Breaking News

Yearly Archives: 2020

ನೂತನ ಪೆಟ್ರೋಲ್ ಬಂಕ್ ಗೆ ಚಾಲನೆ ನೀಡಿದ ರಾಹುಲ್ ಜಾರಕಿಹೊಳಿ

ಬೆಳಗಾವಿ: ತಾಲೂಕಿನ ಕಲಕಂಬಾದಲ್ಲಿ ನಿರ್ಮಿಸಲಾದ ನೂತನ ಜಗನ್ನಾಥ್ ಪೆಟ್ರೋಲ್ ಬಂಕ್ ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಶನಿವಾರ ಚಾಲನೆ ನೀಡಿದರು.     ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ್, ಜಿಪಂ ಸದಸ್ಯ ಯಲ್ಲಪ್ಪ ಬುಟರಿ, ಭಾರತ ಪೆಟ್ರೋಲಿಯಂ ಮ್ಯಾನೇಜರ್ ಕುಲದೀಪ ಗುಲಾಟಿ, ಸಂದೀಪ , ಶಾಸಕ ಸತೀಶ ಜಾರಕಿಹೊಳಿ ಆಪ್ತ ಸಹಾಯಕ …

Read More »

ರಾಯಬಾಗ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳ ಜನ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ.

ಬೆಳಗಾವಿ: ‘ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದಾಗಿ, ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಯಬಾಗದ ಕುಡಚಿ-ಉಗಾರ ಸೇತುವೆ ಶುಕ್ರವಾರ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರಾಯಬಾಗ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳ ಜನ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ. ಸೇತುವೆ ಜಲಾವೃತವಾಗಿರುವುದನ್ನು ತಹಶೀಲ್ದಾರ್‌ ಚಂದ್ರಕಾಂತ ಭಂಜತ್ರಿ ಪರಿಶೀಲಿಸಿದರು. ‘ಸತತ ಮಳೆಯಿಂದಾಗಿ ತಾಲ್ಲೂಕಿನ ಪ್ರಮುಖ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು. ವಿವಿಧ 11 ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದ್ದು …

Read More »

ಮೈಸೂರು ದಸರಾ ಉದ್ಘಾಟನೆಯನ್ನು

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ಅಗ್ರಪೂಜೆ ಸಲ್ಲಿಸಿ ವಿಧ್ಯುಕ್ತ ಚಾಲನೆ ನೀಡಿದರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್.ಮಂಜುನಾಥ್ ದಸರಾ ಉದ್ಘಾಟನೆಯನ್ನು ನೆರವೇರಿಸಿದರು. ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಅಡಗೂರು ಎಚ್.ವಿಶ್ವನಾಥ್, ನಿರಂಜನಕುಮಾರ್, ಎಲ್.ನಾಗೇಂದ್ರ, …

Read More »

ಚಿರು ಸಮಾಧಿ ಬಳಿ ಹೋಗಿ, ಸುಂದರ್​ ರಾಜ್​ ಕುಟುಂಬ ಪೂಜೆ ನೆರವೇರಿಸಲಿದ್ದಾರೆ.

ಚಿರು ಸರ್ಜಾ ಹುಟ್ಟುಹಬ್ಬದ ಹಿನ್ನೆಲೆ, ಪತ್ನಿ ಮೇಘನಾ ರಾಜ್​ ಚಿರು ಸಮಾಧಿ ಬಳಿ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ ಅನ್ನೋದು ತಿಳಿದು ಬಂದಿದೆ. ಚಿರು ಸಮಾಧಿ ಬಳಿ ಹೋಗಿ, ಸುಂದರ್​ ರಾಜ್​ ಕುಟುಂಬ ಪೂಜೆ ನೆರವೇರಿಸಲಿದ್ದಾರೆ. ಸದ್ಯ ಮೇಘನಾ ರಾಜ್​ ಸರ್ಜಾ ತಮ್ಮ ಜೆ.ಪಿ.ನಗರದ ಮನೆಯಲ್ಲೇ ಇದ್ದಾರೆ. ಇನ್ನು, ಇಂದು ಮೇಘನಾರಾಜ್​ಗೆ ಹೆರಿಗೆ ಅಗುವ ಊಹಾಪೋಹಗಳಿಗೆ ತಂದೆ ಸುಂದರ್ ರಾಜ್ ತೆರೆ ಎಳೆದಿದ್ದಾರೆ. ‘ಇವತ್ತು ಮೇಘನಾ ಆಸ್ಪತ್ರೆಗೆ ಅಡ್ಮಿಟ್​ ಆಗೋದಿಲ್ಲ. ನಾವೆಲ್ಲರೂ …

Read More »

ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಶುರುವಾಗಿದೆ.

ಬೆಂಗಳೂರು: ಇಂದಿನಿಂದ ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಶುರುವಾಗಿದೆ. ನವರಾತ್ರಿಯ ಮೊದಲ ದಿನದ ಹಿನ್ನೆಲೆಯಲ್ಲಿ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದೆ. ಇಂದು ತಾಯಿ ಬನಶಂಕರಿಗೆ ಅರಿಶಿನ ಕೊಂಬಿನ‌ ಅಲಂಕಾರ ಮಾಡಲಾಗಿದ್ದು ಭಕ್ತರ ಮನ ಸೆಳೆದಿದ್ದಾಳೆ. ದೇವಿಯ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ರು. ದೇವಿಗೆ ತುಪ್ಪ ಹಾಗೂ ನಿಂಬೆಹಣ್ಣಿನ‌ ದೀಪ ಬೆಳಗುವ ಮೂಲಕ ಭಕ್ತರು ದೇವಿಗೆ ನಮಿಸಿದ್ರು. ದೇವಸ್ಥಾನದಲ್ಲಿ ನವರಾತ್ರಿಯ ರಂಗು ಮೇಳೈಸಿದೆ. ಕೊರೊನಾ ಹಿನ್ನೆಲೆಯಲ್ಲಿ ಎಲ್ಲಾ …

Read More »

ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿ ಮಾತಿನ ಚಕಮಕಿ- ಟ್ರಸ್ಟಿ, ಅರ್ಚಕರ ಗುಂಪಿನ ನಡ್ವೆ ಘರ್ಷಣೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಕಚೇರಿಯ ಪೀಠೋಪಕರಣಗಳಿಗೆ ಹಾನಿ ಮಾಡಲಾಗಿದೆ. ದೇಗುಲದ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವಿನ ಶೀತಲ ಸಮರ ಮತ್ತೊಂದು ಸ್ವರೂಪ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಪ್ರಧಾನ ಅರ್ಚಕ ಶೇಷಗಿರಿ ಭಟ್ ದೇವಸ್ಥಾನದ ಗರ್ಭಗುಡಿಯ ಮುಂದೆ ಇಂದು ಕುಟುಂಬ ಸದಸ್ಯರೊಂದಿಗೆ ಮೌನಾಚರಣೆ ಆರಂಭಿಸಿದ್ದರು. ನವರಾತ್ರಿಗೂ ಮೊದಲು ಚಂಡಿಕಾ ಹೋಮ ನಡೆಸಬೇಕು. ಟ್ರಸ್ಟಿ …

Read More »

ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಫೇಲ್

ನವದೆಹಲಿ: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಫೇಲ್ ಆಗಿದೆ. ಈ ಹಿನ್ನೆಲೆ ರಾಜ್ಯದ ಕೊರೊನಾ ವೈರಸ್ ನಿಯಂತ್ರಣ ಉಸ್ತುವಾರಿಗೆ ಕೇಂದ್ರ ಸರ್ಕಾರ ವಿಶೇಷ ತಂಡವನ್ನು ನಿಯೋಜಿಸಿದೆ. ಕರ್ನಾಟಕವೂ ಸೇರಿ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಢ ರಾಜ್ಯಗಳಿಗೆ ಪ್ರತ್ಯೇಕ ತಜ್ಞರ ತಂಡಗಳನ್ನು ಕೇಂದ್ರ ಆರೋಗ್ಯ ಇಲಾಖೆ ನಿಯೋಜಿಸಿದೆ. ಕೇಂದ್ರದಿಂದ ನಿಯೋಜನೆಗೊಂಡಿರುವ ತಜ್ಞರ ತಂಡ ಕರ್ನಾಟಕಕ್ಕೆ …

Read More »

ಕೊಪ್ಪಳದಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರೀಕರಣ

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ ಜೇಮ್ಸ್ ಮೂವಿಯ ಚಿತ್ರೀಕರಣ ನಾಳೆಯಿಂದ ಕಿಷ್ಕಿಂದ ಗುಡ್ಡದ ಪ್ರದೇಶದಲ್ಲಿ ನಡೆಯಲಿದೆ. ಗಂಗಾವತಿ ತಾಲೂಕಿನ ಕಿಷ್ಕಿಂದ ಭಾಗವಾಗಿರುವ ಮಲ್ಲಾಪುರ ಮತ್ತು ವಾನಭದ್ರಪ್ಪ ಗ್ರಾಮದ ನಡುವೆ ಬೃಹತ್ ಸೆಟ್ ಹಾಕಲಾಗಿದೆ. ಚಿತ್ರದ ನಾಯಕ ಪುನೀತ್ ರಾಜಕುಮಾರ್ ಮತ್ತು ತೆಲುಗಿನ ಖ್ಯಾತ ನಟ ಶ್ರೀಕಾಂತ್ ಕೂಡ ಶೂಟಿಂಗ್‍ನಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಮಲ್ಲಾಪುರ ಗ್ರಾಮದ ಹೊರವಲಯದ ಗುಡ್ಡ ಪ್ರದೇಶದಲ್ಲಿ ಭವ್ಯ ಸೆಟ್ ಅನ್ನು …

