ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನಲೆ ಮುಸ್ಲಿಂ ಬಾಂಧವರ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನಾ ಮುಖಂಡರು ತಹಶಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಚಿಂತಾಜನಕ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯಾವುದೇ ಸಾಮೂಹಿಕ ಪ್ರಾರ್ಥನೆ, ಸಭೆ ಸಮಾರಂಭ …
Read More »Monthly Archives: ಮೇ 2020
ಮದ್ಯ ನಿಷೇಧಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಹಣ ಕಳಿಸಿದ ಮಹಿಳೆಯರು…………
ಧಾರವಾಡ: ಸರ್ಕಾರಕ್ಕೆ ಮಹಿಳೆಯರು ಹಣ ಕಳುಹಿಸುವ ಮೂಲಕ ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ನಗರದ ಮುರುಘಾಮಠ ಆವರಣದ ಅಂಚೆ ಕಚೇರಿ ಎದುರು ಪ್ರತಿಭಟನೆ ಮಾಡಿದ ಮಹಿಳೆಯರು, ಮನಿ ಆರ್ಡರ್ ಮೂಲಕ ಸರ್ಕಾರಕ್ಕೆ ಹಣ ಕಳುಹಿಸಿ ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಈ ಮೂಲಕ ಮಹಿಳೆಯರು ವಿನೂತನ ಪ್ರತಿಭಟನೆ ಮಾಡಿದ್ದಾರೆ. ಈ ಮೊದಲು ಮಹಿಳೆಯರು ಮನಿ ಆರ್ಡರ್ ಅಭಿಯಾನ ಮಾಡಿದ್ದರು. ಈ ವೇಳೆ ನೂರಾರು ಮಹಿಳೆಯರಿಂದ 1,020ರೂಪಾಯಿ ಜಮೆಯಾಗಿತ್ತು. ಈ ಹಣವನ್ನು …
Read More »ಮಹಾರಾಷ್ಟ್ರದಿಂದ ಬಂದ ಮಕ್ಕಳಿಗೂ ಕೊರೊನಾ ಪಾಸಿಟಿವ್………
ಯಾದಗಿರಿ: ಮಹಾರಾಷ್ಟ್ರದಿಂದ ಯಾದಗಿರಿಗೆ ಬಂದಿರುವ ಇಬ್ಬರು ಮಕ್ಕಳಲ್ಲಿ ಕೊರೊನಾ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ. ರೋಗಿ ಸಂಖ್ಯೆ-1733, 06 ವರ್ಷದ ಹೆಣ್ಣು ಮಗು ಮತ್ತು ರೋಗಿ ಸಂಖ್ಯೆ-1743, 09 ವರ್ಷದ ಬಾಲಕನಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಮೊದಲ ಹಂತದ ಮಾಹಿತಿ ಸಂಗ್ರಹಣೆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಮಹಾರಾಷ್ಟ್ರದಿಂದ ಬಂದಿರುವುದು ಎಂಬುದು ತಿಳಿದುಬಂದಿದೆ. ಇಬ್ಬರ ಸಮಗ್ರ ಟ್ರಾವೆಲ್ ಹಿಸ್ಟರಿ ಪತ್ತೆಗಾಗಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ. ಸದ್ಯ ಇಬ್ಬರು …
Read More »ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಕರ್ಫ್ಯೂ: ಭಾಸ್ಕರ್ ರಾವ್
ಬೆಂಗಳೂರು: ಲಾಕ್‍ಡೌನ್ 4.0 ಭಾಗವಾಗಿ ರಾಜ್ಯ ಸರ್ಕಾರ ಮಾರ್ಗಸೂಚಿ ರೂಪಿಸಿದ್ದು, ಭಾನುವಾರ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ ಎಂದು ನಿಯಮ ರೂಪಿಸಲಾಗಿತ್ತು. ಇದೀಗ ಭಾನುವಾರ ಜಾರಿಯಾಗುವ ಕರ್ಫ್ಯೂ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶನಿವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆ ನೀಡುವವರಿಗೆ ಮಾತ್ರ ವಿನಾಯ್ತಿ ಇರುತ್ತದೆ …
Read More »ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್
ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ತಾಲ್ಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ(ಜಿ.ಪಂ) ಸಿ ಮಂಜೂರ್, ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ತಾಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಕುರಿತು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿ ಕೊಡಲಾಗಿದೆ ಎಂಬುದಾಗಿ ರಾಜ್ಯ ಹೊಸ ತಾಲೂಕುಗಳ ಜಿಲ್ಲಾ ಪಂಚಾಯ್ತಿಯ ಕಾರ್ಯನಿರ್ವಾಹಕ …
Read More »ರಾಜ್ಯದಲ್ಲಿ ‘ಮಹಾ’ ಸ್ಫೋಟ- ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆ………..
ಬೆಂಗಳೂರು: ಹಾಸನ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಾರಾಷ್ಟ್ರ ಕೊರೊನಾ ಸ್ಫೋಟಗೊಂಡಿದೆ. ಪರಿಣಾಮ ರಾಜ್ಯದಲ್ಲಿ ಇಂದು ಒಂದೇ ದಿನ 138 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ ಚಿಕ್ಕಬಳ್ಳಾಪುರ 47, ಹಾಸನ 14, ತುಮಕೂರು 8, ಬೀದರ್ 9, ರಾಯಚೂರು 10, ಶಿವಮೊಗ್ಗ 2, ಬೆಂಗಳೂರು, …
Read More »ವೃತ್ತಿ ರಂಗಭೂಮಿ ಕಲಾವಿದರಿಗೆ ನೆರವು.
