Breaking News

Monthly Archives: ಏಪ್ರಿಲ್ 2020

ಇಂದು 11 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 523 ಕ್ಕೆ ಏರಿಕೆಯಾಗಿದೆ. ಕಲಬುರಗಿ 6, ಗದಗ 1, ಬೆಂಗಳೂರು (ಪಾದರಾಯನಪುರ)1 ಮತ್ತು ಬಾಗಲಕೋಟೆಯ ಮೂವರಿಗೆ ಇಂದು ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನು ಹೊಂಗಸಂದ್ರದ 145 ಮತ್ತು ಪಾದರಾಯನಪುರದ 70 ಜನರ ವರದಿ ನೆಗೆಟಿವ್ ಬಂದಿದೆ. ಸೋಂಕಿತರ ವಿವರ: 1.ರೋಗಿ-513: ಬೆಂಗಳೂರಿನ 48 ವರ್ಷ ಪುರುಷ. ಬಿಬಿಎಂಪಿ ವಾರ್ಡ್-135ರ ಕಂಟೈನ್ಮೆಂಟ್ ಝೋನ್ ಸಂಪರ್ಕ …

Read More »

ಮದುವೆಯಾಗದ ಸಿಬ್ಬಂದಿಗೆ ಬೇಗ ಮದುವೆ ಮಾಡಿಸಿ ಎಂದು ಅಲೋಕ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಬೆಳಗಾವಿ: ಮದುವೆಯಾಗದ ಸಿಬ್ಬಂದಿಗೆ ಬೇಗ ಮದುವೆ ಮಾಡಿಸಿ ಎಂದು ಅಲೋಕ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಕೊರೊನಾ ಡ್ಯೂಟಿಯನ್ನು ನಿರಂತರವಾಗಿ ಮಾಡುತ್ತಿರುವ ಕೆಎಸ್‍ಆರ್‍ಪಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸವನ್ನ ಇಂದು ಕೆಎಸ್‍ಆರ್‍ಪಿ ಎಡಿಜಿಪಿ ಅಲೋಕ್ ಕುಮಾರ್ ಮಾಡಿದ್ದಾರೆ. ಬೆಳಗಾವಿ ನಗರಕ್ಕೆ ಆಗಮಿಸಿದ್ದ ಅಲೋಕ್ ಕುಮಾರ್ ಕೆಎಸ್‍ಆರ್‍ಪಿ ತುಕಡಿಗಳು ಕೆಲಸ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಅವರ ಆರೋಗ್ಯ ವಿಚಾರಣೆ ಮಾಡಿದರು. ಪ್ರತಿಯೊಬ್ಬ ಪೇದೆಗಳ …

Read More »

ಬೆಳಗಾವಿ:ಯೋಧ ಸಚಿನ್ ಸಾವಂತ್‍ಗೆ ಬೇಲ್……..

ಬೆಳಗಾವಿ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಸಚಿನ್ ಸಾವಂತ್ ಅವರಿಗೆ ಜಾಮೀನು ಸಿಕ್ಕಿರುವ ಹಿನ್ನೆಲೆ ನ್ಯಾಯಾಲಯದ ಆದೇಶ ಪ್ರತಿ ಜೊತೆಗೆ ಸಿಆರ್‌ಪಿಎಫ್ ಅಧಿಕಾರಿಗಳು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಜೈಲು ಅಧಿಕಾರಿಗಳು ನ್ಯಾಯಾಲಯ ಆದೇಶ ಪ್ರತಿ ಪರಿಶೀಲನೆ ನಡೆಸಿ ಸಚಿನ್ ಸಾವಂತ್ ಅವರನ್ನು ಬಿಡುಗಡೆ ಮಾಡಿದ್ದಾರೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಸ್ಕ್ …

Read More »

2 ದಿನದ ಹಿಂದೆ ಮದ್ವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ………..

