ಬೆಂಗಳೂರು, ಜು.07: ಹುಡುಗ ಹಾಗೂ ಹುಡುಗಿಯರ ಸರ್ವಿಸ್ ಬೇಕೆಂದು ಮೇಸೆಜ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೂರ್ವ ವಿಭಾಗ ಸೆನ್ ಪೊಲೀಸರು(Police) ಬಂಧಿಸಿದ್ದಾರೆ.
ಆನಂದ್ ಶರ್ಮಾ ಬಂಧಿತ ಆರೋಪಿ. ಇತ ಹಲವಾರು ಮೊಬೈಲ್ ನಂಬರ್ ಬಳಸಿ, ಹುಡುಗಿಯರ ಸರ್ವಿಸ್ ಬೇಕಾ? ಎಂದು ಕರೆ ಮಾಡುತ್ತಿದ್ದ.
ಅದರಂತೆ ಕರೆ ಮಾಡುತ್ತಿದ್ದರ ಬಗ್ಗೆ ಸುಭಿ ಎಂಬ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ಮೊಬೈಲ್ ನಂಬರ್ ಆಧರಿಸಿ ಶೇಷಾದ್ರಿಪುರಂ ವಿ ಸ್ಟೇಜ್ ಪಿಜಿ ಬಳಿ ಆರೋಪಿಯನ್ನ ಪೂರ್ವ ವಿಭಾಗ CEN ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಮೊಬೈಲ್ ಫೋನ್ನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.