ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಹಾಗೂ ಮ್ಯಾಪ್ ಮೈ ಕ್ರಾಪ್, ಪುಣೆ ಇವರ ಸಹಯೋಗದಲ್ಲಿ ದಿನಾಂಕ: ೧೫.೦೭.೨೦೨೫ ರಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯದ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿಗಳು/ ಸಿಬ್ಬಂದಿಯವರಿಗೆ “ಕಬ್ಬು ಉತ್ಪಾದನೆ ಹೆಚ್ಚಿಸಲು, ಕೃತಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಕೆ ಹಾಗೂ ಕೀಟ ಮತ್ತು ರೋಗ ನಿರ್ವಹಣೆ” ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ.ರಾಜಗೋಪಾಲ, ನಿರ್ದೇಶಕರು, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಡಾ||ಭೂಷಣ ಗೋಸಾವಿ, ಮ್ಯಾಪ್ ಮೈ ಕ್ರಾಪ್, ಪುಣೆ, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಚಾರ ಸಂಕಿರಣದ ಅತಿಥಿ ಉಪನ್ಯಾಸಕರಾಗಿ ಡಾ|| ಎಸ್. ಎಸ್. ಉಡಿಕೇರಿ, ಪಾಧ್ಯಾಪಕರು (ಕೀಟಶಾಸ್ತç), ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಶ್ರೀ.ಹೃಷಿಕೇಶ ರಾಠೋಡ, ಮ್ಯಾಪ್ ಮೈ ಕ್ರಾಪ್, ಪುಣೆ ಭಾಗವಹಿಸಿದ್ದರು. ಸಸಿಗೆ ನೀರು ಉಣಿಸುವ ಮುಖಾಂತರ ಹಾಗೂ ರೈತ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಚಾರ ಸಂಕಿರಣದ ಅಧ್ಯಕ್ಷೀಯ ಭಾಷಣದಲ್ಲಿ ರಾಜಗೋಪಾಲ ಅವರು ಮಾತನಾಡುತ್ತಾ, ಸಂಸ್ಥೆಯಲ್ಲಿ ಕಬ್ಬು ಕೃಷಿ ಹಾಗೂ ಸಂಶೋಧನೆಗೆ ಸಂಬAಧಿಸಿದAತೆ ಕೈಗೊಳ್ಳುವ ಹಾಗೂ ಕಾರ್ಖಾನೆ ಸಿಬ್ಬಂದಿ ಮತ್ತು ಕಬ್ಬು ಬೆಳೆಗಾರರಿಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಅಂಗಾAಶ ಕೃಷಿಯ ಕಬ್ಬಿನ ಸಸಿಗಳನ್ನು ತಯಾರಿಸಿ ಕಾರ್ಖಾನೆಗಳಿಗೆ ಹಾಗೂ ಕಬ್ಬು ಬೆಳೆಗಾರರಿಗೆ ಪೂರೈಕೆ ಮಾಡಲಾಗುತ್ತಿದೆ, ಸದರಿ ಸಸಿಗಳನ್ನು ಉಪಯೋಗಿಸಿದಲ್ಲಿ ಕಬ್ಬಿನ ಇಳುವರಿ ಹೆಚ್ಚಿಸುವದಲ್ಲದೆ, ಸಕ್ಕರೆ ಅಂಶ ಕೂಡಾ ಹೆಚ್ಚಿಗೆ ಪಡೆಯಬಹುದಾಗಿದೆ. ಸಂಸ್ಥೆಯಲ್ಲಿ ಜೈವಿಕ ಗೊಬ್ಬರ ಹಾಗೂ ಪ್ರಾಯೋಗಿಕವಾಗಿ ಜೈವಿಕ ಪೀಡೆನಾಶಕಗಳನ್ನು ಉತ್ಪಾದಿಸಿ ಕಾರ್ಖಾನೆ ಹಾಗೂ ರೈತರಿಗೆ ಪೂರೈಸಲಾಗುತ್ತಿದೆ. ಇದರಿಂದ ಮಣ್ಣಿನ ಫಲವತ್ತತೆಯ ಸುಸ್ಥಿರತೆಯನ್ನು ಕಾಯ್ದುಕೊಳ್ಳಬಹುದು ಹಾಗೂ ಮಣ್ಣಿನಿಂದ ಬರುವ ರೋಗಗಳನ್ನು ಕೀಟಗಳನ್ನು ಹತೋಟಿ ಮಾಡಬಹುದು, ಮುಖ್ಯವಾಗಿ ಮೆಟರೈಜಿಯಂ ಜೈವಿಕ ಪೀಡೆನಾಶಕದಿಂದ ಕಬ್ಬಿನಲ್ಲಿ ಬರುವ ಗೊಣ್ಣೆ ಹುಳು ಹಾಗೂ ಗೆದ್ದಲು, ಇತ್ಯಾದಿಗಳನ್ನು ಹತೋಟಿ ಮಾಡಬಹುದು ಎಂದು ತಿಳಿಸಿದರು. ಪ್ರಸ್ತುತ ಸ್ಥಿತಿಯಲ್ಲಿ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸಬಲತೆಯನ್ನು ಕಾಪಾಡಲು ಪ್ರತಿಯೊಂದು ಕಾರ್ಖಾನೆಯವರು ಕಬ್ಬು ಅಭಿವೃದ್ಧಿ ವಿಭಾಗದಿಂದ ಕಬ್ಬಿನ ಅಭಿವೃದ್ಧಿಗೋಸ್ಕರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅತ್ಯವಶ್ಯವಿದೆ ಎಂದು ಹೇಳಿದರು. ಕಾರ್ಖಾನೆ ಸಿಬ್ಬಂದಿಯವರಿಗೆ ಹಾಗೂ ಕಬ್ಬು ಬೆಳೆಗಾರರಿಗೆ ಸಂಸ್ಥೆಯಲ್ಲಿ ಮತ್ತು ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಬೆಳೆ ಸಂಬAಧಿತ ತರಬೇತಿ ಕಾರ್ಯಕ್ರಮಗಳನ್ನು ಸತತವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಕಾರ್ಖಾನೆಯವರು ಸಂಸ್ಥೆಯಿAದ ಸದರಿ ವಿಸ್ತರಣಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಡಾ|| ಭೂಷಣ ಗೋಸಾವಿ, ಮ್ಯಾಪ್ ಮೈ ಕ್ರಾಪ್, ಪುಣೆ ಇವರು ಮಾತನಾಡುತ್ತಾ, ಕೃತಕ ತಂತ್ರಜ್ಞಾನ ಕಬ್ಬಿನ ಕೃಷಿಯಿಂದ ಸಕ್ಕರೆ ಸಂಸ್ಕರಣೆವರೆಗೆ ವಿವಿಧ ಅಂಶಗಳನ್ನು ಅಧಿಕಗೊಳಿಸಲು ಈ ತಂತ್ರಜ್ಞಾನವು ಪರಿಣಾಮಕಾರಿಯಾಗಿದೆ. ಕೃತಕ ತಂತ್ರಜ್ಞಾನ ಚಾಲಿತ ವ್ಯವಸ್ಥೆಗಳು ನೀರವಾರಿ ಪದ್ಧತಿಯನ್ನು ಉತ್ತಮಗೊಳಿಸುತ್ತದೆ. ಕಬ್ಬು ಬೆಳೆಯ ಕಟಾವು ಸಮಯವನ್ನು ಅವಲೋಕಿಸಲು ಮತ್ತು ಕೀಟ & ರೋಗಗಳನ್ನು ನಿರ್ವಹಿಸಲು, ಹವಾಮಾನ ಮಾದರಿಗಳು, ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ಬೆಳೆಯ ಪೋಷಕಾಂಶಗಳ ಕೊರತೆ ಮತ್ತು ನಿರ್ವಹಣೆ ಹಾಗೂ ಬೆಳೆ ಆರೋಗ್ಯ ಅಂಕಿ ಅಂಶವನ್ನು ವಿಶ್ಲೇಷಿಸಬಹುದು, ಇದರಿಂದ ಹೆಚ್ಚಿನ ದಕ್ಷತೆ ಮತ್ತು ಕಡಿಮೆ ಸಂಪನ್ಮೂಲಗಳ ಬಳಕೆಗೆ ಕಾರಣವಾಗುತ್ತದೆ ಎಂದು ಹೇಳಿದರು. ರೈತರು ರಸಗೊಬ್ಬರ ಮತ್ತು ಕೀಟನಾಶಕಗಳಂತಹ ಸಂಪನ್ಮೂಲಗಳ ಬಳಕೆಯನ್ನು ಉತ್ತಮಗೊಳಿಸಲು, ಪರಿಸರ ಪರಿಣಾಮದಂತೆ ಕೃಷಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೃತಕ ತಂತ್ರಜ್ಞಾನ (ಂI) ಸಹಾಯ ಮಾಡುತ್ತದೆ. ಕೃತಕ ತಂತ್ರಜ್ಞಾನ ಕಬ್ಬು ಕೃಷಿಯಲ್ಲಿ ನೀರಿನ ಬಳಕೆ, ರಾಸಾಯನಿಕ ಕೀಟನಾಶಕಗಳ ಬಳಕೆ ಮತ್ತು ರೈತರು ಮಣ್ಣಿನ ಆರೋಗ್ಯ ಮೇಲ್ವಿಚಾರಣೆ ಮಾಡಲು ಕೃತಕ ತಂತ್ರಜ್ಞಾನ ಸಹಾಯ ಮಾಡುತ್ತದೆ, ಮಣ್ಣಿನ ಸಾವಯವ ಇಂಗಾಲವನ್ನು ಸುಧಾರಿಸುವ ಮತ್ತು ಹಸಿರು ಮನೆ ಮತ್ತು ಅನಿಲ ಹೊರ ಸೂಸುವಿಕೆಯನ್ನು ಕಡಿಮೆ ಮಾಡುವ ಅಭ್ಯಾಸಗಳನ್ನು ಉತ್ತೇಜಿಸುತ್ತದೆ. ಒಟ್ಟಾರೆಯಾಗಿ ಕಬ್ಬಿನ ಕೃಷಿಯ ವಿವಿಧ ಅಂಶಗಳನ್ನು ಸುಧಾರಿಸಲು, ಉತ್ಪಾದಕತೆ ಮತ್ತು ಇಳುವರಿಯನ್ನು ಗಮನಾರ್ಹವಾಗಿ ಹೆಚ್ಚಿಸಲು ಪ್ರಸ್ತುತ ಪರಿಸ್ಥಿತಿಯಲ್ಲಿ ಈ ತೆರನಾದಂತಹ ಹೊಸ ತಾಂತ್ರಿಕತೆಗಳು ಅನುಸರಿಸಿದಲ್ಲಿ ಕೃಷಿಕರು ಹೆಚ್ಚಿನ ಬೆಳೆ ಇಳುವರಿ ಪಡೆದುಕೊಂಡು ಆರ್ಥಿಕ ಸಬಲತೆ ಕಾಯ್ದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಡಾ|| ಎಸ್. ಎಸ್. ಉಡಿಕೇರಿ, ಅವರು ಉಪನ್ಯಾಸದಲ್ಲಿ ಮಾತನಾಡುತ್ತಾ, ಕಬ್ಬಿನ ಬೆಳೆಯಲ್ಲಿ ಬರುವ ವಿವಿಧ ಕೀಟಗಳ ಜೀವನಚಕ್ರ ಹಾಗೂ ಹತೋಟಿ ಕ್ರಮಗಳ ಬಗ್ಗೆ ಹಾಗೂ ನೈಸರ್ಗಿಕವಾಗಿ ಕೀಟ ಮತ್ತು ರೋಗಗಳನ್ನು ಕಬ್ಬಿನ ಬೆಳೆಯಲ್ಲಿ ಹತೋಟಿ ಮಾಡುವ ಹಾಗೂ ಮಣ್ಣಿನ ಮತ್ತು ವಾತಾವರಣ ಕಲುಷಿತವಾಗುವುದನ್ನು ನಿಯಂತ್ರಿಸಲು ರಸಾಯನಿಕಗಳನ್ನು ವೈಜ್ಞಾನಿಕ ಶಿಫಾರಸ್ಸಿನಂತೆ ಹಾಗೂ ಸಮಯಕ್ಕನುಸಾರವಾಗಿ ಬಳಕೆ ಮಾಡುವ ವಿಧಾನಗಳ ಬಗ್ಗೆ ಹಾಗೂ ಜೈವಿಕ ಪೀಡೆನಾಶಕಗಳ ಉಪಯೋಗಿಸುವ ಪದ್ಧತಿಗಳ ವಿವರವಾದ ಮಾಹಿತಿ ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ ವಾತಾವರಣದ ವೈಪರೀತ್ಯದಿಂದ ಹಾಗೂ ಸರಿಯಾಗಿ ಬೇಸಾಯ ಕ್ರಮಗಳನ್ನು ಅಳವಡಿಸದೇ ಇರುವದರಿಂದ ಗೊಣ್ಣೆ ಹುಳುವಿನ ಬಾದೆ ಹೆಚ್ಚಾಗಿ ಕಂಡು ಬರುತ್ತಿದೆ. ಕಾರಣ ಬೆಳೆ ಪರಿವರ್ತನೆ, ಬೇಸಿಗೆಯಲ್ಲಿ ಮಾಗಿ ಉಳುಮೆ, ಅಂತರ ಬೆಳೆ, ಸರಿಯಾಗಿ ನೀರು ನಿರ್ವಹಣೆ ಕ್ರಮಗಳನ್ನು ಅನುಸರಿಸುವ ಬಗ್ಗೆ ಮಾಹಿತಿ ನೀಡಿದರು. ಗೊಣ್ಣೆ ಹುಳುವಿನ ಜೀವನಚಕ್ರ ಹತೋಟಿ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಕೀಟಗಳನ್ನು ಹತೋಟಿ ಮಾಡಬೇಕಾದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ರಸಾಯನಿಕ ಕೀಟನಾಶಕಗಳನ್ನು ಉಪಯೋಗಿಸುವುದರಿಂದ ಮಣ್ಣಿನ, ವಾತಾವರಣ ಹಾಗೂ ಆರೋಗ್ಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದುಷ್ಪರಿಣಾಮ ಆಗುವುದನ್ನು ತಡೆಗಟ್ಟಲು ಪೀಡೆ ನಾಶಕಗಳನ್ನು ಮುಖ್ಯವಾಗಿ ಮೆಟೈರಿಜಿಯಂನ್ನು ಉಪಯೋಗಿಸಲು ಕಾರ್ಖಾನೆಯವರು ಹಾಗೂ ಕಬ್ಬು ಬೆಳೆಗಾರರು ಹೆಚ್ಚಿನ ಮುತವರ್ಜಿವಹಿಸುವುದು ಅವಶ್ಯವಿದೆ ಎಂದು ತಿಳಿಸಿದರು. ಗೊಣ್ಣೆ ಹುಳು ಹಾಗೂ ಗೆದ್ದಲು ನಿಯಂತ್ರಣಕ್ಕೆ ಮೆಟರೈಜಿಯಂ ಜೈವಿಕ ಪೀಡೆ ನಾಶಕ ಸಮಯಕ್ಕನುಸಾರವಾಗಿ ಉಪಯೋಗಿಸುವುದು ಅತೀ ಅವಶ್ಯವಿದೆ ಎಂದು ಮತ್ತು ಅದರ ಮಹತ್ವದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಡಾ|| ಸಿ.ಪಿ. ಚಂದ್ರಶೇಖರ, ಪ್ರಾಧ್ಯಾಪಕರು (ಬೇಸಾಯಶಾಸ್ತç), ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರು ಮಾತನಾಡುತ್ತಾ, ಪೋಷಕಾಂಶಗಳ ಕೊರತೆಯನ್ನು ವಿಶ್ಲೇಷಿಸಿ ನಿಖರ ಕೃಷಿ ಪದ್ಧತಿಯಿಂದ ಪೋಷಕಾಂಶಗಳ ನಿರ್ವಹಣೆ ಮಾಡಿದರೆ ಬೆಳೆ ಇಳುವರಿಯನ್ನು ಅಧಿಕವಾಗಿ ಪಡೆಯುವುದಲ್ಲದೆ, ವೆಚ್ಚವನ್ನು ಕೂಡಾ ಕಡಿಮೆ ಮಾಡುವ ಮಾಹಿತಿಯನ್ನು ವಿವರವಾಗಿ ತಿಳಿಸಿದರು.
ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥರಾದ ಆರ್.ಬಿ. ಸುತಗುಂಡಿ ಅವರು ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ಸಂತೋಷಕುಮಾರ ಪೂಜಾರಿಯವರು ಸ್ವಾಗತಿಸಿದರು ಮತ್ತು .ಸಚಿನ ಘಟಕಾಂಬಳೆ ಅವರು ವಂದನಾರ್ಪನೆಯನ್ನು ಸಲ್ಲಿಸಿದರು.
ಸದರಿ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ೧೬೦ ಕ್ಕೂ ಅಧಿಕ ಕಬ್ಬು ಅಭಿವೃದ್ಧಿ ವಿಭಾಗದ ಅಧಿಕಾರಿಗಳು/ಸಿಬ್ಬಂದಿಯವರು ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು ಭಾಗಹಿಸಿದ ಶಿಬಿರಾರ್ಥಿಗಳಿಗೆ ಸದರಿ ವಿಚಾರ ಸಂಕಿರಣಕ್ಕೆ ಸಂಬAಧಿಸಿದ ಕರಪತ್ರಗಳನ್ನು ನೀಡಲಾಯಿತು.