ಗದಗ: ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ನಗರದ ಮಸಾರಿ ಭಾಗದ ನಂದೀಶ್ವರಮಠ ಬಳಿ ಇರುವ ಮನೆಯಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಧನಲಕ್ಷ್ಮೀ ನವಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲಾಕ್‍ಡೌನ್ ಮುನ್ನವೇ ಧನಲಕ್ಷೀ ಮದುವೆ ನಿಶ್ಚಯವಾಗಿತ್ತು. ಆದರೆ ಕುಟುಂಬದವರು ಮದುವೆ ಮುಂದೂಡುವುದು ಬೇಡ ಎಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಸರಳವಾಗಿ ಮದುವೆ ಮಾಡಿದ್ದಾರೆ. ಮನೆಯಲ್ಲಿ …

Read More »

ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಮಾಡಲು ರೋಗಿಗಳೇ ಇಲ್ಲ: ವೈದ್ಯಕೀಯ ಸಚಿವ ಸುಧಾಕರ್……

ಚಿಕ್ಕಬಳ್ಳಾಪುರ: ಕೊರೊನಾದಿಂದ ಗುಣಮುಖರಾದವರು ರಕ್ತದಾನ ಮಾಡಿದ್ದು ಪ್ಲಾಸ್ಮಾ ಸಿದ್ಧವಾಗಿದೆ. ಆದ್ರೆ ಪ್ಲಾಸ್ಮಾ ಟ್ರಾನ್ಸ್ ಫ್ಲಾಂಟ್ ಮಾಡುವಂತಹ ರೋಗಿಗಳೇ ನಮ್ಮ ರಾಜ್ಯದಲ್ಲಿಲ್ಲ ಅಂತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಮೊಬೈಲ್ ಸ್ವಾಬ್ ಕಲೆಕ್ಷನ್ ಯೂನಿಟ್ ಉದ್ಗಾಟನೆ ಮಾಡಿ ಮಾತನಾಡಿದ ಸಚಿವ ಸುಧಾಕರ್, ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿನ 523 ಪ್ರಕರಣಗಳಲ್ಲಿ 198 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದ 325 ಮಂದಿಯಲ್ಲಿ 20 …

Read More »

ಚಾಮರಾಜನಗರದ ಸಕ್ಕರೆ ಕಾರ್ಖಾನೆಗೆ ತಮಿಳುನಾಡಿನಿಂದ ಕಾರ್ಮಿಕರು- ಅನ್ನದಾತರ ಆಕ್ರೋಶ

ಚಾಮರಾಜನಗರ: ಹಸಿರು ವಲಯದಲ್ಲಿ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಪುನರಾರಂಭಗೊಂಡಿದೆ. ಆದರೆ ಕಾರ್ಖಾನೆ ಆಡಳಿತ ಮಂಡಳಿ ತಮಿಳುನಾಡಿನಿಂದ 45ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆಸಿಕೊಂಡಿರುವುದು ಕೊರೊನಾ ಮುಕ್ತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಭಾರೀ ಆತಂಕ ಉಂಟುಮಾಡಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ 5ನೇ ಸ್ಥಾನದಲ್ಲಿರುವ ತಮಿಳುನಾಡಿನಿಂದ ಕಾರ್ಮಿಕರನ್ನು ಕರೆಸಿಕೊಳ್ಳುವ ಔಚಿತ್ಯವಾದರೂ ಏನಿತ್ತು ಎಂದು ರೈತ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಒಂದು ವೇಳೆ ಆ …

Read More »

ಮೇ 3ರವರೆಗೆ ಚಿಕ್ಕಬಳ್ಳಾಪುರ, ಗೌರಿಬಿದನೂರಿನಲ್ಲಿ ಸೀಲ್‍ಡೌನ್: ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಮೇ 3ರವರೆಗೂ ಚಿಕ್ಕಬಳ್ಳಾಪುರ ನಗರ ಹಾಗೂ ಗೌರಿಬಿದನೂರು ನಗರದಲ್ಲಿ ಸೀಲ್‍ಡೌನ್ ಮುಂದುವರಿಯಲಿದೆ ಅಂತ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಹೇಳಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಮೊಬೈಲ್ ಸ್ವಾನ್ ಕಲೆಕ್ಷನ್ ಯೂನಿಟ್ ವಾಹನಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು, ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲೆ ನೆರೆಯ ರಾಜ್ಯ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಆಂಧ್ರದ ಹಿಂದೂಪುರ ರೆಡ್ ಝೋನ್ …

Read More »

ಐಟಿ ವೃತ್ತಿಪರರ ವರ್ಕ್ ಫ್ರಮ್ ಹೋಮ್ ಜುಲೈ 31ರ ವರೆಗೆ ವಿಸ್ತರಣೆ…….

