Breaking News

Monthly Archives: ಮಾರ್ಚ್ 2020

ಮೆಕ್ಕೆಜೋಳದ ಬೆಲೆ ಕುಸಿತ ಕಂಡಿದ್ದರಿಂದ ತೆನೆಗಳಿರುವ, ಕೊಯ್ಯಲು ಬಂದಿದ್ದ ಮೆಕ್ಕೆಜೋಳದ ಫಸಲನ್ನು ರೈತ ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ.

ಹಾವೇರಿ: ಮೆಕ್ಕೆಜೋಳದ ಬೆಲೆ ಕುಸಿತ ಕಂಡಿದ್ದರಿಂದ ತೆನೆಗಳಿರುವ, ಕೊಯ್ಯಲು ಬಂದಿದ್ದ ಮೆಕ್ಕೆಜೋಳದ ಫಸಲನ್ನು ರೈತ ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೊಸಶಿಡೇನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಮಾದೇವಪ್ಪ ಒಡೇನಪುರ ಅವರು ಒಂದು ಎಕರೆ ಇಪ್ಪತ್ತು ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ನಾಶಪಡಿಸಿದ್ದಾರೆ. ಮೆಕ್ಕೆಜೋಳದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದರಿಂದ ರೈತ ಈ ರೀತಿ ಮಾಡಿದ್ದಾರೆ. ಒಂದು ಕ್ವಿಂಟಾಲ್ ಮೆಕ್ಕೆಜೋಳದ ಬೆಲೆ ಕೇವಲ ಒಂದು ಸಾವಿರ …

Read More »

ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೊಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಮುಂಜಾಗೃತವಾಗಿ ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯ ಎಲ್ಲ ಸಂತೆ,ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ

ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೊಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಮುಂಜಾಗೃತವಾಗಿ ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯ ಎಲ್ಲ ಸಂತೆ,ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ದಿನನಿತ್ಯದ ಪೂಜೆ ಮತ್ತು ಇನ್ನಿತರ ಧಾರ್ಮಿಕ ಕಾರ್ಯಗಳಿಗೆ ವಿನಾಯತಿ ನೀಡಲಾಗಿದ್ದು,ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯಲ್ಲಿ ಸಂತೆ ,ಮತ್ರು ಜಾತ್ರೆ ನಡೆಯುವಂತಿಲ್ಲ ಎಂದು ಕಟ್ಟು ನಿಟ್ಟಿನ ಆದೇಶ ಮಾಡಲಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡದಂತೆ ತಡೆಯಲು ದೊಡ್ಡ,ದೊಡ್ಡ ಶಾಪಿಂಗ್ ಮಾಲ್ ಮತ್ತು ಸೂಪರ್ …

Read More »

ಬುದ್ಧಿವಾದ ಹೇಳಿದ ಪತ್ನಿಯನ್ನೇ ಕೊಂದ ಪತಿ

ಚಿಕ್ಕೋಡಿ(ಬೆಳಗಾವಿ): ಜಗಳವಾಡುತ್ತಿದ್ದ ಪತಿಗೆ ಜಗಳವಾಡಬೇಡ ಎಂದು ಬುದ್ಧಿವಾದ ಹೇಳಿದಕ್ಕೆ ತಲೆ ಕೆಟ್ಟ ಪತಿ ತನ್ನ ಹೆಂಡತಿಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಹುಲಗಬಾಳ ಗ್ರಾಮದ ನಿವಾಸಿ ಲಕ್ಷ್ಮೀಬಾಯಿ ಸಿದ್ದರಾಯ ಮೊಳೆ(48) ಕೊಲೆಯಾದ ದುರ್ದೈವಿ, ಸಿದ್ದರಾಯ ಮೊಳೆ(54) ಪತ್ನಿಯನ್ನು ಕೊಲೆ ಮಾಡಿದ ಪಾಪಿ. ಪತಿ ಸಿದ್ದರಾಯ ಸದಾ ಅವರಿವರೊಂದಿಗೆ ಜಗಳವಾಡಿಕೊಳ್ಳುತ್ತಿದ್ದ, ಇದನ್ನು ಕಂಡ ಲಕ್ಷ್ಮೀಬಾಯಿ ಜಗಳವಾಡಬೇಡ ಎಂದು ಬುದ್ಧಿವಾದ …

Read More »

