Breaking News

ತುರ್ತು ಪ್ರತಿಕ್ರಿಯೆ ಸಹಾಯಕ್ಕೆ 112 ಜೊತೆ 14416 ಸಂಯೋಜನೆ

Spread the love

ಬೆಂಗಳೂರು: ಮಾನಸಿಕ ಆರೋಗ್ಯ ಸಂಕಷ್ಟ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಸಮಯೋಚಿತ ಸಹಾಯ ಒದಗಿಸಲು ಹಾಗೂ ಆತಹತ್ಯೆ ಅಪಾಯ ಸೇರಿದಂತ ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದ ತುರ್ತು ಸಮಯದಲ್ಲಿ ನಮ್ಮ 112 ಸಹಯೋಗದೊಂದಿಗೆ ಟೆಲಿ ಮನಸ್‌‍ (14416) ಸಂಯೋಜನೆಗೊಂಡಿದೆ.

ನಗರದಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿ ಸುವ ದಿಕ್ಕಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.ನಗರದಲ್ಲಿ ತುರ್ತು ಮಾನಸಿಕ ಆರೋಗ್ಯ ಪ್ರತಿಕ್ರಿಯೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಇಂದು ಹಮಿಕೊಂಡಿದ್ದ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (ನಮ 112) ಸಹಯೋಗದೊಂದಿಗೆ ಟೆಲಿ ಮನಸ್‌‍ (14416) ಸಂಯೋಜನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ವಹಿಸಿದ್ದರು. ನಿಮ್ಹಾನ್‌್ಸ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು. ಈ ಸಹಯೋಗದ ಮೂಲಕ ನಮ 112 ಮತ್ತು ಟೆಲಿ ಮನಸ್‌‍ ನಡುವಿನ ಕರೆಗಳ ಸುಗಮ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.

ಈ ಸಹಕಾರವು ತುರ್ತು ಸೇವೆಗಳು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರ ನಡುವಿನ ಸಮನ್ವಯವನ್ನು ಬಲಪಡಿಸುವುದರ ಜೊತೆಗೆ ವೇಗವಾದ ಪ್ರತಿಕ್ರಿಯೆಯ ಮೂಲಕ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಮಾನವೀಯ ಮತ್ತು ಸಹಾನುಬೂತಿಪೂರ್ಣ ಆರೈಕೆಯನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿರುತ್ತದೆ.ಸಾರ್ವಜನಿಕರು ಸಾಮಾಜಿಕ ಜಾಲ ತಾಣದಲ್ಲಿ ನಮನ್ನು ಅನುಸರಿಸಲು ಹಾಗೂ ಟೆಲಿ ನಸ್‌‍ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಬಹುದಾಗಿದೆ.

ನಾಳೆ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭ ಬೆಂಗಳೂರು,ಫೆ.4-ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸಾರಿಗೆ ಇಲಾಖೆ, ಪೊಲೀಸ್‌‍ ಇಲಾಖೆ ಹಾಗೂ ಇತರೆ ಇಲಾಖೆಗಳ ಆಶ್ರಯದಲ್ಲಿ ನಾಳೆ ಅರಮನೆ ಮೈದಾನದ ರಾಯಲ್‌ ಸೆನೆಟ್‌ನಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭವನ್ನು ಹಮಿಕೊಳ್ಳಲಾಗಿದೆ.

ಬೆಳಗ್ಗೆ 10 ಗಂಟೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಉಪಸ್ಥಿತಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಅಶ್ವಥ್‌ನಾರಾಯಣ ಅವರು ವಹಿಸಲಿದ್ದಾರೆ.

ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್‌, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೋಳಿ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಸ್ತು ಪ್ರದರ್ಶನ ಸಂಪನೂಲ ವ್ಯಕ್ತಿಗಳಿಂದ ಚರ್ಚೆ, ಉಪನ್ಯಾಸ ಏರ್ಪಡಿಸಲಾಗಿದೆ.

ಬೆಳಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ನಿವೃತ್ತ ನ್ಯಾಯಾಧೀಶರಾದ ಅಭಯ್‌ ಮನೋಹರ್‌ ಸಪ್ರೆ ಅವರು ಕಾನೂನು, ಪತ್ರಿಕೋದ್ಯಮ, ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಅಹ್ವಾನಿತರಿಗೆ ರಸ್ತೆ ಸುರಕ್ಷತೆ ಜಾಗೃತಿ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಆರಂಭವಾಗಲಿದ್ದು, ನ್ಯಾಯಮೂರ್ತಿಗಳಾದ ವಿಬೂ ಬಾಖ್ರು, ಅನು ಶಿವರಾಮನ್‌, ನಿವೃತ್ತ ನ್ಯಾಯಾಧೀಶರಾದ ಅಭಯ್‌ ಮನೋಹರ್‌ ಸಪ್ರೆ ಅವರು ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಕುರಿತು ಕಲಾವಿಧರು ಮತ್ತು ಕಲಾ ತಂಡಗಳಿಂದ ಭಿತ್ತಿ ಪತ್ರಗಳ ಪ್ರದರ್ಶನ, ವಿಂಟೇಜ್‌ ಕಾರುಗಳ ಪ್ರದರ್ಶನ ಹಾಗೂ ವಿವಿಧ ಮಾದರಿ ವಾಹನ ಪ್ರದರ್ಶನ ನಡೆಯಲಿವೆ.ಈ ಸಾಲಿನ ಸುರಕ್ಷತಾ ಮಂತ್ರವಾಗಿ ತಂತ್ರಜ್ಞಾನ ದೊಂದಿಗೆ ಸುರಕ್ಷತಾ ಪ್ರಯಾಣ ಎಂಬ ಘೋಷಣೆಯನ್ನು ಅಳವಡಿಸಲಾಗಿದೆ.

ಶಾಲಾ ಪಠ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯನ್ನು ಅಳವಡಿಸುವುದು, ಯುವ ಜನತೆಯಲ್ಲಿ ಜವಾಬ್ದಾರಿತ ಚಾಲನೆ ಕುರಿತು ಅರಿವು ಮೂಡಿಸುವುದು ಈ ವರ್ಷದ ಅಭಿಯಾನದ ಪ್ರಮುಖ ಅಂಶವಾಗಿದೆ.ಪ್ರತಿಯೊಬ್ಬ ನಾಗರಿಕನೂ `ಸುರಕ್ಷತೆಯ ರಾಯಭಾರಿ’ ಆಗುವ ಮೂಲಕ 2026ನೇ ವರ್ಷವನ್ನು ಅಪಘಾತ ಮುಕ್ತ ವರ್ಷವನ್ನಾಗಿ ರೂಪಿಸುವ ಸಂಕಲ್ಪವನ್ನು ಈ ಅಭಿಯಾನ ಹೊಂದಿದೆ.


Spread the love

About Laxminews 24x7

Check Also

ವಿಧಾನಸಭೆಯಲ್ಲಿ ʻಕುರ್ಚಿ ಕದನʼ ಪ್ರಸ್ತಾಪ; ಸಿಎಂ – ಡಿಸಿಎಂ ಒಗ್ಗಟ್ಟು ಪ್ರದರ್ಶನ

Spread the loveಬೆಂಗಳೂರು: ವಿಧಾನಸಭೆಯಲ್ಲಿ ಇಂದು ಪವರ್ ಶೇರ್ ವಿಚಾರ ಚರ್ಚೆಗೆ ಬಂದಾಗ ಸಿಎಂ ಸಿದ್ದರಾಮಯ್ಯ  ಹಾಗೂ ಡಿಸಿಎಂ ಡಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