ಮಂಡ್ಯ ನಾಗಮಂಗಲ: ತಾಲ್ಲೂಕಿನ ವೃತ್ತಿ ರಂಗಭೂಮಿ ಕಲಾವಿದರಿಗೆ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ರಿಂದ ಫುಡ್ ಕಿಟ್ ವಿತರಣೆ. ಕೋವಿಡ್-19 ಸೋಂಕು ಹೆಚ್ಚಾಗುವ ಹಿನ್ನೆಲೆಯಲ್ಲಿ. ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ವೃತ್ತಿ ಭೂಮಿ ಕಲಾವಿದರಿಗೆ ಆಹಾರದ ಸಮಸ್ಯೆಯಾಗಬಾರದು ಎಂದು ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ರವರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ದಿನಸಿ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ನಮ್ಮ ತಾಲೂಕಿನಲ್ಲಿರುವ ಜನ ನಾಟಕದ ಗೀಳಿಗೆ ಬಿದ್ದು ಅವರು …
Read More »ರಾಯಬಾಗ :ಗೆಳೆಯರ ಜೊತೆ ಈಜಲು ಹೋಗಿ ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ..
ರಾಯಬಾಗ :ಗೆಳೆಯರ ಜೊತೆ ಈಜಲು ಹೋಗಿ ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ.. ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಈಜಲು ಜೋಗಿದ್ದ ಬಾಲಕ ನೀರು ಪಾಲು. ರಾಯಬಾಗ ತಾಲೂಕಿನ ಮುಘಳಖೋಡದ ಬಸವರಾಜ ಗೌಲೆತ್ತಿ(೭) ನೀರುಪಾಲದ ಬಾಲಕ.. ಸ್ಥಳೋಯರಿಂದ ಮುಂದುವರೆದ ಬಾಲಕನ ಹುಡಕಾಟ. ಇನ್ನೂ ಬಾಲಕ ಪತ್ತೆ ಇಲ್ಲ. ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ.. ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..
Read More »ಕಳ್ಳದಾರಿಯಲ್ಲಿ ಎಂಟ್ರಿ ಕೊಡುತ್ತಿರುವ ತಮಿಳಿಗರಿಂದಲೇ ಬೆಂಗಳೂರಿಗೆ ಕಂಟಕ…!
ಬೆಂಗಳೂರು, ಮೇ 22- ತಮಿಳುನಾಡಿನಿಂದ ತಲೆಮರೆಸಿಕೊಂಡು ಬರುತ್ತಿರುವವರೇ ನಗರಕ್ಕೆ ಕಂಟಕರಾಗುತ್ತಿದ್ದಾರೆ.ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ರಾಜ್ಯದ ಗಡಿ ಭಾಗದಿಂದ ಅತ್ತಿಬೆಲೆ ಸಮೀಪದ ಕಳ್ಳದಾರಿಯಲ್ಲಿ ನೂರಾರು ತಮಿಳಿಗರು ನಗರಕ್ಕೆ ಆಗಮಿಸುತ್ತಿದ್ದಾರೆ. ಆನೇಕಲ್ ಗಡಿಯ ಬಳ್ಳೂರು ಗ್ರಾಮದ ಸರ್ವೆ ತೋಪುಗಳ ಮೂಲಕ ನೂರಾರು ತಮಿಳಿಗರು ನಗರಕ್ಕೆ ಬರುತ್ತಿದ್ದರೂ ಅವರನ್ನು ಯಾರೂ ತಡೆಹಿಡಿಯುತ್ತಿಲ್ಲ. ಗಡಿ ಗ್ರಾಮಗಳಲ್ಲಿ ಅನಾಮದೇಯರು ಪ್ರವೇಶಿಸಬಾರದು ಎಂದು ತಡೆಗೋಡೆ ನಿರ್ಮಿಸಿದ್ದರೂ ಅವುಗಳನ್ನು ಕಿತ್ತು ಹಾಕಿ ಗುಂಪು ಗುಂಪಾಗಿ ತಮಿಳುನಾಡಿನ ನೂರಾರು ಮಂದಿ …
Read More »ಕೊರೋನಾ ಕಂಟ್ರೋಲ್‌ಗೆ ರಾಜ್ಯ ಸರ್ಕಾರದಿಂದ ಹೊಸ ಸುತ್ತೋಲೆ : ಇಲ್ಲಿದೆ ಡೀಟೇಲ್ಸ್
ಬೆಂಗಳೂರು, ಮೇ 22- ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸೋಂಕು ನಿವಾರಣೆಗೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ನಿಯಂತ್ರಣ ವಲಯ, ಬಫರ್‍ಜೋನ್ ಹಾಗೂ ಕ್ಲಸ್ಟರ್‍ಗಳನ್ನು ಪುನರ್‍ವ್ಯಾಖ್ಯಾನಿಸಿರುವ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‍ಭಾಸ್ಕರ್ ಅವರು ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದಾರೆ. ನಿಯಂತ್ರಿತ ವಲಯದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ವಾಸವಾಗಿರುವ ಮನೆಯ ಸುತ್ತಲ ಸರಹದ್ದನ್ನು ಗುರುತಿಸಿ ಆ ಪ್ರದೇಶದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು …
Read More »
Laxmi News 24×7