ಕೊರೊನಾ ವಿರುದ್ಧ ಸೆಣಸುತ್ತಿರುವ ಆರೋಗ್ಯ ಸಿಬ್ಬಂದಿ ಸೇವೆಗೆ ಪ್ರಧಾನಿ ಮೆಚ್ಚುಗೆ

ನವದೆಹಲಿ: “ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್ಸನ್ನು ಎದುರಿಸುವಲ್ಲಿ ನಮ್ಮ ದೇಶದ ವೈದ್ಯರು, ಶುಶ್ರೂಷಕರು, ಆರೋಗ್ಯ ಇಲಾಖೆಗಳ ಸಿಬ್ಬಂದಿ ದೊಡ್ಡ ಮಟ್ಟದಲ್ಲಿ ಪರಿಶ್ರಮ ಪಡುತ್ತಿದ್ದು, ಅವರ ಈ ಸೇವೆಯನ್ನು ಭಾರತ ಯಾವತ್ತೂ ನೆನಪಿನಲ್ಲಿಟ್ಟುಕೊಂಡಿರುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟ್ವೀಟರ್‌ನಲ್ಲಿ #IndiaFightsCorona ಎಂಬ ಹ್ಯಾಶ್‌ಟ್ಯಾಗ್‌ನಡಿ, ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಕೊರೊನಾ ತಂದಿರುವ ಬಿಕ್ಕಟ್ಟು ಹಾಗೂ ಭೀತಿಯ ಸನ್ನಿವೇಶವನ್ನು ಭಾರತ ಎದುರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “”ಕೊರೊನಾ ವೈರಸ್‌ ಹರಡುವಿಕೆಯನ್ನು …

Read More »

ಬಾರದ ಲೋಕಕ್ಕೆ ಮರಳಿದ ಪಾಪು

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು. ಕಳೆದ ಸುಮಾರು ಒಂದು ತಿಂಗಳಿನಿಂದ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ರಾತ್ರಿ ಅವರು ನಿಧನರಾದರು. ಭಾನುವಾರವಷ್ಟೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದರು. ಬಾರದ ಲೋಕಕ್ಕೆ ಮರಳಿದ ಪಾಪು….. ಬೆಳಗಾವಿ-ಪತ್ರಿಕಾ ಲೋಕದ ಉಜ್ವಲ ತಾರೆ, ಕರ್ನಾಟಕ ವಿದ್ಯಾವರ್ಧಕ ‌ಸಂಘದ ಅಧ್ಯಕ್ಷರಾಗಿದ್ದ ಡಾ.ಪಾಟೀಲ ಪುಟ್ಟಪ್ಪ ಇನ್ನಿಲ್ಲ. ಹುಬ್ಬಳ್ಳಿಯ …

Read More »

ಅಲಮಟ್ಟಿ ಎತ್ತರ ಹೆಚ್ಚಿಸಲು ನಾಳೆ ಜಲಸಂಪನ್ಮೂಲ ಸಚಿವರ ದೆಹಲಿ ಚಲೋ….!!!

ಬೆಳಗಾವಿ- ಕಳಸಾ ಬಂಡೂರಿ ನಾಲಾ ಯೋಜನೆಯ ಕಾನೂನು ತೊಡಕುಕುಗಳು ನಿವಾರಣೆಯಾದ ಬಳಿಕ ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಈಗ ಅಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ   ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟವನ್ನು ಏರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ ದಿ. 17.03.2020 ಮಂಗಳವಾರ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ ರಮೇಶ್ ಜಾರಕಿಹೊಳಿಯವರು ಕೇಂದ್ರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು …

Read More »

ರೋನಾ ಸೊಂಕು ಹರಡದಂತೆ ಪಾಲಿಕೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಬೆಳಗಾವಿಯ ,ಬಿಗ್ ಬಝಾರ್,ರಿಲಾಯಿನ್ಸ್ ಡಿ ಮಾರ್ಟ್ ಸೇರಿದಂತೆ ಇನ್ನಿತರ ಬೃಹತ್ತ್ ಮಳಿಗೆಗಳನ್ನು ಮುಚ್ಚಲು ಪಾಲಿಕೆ ಆದೇಶಿಸಿದ್ದು ಮದ್ಯಾಹ್ನ ಕಾರ್ಯಾಚರಣೆ ಆರಂಭವಾಗಲಿದೆ

ಬೆಳಗಾವಿ- ಕರೋನಾ ಸೊಂಕು ಹರಡದಂತೆ ಪಾಲಿಕೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಬೆಳಗಾವಿಯ ,ಬಿಗ್ ಬಝಾರ್,ರಿಲಾಯಿನ್ಸ್ ಡಿ ಮಾರ್ಟ್ ಸೇರಿದಂತೆ ಇನ್ನಿತರ ಬೃಹತ್ತ್ ಮಳಿಗೆಗಳನ್ನು ಮುಚ್ಚಲು ಪಾಲಿಕೆ ಆದೇಶಿಸಿದ್ದು ಮದ್ಯಾಹ್ನ ಕಾರ್ಯಾಚರಣೆ ಆರಂಭವಾಗಲಿದೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು (SI) ತಂಡ ರಚಿಸಲಾಗಿದ್ದು ಈ ತಂಡ ಮದ್ಯಾಹ್ನ ದಿಂದ ಬೆಳಗಾವಿಯ ,ಡಿ ಮಾರ್ಟ್ ಮಳಿಗಳನ್ನು ,ರಿಲಾಯಿನ್ಸ ಮಳಿಗೆ,ಬಿಗ್ ಬಝಾರ್ ,ಸೇರಿದಂತೆ ಜನ ಹೆಚ್ವಿನ ಸಂಖ್ಯೆಯಲ್ಲಿ ಸೇರುವ ನಗರದ ದೊಡ್ಡ ದೊಡ್ಡ …