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಐಟಿ ವೃತ್ತಿಪರರು ಮುಂದಿನ ಜುಲೈ 31ರ ವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೊರೊನಾ ಲಾಕ್‍ಡೌನ್ ನಿರ್ಬಂಧದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಗಳ ಕುರಿತಂತೆ ಎಲ್ಲಾ ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ ಜತೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಕೇಂದ್ರ ಐಟಿ ಮತ್ತು ದೂರಸಂಪರ್ಕ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರು ಈ ವಿಷಯ ಪ್ರಕಟಿಸಿದ್ದಾರೆ. ಲಾಕ್ ಡೌನ್ …

Read More »

3 ವರ್ಷದಿಂದ ಕೂಡಿಟ್ಟಿದ್ದ 25 ಸಾವಿರ ಹಣ ದೇಣಿಗೆ ನೀಡಿದ ಮಕ್ಕಳು………

ಹಾವೇರಿ: ದೇಶ ಹಾಗೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಈಗಾಗಲೇ ಅನೇಕರು ಕೊರೊನಾ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಇದೀಗ ಜಿಲ್ಲೆಯ ಮೂರು ವಿದ್ಯಾರ್ಥಿಗಳು ತಾವು ಕೂಡಿಟ್ಟುಕೊಂಡಿದ್ದ ಹುಂಡಿ ಹಣವನ್ನ ಸಿಎಂ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. 7 ವರ್ಷದ ಅವನಿ, 6 ವರ್ಷದ ಸನ್ನಿಧಿ ಹಾಗೂ 7 ವರ್ಷದ ದೀಪ್ತಿ ಹುಂಡಿ ಹಣವನ್ನು ನೀಡಿದ್ದಾರೆ. ಮೂವರು ವಿದ್ಯಾರ್ಥಿಗಳು ಹಾವೇರಿ ಜಿಲ್ಲಾಧಿಕಾರಿ …

Read More »

ಪ್ರತಿ ವರ್ಷ ಕೊರೊನಾ ಕಾಡುವ ಸಾಧ್ಯತೆ ಇದೆ ಎಂದ ಚೀನಾ ವಿಜ್ಞಾನಿಗಳು……

ಬೀಜಿಂಗ್: ಮಹಾಮಾರಿ ಕೊರೊನಾ ಅಟ್ಟಹಾಸ ಇಲ್ಲಿಗೇ ಮುಗಿಯುವುದಿಲ್ಲ ಪ್ರತಿ ವರ್ಷವೂ ಕಾಡುವ ಸಾಧ್ಯತೆ ಇದೆ ಎಂಬ ಭಯಾನಕ ಅಂಶವನ್ನು ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ. ಚೀನಾದ ಬೀಜಿಂಗ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಶೋಧಕರು ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕೊರೊನಾ ವೈರಸನ್ನು ಓಡಿಸಿದರೆ ಮುಗಿಯಿತು ಮತ್ತೆ ಬರಲ್ಲ ಎಂದುಕೊಳ್ಳುವಂತಿಲ್ಲ. ವಿಶ್ವವ್ಯಾಪಿ ಇದರ ಬೆಳವಣಿಗೆಯನ್ನು ಗಮನಿಸಿದಾಗ ಕೊರೊನಾ ಪ್ರತಿ ವರ್ಷ ಬರುವ ಸಾಧ್ಯತೆ ಇದ್ದು, ಜ್ವರದ ರೂಪದಲ್ಲಿ ಜನರನ್ನು ಕಾಡಲಿದೆ ಎಂದು ಹೇಳಿದ್ದಾರೆ. ಇದು …

Read More »