ ಬಗ್ಗೆ ಸಿಎಂ ನಿರ್ಧಾರ: ಬೆಳಗಾವಿಯಲ್ಲಿ …

Read More »

ಸವಾಲುಗಳ ನಡುವೆಯೇ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತಿದ್ದೇವೆ: ಸ್ಪೀಕರ್ ಕಾಗೇರಿ

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಡಿ. 13 ರಿಂದ 24 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನವನ್ನು ಯಶಸ್ವಿಗೊಳಿಸಲು ಉತ್ತಮ ವಸತಿ, ಸಾರಿಗೆ, ಆಹಾರ, ಶಿಷ್ಟಾಚಾರ ಸಿದ್ಧತೆಗಳನ್ನು ಸರ್ಕಾರ, ಜಿಲ್ಲಾಡಳಿತ ಸಮರ್ಪಕವಾಗಿ ಕೈಗೊಳ್ಳಬೇಕು. ಸದ್ಯಕ್ಕೆ ಕೊರೊನಾ ಬಗ್ಗೆ ಯಾವುದೇ ಆತಂಕಗಳಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಸುವರ್ಣಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಅಧಿವೇಶನದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿವೇಶನಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಬುಲೆಟಿನ್, ಕಾರ್ಯಕ್ರಮ …

Read More »

ಮೊದಲ ಪ್ರಾಶಸ್ತ್ಯದ ಮತ ಲಖನ್​ಗೋ? ಕವಟಗಿಮಠಗೋ: ರಮೇಶ್​ ಜಾರಕಿಹೊಳಿ ಸಸ್ಪೆನ್ಸ್​

ಅಥಣಿ: ನನಗೆ ವೈರಿಗಳು ಹೆಚ್ಚಾಗಿದ್ದಾರೆ. ಇದರಿಂದ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ವಿಧಾನಪರಿಷತ್​ ಚುನಾವಣೆಯ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದಲ್ಲಿ ತಮ್ಮ ಬೆಂಬಲಿಗರ ಜೊತೆ ನಡೆದ ಸಭೆಯಲ್ಲಿ ಮಾತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ಮತ್ತು ಎರಡನೇ ಪ್ರಾಶಸ್ತ್ಯದ ಮತ ಯಾರಿಗೆ ಹಾಕಬೇಕು ಎಂಬುದನ್ನು ಯಾರಿಗೆ ಹಾಕಬೇಕು ಎಂಬುದನ್ನು ಪಕ್ಷದ ವರಿಷ್ಠರ ಜೊತೆ ಮಾತನಾಡಿ ಶೀಘ್ರವೇ ತಿಳಿಸುವೆ ಎಂದು ಹೇಳಿದರು. ಮೊದಲ ಮತ ಲಖನ್​ಗೋ? …

Read More »

ಮಂತ್ರಿಗಳು, ಶಾಸಕರು, ಅಧಿಕಾರಿಗಳ ಬೂಟಿ ಪಾಲೀಶ್ ಮಾಡಲು ಅನುಮತಿ ಕೊಡಿ”: ಬೇಡಿಕೆ ಕೇಳಿ ದಂಗಾದ ಕಾಗೇರಿ

ಬೆಳಗಾವಿ – “ಡಿಸೆಂಬರ್ 13ರಿಂದ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಳದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಅಧಿಕಾರಿಗಳ ಬೂಟಿ ಪಾಲೀಶ್ ಮಾಡಲು ಅನುಮತಿ ಕೊಡಿ” ಅಧಿವೇಶನ ಸಿದ್ಧತೆ ಪರಿಶೀಲಿಸಲು ಬಂದಿದ್ದ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೆದುರು ಇಂತದ್ದೊಂದು ಮನವಿ ಹಿಡಿದು ನಿಂತಾಗ  ಕಾಗೇರಿ ಅಕ್ಷರಶಃ ದಂಗಾದರು. ಏನು ಉತ್ತರಿಸಬೇಕೆಂದೇ ತೋಚದಾಯಿತು ಅವರಿಗೆ. ಬೂಟ್ ಪಾಲೀಶ್ ಮಾಡಲು ತಮ್ಮ ಅನುಮತಿ ಕೇಳಿದ್ದನ್ನು ಕಂಡು ಅವಾಕ್ಕಾದರು. ಅದರಲ್ಲೂ ಇಂತಹ …

Read More »