Read More »

ಕೊರೊನಾ ಹೆಸ್ರಲ್ಲಿ ಹುಟ್ಟಿಕೊಂಡಿದ್ದಾರೆ ನಕಲಿ ಅಧಿಕಾರಿಗಳು:ಐಡಿ ಇಲ್ಲದೆ ಮನೆಗೆ ಬಂದ್ರೆ ಮಾಹಿತಿ ಕೊಡಬೇಡಿ

ಉಡುಪಿ: ಕಿಲ್ಲರ್ ಕೊರೊನಾ ವೈರಸ್ ಇಡೀ ವಿಶ್ವವನ್ನು ನಲುಗಿಸಿಬಿಟ್ಟಿದೆ. ಮದ್ದೇ ಇಲ್ಲದ ಕೊರೊನಾ ವೈರಸ್ಸಿಗೆ ದೇಶದ ಜನ ಹೈರಾಣಾಗಿ ಹೋಗಿದ್ದಾರೆ. ರಾಜ್ಯದ ಜನಕ್ಕೆ ಕೊರೊನಾ ವೈರಸ್ ಒಂದು ಕಡೆಯಿಂದ ಕಿರುಕುಳ ಕೊಡುತ್ತಿದ್ದರೆ, ಉಡುಪಿ ಜಿಲ್ಲೆಯಲ್ಲಿ ಫೇಕ್ ಆಫೀಸರ್ಸ್ ಹುಟ್ಟಿಕೊಂಡಿದ್ದಾರೆ. ನಾವು ಕೊರೊನಾ ವೈರಸ್ ಪತ್ತೆ ಮಾಡುವವರು ಮತ್ತು ಅಂಕಿ ಅಂಶವನ್ನು ಸಂಗ್ರಹ ಮಾಡುವವರು ಎಂದು ಉಡುಪಿ ನಗರದ ಕೆಲ ವಾರ್ಡ್ ಗಳ ಮನೆಗಳಿಗೆ ನಕಲಿ ಆಫೀಸರ್ ಗಳು ಹೋಗುತ್ತಿದ್ದಾರೆ. ಮನೆಗಳಿಗೆ …

Read More »

ಚಿಕ್ಕೋಡಿಯ ಯಾವುದೇ ವೈದ್ಯರಿಗೆ ಕೊರೊನಾ ಬಂದಿಲ್ಲ, ಸುಳ್ಳು ಸುದ್ದಿ ಹರಡಿಸಬೇಡಿ: ವೈದ್ಯರ ಮನವಿ

ಬೆಳಗಾವಿ/ಚಿಕ್ಕೋಡಿ: ವೈದ್ಯ ಓರ್ವರಿಗೆ ಕೊರೊನಾ ರೋಗ ಬಂದಿದೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಎಲ್ಲ ವೈದ್ಯರು ಪತ್ರಿಕಾಗೋಷ್ಠಿ ನಡೆಸಿ ನಮ್ಮಲ್ಲಿ ಯಾರಿಗೂ ಕೊರೊನಾ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಐಎಂಎ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೈದ್ಯರು, ಚಿಕ್ಕೋಡಿಯ ಯಾವುದೇ ವೈದ್ಯರಿಗೆ ಕೊರೊನಾ ಬಂದಿಲ್ಲ. ಈ ಬಗ್ಗೆ ಯಾರು ಸುಳ್ಳು ಸುದ್ದಿ ಹರಡದಂತೆ …

Read More »

ಇಂದೋರ್ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಬೆಂಗಳೂರಿನ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರು: ಇಂದೋರ್ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಬೆಂಗಳೂರಿನ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ಮಾದರಿ ಯೋಜನಡೆಯಡಿ ಪ್ರಾಯೋಗಿಕವಾಗಿ ಮತ್ತಿಕೆರೆ ವಾರ್ಡಿನಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಡಾ. ಅಶ್ವತ್ಥನಾರಾಯಣ ಮಾತನಾಡಿದರು. ಸ್ವಚ್ಛತೆಯ ದೃಷ್ಟಿಯಿಂದ ಪ್ರಮುಖ ಕಾರ್ಯಕ್ರಮವಾದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದು ಸಾರ್ವಜನಿಕರು ಸೇರುವ ಕಾರ್ಯಕ್ರಮವಲ್ಲ ಎಂದು ಮೊದಲೇ ಸೂಚನೆ …

Read More »