Breaking News

Yearly Archives: 2021

ಆಸೆ, ಆಮಿಷಗಳಿಗೆ ಒಳಗಾಗಿ ಮತಾಂತರ ಆಗುವುದು ತಪ್ಪು – ಬೊಮ್ಮಾಯಿ.!

ಹುಬ್ಬಳ್ಳಿ : ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಆಸೆ, ಆಮಿಷಗಳಿಗೆ ಒಳಗಾಗಿ ಮತತಾಂತರವಾಗುವುದು ತಪ್ಪು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ನಗರದಲ್ಲಿ ತಮ್ಮ ನಿವಾಸದ ಹತ್ತಿರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಯಾವುದೇ ಧರ್ಮದವರು ಆತಂಕ ಪಡಬಾರದು. ಇದರಿಂದ ಅನ್ಯ ಧರ್ಮದ ಪ್ರಾರ್ಥನೆ, ನಂಬಿಕೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮತಾಂತರ ಕಾಯ್ದೆ ಜಾರಿಯಾಗಿದೆ. ಕಾನೂನು ಇಲಾಖೆ ಇವುಗಳ ಕುರಿತು ಅಧ್ಯಯನ ನಡೆಸಿದೆ. ಪರಿಶೀಲನೆಯ ನಂತರ …

Read More »

40 ಪರ್ಸೆಂಟ್ ಕಮಿಷನ್ ವಿಚಾರ ನಮ್ಮ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದು ತಿಳಿಸಿದರೂ ಸ್ಪಂದಿಸಿಲ್ಲ : ಡಿ. ಕೆಂಪಣ್ಣ

ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಮಾತನಾಡಿರುವ ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ, ಡಿ. ಕೆಂಪಣ್ಣ, ನಮ್ಮ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದು ತಿಳಿಸಿದರೂ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.   ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಂಪಣ್ಣ, ಯಾವುದೇ ಕಾಮಗಾರಿ ಮಾಡಬೇಕಾದರೂ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗುತ್ತದೆ. ಅದಕ್ಕಾಗಿ ಈ ಹಿಂದೆ ಯಡಿಯೂರಪ್ಪಗೆ ನಾವು ಪತ್ರ ಬರೆದಿದ್ದೆವು. ಆದರೆ ಯಡಿಯೂರಪ್ಪನವರು ಸರಿಯಾಗಿ ಸ್ಪಂದಿಸಿಲ್ಲ. ಪ್ರಧಾನಿ …

Read More »

ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ

ಮೈಸೂರು: ಪ್ರತಿಷ್ಠಿತ ಕೆ ಎಂ ಎಫ್ ಕಂಪನಿಯ ನಂದಿನಿ ತುಪ್ಪದ ಹೆಸರಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲದ ಮೇಲೆ ಪೊಲಿಸರು ದಾಳಿ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಚಾಮುಂಡಿ ಬೆಟ್ಟದ ಹಿಂಭಾಗ ಹೊಸಹುಂಡಿ ಗ್ರಾಮದಲ್ಲಿ ಗೌಡನ್ ನಲ್ಲಿ ಟನ್ ಗಟ್ಟಲೆ ನಕಲಿ ತುಪ್ಪ ಹಾಗೂ ಲೇಬಲ್ ಗಳ ಮುದ್ರಣ ಘಟಕ ಪತ್ತೆಯಾಗಿದೆ. ನಂದಿನಿ ತುಪ್ಪಕ್ಕೆ ಡಾಲ್ಡಾ ಬೆರೆಸಿ ಮಾರಾಟ ಮಾಡುತ್ತಿದ್ದ ಜಾಲ ಇದಾಗಿದ್ದು, ಜಿವನ್ ತುಪ್ಪದ ಕಂಪನಿಯಿಂದ …

Read More »

ಕನ್ನಡ ದ್ವಜ ಸುಟ್ಟು ಹಾಕಿದ ಎಂ.ಇ.ಎಸ್ ಪುಂಡರ ವಿರುದ್ಧ ಸೂಕ್ತ ಕ್ರಮಕ್ಕೆ ಕನ್ನಡಪರ ಸಂಘಟನೆಗಳ ವತಿಯಿಂದ ಆಗ್ರಹ*