Read More »

ಹಾಯ್ ಹೇಗಿದ್ದೀರಾ? ಹೇಗಿದೆ ಲೈಫ್? ಭೂಮಿ ಶೆಟ್ಟಿ

ಕಿನ್ನರಿ ಧಾರಾವಾಹಿ ಹಾಗೂ ಬಿಗ್‍ಬಾಸ್ ಸೀಸನ್ 7ರ ಸ್ಪರ್ಧಿ ಭೂಮಿ ಶೆಟ್ಟಿ ಈಗ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಅವರ ಹೊಸ ಪ್ರಾಜೆಕ್ಟ್ ಹಾಗೂ ಬಿಗ್‍ಬಾಸ್ ನಂತರದ ಜೀವನದ ಬಗ್ಗೆ ಒಂದಿಷ್ಟು ವಿಚಾರಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. • ಹಾಯ್ ಹೇಗಿದ್ದೀರಾ? ಹೇಗಿದೆ ಲೈಫ್? ನಾನು ಸೂಪರ್ ಆಗಿದ್ದೀನಿ. ಲೈಫ್ ಬೊಂಬಾಟ್ ಆಗಿದೆ. ಬಿಗ್‍ಬಾಸ್‍ನಿಂದ ಬಂದ ಮೇಲೆ ಒಂದಿಷ್ಟು ಹೊಸ ಹೊಸ ಅವಕಾಶಗಳು ಸಿಕ್ತಿವೆ. ಸದ್ಯಕ್ಕೆ ಕೊರೊನಾದಿಂದ ಪಾರಾದ್ರೆ ಸಾಕಾಗಿದೆ. • ಬಿಗ್‍ಬಾಸ್ ಮುಗಿದ ನಂತರ …

Read More »

ಭೀಮೆ, ಕೃಷ್ಣಾರ್ಭಟಕ್ಕೆ ಉತ್ತರ ಕರ್ನಾಟಕದ ಮಂದಿ ಬೆಚ್ಚಿಬಿದ್ದಿದ್ದಾರೆ.

ಕಲಬುರಗಿ: ಭೀಮೆ, ಕೃಷ್ಣಾರ್ಭಟಕ್ಕೆ ಉತ್ತರ ಕರ್ನಾಟಕದ ಮಂದಿ ಬೆಚ್ಚಿಬಿದ್ದಿದ್ದಾರೆ. ಊರಿಗೆ ಊರೇ ಮುಳುಗಡೆಯಾಗಿ, ಜನಜೀವನ ಅಯೋಮಯವಾಗಿದೆ. ಮನೆ, ಮಠ ಕಳೆದುಕೊಂಡ ಜನ ಕಣ್ಣೀರ ಹೊಳೆಯನ್ನೇ ಹರಿಸ್ತಿದ್ದಾರೆ. ಕಲಬುರಗಿಯಲ್ಲಂತೂ ಜಲರಾಕ್ಷಸ ಘನಘೋರ ಪರಿಸ್ಥಿತಿ ನಿರ್ಮಾಣ ಮಾಡಿದ್ದಾನೆ.ಹೌದು. ಉತ್ತರ ಕರ್ನಾಟಕದ ಸ್ಥಿತಿ ನಿಜಕ್ಕೂ ದುರಂತ ಅಂದ್ರೆ ತಪ್ಪಾಗಲ್ಲ. ಹಳ್ಳಿಗೆ ಹಳ್ಳಿಗಳನ್ನೇ ಮುಳುಗಿಸಿದೆ. ಮನೆಯೊಳಗೂ ನೀರು, ಹೊರಗೂ ನೀರು, ಅಕ್ಕಿ, ಗೋಧಿ, ಹೊಲ, ಗದ್ದೆ ಎಲ್ಲವೂ ನೀರುಪಾಲಾಗಿವೆ. ಕಲಬುರಗಿಯನ್ನಂತು ಮಹಾಮಳೆ ಮುಳುಗಿಸಿ ಬಿಟ್ಟಿದೆ. ರಣಭೀಕರ …

Read More »