ಘಟಪ್ರಭಾ; ನಾಡ ದ್ರೋಹಿ ಎಂ.ಇ.ಎಸ್ ಸಂಘಟನೆಯನ್ನು ನಿಷೇದಿಸುವಂತೆ ಹಾಗೂ ಕೊಲ್ಹಾಪುರದಲ್ಲಿ ಕನ್ನಡ ದ್ವಜ ಸುಟ್ಟಂತಹ ನಾಡ ದ್ರೋಹಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಘಟಪ್ರಭಾ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಮೃತ್ಯುಂಜಯ ವೃತ್ತದಲ್ಲಿ ಟೈರಗೆ ಬೆಂಕಿ ಹಚ್ಚಿ ನಾಡ ದ್ರೋಹಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ, ಕರ್ನಾಟಕ ರಕ್ಷಣಾ ವೇದಿಕೆ ಸಂತೋಷ …

Read More »

ಬೆಳಗಾವಿಯಲ್ಲಿಪಂಚಮಸಾಲಿ ಸಮಾಜದ ಜೊತೆಗೆ ಸಿಎಂ ಬೊಮ್ಮಾಯಿ ಮಿಟಿಂಗ್

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.  ಸಿಎಂ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಪಂಚಮಸಾಲಿ ಸಮಾಜದ ಹಾಲಿ, ಮಾಜಿ ಶಾಸಕರು, ಮುಖಂಡರ ಸಭೆಯನ್ನು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆದಿದ್ದಾರೆ. ಬೆಳಗಾವಿ ಹೊರ ವಲಯದಲ್ಲಿರುವ ಮೇರಿಟ್ ಹೋಟೆಲ್‍ನಲ್ಲಿ ಸಂಜೆ 7 ಗಂಟೆಗೆ ಸಭೆ ಕರೆಯಲಾಗಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಳಂಬದ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರಕ್ಕೆ …

Read More »

ವಿದ್ಯಾರ್ಥಿನಿಯರಿಗೆ ಹಾಜರಾತಿ ಸಡಿಲಿಕೆ, 240 ದಿನ ಹೆರಿಗೆ ರಜೆ

ನವದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಎಲ್ಲಾ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಮಹಿಳಾ ವಿದ್ಯಾರ್ಥಿಗಳಿಗೆ ಹಾಜರಾತಿ ಸಂಬಂಧಿತ ಸಡಿಲಿಕೆಗಳ ಜೊತೆಗೆ ಹೆರಿಗೆ ರಜೆಯನ್ನು ನೀಡಲು ಸೂಕ್ತ ನಿಯಮಗಳು ಮತ್ತು ಮಾನದಂಡಗಳನ್ನು ರೂಪಿಸಲು ನಿರ್ದೇಶಿಸಿದೆ.   ಯುಜಿಸಿಯಿಂದ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ, ಯುಜಿಸಿ ನಿಯಮಾವಳಿ 2016 ರ ತನ್ನ ನಿಬಂಧನೆಗಳಲ್ಲಿ ಒಂದನ್ನು ಉಲ್ಲೇಖಿಸಿ ಮಹಿಳಾ ಅಭ್ಯರ್ಥಿಗಳಿಗೆ 240 ದಿನಗಳವರೆಗೆ ಎಂಫಿಲ್ ಮತ್ತು ಪಿಹೆಚ್‌ಡಿ ಸಂಪೂರ್ಣ ಅವಧಿಯಲ್ಲಿ ಒಮ್ಮೆ ಹೆರಿಗೆ ರಜೆ …

Read More »

ಕೇಂದ್ರ ಸರ್ಕಾರ ಯೋಜನೆಗಾಗಿ ಒಂದು ಕಿಮೀಗೆ ಸುಮಾರು 25 ಕೋಟಿ ರೂಪಾಯಿ ವ್ಯಯ ಮಾಡಲಿದೆ.

ಹುಬ್ಬಳ್ಳಿ: ರಾಯಚೂರಿನ ಸಿಂದಗಿ ಹಾಗೂ ಕಲಬುರಗಿಯ ಬಡದಲ್ ಹಳ್ಳಿಯ ನಡುವೆ 177 ಕಿಮೀ ಉದ್ಧದ ಗ್ರೀನ್​​ಫೀಲ್ಡ್​ ಹೆದ್ದಾರಿ ನಿರ್ಮಾಣವಾಗಲಿದ್ದು, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭಾರತ್​​ ಮಾಲಾ ಯೋಜನೆಯ ಪರಿಯೋಜನೆಯಡಿ ಆರು ಪಥದ ಹೆದ್ದಾರಿ ನಿರ್ಮಾಣ ಆಗಲಿದೆ. ಉತ್ತರ ಕರ್ನಾಟಕದಲ್ಲಿ ನಿರ್ಮಾಣವಾಗಲಿರುವ ಮೊದಲ ಆರು ಪಥದ ರಾಷ್ಟ್ರೀಯ ಹೆದ್ದಾರಿ ಆಗಲಿದ್ದು, ಕೇಂದ್ರ ಸರ್ಕಾರ ಯೋಜನೆಗಾಗಿ ಒಂದು ಕಿಮೀಗೆ ಸುಮಾರು 25 ಕೋಟಿ ರೂಪಾಯಿ ವ್ಯಯ ಮಾಡಲಿದೆ. ರಾಷ್ಟ್ರೀಯ ಮಾಧ್ಯಮದ ವರದಿಯ …

Read More »

ಕನ್ನಡ ಧ್ವಜ ಸುಟ್ಟವರ ವಿರುದ್ಧ ಶಿವರಾಜ್​ಕುಮಾರ್ ಕೆಂಡ.. ತಕ್ಕ ಶಿಕ್ಷೆಗೆ ಆಗ್ರಹ

ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟು ಹಾಕಿರುವ ಘಟನೆ ಖಂಡಿಸಿ ನಟ ಶಿವರಾಜ್​​ ಕುಮಾರ್​ ಧ್ವನಿಯೆತ್ತಿದ್ದು ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿದ ಶಿವರಾಜ್​ ಕುಮಾರ್​‘ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆಗ್ರಹಿಸಿದ್ದಾರೆ. ಪ್ರಕರಣದ ಹಿನ್ನೆಲೆ.. …

Read More »

ಪುತ್ರಿ ಜೊತೆ ವಿಷ ಸೇವಿಸಿದ ರೈತಆತ್ನಹತ್ಯೆಗೆ ಮುಂದಾಗಿದ್ದಾರೆ.

ಹಾವೇರಿ: ಕೊರೋನಾ, ಅಕಾಲಿಕ ಮಳೆ, ಅತಿವೃಷ್ಟಿಯಂತಹ ಸಾಲು ಸಾಲು ಸಂಕಷ್ಟಗಳಿಂದ ಚೇತರಿಸಿಕೊಳ್ಳಲಾಗದೆ ಸಾಲ ಮಾಡಿಕೊಂಡು ಕಂಗಾಲಾಗಿದ್ದ ರೈತ ದಂಪತಿ ನೇಣಿಗೆ ಕೊರಳೊಡ್ಡಿದ ಘಟನೆ ಸಿಎಂ ತವರೂರು ಜಿಲ್ಲೆಯ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಇತ್ತೀಚಿಗೆ ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಗೆ ಕೈಗೆ ಬಂದ ಬೆಳೆಯೆಲ್ಲವು ಜಲಾವೃತಗೊಂಡು ಹಾಳಾಗಿತ್ತು. ಇನ್ನು ಬಂಗಾರದ ಬೆಳೆ ಬೆಳೆಯಲು ಈ ದಂಪತಿ ಸಾಕಷ್ಟು ಸಾಲ ಸೂಲ ಮಾಡಿದ್ದು ಸಾಲಗಾರರ ಕಾಟ ತಾಳಲಾರದೇ ನೇಣಿಗೆ ಶರಣಾಗಿದ್ದಾರೆ. ಸಾಲ ತೀರಿಸೋ …

Read More »

11 ತಿಂಗಳಲ್ಲಿ ರಸ್ತೆ ಅಪಘಾತಕ್ಕೆ 198 ಮಂದಿ ಸಾವು, 461 ಮಂದಿಗೆ ಗಾಯ

ಹಾವೇರಿ: ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ನವೆಂಬರ್ ತಿಂಗಳವರೆಗೆ ರಸ್ತೆ ಅಪಘಾತದಲ್ಲಿ 198 ಜನ ಅಸುನೀಗಿದ್ದಾರೆ. 461 ಮಂದಿ ಗಂಭೀರವಾಗಿ ಗಾಯಗೊಂಡರೆ, 677 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ. ರಸ್ತೆ ಅಪಘಾತಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ 7 ಅಪಘಾತ ವಲಯಗಳನ್ನು ಗುರುತಿಸಿದೆ. ಅದರಲ್ಲಿ 3 ಅಪಘಾತ ವಲಯಗಳು ಸಿಎಂ …

Read More »